ಕಡೆಗೂ ಹುಣಸೂರು ನಗರಸಭೆ ಮೈದಾನದಿಂದ ವಸ್ತುಪ್ರದರ್ಶನ ಎತ್ತಂಗಡಿ

ಹುಣಸೂರು: ಹುಣಸೂರು ನಗರಸಭಾ ಮೈದಾನದಲ್ಲಿ ನಡೆಯುತ್ತಿದ್ದ ಮನರಂಜನಾ ವಸ್ತುಪ್ರದರ್ಶನದ ಅವಧಿ ಮುಗಿದಿದ್ದರೂ, ಇನ್ನೂ ತೆರವುಗೊಳಿಸಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದೆ.

ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ದವರು ಪ್ರತಿಭಟನೆ ಮಾಡಿ ವಸ್ತುಪ್ರದರ್ಶನ ತೆರವಿಗೆ ಪಟ್ಟು ಹಿಡಿದರು.

ಹಾಗಾಗಿ ನಗರಸಭೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ವಸ್ತುಪ್ರದರ್ಶನ ತೆರವಿಗೆ ಆದೇಶಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಗುರುವಾರ ಸಂಜೆವರೆಗೂ ವಸ್ತುಪ್ರದರ್ಶನ ಎತ್ತಂಗಡಿ ಕಾರ್ಯ ಮುಂದುವರಿಯಿತು.

ನಗರಸಭೆ ಆಟದ ಮೈದಾನವನ್ನು ಮನರಂಜನ ವಸ್ತು ಪ್ರದರ್ಶನ ಮಾಡಿಕೊಂಡಿದ್ದರಿಂದ ಶಾಲಾ ಮಕ್ಕಳಿಗೆ ಆಟವಾಡಲು ತೊಂದರೆಯಾಗಿದೆ ಮತ್ತು ಸುತ್ತಮುತ್ತಲ ವ್ಯಾಪಾರಿಗಳಿಗೂ ನಷ್ಟವಾಗಿದೆ.ವಾಯುವಿಹಾರಿಗಳಿಗೂ ತೊಂದರೆಯಾಗುತ್ತಿದೆ ಎಂಬ ಬಗ್ಗೆ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಸುದ್ದಿ ಪ್ರಸಾರ‌ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.

ಈ ವಸ್ತುಪ್ರದರ್ಶನ ದಿಂದಾಗಿ ಇಡೀ ಆಟದ ಮೈದಾನ ಗಬ್ಬೆದ್ದು ಹೋಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ರಾರಾಜಿಸುತ್ತಿದೆ. ಜೊತೆಗೆ ಶೌಚಾಲಯ ವ್ಯವಸ್ಥೆ ಮಾಡಿರದ ಕಾರಣ ಇಡೀ ಆಟದ ಮೈದಾನ ಗಬ್ಬೆದ್ದು ಹೋಗಿದೆ ಎಲ್ಲಾ ಕಡೆ ಕೆಟ್ಟ ವಾಸನೆ ಬರುತ್ತಿದೆ ಹಾಗಾಗಿ ಶಾಲಾ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಮೈದಾನದಲ್ಲಿ ಸಂಚರಿಸುವುದೇ ದುಸ್ತರವಾಗಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲ ವಸ್ತುಪ್ರದರ್ಶನ ತೆರವುಗೊಳಿಸುವ ವೇಳೆ ಪ್ಲಾಸ್ಟಿಕ್ ಕವರ್ ಗಳು ಮತ್ತಿತರ ಪದಾರ್ಥಗಳನ್ನು ಮೈದಾನದಲ್ಲೇ ಬಿಟ್ಟಿದ್ದು ಬಡಪಾಯಿ ಹಸುಗಳು ತಿನ್ನುತ್ತಿವೆ ಇದರಿಂದ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಯಾರಿಗೆ ಆಗಲಿ ನಗರಸಭೆಯು ವಸ್ತು ಪ್ರದರ್ಶನವನ್ನು ಬಾಡಿಗೆಗೆ ನೀಡುವಾಗ ಕಡ್ಡಾಯವಾಗಿ ಶೌಚಾಲಯ ವ್ಯವಸ್ಥೆ ಮಾಡಲೇ ಬೇಕೆಂದು ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ

ಕಡೆಗೂ ಹುಣಸೂರು ನಗರಸಭೆ ಮೈದಾನದಿಂದ ವಸ್ತುಪ್ರದರ್ಶನ ಎತ್ತಂಗಡಿ Read More

ಚಾಮರಾಜನಗರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಚಾಮರಾಜನಗರ: ಚಾಮರಾಜನಗರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.

ನಗರಸಭೆಯಲ್ಲಿ ಭ್ರಷ್ಟಾಚಾರ, ಕೆಲಸ ವಿಳಂಬ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.

ಈ ವೇಳೆ ಲೋಕಾ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದರು.

ಮೈಸೂರು ಹಾಗೂ ಚಾಮರಾಜನಗರ ಲೋಕಾಯುಕ್ತ ಅಧಿಕಾರಿಗಳ ಐದು ತಂಡ ನಗರಸಭೆಗೆ ದಿಢೀರ್ ದಾಳಿ ನಡೆಸಿದ್ದು, ಪೌರಾಯುಕ್ತರ ಕಚೇರಿ, ಕಂದಾಯ ಶಾಖೆ, ಆರೋಗ್ಯ ಶಾಖೆ ಸೇರಿದಂತೆ ಇತರೆ ಶಾಖೆಗಳಿಗೂ ತೆರಳಿ, ಕಡತಗಳನ್ನು ಸಂಜೆಯ ವರೆಗೂ ಪರಿಶೀಲನೆ ನಡೆಸಿದ್ದಾರೆ.

ಆಯಾ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಾಯುಕ್ತರಿಂದ ಮಾಹಿತಿ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆ ಹಾಗೂ ಕಡತಗಳನ್ನು ಪ್ರಶ್ನಿಸಿದರು.

ನಗರಸಭೆಯಲ್ಲಿ ಭ್ರಷ್ಟಾಚಾರ, ಅಕ್ರಮ ಖಾತೆ, ಅಕ್ರಮವಾಗಿ ಇ-ಸ್ವತ್ತು, ಸಾರ್ವಜನಿಕರ ಕೆಲಸ ವಿಳಂಬದ ಬಗ್ಗೆ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿ ಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದಿಢೀರ್ ದಾಳಿ ನಡೆದಿದೆ.

ಚಾಮರಾಜನಗರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ Read More

ಹುಣಸೂರಿನ ಆಟದ ಮೈದಾನದಲ್ಲಿ ಖಾಸಗಿಯವರ ದರ್ಬಾರು

ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗಲೆಂದು ಮಾಡಿದ್ದ ಮೈದಾನ ಈಗ ಖಾಸಗಿಯವರ ಪಾಲಾಗ ಹೊರಟಿದೆ.

ಹುಣಸೂರಿನ ಹೃದಯ ಭಾಗ, ನಗರಸಭೆ ಮುಂಭಾಗದಲ್ಲಿರುವ ಆಟದ ಮೈದಾನ ಈಗ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ.

ಈ ಮೈದಾನದಲ್ಲಿ ಮುಂಜಾನೆ ನಾಲ್ಕು-ಐದು ಗಂಟೆಯಿಂದಲೇ ಹಿರಿಯ ನಾಗರಿಕರು ಮಹಿಳೆಯರು ಆರೋಗ್ಯಕ್ಕಾಗಿ ವಾಕಿಂಗ್ ಮಾಡುತ್ತಾರೆ.

ಶಾಲಾ ಕಾಲೇಜು ಸಮಯದಲ್ಲಿ ವಿದ್ಯಾರ್ಥಿಗಳು ಇದೇ ಮೈನಾದಲ್ಲಿ ಆಟವಾಡುತ್ತಾರೆ, ಕೆಲವು ಶಾಲೆಯ ಮಕ್ಕಳಿಗೆ ಇಲ್ಲೇ ಡ್ರಿಲ್ ಮಾಡಿಸುವುದು, ಖೊಖೋ ಮತ್ತಿತರ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಮೈದಾನಕ್ಕೆ ಹೊಂದಿಕೊಂಡಂತೆ ಚುರುಮುರಿ, ಗೋಬಿ, ಪಾನಿಪುರಿ, ಪೆಟ್ಟಿಗೆ ಅಂಗಡಿಗಳು ಕೂಡ ಇವೆ. ಇವುಗಳಿಂದ ನಗರ ಸಭೆಯವರು ಸುಂಕವನ್ನು ವಸೂಲಿ ಮಾಡುತ್ತಾರೆ, ಆದರೆ ಇವರಿಗೆ ಸರಿಯಾಗಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ಆರೋಪಿಸಿದ್ದಾರೆ.

ಈ ಆಟದ ಮೈದಾನವನ್ನು ಇತ್ತೀಚೆಗೆ ನಗರಸಭೆಯವರು ರಾಜಸ್ಥಾನದ ಯಾವುದೊ ವ್ಯಕ್ತಿಗೆ ಮಳಿಗೆ ಹಾಕಲು ಅವಕಾಶ ಕೊಟ್ಟಿದ್ದಾರೆ. ಈಗಾಗಲೇ ಮಳಿಗೆಯನ್ನು ಸಿದ್ಧಪಡಿಸಲಾಗುತ್ತಿದೆ, ಇಂತಹ ಪ್ರಮುಖವಾದ ಮೈದಾನವನ್ನು ಖಾಸಗಿಯವರಿಗೆ ಕೊಟ್ಟು ಸಾರ್ವಜನಿಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಸಣ್ಣ ಪುಟ್ಟ ಅಂಗಡಿಗಳವರಿಂದ ಹಣಪೀಕಿಸುತ್ತಾರೆ ಇಲ್ಲಿಗೆ ನೂರಾರು ಮಂದಿ ತಿಂಡಿ ತಿನ್ನಲು ಬರುತ್ತಾರೆ, ಆದರೆ ಈ ಮೈದಾನವನ್ನು ಖಾಸಗಿಯವರಿಗೆ ಕೊಡುತ್ತಿದ್ದಾರೆ,ಖಾಸಗಿಯವರು ದೊಡ್ಡ ಮಳಿಗೆ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ,ಜತೆಗೆ ಸಣ್ಣ‌ ವ್ಯಾಪಾರಿಗಳ ಬಳಿ ಹೋಗುವ ಜನರನ್ನು ತಮ್ಮಕಡೆಗೆ ಸೆಳೆದುಕೊಳ್ಳುತ್ತಾರೆ.

ಇದರಿಂದ ಸ್ಥಳೀಯ ಸಣ್ಣಪುಟ್ಟ ‌ವ್ಯಾರಾಗಳಿಗೆ ವ್ಯಾಪಾರ ಕಡಿಮೆಯಾಗುತ್ತದೆ.ಸಾಲಸೋಲ ಮಾಡಿ,ಗೋಬಿ,ಚುರುಮುರಿ,ಪಾನಿಪುರಿ‌‌,ಕಾಫಿ ಟೀ ಅಂಗಡಿ ಇಟ್ಟುಕೊಂಡಿರುತ್ತಾರೆ ಈ ಮೈದಾನದಲ್ಲಿ ಬರುವ ಖಾಸಗಿಯವರಿಂದ ಈ ಎಲ್ಲಾವ್ಯಾಪಾರಿಗಳ ವ್ಯಾಪಾರಕ್ಕೆ ಕಲ್ಲು ಬಿದ್ದಂತಾಗುತ್ತದೆ. ಇವರನ್ನು ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನಿಸಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಇನ್ನು ಒಂದೆರಡು ತಿಂಗಳಲ್ಲಿ ವಸ್ತುಪ್ರದರ್ಶನಕ್ಕೂ ಅವಕಾಶ ಮಾಡಿಕೊಡುತ್ತಾರೆ.ಪ್ರತಿ ವರ್ಷ ಇದೇ ಕತೆ.
ಇದೆಲ್ಲದರಿಂದ ಮೈದಾನದ ಸುತಮುತ್ತಲಿನ ಮನೆಯವರಿಗೆ, ಶಾಲೆಗಳಿಗೆ,ಆಸ್ಪತ್ರಗಳಲ್ಲಿನ ರೋಗಿಗಳಿಗೆ ತೊಂದರೆಯಾಗುತ್ತದೆ

ಈ ಮೈದಾನವನ್ನು ಮಕ್ಕಳ ಆಟೋಟಕ್ಕೆ ಮತ್ತು ಮಹಿಳೆಯರ ವಾಕಿಂಗ್ ಗೆ ಬಿಟ್ಟು ಕೊಡಬೇಕು, ಇಲ್ಲಿ ಯಾವುದೇ ಕಾರಣಕ್ಕೂ ಖಾಸಗಿ ಅವರಿಗೆ ಪ್ರವೇಶ ಇರಕೂಡದು, ಅಂಗಡಿ ಮಳಿಗೆಗಳು ತೆರೆಯಕೂಡದು ಒಂದುವೇಳೆ ತೆರೆದರೆ ಹೋರಾಟ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಚಲುವರಾಜು ಎಚ್ಚರಿಸಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳಿಗೆ ಇದು ಕಣ್ಣಿಗೆ ಕಾಣುತ್ತಿಲ್ಲವೇ ಅಥವಾ ಕಂಡರೂ ಜಾಣಕುರುಡರಂತೆ ವರ್ತಿಸುತ್ತಿದ್ದಾರೆಯೊ ತಿಳಿಯದು.ಕೂಡಲೇ ಎಚ್ಚೆತ್ತುಕೊಂಡು ಮೈದಾನವನ್ನು ಮೈದಾನವಾಗಿ ಇರಲು ಬಿಡಬೇಕೆಂದು ಚಲುವರಾಜು ಆಗ್ರಹಿಸಿದ್ದಾರೆ.

ಹುಣಸೂರಿನ ಆಟದ ಮೈದಾನದಲ್ಲಿ ಖಾಸಗಿಯವರ ದರ್ಬಾರು Read More

ರೌಡಿ ಲಿಸ್ಟ್ ನಲ್ಲಿರುವ ವ್ಯಕ್ತಿಗೆ ನಗರಸಭೆ ಅಧ್ಯಕ್ಷ ಪಟ್ಟ:ಕಾಂಗ್ರೆಸ್ ವಿರುದ್ಧ ಹರ್ಷವರ್ಧನ್ ವಾಗ್ಧಾಳಿ

ಮೈಸೂರು: ನಂಜನಗೂಡಿನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರೌಡಿ ಲಿಸ್ಟ್ ನಲ್ಲಿರುವ ವ್ಯಕ್ತಿಯನ್ನ ಕಾಂಗ್ರೆಸ್ ಆಯ್ಕೆ ಮಾಡಿದೆ ಎಂದು ಮಾಜಿ ಶಾಸಕ ಹರ್ಷವರ್ಧನ್ ವಾಗ್ಧಾಳಿ ನಡೆಸಿದ್ದಾರೆ.

ಇದು ಶಾಸಕ ದರ್ಶನ ಧ್ರುವನಾರಾಯಣ ರವರ ಬದ್ದತೆಯನ್ನ ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ನಂಜನಗೂಡಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಹರ್ಷವರ್ಧನ್,ನಂಜನಗೂಡಿನ ಶಾಸಕರಿಗೆ ಮತ್ತು ಚಾಮರಾಜನಗರ ಲೋಕಸಭಾ ಸದಸ್ಯರಿಗೆ ರಾಜಕೀಯ ಜ್ಞಾನ ಇಲ್ಲ ಎಂದು ಟೀಕಿಸಿದರು.

ಡಿವೈಎಸ್ಪಿ ಬದಲಾವಣೆಯಾಗಿ ಬೇರೆ ಡಿವೈಎಸ್ಪಿ ಬಂದರೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ರೌಡಿ ಪೆರೇಡ್ ನಲ್ಲಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.

ಕನಕಪುರ ಮೂಲದ ರೆಸಾರ್ಟಿಗೆ ಬಿಜೆಪಿ ಸದಸ್ಯರನ್ನ ಕರೆದೊಯ್ದು ಹಣದ ಆಮಿಷ ಒಡ್ಡಿ ಡೀಲ್ ಮಾಡಲಾಗಿದೆ ಎಂದು ಹರ್ಷವರ್ಧನ್ ಆರೋಪಿಸಿದರು.

ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಜು, ಬಾಲಚಂದ್ರ, ಕೆಂಡಗಣಪ್ಪ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರೌಡಿ ಲಿಸ್ಟ್ ನಲ್ಲಿರುವ ವ್ಯಕ್ತಿಗೆ ನಗರಸಭೆ ಅಧ್ಯಕ್ಷ ಪಟ್ಟ:ಕಾಂಗ್ರೆಸ್ ವಿರುದ್ಧ ಹರ್ಷವರ್ಧನ್ ವಾಗ್ಧಾಳಿ Read More