ಸಂಸ್ಕಾರ-ಸಂಸ್ಕೃತಿ ಶಾಲಾ ಶಿಕ್ಷಣದ ಭಾಗವಾಗಲಿ: ದತ್ತ ವಿಜಯಾನಂದ ತೀರ್ಥಶ್ರೀ

ಮೈಸೂರು: ಸಂಸ್ಕಾರ-ಸಂಸ್ಕೃತಿ ನಮ್ಮ ಶಿಕ್ಷಣದ ಭಾಗವಾಗಬೇಕು ಎಂದು ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಶಾಲೆಯಲ್ಲಿ ಶಾಲಾ ಮಕ್ಕಳು ಈ ಶೈಕ್ಷಣಿಕ ವರ್ಷ ಸಾಧಿಸಿದ 14 ವಿಶ್ವ ದಾಖಲೆಗಳ ಸಮಾರೋಪ ಹಾಗೂ ಸತತ 16 ಗಂಟೆ, 1 ನಿಮಿಷ ಹಾಗು 20 ಸೆಕೆಂಡ್ ಗಳ ಕಾಲ ಪೂರ್ವ ಪ್ರಾಥಮಿಕದಿಂದ ಹತ್ತನೇ ತರಗತಿವರೆಗಿನ 214 ವಿದ್ಯಾರ್ಥಿಗಳು (ಬೆಳಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ) ಭಗವದ್ಗೀತೆ ಪಠಿಸಿ, ಅತಿ ಹೆಚ್ಚು ಸಮಯ ಒಂದು ಗುಂಪಿನಿಂದ ಮ್ಯಾರಥಾನ್ ಪಠಣದೊಂದಿಗೆ ಸೃಷ್ಟಿಸಲಾದ ದಾಖಲೆಯ ಅರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಭಾರತೀಯತೆ ಇಲ್ಲವಾದರೆ ಭಾರತ ಇಲ್ಲ, ಭಾರತ ಇಲ್ಲವಾದರೆ ನಾವ್ಯಾರು ಇರಲು ಸಾಧ್ಯವೇ ಇಲ್ಲ. ಇದಕ್ಕಾಗಿ ನಮ್ಮ ಶಿಕ್ಷಣದ ಮೂಲಕ ಭಾರತೀಯತೆಯ ಕಲ್ಪನೆ-ಯೋಚನೆಯನ್ನು ಪ್ರತಿ ಮನೆ-ಮನಕ್ಕೆ ತಲುಪಿಸಬೇಕು. ಈ ಹಿನ್ನಲೆಯಲ್ಲಿ ಭಾರತೀಯ ಶಿಕ್ಷಣ ಪದ್ಧತಿ ಈ ಸಮಯದ ತುರ್ತು ಎಂದು ತಿಳಿಸಿದರು

ಇಲ್ಲಿ ದಾಖಲೆ ಒಂದು ನೆಪ, ಭಗವದ್ಗೀತೆಯ ಸಂದೇಶವನ್ನು ವಿಶ್ವಕ್ಕೆ ಪೂರ್ಣ ಚೇತನ ಶಾಲಾ ಮಕ್ಕಳು ಸಾರಿದ್ದಾರೆ. ಈ ನಾಡಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿರುವುದು ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ನೀಡಿರುವ ಸಂದೇಶಗಳಲ್ಲಿ ಎಂದು ಸ್ವಾಮೀಜಿ ತಿಳಿಸಿದರು.

ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥ, ಈ ಹಿನ್ನಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಪದ್ದತಿಯನ್ನು ನಮ್ಮೆಲ್ಲಾ ಮಕ್ಕಳಿಗೆ ನೀಡಬೇಕು. ಇದು ಭವಿಷ್ಯದ ಸುಂದರ ಭಾರತ ನಿರ್ಮಾಣಕ್ಕೆ ಒಳಿತು ಎಂದು ಹೇಳಿದರು.

ನೀವು ಇಲ್ಲಿ ಕಲಿಯುವ ಎಲ್ಲಾ ಮೌಲ್ಯಗಳನ್ನು ನಿಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. ಆಗ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀಗಳು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಭಾರತೀಯ ಮೌಲ್ಯ-ಶಿಕ್ಷಣ ಪದ್ದತಿಯನ್ನು ಪೋಷಿಸುವಲ್ಲಿ ಗುರುಕುಲ ಪದ್ದತಿಯ ಶಿಕ್ಷಣ ಮಹತ್ವದ ಪಾತ್ರ ವಹಿಸಿತ್ತು ಈಗ ಪೂರ್ಣ ಚೇತನ ಶಾಲೆಯಲ್ಲಿ ಇದೆ ತೆರನಾದ ಶಿಕ್ಷಣ ನೀಡಲಾಗುತ್ತಿದೆ,ಇದು ಎಲ್ಲರಿಗೂ ಆದರ್ಶಪ್ರಾಯ ಎಂದು ಶ್ರೀಗಳು ಶ್ಲಾಘಿಸಿದರು.

ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದರ್ಶನ್ ರಾಜ್ ಮಾತನಾಡಿ, ಆಧುನಿಕ ಶಿಕ್ಷಣವನ್ನು ಭಾರತೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ನೀಡಿದರೆ ಮಾತ್ರ ನಮ್ಮ ದೇಶದ ಸಂಸ್ಕೃತಿ ರಕ್ಷಣೆ ಸಾಧ್ಯ, ಇಲ್ಲವಾದರೆ, ಪಾಶ್ಚಿಮಾತ್ಯ ಸಮಾಜಗಳು ಎದುರಿಸುತ್ತಿರುವ ಸವಾಲು ನಮ್ಮನ್ನೂ ಕಾಡಬಹದು ಎಂದು ಎಚ್ಚರಿಸಿದರು.

ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಏಷ್ಯನ್ ರೆಕಾರ್ಡ್ಸ್ ಅಕಾಡಮಿ, ಹಾಗು ಇಂಡಿಯ ರೆಕಾರ್ಡ್ಸ್ ಅಕಾಡಮಿ, ವಿದ್ಯಾರ್ಥಿಗಳ ಈ ಸಾಧನೆಗೆ ವಿಶ್ವ ಮಾನ್ಯತೆ ನೀಡಿವೆ.

ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಶಾಲಾ ಪ್ರಾಂಶುಪಾಲರಾದ ಪ್ರಿಯಾಂಕಾ ಬಿ, ಡೀನ್ ಲಾವಣ್ಯ ಉಪಸ್ಥಿತರಿದ್ದರು.

ಸಂಸ್ಕಾರ-ಸಂಸ್ಕೃತಿ ಶಾಲಾ ಶಿಕ್ಷಣದ ಭಾಗವಾಗಲಿ: ದತ್ತ ವಿಜಯಾನಂದ ತೀರ್ಥಶ್ರೀ Read More

ಕೋವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ:ನಮ್ಮ ತಕರಾರಿಲ್ಲ-ಹೆಚ್‌ ಡಿ ಕೆ

ಮೈಸೂರು: ಹತ್ತು ವರ್ಷದ ಹಿಂದೆ ಮಾಡಿದ ಜಾತಿಗಣತಿ ಇಟ್ಕೊಂಡು ಈಗ ಏನು ಮಾಡುತ್ತೀರಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದು ಸಿದ್ದರಾಮಯ್ಯ ಆಫೀಸಲ್ಲಿ ಕುಳಿತು ಮಾಡಿದ ವರದಿ ಅಂತ ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ ಅಲ್ಲಿಗೆ ಆ‌ ವರದಿ ಅದೆಷ್ಟು ಸರಿ ಇದ್ದೀತು ಎಂದು ವಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕೋವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಿನ್ನೆ ಕ್ಯಾಬಿನೆಟ್ ನಲ್ಲಿ ಎಸ್ಐಟಿ ತನಿಖೆ ಮಾಡ್ತೀವಿ ಅಂದಿದ್ದಾರೆ. ಅವರ ನಿರ್ಧಾರಕ್ಕೆ ನಮ್ಮದೇನು ತಕರಾರಿಲ್ಲ ಎಂದು ಹೇಳಿದರು.

ಆದರೆ ಇವರು ವಿರೋಧಪಕ್ಷದಲ್ಲಿದ್ದಾಗ ಕೋವಿಡ್ ಬಗ್ಗೆ ಚರ್ಚೆ ಮಾಡ್ತಿದ್ರು. ಇದೇ ಸಿದ್ದರಾಮಯ್ಯ ಸದನದಲ್ಲಿ ಚರ್ಚೆ ಮಾಡಿದ್ರು. ಸರ್ಕಾರ ರಚನೆ ಆಗಿ 15 ತಿಂಗಳಾಗಿದೆ. ಇಷ್ಟುದಿನ ಸುಮ್ಮನಿದ್ದರು, ಈಗ ತನಿಖೆ ಮಾಡ್ತಾರಾ, ಅವರ ವೈಫಲ್ಯ ಮುಚ್ಚಿಕೊಳ್ಳಲು ಇವೆಲ್ಲ ಮಾಡ್ತಿದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ನವರು ಇಂದು ಪೇಪರ್ ನಲ್ಲಿ ಅದ್ಯಾವುದೋ ಜಾಹಿರಾತು ಕೊಟ್ಟಿದ್ದಾರೆ. ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ. ಕರ್ನಾಟಕ ರಾಜ್ಯವನ್ನ ವಾಮಾಮಾರ್ಗ, ಮೋಸದಿಂದ ಅಸ್ತಿರಗೊಳಿಸ್ತಿದ್ದಾರೆ ಅಂತ ಕೊಟ್ಟಿದ್ದಾರೆ. ಆದರೆ ವಾಮಾಮಾರ್ಗ, ಮೋಸವನ್ನ ಸ್ಥಿರಗೊಳಿಸಲು ಹೊರಟಿರೋ ಸರ್ಕಾರ ಇದು. ಇವರು ಯಾವತ್ತು ಸತ್ಯ ಧರ್ಮ ಉಳಿಸಿದಿದ್ದಾರೆ ಎಂದು ಕುಮಾರಸ್ವಾಮಿ‌ ಪ್ರಶ್ನಿಸಿದರು.

ಕೋವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ:ನಮ್ಮ ತಕರಾರಿಲ್ಲ-ಹೆಚ್‌ ಡಿ ಕೆ Read More

ಐರಿಸ್ ಶ್ವಾನಕ್ಕೆ ಪ್ರಶಸ್ತಿ ಪ್ರದಾನ ಮಾಡಿ ಖುಷಿ ಪಟ್ಟ ಸುಧಾ ಮೂರ್ತಿ

ಮೈಸೂರು: ಈ ಬಾರಿಯ ದಸರಾ ಶ್ವಾನ ಪ್ರದರ್ಶನದಲ್ಲಿ ನಗರದ ಸಿದ್ದಾರ್ಥ ಬಡಾವಣೆಯ ಸುಜಾತ ಅಶ್ವಿನ್ ಅವರ ಟಾಯ್‌ಪೂಡಲ್ ತಳಿಯ ಐರಿಸ್ ಶ್ವಾನ ಪ್ರಥಮ ಸ್ಥಾನ ಗಳಿಸಿತು.

ಕಳೆದ ಮೂರು ವರ್ಷಗಳಿಂದ ದಸರಾ ಶ್ಚಾನ ಪ್ರದರ್ಶನದಲ್ಲಿ‌ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿರುವ ಹೆಗ್ಗಳಿಕೆ ಈ ಶ್ವಾನಕ್ಕಿದೆ.

ಈರೋಪ್ ಮೂಲದಿಂದ ದೆಹಲಿಯ ಬ್ರೀಡರ್ ಮೂಲಕ ತರಿಸಿಕೊಳ್ಳಲಾದ ಈ ತಳಿಯು ಬುದ್ದಿವಂತ ಶ್ವಾನವೆಂದೆ
ಜನಪ್ರಿಯವಾಗಿದೆ.

ರಾಜ್ಯಸಭಾ ಸದಸ್ಯರು ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಿ ಶ್ವಾನವನ್ನು ಅಪ್ಪಿ ಮುದ್ದಾಡಿ ಖುಷಿ ಪಟ್ಟರು.

ಕೆಎಂಪಿಕೆ ಚಾರಿಟಬಲ್
ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,
ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ವೈ ಡಿ ರಾಜಣ್ಣ, ಉಪವಿಶೇಷಾಧಿಕಾರಿ
ಡಾ. ಕೃಷ್ಣಂರಾಜು, ಉಪನಿರ್ದೆಶಕ ಡಾ ನಾಗರಾಜು ಉಪಸ್ಥಿತರಿದ್ದರು.

ಐರಿಸ್ ಶ್ವಾನಕ್ಕೆ ಪ್ರಶಸ್ತಿ ಪ್ರದಾನ ಮಾಡಿ ಖುಷಿ ಪಟ್ಟ ಸುಧಾ ಮೂರ್ತಿ Read More