ಯುವಜನರು ರಾಮಾಯಣವನ್ನು ವಿಭಿನ್ನ ದೃಷ್ಟಿಕೋನದಿಂದ ಓದಲಿ:ಪ್ರೊ. ಎನ್. ಕೆ. ಲೋಕನಾಥ್
ಮೈಸೂರು: ಯುವ ಜನಾಂಗ ಇಂದು ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ಓದಬೇಕು ಎಂದು
ಕುಲಪತಿಗಳಾದ ಪ್ರೊ. ಎನ್. ಕೆ. ಲೋಕನಾಥ್ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾ ನಿಲಯದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ. ಎನ್. ಕೆ. ಲೋಕನಾಥ್ ಅವರು ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಾಲ್ಮೀಕಿಯವರ ರಾಮಾಯಣ ಕೃತಿಯು ಅಂದಿನ ಕಾಲದಲ್ಲೇ ವೈಜ್ಞಾನಿಕ ಪ್ರಬುದ್ಧತೆ ಸಾಧಿಸಿರುವುದಕ್ಕೆ ಸಾಕ್ಷಿಯಾಗಿದೆ, ಪುಷ್ಪಕ ವಿಮಾನದ ತಂತ್ರಜ್ಞಾನ ಅಂದೇ ಇದ್ದುದನ್ನು ವಾಲ್ಮೀಕಿ ದಾಖಲಿಸಿದ್ದರು ಎಂದು ಹೇಳಿದರು.
ಕುಲಸಚಿವರಾದ ಸವಿತಾ ಎಂ.ಕೆ ಅವರು ಮಾತನಾಡಿ ವಾಲ್ಮೀಕಿಯವರು ಜಗದ ಕವಿ. ಅವರ ರಾಮಾಯಣ ಕಾವ್ಯದ ಸೇತುವೆ ಕಟ್ಟಿದ ಘಟನೆ ಎಐ ನಿಂದ ಸಾಬೀತು ಪಡಿಸಲು ಶೋಧನೆ ನಡೆಯುತ್ತಿದೆ. ಸದಾ ಚರ್ಚೆಗೆ ಒಳಗಾಗಿರುವ ಕೃತಿ ರಾಮಾಯಣ ಎಂದು ಹೇಳಿದರು.
ಪ್ರೊ. ಎಸ್. ಕೆ. ಲೋಲಾಕ್ಷಿ ಮಾತನಾಡಿ ವಾಲ್ಮೀಕಿ ಜಗತ್ತಿನ ಆದಿಕವಿ ರಾಮಾಯಣ ಆದಿಕಾವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಪ್ರಾಧ್ಯಾಪಕೇತರರು ಮತ್ತು ಸಂಶೋಧಕರು ಉಪಸ್ಥಿತರಿದ್ದರು.
ಯುವಜನರು ರಾಮಾಯಣವನ್ನು ವಿಭಿನ್ನ ದೃಷ್ಟಿಕೋನದಿಂದ ಓದಲಿ:ಪ್ರೊ. ಎನ್. ಕೆ. ಲೋಕನಾಥ್ Read More