ಪ್ರೀತಿಗೆ ಒಪ್ಪದ ಶಿಕ್ಷಕಿಯ ಕೊಂದ ಪಾಗಲ್ ಪ್ರೇಮಿ

ಮೈಸೂರು: ಯುವಕನೊಬ್ಬ ಶಿಕ್ಷಕಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಈ ಘಟನೆ ನಗರದ ಅಶೋಕಪುರಂನಲ್ಲಿ ನಡೆದಿದ್ದು,ಪಾಂಡವಪುರದ ಎಲೆಕೆರೆ ಹ್ಯಾಂಡ್ ಪೋಸ್ಟ್ ನ ನಿವಾಸಿ ಪೂರ್ಣಿಮಾ (36) ಕೊಲೆಗೀಡಾದ ಶಿಕ್ಷಕಿ.

ಕ್ಯಾತನಹಳ್ಳಿ ಗ್ರಾಮದ ಅಭಿಷೇಕ್ ಕೊಲೆ ಮಾಡಿದ ಆರೋಪಿ.

ಅಭಿಷೇಕ್ ಪೂರ್ಣಿಮಾಳನ್ನು ಪ್ರೀತಿಸುತ್ತಿದ್ದ,ಮದುವೆಯಾಗುವಂತೆ ಒತ್ತಾಯಿಸಿದ್ದಾನೆ,ಆದರೆ ಆಕೆ ಸ್ಪಂದಿಸದ ಕಾರಣ ಆಕೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಆಕೆ ತೀವ್ರವಾಗಿ ಗಾಯಗೊಂಡಿದ್ದನ್ನು ಕಂಡು ಆತನೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.

ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಆಕೆಗೆ ತಾಳಿ ಕೂಡಾ ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ.ಆದರೆ ಪೂರ್ಣಿಮಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ನಗರದ ಅಶೋಕಪುರಂ ಠಾಣೆ ಪೊಲೀಸರು ಆರೋಪಿ ಅಭಿಷೇಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರೀತಿಗೆ ಒಪ್ಪದ ಶಿಕ್ಷಕಿಯ ಕೊಂದ ಪಾಗಲ್ ಪ್ರೇಮಿ Read More

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಕೊಳ್ಳೇಗಾಲ: ಜಮೀನು ವಿಚಾರಕ್ಕೆ ವ್ಯಕ್ತಿಯ ತಲೆಗೆ ಗೂಟದಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹನೂರು ತಾಲ್ಲೂಕಿನ ಜಿ.ಕೆ.ಹೊಸೂರು ಗ್ರಾಮದ ಆರೋಪಿ ರವಿ ಶಿಕ್ಷೆಗೊಳ್ಳಲಾದ ಕೊಲೆ ಆರೋಪಿ.

ಕಳೆದ 2022 ರ ಮಾ.23 ರಂದು ಅದೇ ಗ್ರಾಮದ ತನ್ನ ಸಂಬಂಧಿ ಮನೋಜ್ ಎಂಬಾತನನ್ನು ಜಮೀನಿನ ವಿಚಾರಕ್ಕೆ ಈತ ಕೊಲೆ ಮಾಡಿದ್ದ.

ಮೃತನ ತಾಯಿ ಚಿಕ್ಕಮಣಿ ಕುಟುಂಬದವರಿಗೂ ಪಿತ್ರಾರ್ಜಿತವಾಗಿ ಬಂದ ಜಮೀನಿಗೆ ಸಂಬಂಧಿಸಿದಂತೆ ಭಾಗಾಂಶದ ವಿಚಾರದಲ್ಲಿ ವೈಮನಸ್ಸಿದ್ದು ಜಿ.ಕೆ.ಹೊಸೂರು ಗ್ರಾಮದ ಸರ್ವೆ ನಂ.183/ಸಿ & 183/14 ಸಂಬಂಧಿಸಿದಂತೆ ಆರೋಪಿ ರವಿ ಮತ್ತು ಚಿಕ್ಕಮಣಿ ನಡುವೆ ಜಮೀನಿನ ಸ್ವಾಧೀನತೆ ಬಗ್ಗೆ ತಕರಾರಿತ್ತು.

ಈ ವಿಚಾರಕ್ಕೆ ಕಳೆದ 2022 ರ ಮಾ.23 ರಂದು ರವಿ ಸರ್ವೆ ಮಾಡಿಸಿದ್ದು ಸರ್ವೆಯಲ್ಲಿ ಗಡಿ ಗುರುತುಗಳನ್ನು ತೋರಿಸಿದ್ದರೂ ರವಿ ಅದಕ್ಕೆ ಒಪ್ಪದೆ ಒತ್ತುವರಿ ಮಾಡಿಕೊಂಡಿದ್ದ.

ಸಂಜೆ 4 ಗಂಟೆ ಸಮಯದಲ್ಲಕ 1ನೇ ಆರೋಪಿ ಸರ್ವೆ 183/1ನ್ನು ಉಳುಮೆ ಮಾಡಿಸುತ್ತಿದ್ದಾಗ ಮೃತ ಮನೋಜ್ ಮತ್ತು ಆತನ ತಾಯಿ ಚಿಕ್ಕಮಣಿ ಜಮೀನಿನ ಬಳಿ ಹೋಗಿ ತಡೆದಿದ್ದಾರೆ.

ಆಗ ಆರೋಪಿಗಳಾದ ರವಿ, ಶ್ರೀಕಂಠಮೂರ್ತಿ,ಗಿರೀಶ, ಶಶಿಕಲಾ, ಮಹೇಶ, ಮಾದೇವಪ್ಪ ಇವರುಗಳು ಗುಂಪು ಕಟ್ಟಿಕೊಂಡು 1ನೇ ಆರೋಪಿ ರವಿಯು ಮನೋಜನ ಕುತ್ತಿಗೆ ಪಟ್ಟಿ ಹಿಡಿದು ಅವನನ್ನು ಕೊಲ್ಲುವ ಉದ್ದೇಶದಿಂದ ಅಲ್ಲಿ ಬಿದ್ದಿದ್ದ ಗೂಟದ ದೊಣ್ಣೆಯನ್ನು ತೆಗೆದುಕೊಂಡು ಮನೋಜನ ತಲೆಯ ಮೇಲೆ 3-4 ಬಾರಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ತಕ್ಷಣ ಮನೋಜ್ ರಕ್ತಸಿಕ್ತವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಆತನನ್ನು ಹೋಲಿಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಆತ ಮೃತಪಟ್ಟಿದ್ದ.

ಈ ಸಂಬಂಧ ಮೃತನ ತಾಯಿ ಚಿಕ್ಕಮಣಿ ಅವರು ಹನೂರು ಠಾಣೆಗೆ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಂದಿನ ಪಿಐ ಸಂತೋಷ್ ಕಶ್ಯಪ್ ಅವರು, ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಅಂತಿಮ ವರದಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಕೊಲೆ ಮಾಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುವುದರಿಂದ 1ನೇ ಆರೋಪಿ ರವಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ ಪಾವತಿಸುವಂತೆ ಶಿಕ್ಷೆ ವಿಧಿಸಿ ಉಳಿದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.

ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಟಿ. ಸಿ. ಶ್ರೀಕಾಂತ್‌ ರವರು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಪಿ. ಮಂಜುನಾಥ್, ಸಿ.ಬಿ. ಗಿರೀಶ್ ವಿಚಾರಣೆ ನಡೆಸಿ ದಾದ ಮಂಡಿಸಿದ್ದರು.

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ Read More

ಅಕ್ರಮ ಸಂಬಂಧ: ಪತಿಯ ಬಲಿ ಪಡೆದ ಪಾಪಿ ಪತ್ನಿ

ಮೈಸೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿಯಾದ ಘಟನೆ ಮೈಸೂರಿನ ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆ ಕಾಕರವಾಡಿಯಲ್ಲಿ ನಡೆದಿದ್ದು,ಪತ್ನಿಯ ಕುತಂತ್ರದಿಂದ ಪತಿ ಮಹಮದ್ ಷಫಿ ಬಲಿಯಾಗಿದ್ದಾರೆ.

ಪತ್ನಿ ಶಬ್ರೀನ್ ತಾಜ್ ಹಾಗೂ ಪ್ರಿಯಕರ
ಅನ್ವರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮದ್ ಷಫಿ ಹಾಗೂ ಶಬ್ರೀನ್ ತಾಜ್ 16 ವರ್ಷಗಳ ಹಿಂದೆ ಮದುವೆ ಅಗಿದ್ದರು.ದಂಪತಿಗೆ 12 ವರ್ಷದ ಮಗಳಿದ್ದಾಳೆ.

ರೇಡಿಯೇಟರ್ ಕೆಲಸ ಮಾಡುತ್ತಿದ್ದ ಮಹಮದ್ ಷಫಿ ಹಾಗೂ ಪತ್ನಿ ನಡುವೆ ಐದಾರು ವರ್ಷಗಳಿಂದ ಅನ್ಯೋನ್ಯತೆ ಇರಲಿಲ್ಲ.

ಗಾರ್ಮೆಂಟ್ಸ್ ನಲ್ಲಿ ಶಬ್ರೀನ್ ತಾಜ್ ಕೆಲಸ ಮಾಡುತ್ತಿದ್ದಳು.ಪ್ರತಿದಿನ ಆಟೋದಲ್ಲಿ ಅನ್ವರ್ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕರೆದೊಯ್ಯುತ್ತಿದ್ದ.ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರಿಗಿದೆ.

ಈ ವಿಚಾರ‌ ತಿಳಿದು ಪತಿ ಹಲಾಟೆ ಮಾಡಿದ್ದಾರೆ.ಹಿರಿಯರು ಇಬ್ಬರ ನಡುವೆ ಸಂಧಾನ ನಡೆಸಿದ್ದಾರೆ.ಪತಿ ಇದ್ದರೆ ಅಕ್ರಮ ಸಂಬಂಧಕ್ಕೆ ತೊಂದರೆ ಆಗುತ್ತದೆ ಎಂದು ನಿರ್ಧರಿಸಿದ ಶಬ್ರೀನ್ ತಾಜ್ ಪತಿಯನ್ನ ಮುಗಿಸಲು ಸ್ಕೆಚ್ ಹಾಕಿದ್ದಾಳೆ.

ಈ‌ ವಿಚಾರವನ್ನು ಪ್ರಿಯಕರನಿಗೂ ತಿಳಿಸಿ ಶಬ್ರೀನ್ ತನ್ನ ತಾಯಿ ಮನೆಗೆ ತೆರಳಿದ್ದಾಳೆ.ಈ ವೇಳೆ ಪತಿ ಮಹಮದ್ ಷಫಿ ಮನೆಗೆ ಬಂದು ಮಲಗಿದ್ದ.

ಈ ವಿಚಾರವನ್ನ ಪ್ರಿಯಕರನಿಗೆ ತಿಳಿಸಿದ್ದಾರೆ.ಆಟೋವನ್ನ ದೂರದಲ್ಲಿ ನಿಲ್ಲಿಸಿ ಮನೆಗೆ ಪ್ರವೇಶಿಸಿದ ಪಾಪಿ ಅನ್ವರ್ ಮಲಗಿದ್ದ ಷಫಿಯ ಕುತ್ತಿಗೆಯನ್ನ ಮೊಬೈಲ್ ಚಾರ್ಜರ್ ನಿಂದ ಬಿಗಿದು ಕೊಂದು ಏನೂ ತಿಳಿಯದಂತೆ ಹೊರಬಂದಿದ್ದಾನೆ.

ಅದೇ ರಾತ್ರಿ ಮಹಮದ್ ಷಫಿ ಮನೆಯವರಿಗೆ ಫೋನ್ ಮಾಡಿ ಪ್ರಜ್ಞೆತಪ್ಪಿ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.

ಮನೆಗೆ ಬಂದ ಷಫಿ ಕಡೆಯವರು ಇವರ ಮಾತನ್ನ ನಂಬಿದ್ದಾರೆ.ಮೃತದೇಹಕ್ಕೆ ಸಂಪ್ರದಾಯವಾಗಿ ಸ್ನಾನ ಮಾಡಿಸುವ ವೇಳೆ ಕುತ್ತಿಗೆಯಲ್ಲಿ ಗಾಯದ ಗೆರೆ ಕಾಣಿಸಿದ್ದು ತಕ್ಷಣ ಕೆ.ಆರ್.ಠಾಣೆ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.

ಮೃತದೇಹ ಪರಿಶೀಲಿಸಿದ ಪೊಲೀಸರಿಗೆ ಕೊಲೆಯಾಗಿರುವುದು ಗೊತ್ತಾಗಿದೆ.ಕೂಡಲೇ ನಡೆದ ಸಂಪೂರ್ಣ ಮಾಹಿತಿ ಕಲೆಹಾಕಿದಾಗ ಪತ್ನಿಯೇ ಸ್ಕೆಚ್ ಹಾಕಿ ಮಹಮದ್ ಷಫಿಯನ್ನ ಪ್ರಿಯಕರನ ಮೂಲಕ ಕೊಂದ ರಹಸ್ಯ ಬಯಲಾಗಿದೆ.ಇದೀಗ ಪಾಪಿಗಳಿಬ್ಬರೂ ಕಂಬಿ ಎಣಿಸುತ್ತಿದ್ದಾರೆ.

ಅಕ್ರಮ ಸಂಬಂಧ: ಪತಿಯ ಬಲಿ ಪಡೆದ ಪಾಪಿ ಪತ್ನಿ Read More

ಕುಡಿಯಲು ಹಣ ನೀಡದ ತಾಯಿಯ ಕೊಂದ ಮಗ

ಬೆಂಗಳೂರು: ಕುಡಿಯಲು ಹಣ ನೀಡದ್ದಕ್ಕೆ ಪಾಪಿ ಮಗ ಹೆತ್ತು,ಹೊತ್ತು ಸಾಕಿದ ತಾಯಿಯನ್ನೇ ಹತ್ಯೆ ಮಾಡಿದ ಅತ್ಯಂತ ಹೇಯ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಸಾಯಿಸಿದ ಮಗನನ್ನು ಬೆಂಗಳೂರಿನ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುನೇಶ್ವರ ನಗರದ ಶಾಂತಾಬಾಯಿ (82)ತನ್ನದೇ ಮಗನಿಂದ ಕೊಲೆಯಾದ ದುರ್ದೈವಿ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಮಹೇಂದ್ರ ಸಿಂಗ್ (56)ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.

ಚನ್ನಪಟ್ಟಣದ ಮಹೇಂದ್ರ ಸಿಂಗ್, ಬಾಗಲಗುಂಟೆಯ ಮುನೇಶ್ವರ ನಗರದ ಮನೆಯೊಂದರಲ್ಲಿ ತಾಯಿ ಜೊತೆ ಐದು ವರ್ಷಗಳಿಂದ ವಾಸವಾಗಿದ್ದ.

ಮದ್ಯ ವ್ಯಸನಿಯಾಗಿದ್ದ ಈತ ಕೆಲಸಕ್ಕೂ ಹೋಗುತ್ತಿರಲಿಲ್ಲ, ಪತ್ನಿ ಸಹ ಈತನಿಂದ ದೂರವಾಗಿದ್ದರು.ಕುಡಿಯಲು ತಾಯಿ ಬಳಿ ಹಣ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಂತಾಬಾಯಿ ಅವರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಬರುತಿತ್ತು. ಒಂದು ಮನೆಯ ಬಾಡಿಗೆ ಹಣವೂ ಬರುತಿತ್ತು.ಇದರಿಂದಲೇ ಶಾಂತಾಬಾಯಿ ಜೀವನ ಸಾಗಿಸುತ್ತಿದ್ದರು.

ಮಗ ಹಣಕ್ಕಾಗಿ ತಾಯಿಗೆ ಪೀಡಿಸುತ್ತಿದ್ದ. ಇದೇ ವಿಚಾರದಲ್ಲಿ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ತಾಯಿ ಹಣ ನೀಡದ ಕಾರಣ ಮನೆಯಲ್ಲಿದ್ದ ಕಬ್ಬಿಣದ ರಾಡ್​​ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕುಡಿಯಲು ಹಣ ನೀಡದ ತಾಯಿಯ ಕೊಂದ ಮಗ Read More

ಕೊಲೆಗೆ ಸುಪಾರಿ: ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ ಸಚಿವ ರಾಜಣ್ಣ ಪುತ್ರ

ತುಮಕೂರು: ನನ್ನ ಕೊಲೆಗೆ 70 ಲಕ್ಷ ರೂ ಸುಪಾರಿ ಕೊಡಲಾಗಿದೆ ಎಂದು ಆರೋಪಿಸಿ ಸಚಿವ ಕೆ.ಎನ್‌ ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ್ದಾರೆ.

ತುಮಕೂರು‌ ಎಸ್ಪಿ ಕಚೇರಿಗೆ ತೆರಳಿದ ರಾಜೇಂದ್ರ ರಾಜಣ್ಣ ಅವರು ಎಸ್ಪಿ ಅಶೋಕ್‌ ಕುಮಾರ್‌ ಅವರಿಗೆ ಆಡಿಯೋ ಸಾಕ್ಷ್ಯದ ಸಹಿತ ಎರಡು ಪುಟಗಳ ದೂರು ನೀಡಿದ್ದಾರೆ. ತುಮಕೂರಿನ ಕ್ಯಾತ್ಸಂದದ ರಜತಾದ್ರಿ ನಿವಾಸದಲ್ಲಿ ಕಳೆದ ನವೆಂಬರ್‌ನಲ್ಲಿ ನನ್ನ ಹತ್ಯೆಗೆ ಯತ್ನ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ. ಅದರಲ್ಲಿ 5 ಲಕ್ಷ ಮುಂಗಡ ಪಾವತಿ ಮಾಡಿದ್ದಾರೆ. ಸೋಮ ಮತ್ತು ಭರತ್ ಅನ್ನೋರು ಇದರಲ್ಲಿದ್ದಾರೆ ಎಂದು ಹೇಳಿದರು.

ನನ್ನ ವಾಹನಕ್ಕೆ ಜಿಪಿಎಸ್ (GPS) ಅಳವಡಿಸಿ ಚಲನ ವಲನ ತಿಳಿಯಲು ಪ್ರಯತ್ನ ಪಟ್ಟಿದ್ದರು. ಹೀಗಾಗಿ ನನಗೆ ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದೇನೆ. ಸುಪಾರಿ ಟೀಂ ನಲ್ಲಿ 20 ಜನ ಇದ್ದಾರೆ. 18 ನಿಮಿಷದ ಆಡಿಯೋ ಇದೆ ಎಂದು ರಾಜೇಂದ್ರ ರಾಜಣ್ಣ ತಿಳಿಸಿದರು.

ಡಿಜಿ ಅವರ ಸಲಹೆ ಮೇರೆಗೆ ಎಸ್ಪಿಗೆ ದೂರು ನೀಡಿದ್ದೇನೆ,ಹನಿಟ್ರ‍್ಯಾಪ್ ವಿಚಾರ ಎಲ್ಲೂ ಪ್ರಸ್ತಾಪ ಮಾಡಿಲ್ಲ,ನನಗೆ ಅಪರಿಚಿತರಿಂದ ಫೋನ್ ಕಾಲ್, ಮೆಸೆಜ್, ವೀಡಿಯೋ ಕಾಲ್ ಬರುತಿತ್ತು ಅಂತಾ ಅಷ್ಟೇ ಹೇಳಿದ್ದೆ. ಈಗ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದರ ಬಗ್ಗೆ ದೂರು ನೀಡಿದ್ದೇನೆ, ಎಫ್‌ಐಆರ್‌ ಮಾಡುವಂತೆ ಕೇಳಿಕೊಂಡಿದ್ದೇನೆ. ಕ್ಯಾತಸಂದ್ರ ಠಾಣೆಯಲ್ಲಿ ಎಫ್‌ಐಆರ್ ಮಾಡುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.

ಇಡೀ ರಾಜ್ಯದಲ್ಲಿ ನನ್ನ ಮೇಲೆ ಯಾರಿಗೂ ದ್ವೇಷ ಇಲ್ಲ. ನಾನೇನು ರಿಯಲ್ ಎಸ್ಟೇಟ್ ಮಾಡುತ್ತಿಲ್ಲ. ಯಾಕೆ ಸುಪಾರಿ ಕೊಟ್ಟರು ಗೊತ್ತಿಲ್ಲ, ಅದನ್ನು ತನಿಖೆ ಮಾಡುವಂತೆ ಹೇಳಿದ್ದೇನೆ. ಸೋಮ ಮತ್ತು ಭರತ್ ಅನ್ನುವವರ ಹೆಸರು ಆಡಿಯೋದಲ್ಲಿ ಇದೆ. ಅವರು ಯಾರು ಅಂತಾ ಗೊತ್ತಿಲ್ಲ. ಒಬ್ಬ ಲೇಡಿ ಮತ್ತು ಹುಡುಗ 18 ನಿಮಿಷ ಆಡಿಯೋದಲ್ಲಿ ಮಾತನಾಡುತ್ತಾರೆ. ಮಗಳ ಬರ್ತ್‌ಡೇ ಹಿಂದಿನ ದಿನ ಹತ್ಯೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದರು. ಶಾಮಿಯಾನ ಮಾಲೀಕರು ಹೆಸರು ನಾನು ಹೇಳಲ್ಲ. ಮಾಧ್ಯಮದವರಿಂದ ಅವರಿಗೆ ಕಿರಿಕಿರಿ ಆಗಬಾರದು ಎಂಬ ಕಾರಣಕ್ಕೆ ನಾನು ಅವರ ಹೆಸರು ಹೇಳುವುದಿಲ್ಲ ಎಂದು ರಾಜೇಂದ್ರ ರಾಜಣ್ಣ ತಿಳಿಸಿದರು.

ಇದೀಗ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಲೆಗೆ ಸುಪಾರಿ: ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ ಸಚಿವ ರಾಜಣ್ಣ ಪುತ್ರ Read More

ತೋಟದ ಮನೆಯಲ್ಲಿ ರೌಡಿ ಶೀಟರ್ ಬರ್ಭರ ಹತ್ಯೆ

ಮೈಸೂರು,ಮಾ.14: ಮೈಸೂರು ತಾಲೂಕು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹನಗಳ್ಳಿಯ ತೋಟದ ಮನೆಯಲ್ಲಿ ರೌಡಿ ಶೀಟರ್ ಒಬ್ಬನನ್ನು ಬರ್ಭರವಾಗಿ ಹತ್ಯೆ ಮಾಡಲಾಗಿದೆ.

ದೊರೆಸ್ವಾಮಿ.ಆ.ಸೂರ್ಯ ಕೊಲೆಯಾದ ರೌಡಿ ಶೀಟರ್.

ನಿನ್ನೆ ಮಧ್ಯರಾತ್ರಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.ಮಾರಕಾಸ್ತ್ರದಿಂದ ನಾಲ್ಕಾರು ಕಡೆ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ದೊರೆಸ್ವಾಮಿ ವಿರುದ್ದ 4 ರಿಂದ 5 ಪ್ರಕರಣಗಳಿದ್ದ ಎಂಒಬಿ ಆಗಿದ್ದಾನೆ. 6 ತಿಂಗಳ ಹಿಂದೆ ಪತ್ನಿ ದೀಪಿಕಾ ಈತನಿಂದ ದೂರವಾಗಿದ್ದಾಳೆ.

ಬೆಂಗಳೂರಿನ ಯುವತಿಯೊಬ್ಬಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದು ಕೆಲವು ದಿನಗಳಿಂದ ಯುವತಿಯ ಜೊತೆ ಓಡಾಡಿರುವ ಮಾಹಿತಿ ಲಭ್ಯವಾಗಿದೆ.

ಕೃತ್ಯ ನಡೆದ ಹಿಂದಿನ ದಿನ ಕೂಡಾ ಯುವತಿಯ ಜೊತೆ ಇದ್ದನೆಂದು ತಿಳಿದುಬಂದಿದೆ.

ಕೃತ್ಯ ನಡೆದ ಸ್ಥಳದಲ್ಲಿ ಹೋಟೆಲ್ ನಿಂದ ತಂದ ಪದಾರ್ಥಗಳು ಪತೆಯಾಗಿವೆ,ಈಗ ಯುವತಿ ನಾಪತ್ತೆಯಾಗಿದ್ದು,ಆಕೆಯ ಪತ್ತೆಗೆ ಜಯಪುರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್,ಡಿವೈಎಸ್ಪಿ ಕರೀಂ ರಾವತರ್,ಜಯಪುರ ಠಾಣೆ ಎಸ್ಸೈ ಶಿವನಂಜಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳುಮುದ್ರೆ ಘಟಕದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತೋಟದ ಮನೆಯಲ್ಲಿ ರೌಡಿ ಶೀಟರ್ ಬರ್ಭರ ಹತ್ಯೆ Read More

ಹಣ, ಆಭರಣಕ್ಕಾಗಿ ಆಪ್ತ ವೃದ್ದೆಯನ್ನು ಕೊಂದ ಪಾಪಿ ಮಹಿಳೆ

ಮೈಸೂರು:‌ ಹಣಕ್ಕಾಗಿ ಮಹಿಳೆ ಏನು‌ಬೇಕಾದರೂ ಮಾಡಬಲ್ಲಳು ಎಂಬುದಕ್ಕೆ ಸಾಂಸ್ಕೃತಿಕ ನಗರಿ ಮೈಸೂರನಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ.

ಹಣ ಮತ್ತು ಆಭರಣಕ್ಕಾಗಿ ಮಹಿಳೆ ತೀರಾ ಅನ್ಯೋನ್ಯ ವಾಗಿದ್ದ ನೆರೆಮನೆಯ ವೃದ್ಧೆಯನ್ನು ತನ್ನ ಮನೆಗೆ ಕರೆಸಿಕೊಂಡು ಹತ್ಯೆಗೈದ ಹೇಯ ಘಟನೆ ನಡೆದಿದೆ.

ಈ ಘಟನೆ ಮೈಸೂರಿನ ಕೆ ಸಿ ಬಡಾವಣೆಯಲ್ಲಿ ಮಾರ್ಚ್ 5ರಂದು ರಾತ್ರಿ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕೆಸಿ ಬಡಾವಣೆ 1ನೇ ಮೇನ್, 7ನೇ ಕ್ರಾಸ್ ನಿವಾಸಿ, ಗಂಗಣ್ಣ ಅವರ ಪತ್ನಿ ಸುಲೋಚನಾ (62) ಕೊಲೆಯಾದ ನತದೃಷ್ಡ ವೃದ್ಧೆ.

ಅದೇ ಬಡಾವಣೆಯ ಶಕುಂತಲಾ (45) ಎಂಬ ಮಹಿಳೆ ಮಾ.5ರಂದು ರಾತ್ರಿ ಸುಮಾರು 7 ಗಂಟೆಯಲ್ಲಿ ದೂರವಾಣಿ ಕರೆ ಮಾಡಿ, ಸುಲೋಚನಾ ಅವರನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾಳೆ.

ನಂತರ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ, ದಿಂಬಿನಿಂದ ಮುಖ‌ ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

ತದನಂತರ ಸುಲೋಚನಾ ಮೈಮೇಲಿದ್ದ 50 ಗ್ರಾಂ ತೂಕದ ಚಿನ್ನದ ಸರವನ್ನು ತೆಗೆದುಕೊಂಡು ಮೃತದೇಹವನ್ನು ತನ್ನ ಮನೆಯಲ್ಲೇ ಇರಿಸಿ, ಟೆರೆಷಿಯನ್ ಕಾಲೇಜು ಬಳಿ ಹೋಗಿ ಅಲ್ಲಿನ ದುರ್ಗಾ ಜ್ಯುವೆಲ್ಲರಿಯಲ್ಲಿ ಗಿರವಿ ಇಟ್ಟು 1.5 ಲಕ್ಷ ರೂ. ತಂದು ತನ್ನ ಮನೆ ಮಾಲೀಕನಿಗೆ ಬಾಕಿ ಉಳಿಸಿಕೊಂಡಿದ್ದ 36 ಸಾವಿರ ರೂ. ಬಾಡಿಗೆ ಕೊಟ್ಟಿದ್ದಾಳೆ.

ನಂತರ ಶಕುಂತಲಾ, ಸುಲೋಚನಾ ಅವರ ಮಗನಿಗೆ ಕರೆ ಮಾಡಿ ನಿಮ್ಮ ತಾಯಿ ನಮ್ಮ ಮನೆಗೆ ಬಂದರು. ಮಾತನಾಡುತ್ತಿರುವಾಗಲೇ ಬೆವರಿ, ಕುಸಿದು ಬಿದ್ದರು. ಈಗ ನೋಡಿದರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿ ಕರೆಸಿಕೊಂಡಿದ್ದಾಳೆ.

ಗಾಬರಿಯಿಂದ ಮಗ ರವಿಚಂದ್ರ ಹಾಗೂ ಅವರ ಸಂಬಂಧಿಕರು ತಕ್ಷಣ ಶಕುಂತಲಾ ಅವರ ಮನೆಗೆ ಬಂದು ಸುಲೋಚನಾ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು, ಅವರು ಈಗಾಗಲೇ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.

ತದನಂತರ ಆಸ್ಪತ್ರೆ ಸಿಬ್ಬಂದಿಗಳು ಈ ವಿಷಯದ ಬಗ್ಗೆ ನಜರ್‌ ಬಾದ್ ಪೊಲೀಸರಿಗೆ ಡೆತ್‌ಮೆಮೋ ಕಳುಹಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸಾಗಿಸಿ, ಪ್ರಕರಣ ದಾಖಲಿಸಿಕೊಂಡರು.

ಸುಲೋಚನಾ ಅವರ ಸಾವಿನ ಬಗ್ಗೆ ಅನುಮಾನವಿದ್ದ ಪೊಲೀಸರಿಗೆ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಆಕೆಯದ್ದು ಸಹಜ ಸಾವಲ್ಲ. ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ತನಿಖೆ ಆರಂಭಿಸಿದ ನಜರ್‌ಬಾದ್ ಠಾಣೆ ಇನ್‌ ಸ್ಪೆಕ್ಟರ್ ಎಂ.ಮಹದೇವಸ್ವಾಮಿ ಅವರು, ಮರುದಿನವೇ ಬೆಳಗ್ಗೆ ಶಕುಂತಲಾ ಮನೆಗೆ ತೆರಳಿ ಮಹಜರು ನಡೆಸಿದ ಬಳಿಕ ಆಕೆಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಆರಂಭದಲ್ಲಿ ಸುಲೋಚನಾ ಅವರು ನನ್ನ ಮನೆಗೆ ಬಂದು ಕುಳಿತುಕೊಂಡು ಮಾತನಾಡುವ ವೇಳೆ ನಿತ್ರಾಣಗೊಂಡರು. ಸ್ವಲ್ಪ ಹೊತ್ತಿನಲ್ಲೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಆಗ ನಾನು ಅವರಿಗೆ ನೀರು ಕುಡಿಸಿ, ಗಾಳಿ ಬೀಸಿದೆ.ಆದರೆ ಎಚ್ಚರಗೊಳ್ಳದ ಕಾರಣ ಅವರ ಮನೆಯವರಿಗೆ ವಿಷಯ ತಿಳಿಸಿದೆ ಎಂದು ಹೇಳಿದರು.

ನಂತರ ಆಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮನೆ ಬಾಡಿಗೆ ಬಾಕಿ ಇದ್ದು, ಹಣಕಾಸಿನ ಸಮಸ್ಯೆಯಿಂದ ನಾನೇ ಸುಲೋಚನಾ ಅವರನ್ನು ಮನೆಗೆ ಕರೆಸಿಕೊಂಡು, ರೂಮ್ ನಲ್ಲಿ ಕೂಡಿ ಹಾಕಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಶಕುಂತಲಾ ಒಪ್ಪಿಕೊಂಡಿದ್ದಾಳೆ.

ತಕ್ಷಣ ಆಕೆಯನ್ನು ಬಂಧಿಸಿದ ಪೊಲೀಸರು, ಅಂಗಡಿಯಿಂದ ಶಕುಂತಲಾ ಗಿರಿವಿ ಇಟ್ಟಿದ್ದ ಚಿನ್ನದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾನೂನಿನ ಪ್ರಕ್ರಿಯೆ ಪೂರ್ಣಗೊಳಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಮಾ.6ರಂದು ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನು ಶಕುಂತಲಾ ತನ್ನ ಪತಿ ಕೆ.ಸಿ.ಬಡಾವಣೆಯ ಹೋಟೆಲ್‌ ವೊಂದರಲ್ಲಿ ಕುಕ್ ಕೆಲಸ ಮಾಡುತ್ತಿದ್ದು, ಇಬ್ಬರೂ ಪುತ್ರಿಯರೊಂದಿಗೆ ಜೀವನ ಸಾಗಿಸುವುದು ಕಷ್ಟವಾಗಿತ್ತು. ಅದಕ್ಕಾಗಿ ನಾನು ವಿಪರೀತ ಸಾಲ ಮಾಡಿಕೊಂಡಿದ್ದೆ, ಬಾಕಿ ಉಳಿಸಿಕೊಂಡಿದ್ದ ಮನೆ ಬಾಡಿಗೆ ಕೊಡುವಂತೆ ಒತ್ತಾಯಿಸುತ್ತಿದ್ದ ಕಾರಣ ನಾನು ನೆರೆ ಮನೆಯವರಾದ ಸುಲೋಚನಾ ಅವರ ಮೈಮೇಲೆ ಆಭರಣ ಇದ್ದುದು ಗೊತ್ತಿದ್ದರಿಂದ ಅವರನ್ನು ಕರೆಸಿಕೊಂಡು ಕೊಲೆ ಮಾಡಿದೆ ಎಂದು ಶಕುಂತಲಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಹಲವು ವರ್ಷಗಳಿಂದ ಸುಲೋಚನಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ನನ್ನನ್ನು ಅವರು ಸಂಪೂರ್ಣವಾಗಿ ನಂಬಿದ್ದರು. ಈ ಹಿಂದೆಯೂ ಒಮ್ಮೆ 40 ಗ್ರಾಂ ಚಿನ್ನದ ಬಳೆಗಳನ್ನು ಅವರಿಂದ ಪಡೆದು ಮುತ್ತೂಟ್ ಫೈನಾನ್ಸ್‌ ನಲ್ಲಿ ಗಿರವಿ ಇಟ್ಟು ಹಣ ಪಡೆದಿದ್ದೇನೆ. ಈಗ ಮತ್ತೆ ಕೇಳಿದರೆ ಅವರು ಬೇಜಾರು ಮಾಡಿಕೊಳ್ಳಬಹುದೆಂದು ಭಾವಿಸಿ ಕೊಲೆ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾಳೆ.

ಇನ್ನಿತರ ಕಷ್ಟದ ಸಮಯದಲ್ಲೂ ಸುಲೋಚನಾ ಅವರು ಹಣ ನೀಡಿದ್ದರು. ನನ್ನನ್ನು ಸಂಪೂರ್ಣವಾಗಿ ನಂಬಿದ್ದ ಸುಲೋಚನಾ ಅವರನ್ನು ಕೊಲೆ ಮಾಡಿಬಿಟ್ಟೆನಲ್ಲ ಎಂಬ ನೋವು ಕಾಡುತ್ತಿದೆ. ಆದರೆ ಅನಿವಾರ್ಯ ಕಾರಣಗಳಿಂದ ಹೀಗೆ ಮಾಡಿಬಿಟ್ಟೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾಳೆ.

ನಾನು ಕೊಲೆ ಮಾಡುವಾಗ ಮನೆಯಲ್ಲಿ ಯಾರೂ ಇರಲಿಲ್ಲ. ಪತಿ ಹೋಟೆಲ್ ಕೆಲಸಕ್ಕೆ ಹೋಗಿದ್ದರು. ನನ್ನಿಬ್ಬರು ಪುತ್ರಿಯರು ನಮ್ಮ ಅಮ್ಮನ ಮನೆಗೆ ಹೋಗಿದ್ದರು. ಅದೇ ಸೂಕ್ತ ಸಮಯ ಎಂದು ನಾನು ಸುಲೋಚನಾ ಅವರನ್ನು ನಯವಾಗಿ ಕರೆಸಿಕೊಂಡು ಹತ್ಯೆಗೈದಿರುವುದಾಗಿಯೂ ಆರೋಪಿ ಶಕುಂತಲಾ ಹೇಳಿಕೊಂಡಿದ್ದಾಳೆ.

ಇತ್ತ ಸುಲೋಚನಾ ಅವರ ಪತಿ ಗಂಗಣ್ಣ ಅವರು ಮೌಂಟೆಡ್ ಪೊಲೀಸ್ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅನಾರೋಗ್ಯದ ನಿಮಿತ್ತ ಹಾಸಿಗೆ ಹಿಡಿದಿದ್ದಾರೆ ಅವರಿಗೆ ಪ್ರಜ್ಞೆ ಇಲ್ಲ,ಹಾಗಾಗಿ ಪತ್ನಿಯ ಕೊಲೆ ವಿಷಯ ತಿಳಿಸಲಾಗಿಲ್ಲ.

ಪುತ್ರ ರವಿಚಂದ್ರ ಗುಂಡ್ಲುಪೇಟೆಯಲ್ಲಿ ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಸುಲೋಚನಾಳ ನೀಚ ಕೆಲಸದಿಂದ ಎರಡೂ ಸಂಸಾರಗಳು ಬೀದಿಗೆ ಬಂದಂತಾಗಿಬಿಟ್ಟಿದೆ.ಜತೆಗೆ ಯಾರನ್ನೂ ನಂಬಬಾರದು ಎಂಬ ಮನಸ್ಥಿತಿಗೆ ಜನ ಬರುವಂತಾಗಿದೆ.

ಶಕುಂತಲಾ ಳ ಬಂಧನ ಕಾರ್ಯಾಚರಣೆಯಲ್ಲಿ ನಜರ್‌ಬಾದ್ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ, ಸಬ್‌ ಇನ್‌ ಸ್ಪೆಕ್ಟರ್‌ ಗಳಾದ ನಟರಾಜು, ಶ್ರೀನಿವಾಸ ಪಾಟೀಲ್, ಸಿಬ್ಬಂದಿಗಳಾದ ಸತೀಶ್, ಪ್ರವೀಣ್, ಗೋಪಾಲ್, ಪ್ರಕಾಶ್, ಸಂಜು, ಲಕ್ಷ್ಮಿ ಕುಂಬಾರ್ ಪಾಲ್ಗೊಂಡಿದ್ದರು.

ಹಣ, ಆಭರಣಕ್ಕಾಗಿ ಆಪ್ತ ವೃದ್ದೆಯನ್ನು ಕೊಂದ ಪಾಪಿ ಮಹಿಳೆ Read More

ಕುಡಿದ ಮತ್ತಿನಲ್ಲಿ ಜಗಳ:ಗಾರೆ ಕೆಲಸದವನ ಕೊಂದ ಮೇಸ್ತ್ರಿ

ಕೊಳ್ಳೇಗಾಲ,ಮಾ.5: ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರದಲ್ಲಿ ಕ್ಯಾತೆ ತೆಗೆದು
ವ್ಯಕ್ತಿಯೊಬ್ಬನಿಗೆ ಗಾರೆ ಕೆಲಸದ ಮೇಸ್ತ್ರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಕೊಲೆ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪಟ್ಟಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿ ಮೂಲದ ಶಿವಣ್ಣ ಎಂಬುವರ ಮಗ ಪುನೀತ್ (55) ಕೊಲೆಯಾದ ದುರ್ದೇವಿ.

ಈತ ಹಲವಾರು ತಿಂಗಳುಗಳಿಂದ ಮ. ಮ ಬೆಟ್ಟ, ಮಳವಳ್ಳಿ ಈಗೆ ಸುತ್ತಮುತ್ತಲಿನ ಕಡೆ ಗಾರೆ ಕೆಲಸ ಮಾಡಿಕೊಂಡಿದ್ದ. ಈತನ ಮೇಲೆ ಪಟ್ಟಣದ ಗಾರೆ ಕೆಲಸದ ಮೇಸ್ತ್ರಿ ಮಂಜುನಾಥ್ @ ಮಣಿಕಂಠ @ಮಣಿ ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದ.

ಕೂಡಲೇ ಆತನನ್ನು ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ವರ್ಷ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿ ಡಾ. ಲೋಕೇಶ್ವರಿ ಯವರು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸುಮಾರು 7 ಗಂಟೆಯಲ್ಲಿ ಪುನೀತ್ ಮೃತಪಟ್ಟಿದ್ದಾನೆ.

ಪುನೀತ್ ಗಾರೆ ಕೆಲಸ ಮಾಡಿಕೊಂಡು ಪಟ್ಟಣದ ಫೀಸ್ ಪಾರ್ಕ್ ಬಳಿಯ ಚೆನ್ನಮ್ಮ ಲಾಡ್ಜ್ ನಲ್ಲಿ ವಾಸಿಸುತ್ತಿದ್ದ. ಮಂಗಳವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಹಣಕಾಸಿನ ವಿಚಾರಕ್ಕೆ ಮೇಸ್ತ್ರಿಗೂ ಈತನಿಗೂ ಗಲಾಟೆಯಾಗಿದೆ ಈ ವೇಳೆ ಮೇಸ್ತ್ರಿ ಮಣಿ ಪುನೀತ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಈ ಸಂಬಂಧ ಲಾಡ್ಜ್ ಮ್ಯಾನೆಜರ್ ಪುಟ್ಟರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತ ವ್ಯಕ್ತಿಯು ಪುನೀತ್ ಬಿನ್ ಶಿವಣ್ಣ 55 ವರ್ಷ ಉತ್ತರಹಳ್ಳಿ ಬೆಂಗಳೂರು ಎಂದು ವಿಳಾಸ ತಿಳಿಸಿ ಮೃತಪಟ್ಟಿದ್ದಾನೆ ಇವರ ವಾರಸುದಾರರು ಅಥವಾ ಸಂಬಂಧಿಕರ ವಿಳಾಸ ಪತ್ತೆ ಆಗಿಲ್ಲ. ಇವರ ವಿಳಾಸ ಮಾಹಿತಿಯನ್ನು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಕೆಳಗೆ ಕೊಟ್ಟಿರುವ ನಂಬರ್ ಗಳಿಗೆ ಕರೆ ಮಾಡಿ ತಿಳಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ದೂರವಾಣಿ ಸಂಖ್ಯೆ -08224 252368,
-9480804653, 8310954515

ಕುಡಿದ ಮತ್ತಿನಲ್ಲಿ ಜಗಳ:ಗಾರೆ ಕೆಲಸದವನ ಕೊಂದ ಮೇಸ್ತ್ರಿ Read More

ಗಬ್ಬದ ಹಸುವನ್ನು ಕಡಿದ ಪ್ರಕರಣ:ಬಿಜೆಪಿ ತೀವ್ರ ಆಕ್ರೋಶ

ಬೆಂಗಳೂರು: ನಗರದ ಚಾಮರಾಜಪೇಟೆ ಯಲ್ಲಿ ಗೋವಿನ ಕೆಚ್ಚಲು ಕತ್ತರಿಸಿದ ಅಮಾನುಷ ಘಟನೆಯಿಂದ ಹೊರಬರುವ ಮುನ್ನವೇ ಈಗ ಅದಕ್ಕಿಂತಲೂ ಹೇಯ ಕೃತ್ಯ ನಡೆದಿದ್ದು ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊನ್ನಾವರ ತಾಲ್ಲೂಕಿನ ಸಾಲ್ಕೋಡ ಗ್ರಾಮದಲ್ಲಿ ಗಬ್ಬದ ಹಸುವನ್ನು ಕಡಿದು, ಗರ್ಭದಿಂದ ಬ್ರೂಣ ತೆಗೆದು ಬಿಸಾಡಿ, ಮಾಂಸ ಹೂತ್ತೊಯ್ದ ಕಿಡಿಗೇಡಿಗಳು ಕ್ರೌರ್ಯ ಮೆರೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಬಿಜೆಪಿ ಕಾರ್ಯಕರ್ತರು ಹಾಗೂ‌ ಸಾರ್ವಜನಿಕರು ಕಿಡಿಕಾರಿದ್ದಾರೆ.

ಈ‌ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಮಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ತುಷ್ಟೀಕರಣ, ಅರಾಜಕತೆಯಿಂದ ನಿಸ್ತೇಜವಾಗಿರುವ ರಾಜ್ಯ ಸರ್ಕಾರದ ಬಲಹೀನತೆಯನ್ನೇ ಬಂಡವಾಳ
ವಾಗಿಸಿಕೊಂಡಿರುವ ಮತಾಂಧ ಶಕ್ತಿಗಳು, ಗೋವುಗಳ ಮೇಲೆ ಪ್ರಹಾರ ಮಾಡುವ ಮೂಲಕ ಹಿಂದೂಗಳಿಗೆ ಸವಾಲು ಹಾಕುತ್ತಿವೆ ಎಂದು ಹೇಳಿದ್ದಾರೆ‌

ಸಿಎಂ ಸಿದ್ದರಾಮಯ್ಯ ನವರೇ, ಗೋವುಗಳ ಮೇಲೆ ಪದೇ ಪದೇ ನಡೆಯುತ್ತಿರುವ ಈ ದಾಳಿಗಳನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಜಾಲವೇ ಅಡಗಿದಂತಿದೆ. ಮತಾಂಧ ಶಕ್ತಿಗಳು, ಮೂಲಭೂತವಾದಿ ಶಕ್ತಿಗಳ ದೊಡ್ಡ ಜಿಹಾದಿ ಷಡ್ಯಂತ್ರವೆ ಇದ್ದಂತಿದೆ.

ಸರ್ಕಾರ ಇದನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ ಈ ದುಷ್ಕೃತ್ಯಗಳಿಗೆ ಕಡಿವಾಣ ಹಾಕದೆ ಹೋದರೆ, ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಶೋಕ್ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಗಬ್ಬದ ಹಸುವನ್ನು ಕಡಿದ ಪ್ರಕರಣ:ಬಿಜೆಪಿ ತೀವ್ರ ಆಕ್ರೋಶ Read More

ತಂದೆ,ತಾಯಿಯನ್ನ ಕೊಂದ ನೀಚ ಪುತ್ರ

ಪುಣೆ: ಚೆನ್ನಾಗಿ ಓದಿ ಪರೀಕ್ಷೆ ಪಾಸು ಮಾಡಿ ಮುಂದಕ್ಕೆ ಬಾ ಎಂದು ಬುದ್ದಿ ಮಾತು ಹೇಳಿದ ತಂದೆ,ತಾಯಿಯನ್ನೇ ನೀಚ ಮಗ ಹಣದ

ಇಂಜಿನಿಯರಿಂಗ್ ಎಕ್ಸಾಂನಲ್ಲಿ ಫೇಲ್ ಆಗಿದ್ದ ಮಗನಿಗೆ ಚೆನ್ನಾಗಿ ಓದಿ ಮುಂದೆ ಬಾ ಎಂದು ಬುದ್ದಿ ಹೇಳಿದ್ದಕ್ಕೆ ಕೋಪಗೊಂಡ ಮಗ ತಂದೆ ತಾಯಿಯನ್ನೆ ಕೊಲೆ ಮಡಿರುವ ಅತ್ಯಂತ ಹೇಯ ಘಟನೆಮಹಾರಾಷ್ಟ್ರದ ನಾಗುರದಲ್ಲಿ
ನಡೆದಿದೆ.

ಲೀಲಾತ್ಕರ್ ದಾಕೋಲೆ ಹಾಗೂ ಅರುಣಾ ದಾಕೋಲೆ ಮಗನಿಂದ ಕೊಲೆಯಾದ ತಂದೆ,ತಾಯಿ.

ಡಿ.26 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಗ ಉತ್ಕರ್ಶ್ ದಾಕೋಲೆ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ಕರ್ಶ್ ಕೆಲವು ಸಭೆಕ್ಟ್ ನಲ್ಲಿ ಫೇಲ್ ಆಗಿದ್ದ. ಚೆನ್ನಾಗಿ ಓದುವಂತೆ ಪೋಷಕರು ಹೇಳುತ್ತಿದ್ದರು.ಜತೆಗೆ ಮಗ ಓದುತ್ತಿರುವ ಕಾಲೇಜು ಬದಲಾವಣೆ ಮಾಡುವಂತೆ ಸೂಚಿಸಿದ್ದರು. ಇದಕ್ಕೆ ಕೋಪಗೊಂಡಿದ್ದ ಉತ್ಕರ್ಶ್ ಚಾಕುವಿನಿಂದ ಇರಿದು ಅಪ್ಪ ಹಾಗೂ ಅಮ್ಮನನ್ನು ಕೊಲೆ ಮಾಡಿದ.

ತಂಗಿಯನ್ನ ಸಂಬಂಧಿಕರ ಮನೆಗೆ ಕಳುಹಿಸಿ,ಅಒ್ಪ,ಅಮ್ಮ ಮೆಡಿಟೇಶನ್ ತರಬೇತಿಗೆ ಬೇರೆಕಡೆ ಹೋಗಿದ್ದಾರೆ ಎಂದು ಹೇಳುದ್ದ.

ಆದರೆ ಒಂದೆರಡು ದಿನದಲ್ಲಿ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡು ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ‌ ಬಂದಾಗ ಕೊಲೆ ವಿಷಯ ಬೆಳಕಿಗೆ ಬಂದಿದೆ‌.

ತಂದೆ,ತಾಯಿಯನ್ನ ಕೊಂದ ನೀಚ ಪುತ್ರ Read More