ಮಕ್ಕಳು ಪ್ರತಿದಿನ ಒಂದು ಭಗವದ್ಗೀತೆ ಶ್ಲೋಕವನ್ನು ಕಲಿಯಲಿ: ಪುನೀತ್ ಜಿ

ಮೈಸೂರು: ನಂಜನಗೂಡಿನ ಶಂಕರಮಠದಲ್ಲಿ ವಿಶ್ವ ಹಿಂದೂ ಪರಿಷತ್ 61 ನೇ ವರ್ಷದ ಸ್ಥಾಪನ ದಿನಾಚರಣೆ ಅಂಗವಾಗಿ ರಾಧಾ – ಕೃಷ್ಣ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಇಮ್ಮಡಿ ಮುರುಗಿ ಶ್ರೀಗಳು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಹೆಚ್. ರಾಮದಾಸ್ ಅವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಸುರೇಶ್ ರವರು ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಜಿಲ್ಲಾಧ್ಯಕ್ಷ ಪುನೀತ್ ಜಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಮಕ್ಕಳು ಪ್ರತಿದಿನ ಒಂದು ಭಗವದ್ಗೀತೆ ಶ್ಲೋಕವನ್ನು ಕಲಿಯಬೇಕೆಂದು ಪುನೀತ್ ಜಿ ತಿಳಿ ಹೇಳಿದರು.

ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷರಾದ ಮೋಹನ್ ಕುಮಾರ್,
ಕಾರ್ಯದರ್ಶಿ ಪಣೀಶ್, ಸಹ ಕಾರ್ಯದರ್ಶಿ ಸಂಪತ್ ಕುಮಾರ್, ಉಪಾಧ್ಯಕ್ಷರಾದ ನಟರಾಜ್, ಮಾತೃಶಕ್ತಿಯ ಸುಮಾ ಮತ್ತು ಗಾಯಿತ್ರಿ ,ಸಂಚಲಕ ಶ್ರೀಧರ್ ಮತ್ತು
ಮಂಡಳಿಯ ಸದಸ್ಯರಾದ ಸಿದ್ದರಾಜು, ನಾರಾಯಣ ಚಾರಿ, ನಂದೀಶ್, ಕೆ ಶ್ರೀಧರ್, ಶ್ರೀ ರಾಮ್ ಮೋಹನ್, ಸವಿತಾ ನಾಗೇಂದ್ರ ಭಾಗವಹಿಸಿದ್ದರು.

ಡಾ ಶ್ರೀಕಾಂತ್, ಪಿ ಪ್ರಸಾದ್ ಮತ್ತು ಇಲಿಯಾಸ್ ಅಹಮದ್ ಮತ್ತಿತರರು ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿದರು.

ಮಕ್ಕಳು ಪ್ರತಿದಿನ ಒಂದು ಭಗವದ್ಗೀತೆ ಶ್ಲೋಕವನ್ನು ಕಲಿಯಲಿ: ಪುನೀತ್ ಜಿ Read More

ಅಧಿಕಾರಿಗಳ ಜತೆ ರೈತ ಮುಖಂಡರ ದಾಳಿ-200 ಮೂಟೆ ಅಕ್ರಮ ಯೂರಿಯಾ ವಶ

ಮೈಸೂರು: ರಾಜ್ಯದ ವಿವಿಧೆಡೆ ಯೂರಿಯಾ ಗೊಬ್ಬರಕ್ಕಾಗಿ ಪ್ರತಿಭಟನೆ ನಡೆಯುತ್ತಿದ್ದರೆ ಇತ್ತ ಮೈಸೂರು ಜಿಲ್ಲೆ,ನಂಜನಗೂಡಿನ ಮಳಿಗೆಯೊಂದರಲ್ಲಿ ಅಕ್ರಮವಾಗಿ ಯೂರಿಯಾ ಸಂಗ್ರಹಿಸಿಟ್ಟಿದ್ದುದು ಪತ್ತೆಯಾಗಿದೆ.

ಅಕ್ರಮವಾಗಿ ಯೂರಿಯಾ ಸಂಗ್ರಹಿಸಿಟ್ಟಿದ್ದ ದಾಸ್ತಾನು ಮಳಿಗೆ ಮೇಲೆ ರೈತಸಂಘ, ಹಸಿರುಸೇನೆ ಮುಖಂಡರು ಕೃಷಿ ಇಲಾಖೆ ಅಧಿಕಾರಿಗಳ ಜೊತೆ ದಾಳಿ ಮಾಡಿ 200 ಕ್ಕೂ ಹೆಚ್ಚು ಮೂಟೆ ರಾಸಾಯನಿಕ ಗೊಬ್ಬರ ವಶಪಡಿಸಿಕೊಂಡಿದ್ದಾರೆ.

ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆ, ಗೌಸಿಯಾ ರೈಸ್ ಮಿಲ್ ಗೊಡೌನ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಯೂರಿಯಾ ಪತ್ತೆಯಾಗಿದೆ.

ರಾಜ್ಯದ ರೈತರಿಗೆ ವಂಚಿಸಿ ನೆರೆ ರಾಜ್ಯಕ್ಕೆ ಸರಬರಾಜು ಮಾಡುವ ದಂಧೆ ನಡೆಸುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಖಚಿತ ಮಾಹಿತಿಯ ಆಧರಿಸಿ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ವಿದ್ಯಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ಮತ್ತು ನಂಜನಗೂಡು ರೈತ ಸಂಘದ ಅಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್ ಅವರುಗಳು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಅವರ ಗಮನಕ್ಕೆ ತಂದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಳಿಕ ವೃತ ನಿರೀಕ್ಷಕ ಸುನಿಲ್ ಕುಮಾರ್ ಅವರ ಸಮ್ಮುಖದಲ್ಲಿ ದಾಸ್ತಾನು ಕೊಠಡಿಯ ಬೀಗ ಒಡೆದು ದಾಳಿ ಮಾಡಿದಾಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 200 ಯೂರಿಯ ಗೊಬ್ಬರದ ಮೂಟೆಗಳು ಪತ್ತೆಯಾಗಿವೆ.

ನಂತರ ದಾಸ್ತಾನು ಮಳಿಗೆ ಮಾಲೀಕ ಮಹಮ್ಮದ್ ಫಾಝಿಲ್ ರೆಹಮನ್ ಎಂಬಾತನ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ರಾಜ್ಯದ ರೈತರು ಯೂರಿಯಾ ಕೊರತೆ ಎದುರಿಸುತ್ತಿದ್ದರೆ ಇಲ್ಲಿ ಇಷ್ಟೋಂದು ಗೊಬ್ಬರ ಸಂಗ್ರಹಿಸಿದ್ದಾರೆ ಕೂಡಲೇ ಸೂಕ್ತ ತೆನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತಮುಖಂಡರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ಜತೆ ರೈತ ಮುಖಂಡರ ದಾಳಿ-200 ಮೂಟೆ ಅಕ್ರಮ ಯೂರಿಯಾ ವಶ Read More

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿದ ನ ಬಾ ಸ ಪ ಪೂ ಕಾ ಹಿರಿಯ ವಿದ್ಯಾರ್ಥಿ

ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ ಯು ಸಿ 1995ರಲ್ಲಿ ವಿದ್ಯಾಭ್ಯಾಸ ಮಾಡಿದ್ದ ಶ್ರೀ ರಾಘವೇಂದ್ರ ಅವರು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ
ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಈ ಮೂಲಕ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಲು ರಾಘವೇಂದ್ರ ಅವರು ನೆರವಾಗಿದ್ದಾರೆ.

ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಜ್ಞಾನ ವಿಭಾಗದಲ್ಲಿ ಪುನಿತಾ, ವಾಣಿಜ್ಯ ವಿಭಾಗದಲ್ಲಿ ಅರ್ಪಿತ, ಕಲಾವಿಭಾಗದಲ್ಲಿ ಮಧು ಮತ್ತು ಮರಿಯಾ ವಿದ್ಯಾರ್ಥಿಗಳಿಗೆ ಧನಸಾಯವನ್ನು ಮಾಡಿದರು.

ನಂಯ ಮಾತನಾಡಿದ ರಾಘವೇಂದ್ರ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿದರೆ ಅವರು ಈ ಹಣದಿಂದ ಕಾಲೇಜಿನ ಶುಲ್ಕ ಅಥವಾ ಅಧ್ಯಯನ ಮಾಡಲು ಪುಸ್ತಕಗಳನ್ನು ಕೊಂಡುಕೊಂಡರೆ ಅವರು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್, ಉಪನ್ಯಾಸಕರಾದ ಲಿಂಗಣ್ಣಸ್ವಾಮಿ ,ಡಾ.ಟಿ.ಕೆ ರವಿ, ಡಾ. ಕೆ ಮಾಲತಿ, ಡಾ. ಎ ಸುಮಾ ,ರೂಪ, ಮೀನಾ,ವತ್ಸಲ, ಅಂಬಿಕಾ ,ಪದ್ಮಾವತಿ ಸುಮಿತ್ರ, ನಾಗರಾಜ್, ದಿನೇಶ್,ಗೋಪಾಲಕೃಷ್ಣ ಮತ್ತಿತರರು ಹಾಜರಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿದ ನ ಬಾ ಸ ಪ ಪೂ ಕಾ ಹಿರಿಯ ವಿದ್ಯಾರ್ಥಿ Read More

ಮುಂಬಡ್ತಿ ಪಡೆದ ಭೌತಶಾಸ್ತ್ರ ಉಪನ್ಯಾಸಕರಿಗೆ ಅಭಿನಂದನೆ

ನಂಜನಗೂಡು: ಮುಂಬಡ್ತಿ ಪಡೆದು ಬೇರೆ‌ ಕಾಲೇಜಿಗೆ ವರ್ಗಾವಣೆಗೊಂಡ
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ
ಉಪನ್ಯಾಸಕ ಅಶ್ವಥ್ ನಾರಾಯಣ ಗೌಡರನ್ನು ಕಾಲೇಜಿನ ಪ್ರಾಂಶುಪಾಲರು ಅಭನಂದಿಸಿದರು.

ಅಶ್ವಥ್ ನಾರಾಯಣ ಗೌಡ ಅವರು
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಈಗ ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಗೂರಿಗೆ ಪ್ರಾಂಶುಪಾಲರಾಗಿ ಮುಂಬಡ್ತಿ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಹಾಗಾಗಿ ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್, ಉಪನ್ಯಾಸಕರಾದ ಅಲ್ಮಸ್ ಬೇಗಂ,ಷಡಕ್ಷರಿ ಸ್ವಾಮಿ, ಮಂಜುನಾಥ, ಡಾ.ಟಿ.ಕೆ.ರವಿ,ಮಿಲ್ಟನ್ ಅವರುಗಳು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.

ಮುಂಬಡ್ತಿ ಪಡೆದ ಭೌತಶಾಸ್ತ್ರ ಉಪನ್ಯಾಸಕರಿಗೆ ಅಭಿನಂದನೆ Read More

ನಂಜನಗೂಡು ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಮೈಸೂರು: ಜಿಲ್ಲೆಯ ನಂಜನಗೂಡು ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಧಿಢೀರ್ ದಾಳಿ ನಡೆಸಿದರು.

ನಂಜನಗೂಡು ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟರ್ ಕಚೇರಿ ಮೇಲೆ ದಾಳಿ ನಡೆದಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಯ ಕಡತ ವಿಲೇವಾರಿ ಕೊಠಡಿಗಳಿಗೆ ಬೀಗ ಹಾಕಿದ ಅಧಿಕಾರಿಗಳು ನಂತರ ಪರಿಶೀಲನೆ ನಡೆಸಿದರು.

ಅಲ್ಲದೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆದರು.

ಮೈಸೂರು ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಕೆ ರಾಜೇಶ್ ನೇತೃತ್ವದಲ್ಲಿ ಈ ದಿಢೀರ್ ಕಾರ್ಯ ಚರಣೆ ನಡೆದಿದೆ.ಇದರಿಂದಾಗಿ ನೋಂದಣಿ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಇತರೆ ಅಧಿಕಾರಿಗಳು ತಬ್ಬಿಬ್ಬಾದರು.

ಸಬ್ ರಿಜಿಸ್ಟರ್ ಕಚೇರಿಯ ವಿವೇಕ್ ಎಂಬುವರನ್ನು ವಿಚಾರಣೆ ಮಾಡುತ್ತಿದ್ದಾರೆ.
ಕಳೆದ 15 ದಿನಗಳ ಹಿಂದೆ ಕಾವೇರಿ ನೀರಾವರಿ ನಿಗಮ ಇಲಾಖೆಗೆ ದಾಳಿ ಮಾಡಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.ಇದರ ಬೆನ್ನಲ್ಲೇ ಇಂದು
ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೂ ದಾಳಿ ಅಧಿಕಾರಿ ವರ್ಗದಲ್ಲಿ ನಡುಕ‌ ಹುಟ್ಟುವಂತೆ ಮಾಡಿದೆ ಲೋಕಾಯುಕ್ತ.

ನಂಜನಗೂಡು ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ Read More

ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಿ:ದರ್ಶನ್ ದೃವನಾರಾಯಣ್

ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಮತ್ತು ಅಗತ್ಯ ತೀರ್ಮಾನಗಳನ್ನು ಕೈಗೊಳ್ಳುವಂತೆ ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ನಂಜನಗೂಡು ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಏ. 9ರಂದು ನಡೆಯುವ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ 2ನೇ ಹಂತದ ಪೂರ್ವಭಾವಿ ಸಭೆ‌ ನಡೆಸಿದ ಶಾಸಕರು ಸಿದ್ದತೆ ಕುರಿತು ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜ್, ತಹಸೀಲ್ದಾರ್ ಶಿವಕುಮಾರ್ ಕಾಸನೂರ್, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ನಗರಸಭೆ ಪೌರಯುಕ್ತ ವಿಜಯ್, ಎ ಎಸ್ ಪಿ ಮಲ್ಲೇಶ್, ಇ ಒ ಜಗದೀಶ್, ಡಿವೈಎಸ್ಪಿ ರಘು ಸೇರಿದಂತೆ ವಿವಿಧ ಗ್ರಾಮದ ಯಜಮಾನರು, ಮುಖಂಡರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಿ:ದರ್ಶನ್ ದೃವನಾರಾಯಣ್ Read More

ಮಗಳ ಸಮಾನಳಾದ ಬಾಲಕಿಯ ಗರ್ಭಿಣಿ ಮಾಡಿದ ನೀಚ ಚಿಕ್ಕಪ್ಪ

ಮೈಸೂರು: ಮಗಳ ಸಮಾನಳಾದ ಬಾಲಕಿ ಮೇಲೆ ನೀಚ ಚಿಕ್ಕಪ್ಪ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಅತ್ಯಂತ ಹೇಯ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಶಾಲೆಗೆ ತೆರಳಿದ್ದ ಬಾಲಕಿಯನ್ನ ಮನೆಗೆ ಕರೆತಂದ ಚಿಕ್ಕಪ್ಪ ಅತ್ಯಾಚಾರವೆಸಗಿದ್ದಾನೆ ಈ ಬಗ್ಗೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

10ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕ ಚಿಕ್ಕಪ್ಪ ಈಗ ಜೈಲು ಪಾಲಾಗಿದ್ದಾನೆ.

ಕಳೆದ ಎರಡು ತಿಂಗಳಿಂದ ಬಾಲಕಿ ಪೀರಿಯೆಡ್ಸ್ ಆಗಿಲ್ಲವೆಂಬ ಕಾರಣಕ್ಕೆ ಮನೆಯವರು ವೈದ್ಯರಲ್ಲಿ ಕರೆ ತಂದಿದ್ದಾರೆ. ವೈದ್ಯರು ಪರಿಶೀಲಿಸಿದಾಗ ಆಕೆ ಗರ್ಭಿಣಿ ಯಾಗಿರುವುದು ಗೊತ್ತಾಗಿದೆ.

ಬಾಲಕಿಯನ್ನ ಪುಸಲಾಯಿಸಿ ಶಾಲೆಯಿಂದ ಮನೆಗೆ ಕರೆತಂದಿದ್ದ ಕಾಮುಕ ಚಿಕ್ಕಪ್ಪ ನಂತರ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಯಾರಿಗೂ ತಿಳಿಸಬಾರದೆಂದು ಹೇಳಿ ಅಮಾಯಕನಂತೆ ಮತ್ತೆ ಶಾಲೆಗೆ ಬಿಟ್ಟಿದ್ದಾನೆ.

ಪೀರಿಯೆಡ್ಸ್ ನಲ್ಲಿ ವ್ಯತ್ಯಾಸ ಕಂಡು ಬಂದು ವೈದ್ಯರ ಬಳಿ ತೆರಳಿದಾಗ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.

ವಿಷು ಗೊತ್ತಾಗುತ್ತಿದ್ದಂತೆ ಇತ್ತೀಚೆಗೆ ಯಾರನ್ನ ನಂಬುವುದು,ಯಾರನ್ನ ಬಿಡುವುದು ಇಂತಹ ಹೊಲಸು ಕೆಲಸವನ್ನ ಮನೆಯವರೇ ಮಾಡಿದರೆ ಹೆಣ್ಣು ಹೆತ್ತವರ ಪಾಡೇನು,ಇಂತಹ ನೀಚರೂ ಇದ್ದಾರಲ್ಲಾ ಎಂದು ರೋಸಿಹೋದ ಜನ ಶಾಪ ಹಾಕುತ್ತಿದ್ದಾರೆ.

ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಬಾಲಕಿಯನ್ನ ವಶಕ್ಕೆ ಪಡೆದಿದ್ದಾರೆ.ನಂಜುಂಡಸ್ವಾಮಿ ವಿರುದ್ದ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಎಸ್.ಎಸ್.ಎಲ್.ಸಿ.ಪರೀಕ್ಷೆಗಳು ನಡೆಯುತ್ತಿರುವುದರಿಂದ ಸಂತ್ರಸ್ತ ಬಾಲಕಿಯನ್ನ ಬಾಲಮಂದಿರದಿಂದ ಪರೀಕ್ಷಾ ಕೇಂದ್ರಕ್ಕೆ ಪೊಲೀಸರ ಭದ್ರತೆಯಲ್ಲಿ ಕರೆತರಲಾಗುತ್ತಿದೆ.

ಮಗಳ ಸಮಾನಳಾದ ಬಾಲಕಿಯ ಗರ್ಭಿಣಿ ಮಾಡಿದ ನೀಚ ಚಿಕ್ಕಪ್ಪ Read More

ತಂಗಿ ನಿಶ್ಚಿತಾರ್ಥಕ್ಕೆ ಅಡುಗೆ ಸಾಮಗ್ರಿ ತರಲುಹೋದ ಯುವಕ ಹಳ್ಳಕ್ಕೆ ಬಿದ್ದು ಕೋಮಾ

ಮೈಸೂರು: ತಂಗಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅಡುಗೆ ಸಾಮಗ್ರಿ ತರಲು ತೆರಳಿದ ಯುವಕ ರಸ್ತೆ ಕಾಮಗಾರಿ ನಡೆಯುತ್ತಿದ್ದ ಭಾರಿ ಹಳ್ಳಕ್ಕೆ ಬಿದ್ದು ಕೋಮಾಗೆ ಹೋದ ಘಟನೆ ನಂಜನಗೂಡಿನಲ್ಲಿ‌ ನಡೆದಿದೆ.

ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿಯ ಹೆಡಿಯಾಲ ಗ್ರಾಮದ ವೀರಭದ್ರಸ್ವಾಮಿ ಕೋಮಾಗೆ ಹೋಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ.

ಕಾಮಗಾರಿ ನಡೆಸುವ ವೇಳೆ ಯಾವುದೇ ಸುರಕ್ಷಿತಾ ಕ್ರಮ ಕೈಗೊಳ್ಳದ ಗುತ್ತಿಗೆದಾರ ಗೋವಿಂದೇಗೌಡ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀರಭದ್ರಸ್ವಾಮಿ ಹೆಡಿಯಾಲ ಗ್ರಾಮದಿಂದ ಹುಲ್ಲಹಳ್ಳಿಗೆ ಪಲ್ಸರ್ ಬೈಕ್ ನಲ್ಲಿ ತೆರಳುತ್ತಿರುವಾಗ, ಮಾದಾಪುರ ಹಾಗೂ ಕಾರ್ಯ ಗ್ರಾಮದ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಡೆಕ್ ಕಾಮಗಾರಿ ನಡೆಯುತ್ತಿದ್ದ ಭಾರಿ ಹಳ್ಳಕ್ಕೆ ಉರುಳಿ ಬಿದ್ದಿದ್ದಾನೆ.

ಕಾಮಗಾರಿಗೆಂದು ಅಳವಡಿಸಿದ್ದ ಕಬ್ಬಿಣದ ರಾಡ್ ಗಳು ಕಣ್ಣು ಹಾಗೂ ತಲೆ ಭಾಗವನ್ನ ಚುಚ್ಚಿ ಗಾಯಗೊಳಿಸಿದೆ.
ಭಾರಿ ಪ್ರಮಾಣದ ಹಳ್ಳ ತೆಗೆಯುವ ವೇಳೆ ಗುತ್ತಿಗೆದಾರ ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದ ಹಿನ್ನಲೆ ಘಟನೆ ಸಂಭವಿಸಿದೆ ಎಂದು ಆರೋಪಿಸಿ ವೀರಭದ್ರಸ್ವಾಮಿ ತಂದೆ ಬಸವ ಲಿಂಗಪ್ಪ ಹುಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ತಂಗಿ ನಿಶ್ಚಿತಾರ್ಥಕ್ಕೆ ಅಡುಗೆ ಸಾಮಗ್ರಿ ತರಲುಹೋದ ಯುವಕ ಹಳ್ಳಕ್ಕೆ ಬಿದ್ದು ಕೋಮಾ Read More

ನಂಜನಗೂಡಿನಲ್ಲಿ ಮಗು ಮಾರಾಟ:ವಿಚಾರಣೆ ಮಾಡದ ಪೊಲೀಸರು

ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಮತ್ತೆ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದರೂ ಕೇಳುವವರೇ ಇಲ್ಲದಂತಾಗಿದೆ.

ಕೇವಲ 14 ಸಾವಿರಕ್ಕೆ ಹೆಣ್ಣುಮಗುವನ್ನ ಮಾರಾಟ ಮಾಡಲಾಗಿದ್ದು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.

ಮಗು ಮಾರಾಟ ಬೆಳಕಿಗೆ ಬಂದರೂ ಪೊಲೀಸರು ಪ್ರಕರಣ ದಾಖಲಿಸಿಯೇ ಇಲ್ಲ. ಸಿಎಂ ತವರು ಜಿಲ್ಲೆಯಲ್ಲೇ ಇಂತಹ‌ ಪ್ರಕರಣ ನಡೆದರೂ ಪೊಲೀಸರು ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಎಡೆ ಮಾಡಿದೆ.

ನಂಜನಗೂಡಿನ ನೀಲಕಂಠನಗರದ ಅನಿಲ್ ಕುಮಾರ್ ಹಾಗೂ ಸೌಮ್ಯ ಎಂಬ ದಂಪತಿಗೆ ಸೇರಿದ ಮಗುವನ್ನ ಮಾರಾಟ ಮಾಡಲಾಗಿದೆ ಎಂಬ ಆರೋಪಿಸಲಾಗಿದೆ.

ದಂಪತಿಗೆ ಹುಟ್ಟಿದ ಮೂರು ಮಕ್ಕಳೂ ಹೆಣ್ಣಾದ ಕಾರಣ ಮೂರನೇ ಮಗು ಅಮೂಲ್ಯಳನ್ನ ಮಾರಾಟ ಮಾಡಿದ್ದಾರೆಂದು ಸ್ಥಳೀಯರು ಹೇಳುತ್ತಿದ್ದಾರೆ.

ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.

ಮಗು ಮಾರಾಟ ಆಗಿದೆ ಎಂಬ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಲಾವಣ್ಯ ಎಂಬುವರಿಗೆ ದೂರು ಬಂದಿದೆ.ಕೂಡಲೇ ಲಾವಣ್ಯ ಅವರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ನಂತರ ಸ್ಥಳೀಯ ಮುಖಂಡರಾದ ಅನಂತ್ ರವರಿಗೆ ತಿಳಿಸಿದ್ದಾರೆ.ಅನಂತ್ ಅವರು ಮಗುವನ್ನ ಖರೀದಿಸಿದವರನ್ನ ಸಂಪರ್ಕಿಸಿದಾಗ 14 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ನಮಗೆ ನಮ್ಮ ಹಣ ಕೊಟ್ಟರೆ ಮಗು ಕೊಡುವುದಾಗಿ ತಿಳಿಸಿದ್ದಾರೆ.ಮೊದಲು ಮಗುವನ್ನ ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಎಂದು ಹೇಳದಾಗ ವಾಪಸ್ ತಂದು ಕೊಟ್ಟಿದ್ದಾರೆ.

ಮಗು ವಾಪಸ್ ಬಂದ ನಂತರ ಪೊಲೀಸರು ಬಂದು ಮಗುವನ್ನ ವಶಕ್ಕೆ ಪಡೆದಿದ್ದಾರೆ.ಈ ವೇಳೆ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಗುವನ್ನ ತಮ್ಮ ವಶಕ್ಕೆ ಪಡೆದಿದ್ದಾರೆ.

ಆದರೆ ಇದುವರೆಗೆ ಯಾರ ವಿರುದ್ದವೂ ಪ್ರಕರಣ ದಾಖಲಿಸಿಲ್ಲ.ಮಗುವನ್ನ ಮಾರಾಟ ಮಾಡಿದವರಾಗಲಿ,ಮಧ್ಯವರ್ತಿಯಾಗಲಿ ಅಥವಾ ಖರೀದಿಸದವರನ್ನಾಗಲಿ ವಶಕ್ಕೆ ಪಡೆದು ವಿಚಾರಣೆ ಮಾಡಲಿಲ್ಲ ಹಾಗಾಗಿ ಸಹಜವಾಗಿ ಅನುಮಾನಗಳು ಕಾಡುತ್ತಿವೆ.

ನಂಜನಗೂಡಿನಲ್ಲಿ ಮಗು ಮಾರಾಟ:ವಿಚಾರಣೆ ಮಾಡದ ಪೊಲೀಸರು Read More

ಕಪಿಲೆ ಒಡಲು ಸೇರುತ್ತಿರುವ ಕೊಳಚೆ ನೀರು!

ನಂಜನಗೂಡು: ನಂಜನಗೂಡು ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಪಿಲೆಯ ಒಡಲಿಗೆ ಪಟ್ಟಣದ ಕೊಳಚೆ ನೀರು ಹಾಗೂ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದ ನೀರು ಸೇರುತ್ತಿದ್ದು ನದಿ ಮಲಿನವಾಗುತ್ತಿದೆ

ಪಾಪ ಕಳೆದುಕೊಳ್ಳಲು ಬರುವ ಭಕ್ತರು ಈ ಮಲಿನ ನೀರಿನಲ್ಲಿ ಮಿಂದು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ.

ಕೊಳಚೆ ನೀರು ಸರಾಗವಾಗಿ ಹರಿದು ಕಪಿಲಾ ನದಿಯನ್ನ ಸೇರುತ್ತಿದ್ದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳದೆ ಭಕ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ತಾಳಿದ್ದು ಜನ ಶಾಪ ಹಾಕುತ್ತಿದ್ದಾರೆ.

ನಂಜನಗೂಡು ಪಟ್ಟಣದಿಂದ ಹರಿದು ಬರುವ ಚರಂಡಿ ನೀರು ಬಸ್ ನಿಲ್ದಾಣದ ಬಳಿ ಕಪಿಲಾ ನದಿಯನ್ನ ಸೇರುತ್ತಿದೆ.

ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.

ಈಗಾಗಲೇ ಬೇಸಿಗೆ ಆರಂಭವಾಗಿದೆ.ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಭೀತಿ ಇದೆ.ಇಂತಹ ಸಂಧರ್ಭದಲ್ಲಿ ಮಲಿನವಾದ ಕಪಿಲೆಯಲ್ಲಿ ಸ್ನಾನ ಮಾಡುವ ಭಕ್ತರು ರೋಗಪೀಡಿತರಾಗುವ ಸಂಭವ ಇದೆ.

ಕೊಳಚೆ ನೀರು ಕಪಿಲಾ ನದಿ ಸೇರುವುದನ್ನ ನಿಯಂತ್ರಿಸಲು ತಡೆಗೋಡೆ ‌ನಿರ್ಮಿಸಲಾಗಿದೆ.ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.ಕೆಲವೇ ದಿನಗಳಲ್ಲಿ ದಕ್ಷಿಣಕಾಶಿಯಲ್ಲಿ ಜಾತ್ರಾಮಹೋತ್ಸವ ನೆರವೇರಲಿದೆ.ಸಹಸ್ರಾರು ಭಕ್ತರು ನಂಜನಗೂಡಿಗೆ ಭೇಟಿ ನೀಡುತ್ತಾರೆ.ಕಪಿಲೆಯಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ.ಮಲಿನ ನೀರು ಭಕ್ತರ ಆರೋಗ್ಯದ ಮೇಲೆ ಪರಿಣಾಮ ಬೀರುವಿದು ಶತಃಸಿದ್ದ.

ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಈ ಬಗ್ಗೆ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತು ಕ್ರಮ ತೆಗೆದುಕೊಳ್ಳಬೇಕಿದೆ.

ಕಪಿಲೆ ಒಡಲು ಸೇರುತ್ತಿರುವ ಕೊಳಚೆ ನೀರು! Read More