ಸಾವರ್ಕರ್ ಮೆಚ್ಚಿದ್ದ; ಇಂದಿರಾ – ಸಾವರ್ಕರ್ ವಿಶೇಷ ಕಾರ್ಯಕ್ರಮ

ಮೈಸೂರು: ಮೈಸೂರಿನ ಸಾವರ್ಕರ್
ಪ್ರತಿಷ್ಠಾನ ವತಿಯಿಂದ ಇಂದಿರಾ ಗಾಂಧಿ ಜಯಂತಿ ಪ್ರಯುಕ್ತ ಇಂದಿರಾ ಗಾಂಧಿ ಮತ್ತು ಸಾವರ್ಕರ್ ಎಂಬ ವಿಶೇಷ
ಕಾರ್ಯಕ್ರಮವನ್ನು ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಯಿತು.

ಇತ್ತೀಚಿನ ದಿನಗಳಲ್ಲಿ ಮತ ರಾಜಕಾರಣಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತುಚ್ಚವಾಗಿ ಮಾತನಾಡುವ ಸಂಸ್ಕೃತಿ ಹೆಚ್ಚಾಗಿದೆ. ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ವೀರ ಎಂದೇ ಜನಮಾನಸದಲ್ಲಿ ನೆಲೆಸಿರುವ ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಹಾಗೆ ಮಾತನಾಡಿದ್ದಾರೆ,ಆದರೆ ಸಾವರ್ಕರ್ ಅವರ ಬಗ್ಗೆ ಮಾಜಿ ಪ್ರಧಾನಿ, ಕಾಂಗ್ರೆಸಿನ ಪರಮೋಚ್ಚ ನಾಯಕಿಯಾಗಿ ಮೆರೆದ ಇಂದಿರಾ ಗಾಂಧಿಯವರ ಅಭಿಪ್ರಾಯ ಹೇಗಿತ್ತು ಎಂಬ ಬಗ್ಗೆ ಅವರ ಜಯಂತಿಯ ದಿನ ನೆನೆದು ಟೀಕಾಕಾರರ ಕಣ್ಣು ತೆರೆಸುವ ಪ್ರಯತ್ನ ಮಾಡಲಾಯಿತು.

ಅದಕ್ಕೆಂದೇ ಇಂದಿರಾ ಗಾಂಧಿ ಮತ್ತು ಸಾವರ್ಕರ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ೧೯೮೦ರಲ್ಲಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯದರ್ಶಿಗಳಾಗಿದ್ದ ಪಂಡಿತ್ ಬಾಕ್ಲೆ ಅವರಿಗೆ ಪತ್ರ ಬರೆದು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿದ್ದ ಸಾವರ್ಕರ್ ಪಾತ್ರ ಅವಿಸ್ಮರಣೀಯ, ಅವರೊಬ್ಬ ಮರೆಯಲಾಗದ ಭಾರತದ ಹೆಮ್ಮೆಯ ಸುಪುತ್ರ ಎಂದು ಬಣ್ಣಿಸಿದ್ದ ಪತ್ರವನ್ನು ಪ್ರದರ್ಶಿಸಲಾಯಿತು.

ಸಾವರ್ಕರ್ ಗೌರವಾರ್ಥ ಇದೇ ಇಂದಿರಾ ಗಾಂಧಿಯವರು ಬಿಡುಗಡೆ ಮಾಡಿದ್ದ ಅಂಚೆಚೀಟಿಯನ್ನು ಸಹ ಪ್ರದರ್ಶಿಸಲಾಯಿತು.

ಎಲ್ಲಾ ಅಂಚೆಚೀಟಿಯಲ್ಲಿ ವ್ಯಕ್ತಿಯ ಚಿತ್ರ ಮಾತ್ರ ಇದ್ದರೆ, ಸಾವರ್ಕರ್ ಅಂಚೆಚೀಟಿಯಲ್ಲಿ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ್ದ ಅಂಡಮಾನಿನ ಜೈಲಿನ ಚಿತ್ರ ಇರುವುದು ವಿಶೇಷ.

ಇಂದಿರಾ ಗಾಂಧಿಯವರು ಸಾವರ್ಕರ್ ಟ್ರಸ್ಟಿಗೆ ಹನ್ನೊಂದು ಸಾವಿರ ರೂಪಾಯಿ ದೇಣಿಗೆಯನ್ನು ತಮ್ಮ ಸ್ವಂತ ಹಣದಿಂದ ನೀಡಿದ್ದರು ಎಂಬುದನ್ನು ಈ ವೇಳೆ ಸ್ಮರಿಸಲಾಯಿತು.

೧೯೮೩ರಲ್ಲಿ ಇಂದಿರಾ ಗಾಂಧಿಯವರು ಚಲನಚಿತ್ರ ವಿಭಾಗಕ್ಕೆ ಸೂಚಿಸಿ “ಮಹಾನ್ ಕ್ರಾಂತಿಕಾರಿಯ ಜೇವನ”ದ ಬಗ್ಗೆ ಸಾಕ್ಷಚಿತ್ರ ನಿರ್ಮಿಸಿದ್ದರು. ಅದನ್ನು ಸಹ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

ಜೊತೆಗೆ ೧೯೨೩ನಲ್ಲಿ ಕಾಕಿನಾಡಾದಲ್ಲಿ ನಡೆದ ಕಾಂಗ್ರಸಿನ ೩೮ನೇ ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಮುಖ ನಿರ್ಣಯಗಳಲ್ಲಿ ವೀರ ಸಾವರ್ಕರ್ ಅವರನ್ನು ನಿರಂತರ ಬಂಧನಕ್ಕೊಳಪಡಿಸಿರುವುದರ ವಿರುದ್ದ ಖಂಡನಾ ನಿರ್ಣಯ ಕೈಗೊಂಡಿದ್ದನ್ನು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ತನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುವ ಸರ್ವಾನುಮತದ ನಿರ್ಣಯವನ್ನು ಕಾರ್ಯಕ್ರಮದಲ್ಲಿ ನೆನೆಯಲಾಯಿತು.

ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸಿಗರಿಂದ ವೀರ ಎನ್ನಿಸಿಕೊಂಡಿದ್ದ ಸಾವರ್ಕರ್ ರನ್ನು ಇಂದು ರಾಹುಲ್ ಗಾಂಧಿ ಕಾಲದಲ್ಲಿ ಹೇಡಿ ಎಂದು ಕರೆಯುತ್ತಿರುವ ಬಗ್ಗೆ ಟೀಕಿಸಲಾಯಿತು.

ಅದರಲ್ಲೂ ಸಚಿವ ಪ್ರಿಯಾಂಕ ಖರ್ಗೆ, ಬಿ.ಕೆ. ಹರಿಪ್ರಸಾದ್ ರಂತವರ ವಿರುದ್ದ ಆಕ್ರೋಷ ವ್ಯಕ್ತವಾಯಿತು.

ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಸಹ ಇತ್ತೀಚೆಗೆ ಸಾವರ್ಕರ್ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ಅವರೆಲ್ಲರಿಗೂ ಇತ್ತಿಚೆಗೆ ರಾಹುಲ್ ಗಾಂಧಿ ಅವರಿಗೆ ಛೀಮಾರಿ ಹಾಕಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ನೆನಪಾಗಬೇಕು ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಬಹಳ ಸ್ಪಷ್ಟವಾಗಿ ತೀರ್ಪನ್ನು ನೀಡಿದ್ದಾರೆ.

ಮಹಾತ್ಮಾ ಗಾಂಧಿಯವರು ಕೂಡ ಬ್ರಿಟಿಷ್ ವೈಸರಾಯ್ ಗೆ ಬರೆದ ಪತ್ರಗಳಲ್ಲಿ “ಯುವರ್ ಫೈತ್ ಫುಲ್ ಸರ್ವೆಂಟ್” ಎಂಬ ಅಭಿವಂದನಾ ಪದವನ್ನು ಬಳಸುತ್ತಿದ್ದರು, ಅವರನ್ನೂ ರಾಹುಲ್ ಗಾಂಧಿ ಟೀಕಿಸುತ್ತಾರಾ? ಎಂದು ಪ್ರಶ್ನಿಸಿದ್ದಲ್ಲದೇ ಅಂದಿನ ಕಾಲದಲ್ಲಿ ಬ್ರಿಟಿಷರಿಗೆ ಬರೆಯುತ್ತಿದ್ದ ಪತ್ರಗಳಲ್ಲಿ ಈ ರೀತಿ ಅಭಿನಂದನಾ ಪದ ಬಳಸುವುದು ಸಾಮಾನ್ಯವಾಗಿತ್ತು, ಕೋಲ್ಕತ್ತಾ ನ್ಯಾಯಾಧೀಶರು ಸಹ ಸರ್ವೋಚ್ಛ ನ್ಯಾಯಾಧೀಶರನ್ನು ಇದೇ ರೀತಿ ಸಂಭೋದಿಸುತ್ತಿದ್ದರು ಎಂಬುದನ್ನು ಸಹ ನ್ಯಾಯಾಲಯ ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಕಾಂಗ್ರೆಸ್ ಮುಖಂಡರೂ ಆದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಅವರಿಗೆ ಸ್ಪಷ್ಟವಾಗಿ ತಿಳಿಸಿದೆ.

ಜೊತೆಗೆ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗಲೇ ಸಾವರ್ಕರ್ ರವರನ್ನು ಹೊಗಳಿ ಪತ್ರ ಬರೆದಿದ್ದನ್ನು ರಾಹುಲ್ ಗಾಂಧಿಯವರಿಗೆ ಜ್ಞಾಪಿಸಿ ಎಂದು ತಿಳಿಸಿದೆ.

ಮತ್ತೊಮ್ಮೆ ಇಂತಹ ಹೇಳಿಕೆ ನೀಡಿದರೆ ನ್ಯಾಯಾಲಯ ಸ್ವಯಂ ಪ್ರೆರಣೆಯಿಂದ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

ನೆಹರೂರವರನ್ನು ನಭಾ ಜೈಲಿಗೆ ಹಾಕಿದಾಗ ಅವರ ತಂದೆ ಮೋತಿಲಾಲ್ ನೆಹರು ಸಹ ಕ್ಷಮಾಪಣೆ ಪತ್ರವನ್ನು ವೈಸಾರಾಯ್ ಬಳಿ ಕೊಂಡೋಯ್ದಿದ್ದರು, ಅದು ಜೈಲಿಗೆ ಹಾಕಿದ ಕೇವಲ ನಾಲ್ಕೇ ದಿನಕ್ಕೆ ಎಂಬುದನ್ನು ಸಾವರ್ಕರ್ ಟೀಕಿಸುವ ಕಾಂಗ್ರೆಸ್ ನಾಯಕರು ನೆನೆಸಿಕೊಳ್ಳಬೇಕು ಎಂಬುದನ್ನು
ಅಂಕಣಕಾರ ಹಾಗೂ ಚಿಂತಕರಾದ ಪ್ರವೀಣ್ ಕುಮಾರ್ ಮಾವಿನಕಾಡು ವಿಷಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಸಾವರ್ಕರ್ ಪ್ರತಿಷ್ಠಾನದ ಕಾರ್ಯದರ್ಶಿ ರಾಕೇಶ್ ಭಟ್, ಆದಿತ್ಯ ಅಧಿಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಚಂದ್ರಶೇಖರ, ಪ್ರತಿಷ್ಠಾನದ ಸಹ-ಕಾರ್ಯದರ್ಶಿ ಶಿವು ಚಿಕ್ಕಕಾನ್ಯ, ಸಾವರ್ಕರ್ ಯುವ ಬಳಗದ ವಿಕ್ರಂ ಅಯ್ಯಂಗಾರ್, ಸಂದೇಶ್ ಪವಾರ್, ಪ್ರತಿಷ್ಠಾನದ ಮೈಸೂರು ಕೇಂದ್ರ ಸಮಿತಿಯ ಎಸ್. ಮಹೇಶ್ ಕುಮಾರ್, ಶಿವು ಪಟೇಲ್, ಡಿ. ರಾಘವೇಂದ್ರ, ಹೆಚ್ ಎಸ್ ಹಿರಿಯಣ್ಣ, ಮಂಗಳ ಗೌರಮ್ಮ ಸೇರಿದಂತೆ ಅನೇಕ ಇಂದಿರಾ ಹಾಗೂ ಸಾವರ್ಕರ್ ಅಭಿಮಾನಿಗಳು ಭಾಗವಹಿಸಿದ್ದರು.

ಸಾವರ್ಕರ್ ಮೆಚ್ಚಿದ್ದ; ಇಂದಿರಾ – ಸಾವರ್ಕರ್ ವಿಶೇಷ ಕಾರ್ಯಕ್ರಮ Read More

ನೂತನ ಅಧ್ಯಕ್ಷರಾಗಿ ದಾಸೇಗೌಡ ಆಯ್ಕೆ

ಮೈಸೂರು: ಮೈಸೂರಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಕೆ ಎಚ್‌ ಬಿ ಬಡಾವಣೆ ಹೂಟಗಳ್ಳಿ ಸಂಘದ ನೂತನ ಅಧ್ಯಕ್ಷರಾಗಿ ಎನ್ ಟಿ. ದಾಸೇಗೌಡರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾದ ದಾಸೇಗೌಡ ಅವರಿಗೆ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತಿತರಯ ಶುಭ ಕೋರಿದ್ದಾರೆ‌

ನೂತನ ಅಧ್ಯಕ್ಷರಾಗಿ ದಾಸೇಗೌಡ ಆಯ್ಕೆ Read More

ಅಧ್ಯಯನ ಶಾಲೆಯಲ್ಲಿ ಪುಣ್ಯಸ್ಮರಣೆ ಆಚರಣೆ

ಮೈಸೂರು: ಡಾ. ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಮೈಸೂರಿನ ಅಧ್ಯಯನ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಶಾಲೆಯ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದರು.

ಪುನೀತ್ ಅವರ ಜೀವನ ಮತ್ತು ಸಾಧನೆ ಕುರಿತು ಶಾಲೆಯ ಕಾರ್ಯದರ್ಶಿ ಯವರು ಮಕ್ಕಳಿಗೆ ತಿಳಿಸಿಕೊಟ್ಟರು.

ನಂತರ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ,ನಮನ ಸಲ್ಲಿಸಲಾಯಿತು.ವಿದ್ಯಾರ್ಥಿಗಳು ಕೆಂಪು ಗುಲಾಬಿ ಹಿಡಿದು ಅಪ್ಪುವಿನ ಭಾವಚಿತ್ರ ಪ್ರದರ್ಶಿಸಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಯನ ಶಾಲೆಯ ಮುಖ್ಯಸ್ಥರಾದ ಎಂ ಪಾರ್ವತಿ ದೇವಿ, ಮುಖ್ಯೋಪಾಧ್ಯಾಯರಾದ ಪುಟ್ಟಸ್ವಾಮಿಗೌಡರು ಸೇರಿದಂತೆ ಪ್ರಾಂಶುಪಾಲರು ,ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಪುನೀತ್ ಅವರಿಗೆ ನಮನ ಸಲ್ಲಿಸಿದರು.

ಅಧ್ಯಯನ ಶಾಲೆಯಲ್ಲಿ ಪುಣ್ಯಸ್ಮರಣೆ ಆಚರಣೆ Read More

ರಿಪ್ಪನ್ ಸ್ವಾಮಿ ಚಿತ್ರದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅವಮಾನ; ದೃಶ್ಯ ತೆಗೆಯಲು ಆಗ್ರಹ

ಮೈಸೂರು: ರಿಪ್ಪನ್ ಸ್ವಾಮಿ ಚಿತ್ರದ
ನಿರ್ದೇಶಕ ಕಿಶೋರ್ ಮೂರ್ತಿ ಹಾಗೂ ನಟ ವಿಜಯ ರಾಘವೇಂದ್ರ ಅವರಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅವಮಾನ ಮಾಡಲಾಗಿದೆ ಎಂದು ಯುವಭಾರತ್ ಸಂಘಟನೆಯ ಜೋಗಿ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆಝಾನ್ ಪ್ರೈಮ್ ನಲ್ಲಿ ಶುಕ್ರವಾರ ಬಿಡುಗಡೆ ಯಾಗಿರುವ ರಿಪ್ಪನ್ ಸ್ವಾಮಿ ಚಲನ ಚಿತ್ರದಲ್ಲಿ ಹಿಂದು ಧರ್ಮ ಹಾಗೂ ಸಂಸ್ಕೃತಿಗೆ ಪ್ರತೀಕ ಹರಿಹರ ಪುತ್ರ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಗೆ ಕಾಲಿನಿಂದ ಒದ್ದು ಅವರನ್ನು ತುಳಿದ ತುಣುಕುಗಳನ್ನು ನೋಡಿ ದಿಗ್ರಮೆ ಯಾಯಿತು ಎಂದು ಜೋಗಿ ಮಂಜು ಹೇಳಿದ್ದಾರೆ.

ಇದು ಅಯ್ಯಪ್ಪ ಸ್ವಾಮಿಗೆ ಮಾಡಿದ ಅವಮಾನ. ಅವಮಾನ ಮಾಡುವ ಮೂಲಕ ಹಣ ಮಾಡುವ ತೆವಲು ನಿರ್ದೇಶಕರುಗಳಿಗೆ ಇರಬಾರದು ಎಂದು ಅವರು ಅಸಮಾಧಾನ ಪಟ್ಟಿದ್ದಾರೆ.

ಕೂಡಲೆ ಇಂತಹ ತುಣುಕುಗಳನ್ನು ತೆಗೆದು ಪ್ರಚಾರ ಮಾಡಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಜೋಗಿ ಮಂಜು ಎಚ್ಚರಿಸಿದ್ದಾರೆ.

ರಿಪ್ಪನ್ ಸ್ವಾಮಿ ಚಿತ್ರದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅವಮಾನ; ದೃಶ್ಯ ತೆಗೆಯಲು ಆಗ್ರಹ Read More

ದೃಷ್ಟಿ ದೋಷವುಳ್ಳ ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ದಸರಾ ಸಂಭ್ರಮ

ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಜೆಎಸ್ಎಸ್ ಸಂಸ್ಥೆಯವರ ವಿಶೇಷ ಚೇತನ ದೃಷ್ಟಿದೋಷವುಳ್ಳ ಉದ್ಯೋಗಸ್ಥ ಹಾಗೂ ವಿದ್ಯಾರ್ಥಿನಿಯರ ನಿಲಯದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು,ಹಂಪಲು ವಿತರಿಸಲಾಯಿತು.

ಸ್ನೇಹ ಬಳಗದ ಸದಸ್ಯರು ಅವರೊಂದಿಗೆ ಬೆರೆತು ಅವರ ಯೋಗಕ್ಷೇಮ ವಿಚಾರಿಸಿ ಹಣ್ಣು ಹಂಪಲು ವಿತರಿಸಿ, ದಸರಾ ಹಬ್ಬದ ಶುಭಾಶಯ ಗಳನ್ನು ತಿಳಿಸಿ,ಸೇವಾ ಸಂಭ್ರಮಾಚರಣೆ ಮಾಡಿದರು.

ಈ ಮಭ್ರಮದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ರಾಜೇಶ್ ಕುಮಾರ್,ಮಹೇಶ್, ಸರ್ವಮಂಗಳ,ಶೋಭಾ , ಎಸ್. ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಪಾಲ್ಗೊಂಡಿದ್ದರು.

ದೃಷ್ಟಿ ದೋಷವುಳ್ಳ ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ದಸರಾ ಸಂಭ್ರಮ Read More

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಾಗಿನ

ಮೈಸೂರು: ಮೈಸೂರು ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಾಗಿನ ಅರ್ಪಿಸಲಾಯಿತು.

ಕೆಪಿಸಿಸಿ ಸದಸ್ಯ‌ ಜಿ ಶ್ರೀನಾಥ್ ಬಾಬು‌ ಅವರ ಚಾಮರಾಜ ಜೋಡಿ ರಸ್ತೆಯಲ್ಲಿರುವ
ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ
ಅವರ ಕುಟುಂಬದವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸೀರೆ, ಬಳೆ, ಅರಿಶಿಣ, ಕುಂಕುಮ ಸಹಿತ ದಸರಾ ಬಾಗಿನ ನೀಡಿದರು.

ಈ ಸಂದರ್ಭದಲ್ಲಿ ಕುಮಾರಿ, ಸುನಿತಾ, ನೇತ್ರ, ಉಷಾ, ನಿಕಿತಾ, ಸುನಿತಾ, ಆಧ್ಯ ಮತ್ತಿತರರು ಹಾಜರಿದ್ದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಾಗಿನ Read More

ಕಂಪ್ಯೂಟರ್ ಟೀಚರ್ ಗೆ ಕೋಟ್ಯಂತರ ರೂ ಪಂಗನಾಮ ಹಾಕಿದ ಶಿಷ್ಯ!

ಮೈಸೂರು: ಕಂಪ್ಯೂಟರ್ ಟೀಚರ್ ಒಬ್ಬರಿಗೆ ವುದ್ಯಾರ್ಥಿಯೇ ಲಕ್ಷಾಂತರ ಹಣ ಹಾಗೂ ಚಿನ್ನಾಭರಣ ವಂಚಿಸಿದ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ನಡೆದಿದೆ.

ವಂಚನೆಗೆ ಒಳಗಾದ ಶಿಕ್ಷಕಿ ವಿದ್ಯಾರ್ಥಿ ಮತ್ತು ಆತನ ಪತ್ನಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ರೈಲ್ವೆ ಬಡಾವಣೆ ನಿವಾಸಿ ಪ್ರೀತಾ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡವರು.

ಶಿಕ್ಷಕಿಯು ವಿದ್ಯಾರ್ಥಿಯ ನಯವಾದ ಮಾತುಗಳನ್ನ ನಂಬಿ ಹಣ ಅಲ್ಲದೆ ಚಿನ್ನಾಭರಣಗಳನ್ನೂ ಕಳೆದುಕೊಂಡಿದ್ದಾರೆ.

ಬೋಗಾದಿಯ ವಿಜಯ್ ವಾಸುದೇವನ್ ಹಾಗೂ ಪತ್ನಿ ಜೆನೆಟ್ ಜನ್ನೀಫರ್ ವಿರುದ್ಧ ದೂರು ನೀಡಿದ್ದಾರೆ.

ಪ್ರಸ್ತುತ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿಯಾಗಿರುವ ಪ್ರೀತಾ 2005 ರಲ್ಲಿ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಎಸ್.ಎಸ್.ಐ.ಇನ್ಸ್ಟಿಟ್ಯೂಟ್ ನಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿದ್ದರು.

ಪ್ರೀತಾ ಅವರ ಪತಿ ಮುರಳಿ ಕೃಷ್ಣನ್ ಅವರು ನಿಧನರಾದರು.ಕೆಲವು ವರ್ಷಗಳ ಹಿಂದೆ ವಿಜಯ್ ವಾಸುದೇವನ್ ಅವರು ಪ್ರೀತಾ ಅವರನ್ನ ಪರಿಚಯ ಮಾಡಿಕೊಂಡು ನಿಮ್ಮ ಬಳಿ ಕಂಪ್ಯೂಟರ್ ತರಬೇತಿ ಪಡೆದಿದ್ದೇನೆ ನಿಮ್ಮ ಸ್ಟೂಡೆಂಟ್ ಎಂದು ಹೇಳಿದ್ದಾನೆ.

ಪರಿಚಯವಾದ ನಂತರ ಪ್ರೀತಾರನ್ನ ಮನೆಗೆ ಆಹ್ವಾನಿಸಿದ ವಿಜಯ್ ವಾಸುದೇವ್ ಪತ್ನಿ ಜೆನೆಟ್ ಜನ್ನೀಫರ್ ರನ್ನು ಪರಿಚಯಿಸಿದರು.

ಆತ ಆಗಾಗ ಮನೆಗೆ ಬಂದು ಮಕ್ಕಳಿಗೆ ತಿಂಡಿ ಬಟ್ಟೆ ಕೊಡಿಸುವುದು,ಕಾರ್ ನಲ್ಲಿ ಓಡಾಡಿಸುವುದು ಸೇರಿದಂತೆ ಐಷಾರಾಮಿ ಜೀವನದ ರುಚಿ ತೋರಿಸಿದದ್ದಾರೆ.

ತಾನು ಸ್ಪಾಟ್ 01 ಎಂಬ ಕಂಪನಿ ನಡೆಸುತ್ತಿದ್ದು ಇದರಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಬರುತ್ತದೆಂದು ವಾಸುದೇವನ್ ನಂಬಿಸಿದರು.ಪ್ರೀತಾ ರವರ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಪಡೆದು ಪಾಸ್ ವರ್ಡ್ ಗಳನ್ನ ಬದಲಾಯಿಸಿಕೊಂಡು ತಾವೇ ನಿರ್ವಹಣೆ ಮಾಡುವ ಹಂತ ತಲುಪಿದ್ದನೆಂದು ಪ್ರೀತಾ ದೂರಿನಲ್ಲಿ ತಿಳಿಸಿದ್ದಾರೆ‌

.ಪ್ರೀತಾ ಅವರ ಸಂಪೂರ್ಣ ಮಾಹಿತಿ ಪಡೆದುಕೊಂಡ ವಿಜಯ್ ವಾಸುದೇವ್ ಹಲವಾರು ಫೈನಾನ್ಸ್ ಗಳಲ್ಲಿ ಲಕ್ಷ ಲಕ್ಷ ಹಣ ಸಾಲ ಪಡೆದಿದ್ದಾರೆ.

ಎಲ್ಲವೂ ಪ್ರೀತಾ ಅವರ ಖಾತೆಯಿಂದಲೇ ವಹಿವಾಟು ನಡೆದಿದೆ.ಅತಿಯಾದ ನಂಬಿಕೆ ಹುಟ್ಟಿಸಿದ್ದ ವಿಜಯ್ ವಾಸುದೇವನ್ ಐಡಿಎಫ್ ಸಿ,ಹೆಚ್.ಡಿ.ಎಫ್ ಸಿ,ಡಿಎಂ ಐ,ಚೋಳಮಂಡಳಮ್ ಫೈನಾನ್ಸ್ ಸೇರಿದಂತೆ ಹಲವು ಫೈನಾನ್ಸ್ ಗಳಲ್ಲಿ ಲಕ್ಷಾಂತರ ಹಣ ಸಾಲ ಕ್ರೆಡಿಟ್ ಮಾಡಿಸಿದರು.ನಂತರ ಆ ಹಣವನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ತಮ್ಮ ಸಂಸ್ಥೆಯಲ್ಲಿ ಹೂಡಿರುವುದಾಗಿ ನಂಬಿಸಿದರು.

ನಂತರ ಪ್ರೀತಾ ಬಳಿಯಿದ್ದ 714 ಗ್ರಾಂ ಚಿನ್ನಾಭರಣವನ್ನ ಖಾಸಗಿ ಸಂಸ್ಥೆಯಲ್ಲಿ ಗಿರವಿ ಇಡಿಸಿ 38 ಲಕ್ಷ ಹಣ ಸಹ ಪಡೆದುಕೊಂಡಿದ್ದರು.ಇದು ಸಾಲದೆಂಬಂತೆ ಪ್ರೀತಾ ಅವರ ಹೆಸರಿನಲ್ಲಿದ್ದ ಎರಡು ಮನೆಗಳನ್ನ ಮಾರಿಸಿದ್ದರು.ಲಕ್ಷಾಂತರ ಹಣ ವಿಜಯ್ ವಾಸುದೇವ್ ಹಾಗೂ ಪತ್ನಿ ಜೆನೆಟ್ ಜನ್ನೀಫರ್ ಹೆಸರಿಗೆ ವರ್ಗಾವಣೆ ಆಗಿತ್ತು.ಇವೆಲ್ಲವನ್ನೂ ತಮ್ಮ ಸಂಸ್ಥೆಯಲ್ಲಿ ಹೂಡಿರುವುದಾಗಿ ನಂಬಿಸಿದ್ದಾರೆ.

ಒಂದು ದಿನ ಲಾಭದ ಹಣ ನೀಡುವಂತೆ ಕೇಳಿದಾಗ ದಂಪತಿ ಉಲ್ಟಾ ಹೊಡೆದಿದ್ದಾರೆ.ಬೆಂಗಳೂರಿನಲ್ಲಿ ಮನೆ ಖರೀದಿಸಿರುವುದಾಗಿ ತಿಳಿಸಿ ಆ ಮನೆಯನ್ನೂ ಸಹ ಮಾರಾಟ ಮಾಡಿಸಿದ್ದಾರೆ.ಇವೆಲ್ಲಾ ವಹಿವಾಟುಗಳ ಮಧ್ಯೆ ಪ್ರೀತಾರವರು 50 ಲಕ್ಷಕ್ಕೂ ಅಧಿಕ ಮೊತ್ತ ಕಳೆದುಕೊಂಡಿದ್ದಾರೆ.

ಅಲ್ಲದೆ 38 ಲಕ್ಷ ಮೌಲ್ಯದ ಚಿನ್ನಾಭರಣ ಸಹ ಕೈತಪ್ಪಿಹೋಗಿದೆ.ಹಣದ ವಿಚಾರ ತೆಗೆದಾಗ ದಂಪತಿ ಕೊಲೆ ಬೆದರಿಕೆ ಹಾಕಿದ್ದಾರೆ.ತನ್ನ ಹೆಸರಲ್ಲಿ ಹಲವಾರು ಸುಳ್ಳುದಾಖಲೆಗಳನ್ನ ಸೃಷ್ಟಿಸಿ ಹಲವಾರು ಫೈನಾನ್ಸ್ ಗಳಲ್ಲಿ ಸಾಲ ಪಡೆದು ವಂಚನೆ ಮಾಡಿದ್ದಾರೆ.

ನನ್ನ ಖಾತೆಯಿಂದ ಮನಿಲಾಂಡರಿಂಗ್ ಮಾಡಿದ್ದಾರೆಂದು ಆರೋಪಿಸಿರುವ ಪ್ರೀತಾ ಅವರು ತಮ್ಮ ಸ್ಟೂಡೆಂಟ್ ವಿಜಯ್ ವಾಸುದೇವ್ ಹಾಗೂ ಪತ್ನಿ ಜೆನೆಟ್ ಜೆನ್ನಿಫರ್ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆ‌ಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಕಂಪ್ಯೂಟರ್ ಟೀಚರ್ ಗೆ ಕೋಟ್ಯಂತರ ರೂ ಪಂಗನಾಮ ಹಾಕಿದ ಶಿಷ್ಯ! Read More

ಪರಿಹಾರ ನೀಡುವುದು ಸಾವಿಗೆ ಸಮಾನವಲ್ಲ: ಸಾಂತ್ವನ ಹೇಳಲು-ಸಿಎಂ

ಮೈಸೂರು: ಸರ್ಕಾರ ಮೃತ ಕುಟುಂಬದವರಿಗೆ ಪರಿಹಾರ ನೀಡುವುದು ಸಾವಿಗೆ ಸಮಾನ ಎಂದಲ್ಲ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಹಾಸನದಲ್ಲಿ ರಸ್ತೆ ಅಪಘಾತದಲ್ಲಿ ಮಾಡಿದವರ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದೇವೆ, ಬಿಜೆಪಿ ಅದನ್ನು 10 ಲಕ್ಷಕ್ಕೆ ಏರಿಸಬೇಕೆಂದು ಹೇಳಿದೆ, ಆದರೆ ಮೃತ ಕುಟುಂಬದವರಿಗೆ ಪರಿಹಾರ ನೀಡುವುದು ಸಾವಿಗೆ ಸಮಾನ ಎಂದಲ್ಲ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಎಂದು ತಿಳಿಸಿದರು.

ಸರ್ಕಾರ ರಸ್ತೆ ಸುರಕ್ಷತಾ ಕಾನೂನು ಜಾರಿ ಮಾಡಿದ್ದು, ಸುರಕ್ಷತಾ ಕ್ರಮಗಳನ್ನು ಗಳನ್ನು ಕೈಗೊಂಡಿದೆ.ಚಾಲಕರ ತಪ್ಪಿನಿಂದ ಅಪಘಾತವಾಗಿದೆ. ಅದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ ಎಂದು ಹೇಳಿದರು.

ಮೃತರ ಕುಟುಂಬದವರಿಗೆ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ ಮುಖ್ಯಮಂತ್ರಿಗಳು, ಹಾಸನ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಮೃತರ ಸಂಬಂಧಿಕರನ್ನು ಭೇಟಿ ಮಾಡಿ ಪರಿಹಾರ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಸತ್ತವರು ಹೆಚ್ಚಾಗಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗಾಗಿಯೇ ಸರ್ಕಾರ ಹೆಚ್ಚಿನ ಪರಿಹಾರ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.

ಮೂರು ವರ್ಷಗಳ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿ, ಗಲಾಟೆ ಆಗುವಾಗ ಭೇಟಿ ನೀಡದೇ, ಪರಿಸ್ಥಿತಿ ಸುಧಾರಿಸಿದ ಮೇಲೆ ಭೇಟಿ ನೀಡಿದ್ದಾರೆ. ಇಷ್ಟು ವರ್ಷ ಯಾಕೆ ಹೋಗಲಿಲ್ಲ, ವಿರೋಧಪಕ್ಷದವರ ಒತ್ತಡದಿಂದ ಈಗ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ವಿಳಂಬವಾಗುತ್ತಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ವಿಳಂಬವಾಗುತ್ತಿಲ್ಲ. ಎಸ್ ಐ ಟಿ ತನಿಖೆ ಮಾಡುತ್ತಿದ್ದು ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ದಸರಾ ನಾಡಹಬ್ಬ, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ಇಲ್ಲ. ಸಾರ್ವತ್ರಿಕ ಹಬ್ಬದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರು ಭಾಗವಹಿಸಬಹುದು ಎಂದು ಮತ್ತೊಂದು ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು.

ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಶಾಂತಿಭಂಗ ಮಾಡುವ ಕೆಲಸ ಮಾಡಿದರೆ ಪೋಲಿಸಿನವರು ಕ್ರಮ ಕೈಗೊಳ್ಳುತ್ತಾರೆ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನ್ಯಾಯಮಂಡಳಿಯೇ ಅಣೆಕಟ್ಟನ್ನು 519 ಮೀ.ಗಳಿಂದ 524 ಮೀ.ವರೆಗೆ ಏರಿಸಲು 2010 ರಲ್ಲಿ ಹೇಳಿದೆ. 15 ವರ್ಷಗಳಾಗಿದ್ದು ಈಗ ರಾಜಕಾರಣಕ್ಕಾಗಿ ಆಕ್ಷೇಪ ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋವಾ ಮಹದಾಯಿ ಯೋಜನೆಯನ್ನು ಹಾಗೂ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಬಿಜೆಪಿ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ತಿಳಿ ಹೇಳಬೇಕು ಎಂದು ಸಿಎಂ ತಿಳಿಸಿದರು.

ಪರಿಹಾರ ನೀಡುವುದು ಸಾವಿಗೆ ಸಮಾನವಲ್ಲ: ಸಾಂತ್ವನ ಹೇಳಲು-ಸಿಎಂ Read More

ವಿಷ್ಣುವರ್ಧನ ಅವರಿಗೆ ಕರ್ನಾಟಕ ರತ್ನ: ಅಭಿಮಾನಿಗಳಿಂದ ರಕ್ತದಾನ

ಮೈಸೂರು: ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ವಿಷ್ಣು ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡಲಾಯಿತು.

ಉದ್ಬೂರ್ ಗೇಟ್ ನಲ್ಲಿರುವ ಡಾಕ್ಟರ್ ವಿಷ್ಣುವರ್ಧನ್ ಸ್ಮಾರಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರ
ನೀಡಿರುವ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ವಾಗತಿಸಿ,ನಂತರ ಸಿಹಿ ಹಂಚಿ ಸಂಭ್ರಮಿಸಿದರು

ಈ ವೇಳೆ ಮಾತನಾಡಿದ ನಗರ ಪಾಲಿಕೆ ಮಸಜಿ ಸದಸ್ಯ ಮಾ ವಿ ರಾಮ್ ಪ್ರಸಾದ್,
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಹಾಗೂ ಬಹುಭಾಷಾ ತಾರೆ ಪದ್ಮಶ್ರೀ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಕಟವಾಗಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಇಬ್ಬರೂ ಮಹಾನ್ ಕಲಾವಿದರ ಅಪಾರ ಅಭಿಮಾನಿಗಳ ಬಹು ದಿನಗಳ ನಿರೀಕ್ಷೆ ಸಾಕಾರಗೊಂಡಂತಾಗಿದೆ. ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತ ಗೊಳಿಸಲು ಕಲಾ ಸೇವೆಗೈದ ಈ ಇಬ್ಬರೂ ಶ್ರೇಷ್ಠ ವ್ಯಕ್ತಿತ್ವಗಳಿಗೆ ಮರಣೋತ್ತರವಾಗಿ ಪ್ರಶಸ್ತಿ ಲಭಿಸಿರುವುದು ಕನ್ನಡ ಚಿತ್ರರಂಗದ ಬೆಳವಣಿಗೆಗೂ ಪ್ರೇರಣೆ ನೀಡಿದಂತಾಗಿದೆ ಎಂದು ಹೇಳಿದರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ ಮಾತನಾಡಿ,ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸರ್ಕಾರ ವಿಧಾನಸೌಧ ಮುಂಭಾಗ ಅಥವಾ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಡಕೋಳ ಜಗದೀಶ್, ಎಸ್ ಎನ್ ರಾಜೇಶ್, ರವಿಚಂದ್ರ, ಅಕ್ಬರ್, ರೇಖಾ ಶ್ರೀನಿವಾಸ್, ಕಾವ್ಯ, ಪವಿತ್ರ,ಶ್ರುತಿ, ಮಾಲಿನಿ ಮಲ್ಲೇಶ್, ಜಯಶ್ರೀ ಶಿವರಾಮ್ ಮತ್ತಿತರರು ಹಾಜರಿದ್ದರು.

ವಿಷ್ಣುವರ್ಧನ ಅವರಿಗೆ ಕರ್ನಾಟಕ ರತ್ನ: ಅಭಿಮಾನಿಗಳಿಂದ ರಕ್ತದಾನ Read More

ಚಂದ್ರ ಗ್ರಹಣ: ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಂದ್ರ ಗ್ರಹಣ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಆನಂತರ ದೇವಸ್ಥಾನವನ್ನು ಮುಚ್ಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ವಾನ್ ಕೃಷ್ಣಮೂರ್ತಿ ನಾಳೆ ಸೋಮವಾರ
ಬೆಳಗ್ಗೆ 9 ಗಂಟೆಗೆ ಲೋಕಕಲ್ಯಾಣಕ್ಕಾಗಿ ಹಾಗೂ ಭಕ್ತಾದಿಗಳ ಶ್ರೇಯಾಭಿವೃದ್ಧಿಗಾಗಿ
ರಾಹುಗ್ರಸ್ತ ಚಂದ್ರಗ್ರಹಣ ಶಾಂತಿಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.

ಗ್ರಹಣ ದೋಷ ಇರುವ ರಾಶಿಯವರು ಸಂಕಲ್ಪ ಮಾಡಿಕೊಳ್ಳಬಹುದು.
ಗ್ರಹಣ ದೋಷ ಇರುವವರು ಅಶುಭ ಫಲ, ಕುಂಭ ರಾಶಿ, ಮೀನ ರಾಶಿ, ಕರ್ಕಾಟಕ, ವೃಶ್ಚಿಕ ರಾಶಿ.

ಮಿಶ್ರಫಲ ಮಕರ ರಾಶಿ ಹಾಗೂ ತುಲಾ ರಾಶಿ ಸಿಂಹ ರಾಶಿ. ಶುಭಫಲ ರಾಶಿಗಳು ಧನಸ್ಸು, ಕನ್ಯಾ, ವೃಷಭ, ಮೇಷ. ಆದುದರಿಂದ ಗ್ರಹಣ ಸಮಯದಲ್ಲಿ ದೇವರ ಜಪ ಪ್ರಾರ್ಥನೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಗ್ರಹಣ ಶಾಂತಿ ಪೂಜೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಸೋಮವಾರ ಬೆಳಗ್ಗೆ 8 ರಿಂದ 10 ಗಂಟೆವರೆಗೂ ಸಂಕಲ್ಪ ಮಾಡಿಸಬಹುದು ಎಂದು ವಿದ್ವಾನ್ ಎಸ್ ಕೃಷ್ಣಮೂರ್ತಿ ತಿಳಿಸಿದರು.

12 ಗಂಟೆಗೆ ಪೂರ್ಣಾವತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ಹೆಚ್ಚಿನ ಮಾಹಿತಿಗೆ ವಿದ್ವಾನ್ ಎಸ್ ಕೃಷ್ಣಮೂರ್ತಿ ಅರ್ಚಕರು ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಮೊಬೈಲ್ ಸಂಖ್ಯೆ 93 42112477 ಸಂಖ್ಯೆಗೆ ಕರೆ ಮಾಡಬಹುದು
ಎಂದು ಅವರು ಮನವಿ ಮಾಡಿದ್ದಾರೆ.

ಚಂದ್ರ ಗ್ರಹಣ: ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ Read More