ಅಹಿಂಸಾ ಮಾರ್ಗ ತೋರಿದ ಭಗವಾನ್ ಮಹಾವೀರರು- ಹರೀಶ್ ಗೌಡ

ಮೈಸೂರು: ನಗರದ‌ ದಿವಾನ್ಸ್ ರಸ್ತೆಯಲ್ಲಿನ
ಜೈನ್ಸ್ ಅಪಾರ್ಟ್ಮೆಂಟ್ ನಲ್ಲಿ
ಮೈಸೂರು ಯುವ ಬಳಗದ ವತಿಯಿಂದ
ಮಹಾವೀರರ 2624 ನೇ ಜಯಂತಿ ಹಮ್ಮಿಕೊಳ್ಳಲಾಯಿತು.

ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ಸಿಹಿ ವಿತರಿಸಿ ಶಾಸಕ ಹರೀಶ್ ಗೌಡ ಮಾತನಾಡಿದರು.

ಜೈನ ಧರ್ಮದ ಕೊನೆಯ ತೀರ್ಥಂಕರ ರಾಗಿದ್ದ ಭಗವಾನ್ ಮಹಾವೀರರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದರು ನಾವು ಅದನ್ನು ಅನುಸರಿಸಬೇಕು ಎಂದು ಕರೆ ನೀಡಿದರು.

ಮನುಷ್ಯ ಹುಟ್ಟಿನಿಂದಲೇ ಶ್ರೇಷ್ಠನಾಗುವುದಿಲ್ಲ,ಸತ್ಯದ ಹಾದಿಯಲ್ಲಿ, ದಾರ್ಶನಿಕರ ತತ್ವ–ಸಿದ್ಧಾಂತಗಳನ್ನು ನಂಬಿ ನಡೆದಾಗ ಮನುಷ್ಯನ ಜೀವನ ಶ್ರೇಷ್ಠವಾಗುವುದು ಎಂದು ತಿಳಿಸಿದರು‌

ಕಾರ್ಯಕ್ರಮದಲ್ಲಿ ಹಂಸರಾಜ್ ಜೈನ್, ಕಾಂತಿಲಾಲ್ ಜೈನ್, ಗೌತಮ್ ಸಾಲೇಚ, ರಮೇಶ್ ಕಂಡೆ ವಾಲ್, ನರ್ಸಿಂಗ್ ಪ್ರಮಾರ್, ಪ್ರಕಾಶ್ ಜೈನ್, ಕಾಂತಿಲಾಲ್ ದಾದಾಲ್, ಶರವಣ್,ಗೌತಮ್ ಬಾಲಾಜಿ, ರವಿಚಂದ್ರ, ನವೀನ್, ಪ್ರಮೋದ್ ಗೌಡ,ಲೋಕೇಶ್, ಹೇಮಂತ್, ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

ಅಹಿಂಸಾ ಮಾರ್ಗ ತೋರಿದ ಭಗವಾನ್ ಮಹಾವೀರರು- ಹರೀಶ್ ಗೌಡ Read More

ವಿವೇಕಾನಂದರು ಯುವ ಶಕ್ತಿಯ ಪ್ರತೀಕ : ಹರೀಶ್ ಗೌಡ

ಮೈಸೂರು: ಸ್ವಾಮಿ ವಿವೇಕಾನಂದರು ಭಾರತದ ಯುವಶಕ್ತಿಯ ಪ್ರತೀಕ ಎಂದು ಶಾಸಕ ಹರೀಶ್ ಗೌಡ ರವರು ಹೇಳಿದರು

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಪುರುಷರ ವಿದ್ಯಾರ್ಥಿ ನಿಲಯ ಆವರಣದಲ್ಲಿ ಮೈಸೂರು ಯುವ ಬಳಗ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ವೇಳೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಭಾರತದ ಯುವ ಶಕ್ತಿಗೆ ಪ್ರೇರಣೆಯಾಗುವ ಮೂಲಕ ಯುವ ಭಾರತವನ್ನು ಜಗತ್ತಿಗೆ ಪರಿಚಯಿಸಿದರು ಎಂದು ಹೇಳಿದರು.

ಇಂದಿನ ಯುವ ಸಮುದಾಯ ವಿವೇಕಾನಂದರ ವಾಣಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು‌ ಎಂದು ಹರೀಶ್ ಗೌಡ ಕರೆ ನೀಡಿದರು.

ಉನ್ನತ ವಿದ್ಯಾಭ್ಯಾಸದ ಗುರಿ ಹೊಂದುವ ಮೂಲಕ ದೇಶದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಬೇಕು, ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನ ಪಾಲಿಸಲು ಯುವಜನಾಂಗ ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡ,ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಮಹಾದೇವ್, ಮಂಜುನಾಥ್, ಗುರುರಾಜ್ ಶೆಟ್ಟಿ,ಸಂಜಯ್ ಗೌಡ,ರವಿಚಂದ್ರ, ಸಂದೀಪ್, ಯೋಗೇಶ್, ನಂಜುಂಡಸ್ವಾಮಿ,ಹರೀಶ್ ಗೌಡ, ಚೆಲುವರಾಜ್, ನವೀನ್, ನಿತು,ಮಂಜುಳಾ, ಶಾಂತ, ಮಂಗಳ, ಕಾಂತಿಲಾಲ್ ಜೈನ್, ಲೋಕೇಶ್, ಮನು, ಚಂದ್ರಶೇಖರ್, ವಕೀಲರಾದ ಹೃತಿಕ್ ಗೌಡ, ಸೂರ್ಯ ಕುಮಾರ್, ಹರ್ಷ ಮತ್ತಿತರರು ಹಾಜರಿದ್ದರು.

ವಿವೇಕಾನಂದರು ಯುವ ಶಕ್ತಿಯ ಪ್ರತೀಕ : ಹರೀಶ್ ಗೌಡ Read More

ಮಾನವೀಯ ಮೌಲ್ಯಗಳಿಗೆ ಹೆಚ್ಚು ಗೌರವ ನೀಡಿದ್ದ ಮನಮೋಹನ್ ಸಿಂಗ್ : ಹರೀಶ್ ಗೌಡ

ಮೈಸೂರು: ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್‌ ನಿಧನದಿಂದ, ಭಾರತ ಶ್ರೇಷ್ಠ ರತ್ನವೊಂದನ್ನು ಕಳೆದುಕೊಂಡಂತಾಗಿದೆ ಎಂದು ಶಾಸಕ ಕೆ ಹರೀಶ್ ಗೌಡ ದುಃಖ ವ್ಯಕ್ತಪಡಿಸಿದರು.

ನಗರದ ದೇವರಾಜ ಅರಸು ರಸ್ತೆಯಲ್ಲಿ ಮೈಸೂರು ಯುವ ಬಳಗದ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸಂತಾಪ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹರೀಶ್ ಗೌಡ ಮಾತನಾಡಿದರು.

ಜಗತ್ತಿನ ಆರ್ಥಿಕ ನಾಯಕರಾಗಿ, ಹಲವಾರು ರಾಷ್ಟ್ರಗಳ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದರು. ಮಾನವೀಯ ಮೌಲ್ಯಗಳಿಗೆ ಹೆಚ್ಚು ಗೌರವ ನೀಡಿದ್ದ ನಾಯಕ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದರು.

ಮಾಜಿ ಉಪ ಮಹಾಪೌರರಾದ ಪುಷ್ಪವಲ್ಲಿ , ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ವಾರ್ಡ್ ನಂಬರ 41ರ ಅಧ್ಯಕ್ಷ ನಂಜುಂಡಸ್ವಾಮಿ, ವಾರ್ಡ್ ನಂಬರ್23ರ ಕಾಂಗ್ರೆಸ್ ಮುಖಂಡ ರವಿಚಂದ್ರ, ಈರೇಗೌಡ, ರವಿ,ಮಂಜುನಾಥ್ ಗೌಡ, ನಿತಿನ,ಸಂತೋಷ, ನವೀನ,ಶ್ರೀನಿವಾಸ್ ಆಚಾರ್, ವಿನೋದ್, ಪ್ರಜ್ವಲ್, ರಾಜೇಶ, ಭಗವಾನ್, ಅಜಿತ್,
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಲನಹಳ್ಳಿ ಎಂ ಎನ್ ಚೇತನ್ ಗೌಡ,
ಮಹಾನ್ ಶ್ರೇಯಸ್ ಮತ್ತಿತರರು ಪಾಲ್ಗೊಂಡಿದ್ದರು.

ಮಾನವೀಯ ಮೌಲ್ಯಗಳಿಗೆ ಹೆಚ್ಚು ಗೌರವ ನೀಡಿದ್ದ ಮನಮೋಹನ್ ಸಿಂಗ್ : ಹರೀಶ್ ಗೌಡ Read More

ಯುವ ಪೀಳಿಗೆಗೆ ಇತಿಹಾಸ, ಭಾಷೆ ಬಗ್ಗೆ ಅರಿವು ಮೂಡಿಸಿ- ಹರೀಶ್ ಗೌಡ

ಮೈಸೂರು: ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.

ನಗರದ ದಿವಾನ್ಸ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿ ಮುಂಭಾಗ ಮೈಸೂರು ಯುವ ಬಳಗದ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು
ಹಿರಿಯ ಆಟೋ ಚಾಲಕರಾದ ಜಗದೀಶ್, ಬಸವರಾಜ್, ಪುರುಷೋತ್ತಮ್, ಜಗ್ಗಪ್ಪ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನಮ್ಮ ನೆಲ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದಲೇ ಭಾಷೆಗೂ ನೆಲದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತವೇ ರಾಜ್ಯೋತ್ಸವ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಗುರುರಾಜ್ ಶೆಟ್ಟಿ, ನವೀನ್, ಉತ್ತನಹಳ್ಳಿ ಶಿವಣ್ಣ ,ರವಿ ಚಂದ್ರ ,ಮಂಜುಳಾ ಶಾಂತ ,ಮಂಗಳ, ತೊಣಚಿ ಕೊಪ್ಪಲ್ ರಾಜು, ಪವನ್, ಹರೀಶ್ ಗೌಡ, ನಂಜುಂಡಸ್ವಾಮಿ,ಮಂಜುನಾಥ್, ನಿತಿನ್, ಶರವಣ,ಪ್ರಜ್ವಲ್ ರೈನಾ, ಮಹಾನ್ ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು.

ಯುವ ಪೀಳಿಗೆಗೆ ಇತಿಹಾಸ, ಭಾಷೆ ಬಗ್ಗೆ ಅರಿವು ಮೂಡಿಸಿ- ಹರೀಶ್ ಗೌಡ Read More