ಚಾಮುಂಡಿ ಬೆಟ್ಟ ಗಾಮ ಪಂಚಾಯಿತಿ ನಗರಪಾಲಿಕೆಗೆ ಸೇರಿಸಿ:ತೇಜಸ್ವಿ ಆಗ್ರಹ

ಮೈಸೂರು: ಚಾಮುಂಡಿ ಬೆಟ್ಟ ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ ದೇವೇಗೌಡರು ಅಲ್ಲಿನ ಗ್ರಾಮ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಲು ಶ್ರಮ ವಹಿಸುತ್ತಿದ್ದರೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸುತ್ತಿರುವುದು ಎಷ್ಟು ಸರಿ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಪ್ರಶ್ನಿಸಿದ್ದಾರೆ.

ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಸಾಕಷ್ಟು ಬ್ರಷ್ಟಾಚಾರಗಳು ನಡೆದಿದ್ದು ಅದನ್ನು ಮುಚ್ಚಿ ಹಾಕಲು ನಗರ ಪಾಲಿಕೆಗೆ ಸೇರಿಸಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರೇ ವಿರೋಧಿಸುತ್ತಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ಅಭಿವೃದ್ಧಿ ಕಡೆ ಗಮನಹರಿಸಿ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಿದರೆ ಚಾಮುಂಡಿ ಬೆಟ್ಟ ಸಾಕಷ್ಟು ಅಭಿವೃದ್ಧಿ ಕಾಣುತ್ತದೆ ಇಲ್ಲದಿದ್ದರೆ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರುಗಳ ಅಧಿಕಾರಕ್ಕೆ ಸಿಕ್ಕಿ ಅಭಿವೃದ್ಧಿ ಕಾಣದೆ ಹಾಗೆ ಉಳಿಯುತ್ತದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಚಾಮುಂಡಿ ಬೆಟ್ಟ ಪ್ರವಾಸಿ ತಾಣವಾಗಿದ್ದು ಪ್ರತಿದಿನ ಲಕ್ಷಾಂತರ ಜನ ಬಂದು ಹೋಗುತ್ತಾರೆ. ಇದು ನಗರ ಪಾಲಿಕೆಗೆ ಸೇರಿದರೆ ಬರುವ ಭಕ್ತರಿಗೆ ಸಾಕಷ್ಟು ಮೂಲಭೂತ ಸೌಕರ್ಯ ಸಿಗುತ್ತದೆ. ಗ್ರಾಮ ಪಂಚಾಯಿತಿಯಲ್ಲೇ ಮುಂದುವರೆದರೆ ಈಗಾಗಲೇ ಒಂದು ಕಡೆ ಬೆಟ್ಟ ಕುಸಿದಿದೆ ಸುತ್ತಮುತ್ತಲು ಬೆಟ್ಟ ಕುಸಿಯುವ ಹಾಗೆ ಮಾಡುತ್ತಾರೆ ಎಂಬ ಆತಂಕವಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಅನುಮತಿ ಇಲ್ಲದೆ ಮನೆ ಕಟ್ಟುವುದು ಒಸಿ ಇಲ್ಲದೆ ಕರೆಂಟ್ ಕೊಡಿಸುವುದು ಹೀಗೆ ಸಾಕಷ್ಟು ಭ್ರಷ್ಟಾಚಾರ ಗಳು ತುಂಬಿ ತುಳುಕಾಡುತ್ತಿವೆ.ಆದ್ದರಿಂದ ಇದಕ್ಕೆ ಅವಕಾಶ ನೀಡದೆ ಅಲ್ಲಿನ ಗ್ರಾಮ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಬೇಕೆಂದು ಕನ್ನಡ ಕ್ರಾಂತಿದಳ ಸಂಘಟನೆಯ ಪರವಾಗಿ ತೇಜಸ್ವಿ ಒತ್ತಾಯಿಸಿದ್ದಾರೆ.

ಇಲ್ಲದಿದ್ದರೆ ಮುಂದಿನ ದಿನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಪ್ರಾಧಿಕಾರದ ವಿರುದ್ಧ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಎಚ್ಚರಿಸಿದ್ದಾರೆ.

ಚಾಮುಂಡಿ ಬೆಟ್ಟ ಗಾಮ ಪಂಚಾಯಿತಿ ನಗರಪಾಲಿಕೆಗೆ ಸೇರಿಸಿ:ತೇಜಸ್ವಿ ಆಗ್ರಹ Read More

ಗಾಡಿ ಚೌಕದಲ್ಲಿ ದರ್ಗಾ ನಿರ್ಮಾಣ ವಿವಾದ: ಪಾಲಿಕೆ ಆಯುಕ್ತರ ಪಾತ್ರ‌ ಇಲ್ಲ-ತೇಜಸ್ವಿ

ಮೈಸೂರು: ಮೈಸೂರಿನ ಕೆ ಆರ್ ಮೊಹಲ್ಲಾ ಗಾಡಿ ಚೌಕದಲ್ಲಿ ದರ್ಗಾ ನಿರ್ಮಾಣ ವಿವಾದದಲ್ಲಿ ನಗರಪಾಲಿಕೆ ಆಯುಕ್ತರ ಪಾತ್ರ ಇಲ್ಲ,ಆದರೂ ಕೆಲವರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.

ಗಾಡಿಚೌಕದ ಸ್ವತ್ತಿನ ಸಂಖ್ಯೆ 2192 ಕೆ -65 ರಲ್ಲಿ ಧಾರ್ಮಿಕ ಕಟ್ಟಡ (ಪದರ್ಗಾ) ನಿರ್ಮಿಸಲು ಕಾರ್ಯದರ್ಶಿ ದಿಲ್ ಬರ್ ಷಾವಲಿ ಮಕಾನ್ (ಸುನ್ನಿ ದರ್ಗಾ) ಅವರು ಅನುಮತಿ ಕೋರಿ ಮೈಸೂರು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯು ಈ ಕುರಿತು ತಕರಾರು ಅರ್ಜಿ ಸಲ್ಲಿಸುವಂತೆ ಸಾರ್ವಜನಿಕ ಪ್ರಕಟಣೆ ಯನ್ನು ಹೊರಡಿಸಿದೆ.

ಇವೆಲ್ಲ ಕಾನೂನಿನ ಪ್ರಕಾರವೇ ನಡೆದಿರುತ್ತದೆ ಆದರೆ ಈಗ ಕೆಲವರು ಮೈಸೂರು ಪಾಲಿಕೆ ಆಯುಕ್ತರಾದ ಶೇಕ್ ತನ್ವೀರ್ ಆಫಿಸ್ ಅವರ ಪಾತ್ರ ವಿದೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ದೂರಿದ್ದಾರೆ.

ಶೇಖ್ ತನ್ವೀರ್ ಆಫಿಸ್ ಅವರು ಒಬ್ಬ ನಿಷ್ಠಾವಂತ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ,ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಿಂದ ಇಲ್ಲಿಯ ವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಈಗ ಅವರು ಮುಸ್ಲಿಂ ಎಂಬ ಕಾರಣಕ್ಕೆ ವಿನಾಕಾರಣ ಅವರ ಮೇಲೆ ಕೆಲವರು ಆರೋಪಿಸುತ್ತಿದ್ದಾರೆ ಇದು ಸರಿಯಲ್ಲ ಇದು ಖಂಡನೀಯ ಎಂದು ತಿಳಿಸಿದ್ದಾರೆ.

ಶೇಕ್ ತನ್ವೀರ್ ಆಫಿಸ್ ಅವರು ಕಾನೂನಿನಲ್ಲಿ ಇರುವ ನಿಯಮಾನುಸಾರ ಈ ವಿಷಯದಲ್ಲಿ ನಡೆದುಕೊಂಡು ಯಾರಿಗಾದರೂ ತಕರಾರು ಇದ್ದಲ್ಲಿ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕ ಪ್ರಕಟಣೆ ಯನ್ನು ಹೊರಡಿಸಿದ್ದಾರೆ.

ಈಗಾಗಲೇ ಹಲವರು ತಕಾರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಇದು ಸಾಮಾನ್ಯ ಪ್ರಕ್ರಿಯೆ, ಇದನ್ನು ವಿನಾಕಾರಣ ಕೆಲವರು ಗೊಂದಲ ಉಂಟುಮಾಡಿ ಆಯುಕ್ತರಾದ ಶೇಕ್ ತನ್ವೀರ್ ಆಫಿಸ್ ಅವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

ಒಂದು ವೇಳೆ ಇದೇ ರೀತಿ ದಕ್ಷ ಅಧಿಕಾರಿಯ ಮೇಲೆ ಸುಳ್ಳು ಆರೋಪಗಳನ್ನು ಮುಂದುವರೆಸಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ತೇಜಸ್ವಿ ಎಚ್ಚರಿಸಿದ್ದಾರೆ.

ಗಾಡಿ ಚೌಕದಲ್ಲಿ ದರ್ಗಾ ನಿರ್ಮಾಣ ವಿವಾದ: ಪಾಲಿಕೆ ಆಯುಕ್ತರ ಪಾತ್ರ‌ ಇಲ್ಲ-ತೇಜಸ್ವಿ Read More

ಸುಲಿಗೆ ಕೇಂದ್ರವಾದ ಮಹಾನಗರಪಾಲಿಕೆ- ಜೋಗಿಮಂಜು

ಮೈಸೂರು: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ದಿವಾಳಿ ಯಾಗಿರುವ ಕಾಂಗ್ರೆಸ್ ಸರಕಾರ ಈಗ ಜನನ, ಮರಣ ಪ್ರಮಾಣಪತ್ರದ ಶುಲ್ಕವನ್ನು 10ಪಟ್ಟು ಏರಿಕೆ ಮಾಡಿದೆ ಎಂದು ಯುವಭಾರತ್ ಸಂಘಟನೆ
ಸಂಚಾಲಕ ಜೋಗಿ ಮಂಜು ದೂರಿದ್ದಾರೆ.

ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ ಹಾಲು ದರ ಏರಿಕೆ ಮಾಡಿ, ಜನನ, ಮರಣ ಪ್ರಮಾಣಪತ್ರ ದಲ್ಲೂ ಹಣ ಗಳಿಸಲು ಈ‌ ಸರ್ಕಾರ ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ಜೋಗಿ ಟೀಕಿಸಿದ್ದಾರೆ.

ಈ ಮೊದಲು ಜನನ, ಮರಣ ಪ್ರಮಾಣಪತ್ರ ಪಡೆಯಲು 5 ರೂ. ಶುಲ್ಕವಿತ್ತು ಆದರೆ ಈಗ ಅದನ್ನು 50 ರೂ.ಗೆ ಏರಿಸಿದ್ದಾರೆ. ಅಲ್ಲದೇ ದಂಡದ ಶುಲ್ಕವೂ ಏರಿಕೆಯಾಗಿದೆ, ಬಡವರು
ಏನು ಮಾಡಬೇಕು ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

5 ಗ್ಯಾರಂಟಿ ಕೊಟ್ಟು 10 ಪಟ್ಟು ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರ ಜನವಿರೋಧಿಯಾಗಿದೆ. ಈ ಕೂಡಲೇ ಏರಿಸಿದ ಶುಲ್ಕ ಹಿಂದಕ್ಕೆ ಪಡೆದು ಮೊದಲಿನ ಶುಲ್ಕವನ್ನೇ ಮುಂದುವರಿಸ ಬೇಕೆಂದು ಒತ್ತಾಯಿಸಿದ್ದಾರೆ.

ನಗರಪಾಲಿಕೆ ನೀರಿನದರ ಹೆಚ್ಚಳ,ಕಂದಾಯ ಹೆಚ್ಚಳ ಮಾಡಿದ್ದಾಯಿತು,ಈಗ ಜನನ ಮರಣ ಪ್ರಮಾಣ ಪತ್ರ ಹೆಚ್ಚಳ ಮಾಡಿ ಬಡವರ ಮೇಲೆ ಬರೆ ಎಳೆದಿದ್ದಾರೆ ಎಂದು ಜೋಗಿಮಂಜು ಕಿಡಿಕಾರಿದ್ದಾರೆ.

ಮಾರ್ಗಸೂಚಿಯಲ್ಲಿ 2 ರೂ ಇದ್ದ ಪರಿಷ್ಕೃತ ದರ 20 ರೂ,
5 ರೂ ಇದ್ದ ಪರಿಷ್ಕೃತ ದರ 50.ಒಂದು ವೇಳೆ
ವಿಳಂಬವಾದರೆ ದಂಡ 50 ರೂ ಕಟ್ಟಬೇಕು. ಇದು ಅವೈಜ್ಞಾನಿಕ.ಹಾಗಾಗಿ ಅಧಿಕೃತವಾಗಿ ಹಣ ಸುಲಿಗೆ ಕೇಂದ್ರವಾಗಿ ಪರಿಣಮಿಸಿದೆ ಎಂದು ಅವರು ಕಿಡಿಕಾರಿದ್ದಾರೆ

ಒಬ್ಬ ಮನುಷ್ಯ ಹುಟ್ಟಿದ ದಿನ ಪತ್ರ ಪಡೆಯುವುದರೊಂದಿಗೆ ಸುಲಿಗೆ ಪ್ರಾರಂಭವಾಗಿ ಕಡೆಗೆ ಅವರ ಸಾವಿನ ಪ್ರಮಾಣ ಪತ್ರ ಪಡೆಯುವವರೆಗೂ ಹಣ ಸುಲಿಗೆ ಮಾಡುತ್ತಿರುವುದು ಮನುಕುಲಕ್ಕೆ ಅವಮಾನ ಎಂದು ಜೋಗಿ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವರ್ಷಗಳಿಂದ ನಗರಪಾಲಿಕೆ ಯಲ್ಲಿ ಸದಸ್ಯರುಗಳಿಲ್ಲದ ಕಾರಣ ಇಂತಹ ಅವೈಜ್ಞಾನಿಕ ನಿರ್ಣಯವನ್ನು ಅಧಿಕಾರಿಗಳು ಅವರ ಮನಸೊ ಇಚ್ಚೆ ಮಾಡುತ್ತಿರುವುದು ಸರಿ ಇಲ್ಲ, ಈಗ ಮಾಡಿರುವ ಪರಿಷ್ಕೃತ ದರವನ್ನು ಕಡಿಮೆ ಮಾಡಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಯಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕಾನೂನಿನ ಹೋರಾಟ ಮಾಡಬೇಕಾಗುತ್ತದೆ ಎಂದು ಜೋಗಿಮಂಜು ಎಚ್ಚರಿಸಿದ್ದಾರೆ.

ಸುಲಿಗೆ ಕೇಂದ್ರವಾದ ಮಹಾನಗರಪಾಲಿಕೆ- ಜೋಗಿಮಂಜು Read More