ಅಂಗಡಿಗಳಿಗೆ 31000 ರೂ ದಂಡ ವಿಧಿಸಿದನಗರ ಪಾಲಿಕೆ ಪರಿಸರ ಅಭಿಯಂತರರು

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಪರಿಸರ ಅಭಿಯಂತರರು‌ ನಿಷೇಧಿತ ಪ್ಲಾಸ್ಟಿಕ್
ಬಳಕೆ ಮಾಡಿದ ಅಂಗಡಿ ಮಳಿಗೆಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಾರ್ಡ್ 55 ಮತ್ತು 49 ರಲ್ಲಿ
ಮಹಾನಗರ ಪಾಲಿಕೆ ಪರಿಸರ ಅಭಿಯಂತರರಾದ ಜ್ಯೋತಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ನಡೆಸಿದರು.

ಕೆಲ ಅಂಗಡಿಗಳಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಇಟ್ಟಿದ್ದುದು ಕಂಡು ಅದನ್ನೆಲ್ಲ ವಶ ಪಡಿಸಿಕೊಳ್ಳಲಾಯಿತು.

ಈ ವೇಳೆ ಅಂಗಡಿಗಳಿಗೆ 31000 ದಂಡ ವಿಧಿಸಲಾಯಿತು.ಮತ್ತೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದೆಂದು ಸೂಚಿಸಿದರು.ಒಂದು ವೇಳೆ ಮತ್ತೆ ಪ್ಲಾಸ್ಟಿಕ್ ಕಂಡುಬಂದರೆ ಲೈಸೆನ್ಸ್ ರದ್ದುಪಡಿಸ ಬೇಕಾಗುತ್ತದೆ ಎಂದು ‌ಜ್ಯೋತಿ ಕಠಿಣ ಎಚ್ಚರಿಕೆ ನೀಡಿದರು.

ದಾಳಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಪರಿಸರ ಅಭಿಯಂತರರು ಜ್ಯೋತಿ ಅವರೊಂದಿಗೆ ಆರೋಗ್ಯ ನಿರೀಕ್ಷಕರಾದ ಶಿವಪ್ರಸಾದ್, ಶೋಭಾ ಹಾಗೂ ಸೂಪರ್ವೈಸರ್ ಶಂಕರ್ ಮತ್ತು ಆರೋಗ್ಯ ಶಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಅಂಗಡಿಗಳಿಗೆ 31000 ರೂ ದಂಡ ವಿಧಿಸಿದನಗರ ಪಾಲಿಕೆ ಪರಿಸರ ಅಭಿಯಂತರರು Read More