ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ:ಅಭಿಮಾನಿಗಳು ಖುಷ್

ಮೈಸೂರು: ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳ ಸಂಭ್ರಮ‌ ಹೇಳತೀರದಂತಿತ್ತು.

ಅಗ್ರಹಾರ ವೃತ್ತದಲ್ಲಿ ವಿಷ್ಣುವರ್ಧನ್ ಅಭಿಮಾನಿ ಬಳಗದವರು ಸಾಹಸಸಿಂಹ ವಿಷ್ಣುವರ್ಧನ್ ಗೆ ಘೋಷಣೆ ಕೂಗಿ ವಿಷ್ಣು ‌ಭಾವಚಿತ್ರಗಳನ್ನು ಹಿಡಿದು ಖುಷಿಯಿಂದ ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಎಂ. ಡಿ ಪಾರ್ಥಸಾರಥಿ ಅವರು, ಕರ್ಣನಿಗೆ ಕೊನೆಗೂ ಕಾಲ ಕೂಡಿಬಂತು,15 ವರ್ಷದ ಅಭಿಮಾನಿಗಳ ಕನಸು ಇಂದು ನನಸಾಗಿದೆ ಅದಕ್ಕಾಗಿ ಸರ್ಕಾರಕ್ಕೆ ವಿಶೇಷ ಅಭಿನಂದನೆಗಳು ಎಂದು ತಿಳಿಸಿದರು.

ಈ ಬಾರಿ ವಿಷ್ಣು ವರ್ಧನ್ ಅವರ 75ಹುಟ್ಟು ಹಬ್ಬವನ್ನು ಅಭಿಮಾನಿಗಳೆಲ್ಲ ಸೇರಿ ಹಬ್ಬದಂತೆ ಆಚರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಭಿನವ ಸರಸ್ವತಿ ಬಿ ಸರೋಜಾ ದೇವಿ ಅವರಿಗೂ ಕರ್ನಾಟಕ ರತ್ನ ನೀಡಿರುವುದನ್ನು ಸ್ವಾಗತಿಸುತ್ತೇವೆ ಎಂದು ಪಾರ್ಥಸಾರಥಿ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಜಿ ರಾಘವೇಂದ್ರ, ಬಸವರಾಜ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರವಿಚಂದ್ರ, ಎಸ್ ಎನ್ ರಾಜೇಶ್, ಟಿ ಎಸ್ ಅರುಣ್, ರವಿನಂದನ್, ಮಹಾನ್ ಶ್ರೇಯಸ್, ಲಕ್ಷ್ಮಣ್, ಚಿನ್ನ ಬೆಳ್ಳಿ ಸಿದ್ದಪ್ಪ, ಸಂತೋಷ್, ರವೀಂದ್ರ ಕುಮಾರ್, ಅಭಿ, ಹರೀಶ್ ನಾಯ್ಡು, ರಾಕೇಶ್ ಭಟ್ ಮತ್ತಿತರರು ಹಾಜರಿದ್ದರು.

ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ:ಅಭಿಮಾನಿಗಳು ಖುಷ್ Read More

ವ್ಯಕ್ತಿತ್ವ ಬೆಳೆಸುವಲ್ಲಿ ಸಾಂಸ್ಕೃತಿಕ ಚಟುವಟಿಕೆ ಪೂರಕ:ಪ್ರೀತಿ ಶೆಣೈ,

ಮೈಸೂರು: ಸಮುದಾಯದ ಒಡನಾಟ, ಸಾಮಾಜಿಕ ಕಳಕಳಿ, ನಾಯಕತ್ವದ ಗುಣಗಳ ವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಪೂರಕ ಎಂದು ಪರಿಸರ ಪ್ರೇಮಿ ಪ್ರೀತಿ ಶೆಣೈ, ಹೇಳಿದರು.

ನಗರದ ಚಾಮುಂಡಿಪುರಂ ನಲ್ಲಿರುವ ಆರಾಧ್ಯ ಸಭಾಂಗಣದಲ್ಲಿ ಆರಾಧ್ಯ ಗುರುಕುಲದ ವತಿಯಿಂದ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಹಾಗೂ ಸಾಂಸ್ಕೃತಿಕ ದಿನಾಚರಣೆ ವೇಳೆ ಶ್ರೀ ಕೃಷ್ಣ ರಾಧೆ ವೇಷ ಧರಿಸಿದ್ದ ಪುಟಾಣಿಗಳನ್ನು ಶ್ಲಾಘಿಸಿ ಅವರು ಮಾತನಾಡಿದರು.

ಬದುಕಿನ ಮೌಲ್ಯ ಅರಿಯುವಲ್ಲಿ, ಬೌದ್ಧಿಕ ಮತ್ತು ಕಲಾತ್ಮಕ ವ್ಯಕ್ತಿತ್ವ ಬೆಳೆಸುವಲ್ಲಿ, ಸಹಕಾರ, ಸಮಾನತೆ, ಸಹಬಾಳ್ವೆ ಪಸರಿಸುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಾರಣವಾಗಿವೆ ಎಂದು ಹೇಳಿದರು.

ಪ್ರೀತಂ ಶೆಣೈ ಸಹನಾ ಗೌಡ, ಶಾಲೆಯ ವ್ಯವಸ್ಥಾಪಕರಾದ ಮಮತ, ಶಾಲೆಯ ಮುಖ್ಯೋಪಾಧ್ಯಾಯಿನು ಶಿಲ್ಪ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.

ವ್ಯಕ್ತಿತ್ವ ಬೆಳೆಸುವಲ್ಲಿ ಸಾಂಸ್ಕೃತಿಕ ಚಟುವಟಿಕೆ ಪೂರಕ:ಪ್ರೀತಿ ಶೆಣೈ, Read More