ಮೈಸೂರಿನಲ್ಲಿ ಪತ್ರ ಬರಹಗಾರರ ಪ್ರತಿಭಟನೆ
ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟ ಮೈಸೂರು ಉತ್ತರ ಉಪನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾ ಉಪನೋಂದಣಾಧಿಕಾರಿ
ಹಾಗೂ ಮೈಸೂರು ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಈಗಾಗಲೇ ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲಾತಿಗಳನ್ನು ರವಾನಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಆಗಿದ್ದಾಂಗ್ಗೆ ಸುಧಾರಣೆ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ,ಆದರೆ ಸುಧಾರಣೆಗಳಿಂದಾಗಿ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯ ವೇಗ ಕುಂಠಿತವಾಗುತ್ತಿದೆ ಎಂದು ಪ್ರತಿಭಟನಾ ನಿರತರು ತಿಳಿಸಿದರು.
ಜತೆಗೆ ಪತ್ರಬರಹಗಾರರಿಗೆ ಸಮರ್ಪಕ ಸೇವೆಯನ್ನು ಜನ ಸಾಮಾನ್ಯರಿಗೆ ನೀಡುವುದು ದುಸ್ಸಾಹಸವಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ಪತ್ರ, ದಾನಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಸಹಾ ಸಾಧ್ಯವಾಗದ ಕಾರಣ ಜನಸಾಮಾನ್ಯರು ತಮ್ಮ ಕುಟುಂಬದ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ ಎಂದು ತಿಳಿಸಿದರು .
ಸುಧಾರಣೆಯ ನೆಪದಲ್ಲಿ ಪತ್ರಬರಹಗಾರರು, ವಕೀಲರು ಹಾಗೂ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ವಿಷಯಗಳು ತಿಳಿಯದ ಕಾರಣ ಇಲಾಖೆಯಿಂದ ರಹದಾರಿ ಪಡೆದಿರುವ ಪತ್ರ ಬರಹಗಾರರು ಹಾಗೂ ಜನಸಾಮಾನ್ಯರು ತೀರ್ವ ತೊಂದರೆ ಅನುಭವಿಸುವಂತಾಗಿದೆ. ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಚಿವರಿಗೆ ಮನದಟ್ಟು ಮಾಡುವ ಮೂಲಕ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯನ್ನು ಪತ್ರ ಬರಹಗಾರರು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ಖಾನ್, ಉಪಾಧ್ಯಕ್ಷ ಎಂ ಎಸ್ ಧನಂಜಯ್,ಕಾರ್ಯದರ್ಶಿ ಕೆ ಆರ್ ಉದಯ್ ಕುಮಾರ್, ಖಜಾಂಜಿ ಎಂ ಎಸ್ ನರಸಿಂಹಮೂರ್ತಿ, ಸಂಚಾಲಕ ಎಂ ಗಣೇಶ್, ನಿರ್ದೇಶಕರುಗಳಾದ ಕೆ ಆರ್ ಸತ್ಯನಾರಾಯಣ್, ಎಂ ಎನ್. ದೇವರಾಜು, ನಾಗಭೂಷಣ ಆರಾಧ್ಯ, ಮಹಾದೇವ್, ಕುಮಾರ್, ಪಣಿರಾಜ್ ಎಸ್, ಚಂದ್ರಶೇಖರ್ ಎಸ್, ಎನ್ ದಿನೇಶ್ ಕುಮಾರ್, ಎಸ್ ಎಸ್ ವೇಣು, ಜಯಲಕ್ಷ್ಮಿ ಹಾಗೂ ಇನ್ನಿತರ ಪತ್ರ ಬರಹಗಾರರು ಪಾಲ್ಗೊಂಡಿದ್ದರು.