ರಸ್ತೆಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ಅಂಕಪಟ್ಟಿ‌‌ ಹಿಂತಿರುಗಿಸಿದ ಕುಲಸಚಿವೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ
ಅಂಕಪಟ್ಟಿ ನೀಡಿಲ್ಲವೆಂದು ಆರೋಪಿಸಿ ರಸ್ತೆಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ಕುಲಸಚಿವರಾದ ಎಂ.ಕೆ.ಸವಿತಾ ಅವರು ಅಂಕಪಟ್ಟಿ ಹಿಂತಿರುಗಿಸಿದರು.

2021-22 ನೇ ಸಾಲಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪ್ರಭಾ, ಕೋವಿಡ್ ಕಾರಣ ಕಾಲೇಜಿನ ಶುಲ್ಕ ಪಾವತಿಸಿರುವ ಬಗ್ಗೆ ಚಲನ್ ಹಾಜರುಪಡಿಸಲು ಸಾಧ್ಯವಾಗಿರಲಿಲ್ಲ.

ಚಲನ್ ಹಾಜರುಪಡಿಸಿ, ಯಾವುದೇ ಲಂಚ ಆರೋಪ ಮಾಡಿಲ್ಲವೆಂದು ಕುಲಸಚಿವರಾದ ಎಂ.ಕೆ. ಸವಿತಾಗೆ ವಿದ್ಯಾರ್ಥಿನಿ ಮನವಿ ಸಲ್ಲಿಕೆ ಮಾಡಿದರು.

ಇದನ್ನು ಪರಿಶೀಲಿಸಿ ಬಾಕಿ ಶುಲ್ಕ ಪಾವತಿ ಬಳಿಕ ವಿದ್ಯಾರ್ಥಿನಿಯ ಅಂಕಪಟ್ಟಿ ಹಿಂದಿರುಗಿಸಲಾಯಿತು.

ಜತೆಗೆ ಇಂತಹ ಸಮಸ್ಯೆಗಳಿದ್ದಾಗ ಮೇಲಾಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯ ಸಹಾಯ ಪಡೆಯುವಂತೆ‌ ವಿದ್ಯಾರ್ಥಿನಿ ಪ್ರಭಾಗೆ ಕುಲಸಚಿವೆ ಸಲಹೆ ನೀಡಿದರು.

ರಸ್ತೆಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ಅಂಕಪಟ್ಟಿ‌‌ ಹಿಂತಿರುಗಿಸಿದ ಕುಲಸಚಿವೆ Read More

ಆರ್ ಎಸ್ ಎಸ್ ನವರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಿದ್ದರು:ಸಿಎಂ

ಮೈಸೂರು: ಆರ್ ಎಸ್ ಎಸ್ ನವರು ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದರು, ಈಗಲೂ ವಿರೋಧಿಸುತ್ತಿದ್ದಾರೆ,ಹಾಗಾಗಿ ವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ. ಅವರು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ‌ ಸಂಪಾದನೆ ಮಾಡಿದರು. ಬಳಿಕ ತಮ್ಮ ಜ್ಞಾನವನ್ನು ಬದುಕಿನುದ್ದಕ್ಕೂ ಸಮಾಜದ ಬದಲಾವಣೆಗೆ ಬಳಸಿದರು ಎಂದು ತಿಳಿಸಿದರು.

ಅಂಬೇಡ್ಕರ್ ಅವರ ಹೆಸರಲ್ಲಿ ಬಿಜೆಪಿಯವರು, ಸಂಘ ಪರಿವಾರದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಸತ್ಯ ಏನೆಂದರೆ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಬರೆದಿದ್ದಾರೆ. ಇಂಥಾ ಸತ್ಯಗಳನ್ನು ಸಮಾಜದ ಮುಂದಿಟ್ಟು ಸಂಘ ಪರಿವಾರದ ಸುಳ್ಳುಗಳನ್ನು ಬಹಿರಂಗಗೊಳಿಸಬೇಕು ಎಂದು ಸಿದ್ದು ಕರೆ ನೀಡಿದರು.

ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಅವರೇ ಸಾಟಿ. ಮತ್ತೊಬ್ಬ ಅಂಬೇಡ್ಕರ್ ಬರಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಿ ಅವರ ಹಾದಿಯಲ್ಲಿ ನಡೆಯಬೇಕು ಎಂದು ಸಿಎಂ ಸಲಹೆ ನೀಡಿದರು ‌

ವಿಶ್ವದ ಎಲ್ಲಾ ಸಂವಿಧಾನಗಳನ್ನು ಓದಿ, ಜೀರ್ಣಿಸಿಕೊಂಡು ಭಾರತೀಯ ಸಮಾಜಕ್ಕೆ ಅನ್ವಯ ಆಗುವ ವಿಶ್ವ ಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ಅವರು ಭಾರತಕ್ಕೆ ಕೊಟ್ಟರು ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಸನಾತನಿ ಒಬ್ಬ ಶೂ ಎಸೆದಿರುವುದು ಸನಾತನಿಗಳು, ಪಟ್ಟಭದ್ರರು ಸಮಾಜದಲ್ಲಿ ಇನ್ನೂ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದು ಸಿಎಂ ಹೇಳಿದರು.

ಶೂ ಎಸೆತವನ್ನು ದಲಿತರಷ್ಟೇ ಅಲ್ಲ. ಪ್ರತಿಯೊಬ್ಬರೂ ವಿರೋಧಿಸಬೇಕು. ಹಾಗಾದಾಗ ಮಾತ್ರ ಸಮಾಜ ಬದಲಾವಣೆಯ ಹಾದಿಯಲ್ಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು ಎಂದರು.

ನಾನು ಬುದ್ದ, ಬಸವ, ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೀನಿ. ಈ ಕಾರಣಕ್ಕೇ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯಬೇಕು ಎಂದು ಆಶಿಸುತ್ತೇನೆ. ವಿಜ್ಞಾನ ಓದಿಯೂ ಮೂಢ ನಂಬಿಕೆ ಆಚರಿಸುವವರಾಗಬೇಡಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು ವಿವಿಯಲ್ಲಿ ಅಂಬೇಡ್ಕರ್ ಅಧ್ಯಯನ‌ ಕೇಂದ್ರ ಆಗಿ 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ “ವಿಶ್ವ ಜ್ಞಾನಿ ಅಂಬೇಡ್ಕರ್ ಸಭಾ ಭವನ” ಲೋಕಾರ್ಪಣೆ ಆಗುತ್ತಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ಪಟ್ಟರು.

ಆರ್ ಎಸ್ ಎಸ್ ನವರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಿದ್ದರು:ಸಿಎಂ Read More

ಪ್ರೊ. ಕೆ. ಎಸ್. ರಂಗಪ್ಪ ಅವರಿಗೆ ಎನ್ ಎ‌ ಎಸ್ ಐ ನಿಂದ ವಿಶೇಷ ಗೌರವ

ಮೈಸೂರು: ಶತಮಾನದಷ್ಟು ಹಳೆಯದಾದ ಮೈಸೂರು ವಿಶ್ವವಿದ್ಯಾನಿಲಯವು, ಅದರ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕೆ. ಎಸ್. ರಂಗಪ್ಪ ಅವರಿಗೆ NASI Distinguished Chair Professor ನೀಡುವುದರೊಂದಿಗೆ ಬಹು ಮುಖ್ಯ ಮೈಲಿಗಲ್ಲನ್ನು ಸಾಧಿಸಿದೆ.

ಇದು ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಬಹಳ ಕಾಲ ದಾಖಲಾಗುವ ಪ್ರಮುಖ ಸಾಧನೆಯಾಗಿದೆ. ಎನ್ ಎ‌ ಎಸ್ ಐ (ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ) ಭಾರತದ ಮೊದಲ ವಿಜ್ಞಾನ ಅಕಾಡೆಮಿಯಾಗಿದ್ದು, ಇದನ್ನು 1930 ರಲ್ಲಿ ಸ್ಥಾಪಿಸಲಾಯಿತು.

ಇದರ ಉದ್ದೇಶ ಭಾರತೀಯ ವಿಜ್ಞಾನಿಗಳು ನಡೆಸಿದ ಸಂಶೋಧನಾ ಕಾರ್ಯಗಳ ಪ್ರಕಟಣೆಗೆ ರಾಷ್ಟ್ರೀಯ ವೇದಿಕೆಯನ್ನು ಒದಗಿಸುವುದು ಮತ್ತು ಅವರ ನಡುವೆ ಅಭಿಪ್ರಾಯಗಳ ವಿನಿಮಯಕ್ಕೆ ಅವಕಾಶಗಳನ್ನು ಒದಗಿಸುವುದು.

ಎನ್ ಎ ಎಸ್ ಐ ಅನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆರ್ಥಿಕವಾಗಿ ಬೆಂಬಲಿಸುತ್ತದೆ ಮತ್ತು ಭಾರತ ಸರ್ಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ ಯಿಂದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯಾಗಿಯೂ ಗುರುತಿಸಲ್ಪಟ್ಟಿದೆ.

ನಿವೃತ್ತ ಪ್ರಾಧ್ಯಾಪಕರ ಜೀವಿತಾವಧಿಯ ಸಾಧನೆಗಳು ಮತ್ತು ವಿಜ್ಞಾನಕ್ಕೆ ನೀಡಿದ ಪ್ರಭಾವಶಾಲಿ ಕೊಡುಗೆಗಳನ್ನು ಪರಿಗಣಿಸಿ ಅವರನ್ನು ಗೌರವಿಸಲು ಎನ್ ಎ ಎಸ್ ಐ 2025 ರಲ್ಲಿ NASI Distinguished Chair Professor ಎಂದು ಹೆಸರಿಸಲಾದ 10 ಪೀಠಗಳನ್ನು ಸ್ಥಾಪಿಸಿದೆ.

ಪ್ರತಿಯೊಂದು ಪೀಠವು ಈ ಕ್ಷೇತ್ರಗಳಲ್ಲಿ ಜ್ಞಾನವನ್ನು ಮುಂದುವರೆಸಲು ಶ್ರೇಷ್ಠತೆ ಮತ್ತು ಸಮರ್ಪಣೆಯ ಪ್ರತಿಷ್ಠಿತ ಸ್ವೀಕೃತಿಯನ್ನು ಪ್ರತಿನಿಧಿಸುತ್ತದೆ. ಆಯ್ಕೆ ಮಾನದಂಡಗಳ ಪ್ರಕಾರ, ಯಾವುದೇ ವರ್ಷದಲ್ಲಿ ಮೂರಕ್ಕಿಂತ ಹೆಚ್ಚು ಜನರನ್ನು ಆಯ್ಕೆ ಮಾಡುವುದಿಲ್ಲ ಮತ್ತು ಯಾವುದೇ ಕಾಲಗಟ್ಟದಲ್ಲಿ ಇಡಿ ದೇಶದಲ್ಲಿ 10 ಜನರಿಗಿಂತ ಹೆಚ್ಚು Distinguished Chair Professor ಗಳು ಇರುವುದಿಲ್ಲ.

ಮೊದಲ ಸುತ್ತಿನ ಆಯ್ಕೆಯನ್ನು 2025 ರಲ್ಲಿ ಮಾಡಲಾಗಿದ್ದು, ಮೂವರು ಪ್ರಖ್ಯಾತ ವಿದ್ವಾಂಸರನ್ನು ಈ ಪೀಠಗಳಿಗೆ ಆಯ್ಕೆ ಮಾಡಲಾಗಿದೆ. ಅದರ ಪ್ರಾದ್ಯಾಪಕರೊಬ್ಬರ ವೃತ್ತಿಜೀವನ ಮತ್ತು ಮಹತ್ವದ ಸಂಶೋಧನಾ ಕೊಡುಗೆಗಳನ್ನು ಪರಿಗಣಿಸಿ ಈ ಮನ್ನಣೆಗೆ ಆಯ್ಕೆ ಮಾಡಿರುವುದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೀಡಲಾದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ.

ಈ ಪ್ರಾಧ್ಯಾಪಕ ಹುದ್ದೆಯು ಪ್ರೊ. ರಂಗಪ್ಪ ಅವರಿಗೆ ಆರಂಭದಲ್ಲಿ ಮೂರು ವರ್ಷಗಳ ಕಾಲ ಸಂಶೋಧನೆ ನಡೆಸಲು ಅನುವು ಮಾಡಿಕೊಡುತ್ತದೆ. ಅದನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸುವ ಸಾಧ್ಯತೆಯಿದೆ.

ಇತ್ತೀಚೆಗೆ, ಪ್ರೊ. ರಂಗಪ್ಪ ಅವರು ಯುನೆಸ್ಕೋದ ವಿಶ್ವ ವಿಜ್ಞಾನ ಅಕಾಡೆಮಿ ಯ ಫೆಲೋ ಆಗಿ ಆಯ್ಕೆ ಆಗಿದನ್ನು ಸ್ಮರಿಸಬಹುದು. ಈ ಸಾಧನೆ ಮಾಡಿದ ಭಾರತೀಯರು ವಿರಳ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2, 2025 ರವರೆಗೆ ಬ್ರೆಜಿಲ್‌ನಲ್ಲಿ ನಡೆಯಲಿರುವ TWAS ಸಾಮಾನ್ಯ ಸಮ್ಮೇಳನದಲ್ಲಿ ಭಾಗವಹಿಸಲು ಪ್ರೊ. ರಂಗಪ್ಪ ಅವರನ್ನ ಆಹ್ವಾನಿಸಲಾಗಿದೆ.

ಪ್ರೊ. ಕೆ. ಎಸ್. ರಂಗಪ್ಪ ಅವರಿಗೆ ಎನ್ ಎ‌ ಎಸ್ ಐ ನಿಂದ ವಿಶೇಷ ಗೌರವ Read More

ಮೈಸೂರು ಇಂಜಿನಿಯರಿಂಗ್ ಕಾಲೇಜಿಗೆ ಎಸ್‌ಬಿ ಐ ನಿಂದ‌ ನೀರಿನ ಶುದ್ದೀಕರಣ ಘಟಕ

ಮೈಸೂರು: ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕುಡಿಯುವ ನೀರಿನ ಶುದ್ದೀಕರಣ ಘಟಕಗಳನ್ನು ಹಸ್ತಾಂತರಿಸಲಾಯಿತು.

ಬ್ಯಾಂಕಿನ ಸಾಮಾಜಿಕ ಜವಾಬ್ದಾರಿ ಚಟುವಟಿಕೆ ಅಡಿಯಲ್ಲಿ ಇವುಗಳನ್ನು ಹಸ್ತಾಂತರಿಸಲಾಯಿತು.

ಮೈಸೂರು ಇಂಜಿನಿಯರಿಂಗ್ ಕಾಲೇಜು ಹಾಗೂ ಮಾನಸ ಗಂಗೋತ್ರಿ ಗ್ರಂಥಾಲಯಕ್ಕೆ ಮತ್ತು ಸ್ನಾತಕೋತ್ತರ ಪದವಿ ಹುಡುಗರ ಹಾಸ್ಟೆಲ್‌ಗಳಿಗೆ ಒಟ್ಟು ಮೂರು ನೀರು ಸುದ್ದಿಕರಣ ಘಟಕಗಳನ್ನು ಅಳವಡಿಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಲೋಕನಾಥ್ ಎನ್ ಕೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್‌ ಮೈಸೂರು ವಲಯ ಕಛೇರಿಯ ಉಪ ಮಹಾ ಪ್ರಬಂಧಕರಾದ ಅರುಣ್ ಕುಮಾರ್ ಪಾಣಿಗ್ರಹಿ ಅವರು ಈ ಕಾರ್ಯಕ್ರಮ ಉದ್ಘಾಟಿಸಿದರು.

ಈ ಕಾರ್ಯಕ್ರಮಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ಪಿ ವಿ ಎಸ್ ರಂಗನಾಥ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಎಮ್ ಎಸ್ ಗೋವಿಂದ ಗೌಡ ಮತ್ತು ರೇಖಾ ಕೆ ಎಸ್ ಹಣಕಾಸು ಅಧಿಕಾರಿ ಮತ್ತು ಎಸ್ ಬಿ ಐ ನ ಮುಖ್ಯ ವ್ಯವಸ್ಥಾಪಕರಾದ ಸುಧಾ ಕೋಟೇಶ್ವರ, ನೇತ್ರಾವತಿ ಮತ್ತಿತರರು ಹಾಜರಿದ್ದರು.

ಮೈಸೂರು ಇಂಜಿನಿಯರಿಂಗ್ ಕಾಲೇಜಿಗೆ ಎಸ್‌ಬಿ ಐ ನಿಂದ‌ ನೀರಿನ ಶುದ್ದೀಕರಣ ಘಟಕ Read More