ಅಮ್ಮನ ಕೊಂ*ದ ಪಾಪಿ‌ ಅಪ್ರಾಪ್ತ ಪುತ್ರಿ!

ಬೆಂಗಳೂರು: ತಾಯಿಯೇ ದೇವರು ಎಂದು ನಾವೆಲ್ಲ ಪೂಜಿಸುತ್ತೇವೆ,ಆದರೆ ಬೆಂಗಳೂರಿನಲ್ಲೊಬ್ಬಳು ಪಾಪಿ ಪುತ್ರಿ ತನ್ನನ್ನು ಹೆತ್ತ ಅಮ್ಮನನ್ನು ಕೊಂದಿದ್ದಾಳೆ!

ಅಪ್ರಾಪ್ತ ಮಗಳು ಸ್ನೇಹಿತರ ಜತೆ ಸೇರಿ ತನ್ನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಲೋನ್ ರಿಕವರಿ ಕಂಪನಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ನೇತ್ರಾವತಿ (35) ಕೊಲೆಯಾದ ತಾಯಿ.

ಸ್ನೇಹಿತರ ಜೊತೆ ಸೇರಿ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ‌ ನೇಣು ಹಾಕಿದ್ದಾಳೆ.

ಈ ಹೇಯ ಕೃತ್ಯದಲ್ಲಿ ಐವರು ಅಪ್ರಾಪ್ತರು ಭಾಗಿಯಾಗಿದ್ದಾರೆಂದು ಪೋಲೀಸರು ತಿಳಿಸಿದ್ದಾರೆ.

ಅ.25 ರಂದು ಈ ಘಟನೆ ನಡೆದಿದ್ದು ಕೊಲೆ ತಡವಾಗಿ ಗೊತ್ತಾಗಿದೆ.ಇದಕ್ಕೂ ಮೊದಲು ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಸಿಕೊಂಡಿದ್ದರು.

ನಂತರ ಕೊಲೆಯಾದ ನೇತ್ರಾವತಿ ಅವರ ಅಕ್ಕ ಅನಿತಾಗೆ ಮಗಳ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ನೇತ್ರ ಸಾವಿನ ನಂತರ ಅವಳ ಮಗಳು ಎಲ್ಲೂ ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ಎರಡು ದಿನಗಳ ಬಳಿಕ ಮಗಳು ವಾಪಸ್ ಮನೆಗೆ ಬಂದಿದ್ದಳು.

ಈ ಬಗ್ಗೆ ಅನಮಾನ ವ್ಯಕ್ತವಾದ ಹಿನ್ನಲೆ ನೇತ್ರಾವತಿಯ ಅಕ್ಕ ದೂರು ನೀಡಿದ್ದರು. ತನಿಖೆ ವೇಳೆ ಮಗಳಿಂದಲೇ ತಾಯಿ ಕೊಲೆಯಾಗಿದೆ ಎಂಬುದು ಬಯಲಾಗಿದೆ.

ಪುತ್ರಿ ಆಗಾಗ ಪ್ರಿಯತಮ ಮತ್ತು ‌ಸ್ನೇಹಿತರನ್ನು ಮನೆಗೆ ಕರೆತರುತ್ತಿದ್ದಳು.ಅದೇ ರೀತಿ‌ ಅಕ್ಟೋಬರ್ 25 ರಂದೂ
ಮನೆಗೆ ಸ್ನೇಹಿತರು ಬಂದಿದ್ದರು.

ಆಗ ನೇತ್ರಾವತಿ ಇದೆಲ್ಲ ಬೇಡ ಚೆನ್ನಾಗಿರುವುದಿಲ್ಲ ಎಂದು ಬೈದು ಬುದ್ದಿ ಹೇಳಿದ್ದಾರೆ. ಇದಕ್ಕೆ ಮಗಳು ಒಪ್ಪಿಲ್ಲ,ಆಗ ಪೊಲೀಸರಿಗೆ ಕರೆ ಮಾಡುವುದಾಗಿ ತಾಯಿ ಹೇಳಿದ್ದಾರೆ, ಆಗ ಪುತ್ರಿ ಸ್ನೇಹಿತರೊಂದಿಗೆ ಸೇರಿ ತಾಯಿಯ ಹತ್ಯೆ ಮಾಡಿದ್ದಾಳೆ.

ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಮ್ಮನ ಕೊಂ*ದ ಪಾಪಿ‌ ಅಪ್ರಾಪ್ತ ಪುತ್ರಿ! Read More

ಹಾಡಹಗಲೇ ಸಾಂಸ್ಕೃತಿಕ ನಗರಿಯಲ್ಲಿ ರೌಡಿ ಶೀಟರ್ ಹತ್ಯೆ

ಮೈಸೂರು: ಹಾಡುಹಗಲೇ ಯುವಕರ ತಂಡವೊಂದು ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ದಸರಾ ವಸ್ತುಪ್ರದರ್ಶನ ಬಳಿ ಮಂಗಳವಾರ ಮಧ್ಯಾನ ನಡೆದಿದೆ.

ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಗಿಲಿಗಿಲಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ವೆಂಕಟೇಶನ ಮೇಲೆ ಲಾಂಗ್ ಗಳಿಂದ ದಾಳಿ ನಡೆಸಿ,ನಂತರ ಕಾರಿನಿಂದ ಹೊರಗೆ ಎಳೆದು ಹಿಗ್ಗಾ ಮುಗ್ಗ ಥಳಿಸಿ ಗುಂಪು ಪರಾರಿಯಾಗಿದೆ.

ತಲೆ ಕೈ ಕಾಲು ಹಾಗೂ ದೇಹದ ವಿವಿಧೆಡೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು ಜನ‌ ಆತಂಕಕ್ಕೆ ಈಡಾಗಿದ್ದಾರೆ.

ಇತ್ತೀಚೆಗೆ ವರುಣಾ ಗ್ರಾಮದ ಹೋಟೆಲ್ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್ ಎಂಬಾತನ ಕೊಲೆ ಆಗಿತ್ತು. ಆತನಿಗೂ ಈಗ ಕೊಲೆಯಾಗಿರುವ ವೆಂಕಟೇಶ್ ಗೂ ನಿಕಟ ಸಂಪರ್ಕವಿತ್ತು ಎಂದು ತಿಳಿದುಬಂದಿದೆ.

ಕಾರ್ತಿಕ್ ಕೊಲೆಗೆ ವೆಂಕಟೇಶನ ಸಹಕಾರವಿತ್ತು ಎನ್ನಲಾಗಿದ್ದು,ಕಾರ್ತಿಕ್ ಕಡೆಯವರೇ ಈ ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ.

ಕೊಲೆ ನಡೆದ ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಹಾಗೂ ನಜರಬಾದ್ ಠಾಣೆ ಪೊಲೀಸರು
ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಾಡಹಗಲೇ ಸಾಂಸ್ಕೃತಿಕ ನಗರಿಯಲ್ಲಿ ರೌಡಿ ಶೀಟರ್ ಹತ್ಯೆ Read More

ಕೊಡಲಿಯಿಂದ ಕೊಚ್ಚಿ ಪತ್ನಿಯ‌ ಕೊಂ*ದ ಪಾಪಿ ಪತಿ

ಸುರಪುರ: ಪತ್ನಿ ತನಗೆ ಗೌರವ ಕೊಡುತ್ತಿಲ್ಲ ಎಂದು ಕೋಪಗೊಂಡ ಪತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸುರಪುರದಲ್ಲಿ ನಡೆದಿದೆ‌.

ಪಟ್ಟಣದ ಬಿ ಎಸ್ ಎನ್ ಎಲ್ ಕಚೇರಿ ಬಳಿಯ ಡೊಣ್ಣಿಗೇರಾದಲ್ಲಿ ಈ ಘಟನೆ ನಡೆದಿದ್ದು, ಸಂಗಪ್ಪ ಕಕ್ಕೇರಾ ಎಂಬಾತ‌ ಈ ಕೃತ್ಯ ಎಸಗಿದ್ದಾನೆ.ಮರಿಯಮ್ಮ ಕೊಲೆಯಾದ ದುರ್ದೈವಿ.

ಭಾನುವಾರ ತಡರಾತ್ರಿ ಮನೆಯಲ್ಲಿ ಸಂಗಪ್ಪ ಪತ್ನಿಯೊಂದಿಗೆ ಜಗಳ ಮಾಡಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ನಂತರ ಕೊಡಲಿಯನ್ನು ಹಿಡಿದುಕೊಂಡೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆ ಮಾಡಿರುವ ಸಂಗಪ್ಪ ಕಕ್ಕೇರಾ ಮದ್ಯ ವ್ಯಸನಿಯಾಗಿದ್ದ,ಮೂಲತಃ ಕಕ್ಕೇರಾ ಪಟ್ಟಣದ ಬಳಿಯ ದೊಡ್ಡಿ ಒಂದರ ನಿವಾಸಿ.

ಆದರೆ ಮರಿಯಮ್ಮ ಗಂಡ ಸರಿಯಾಗಿಲ್ಲದ ಕಾರಣ ಬೇಸರಗೊಂಡು ಕಳೆದ ಒಂದು ವರ್ಷದಿಂದ ಸುರಪುರದ ಡೊಣ್ಣಿಗೇರಾದಲ್ಲಿನ ತಮ್ಮ ಹೆತ್ತವರ ಮನೆಯಲ್ಲಿ ವಾಸವಾಗಿದ್ದಳು.

ತವರು ಮನೆಯಲ್ಲಿದ್ದ ಮರೆಮ್ಮನ ನೋಡಲು ಸಂಗಪ್ಪ ಬಂದು ಹೋಗಿ ಮಾಡುತ್ತಿದ್ದ.

ಹಾಗೆಯೇ ಭಾನುವಾರ ತಡರಾತ್ರಿ ಒಂದು ಗಂಟೆಯ ವೇಳೆಗೆ ಮನೆಗೆ ಬಂದ ಸಂಗಪ್ಪ ಪತ್ನಿಯೊಂದಿಗೆ ಜಗಳ ತೆಗೆದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಕೊಡಲಿ ಹಿಡಿದುಕೊಂಡೇ ಪೊಲೀಸ್ ಠಾಣೆಗೆ‌‌ ಬಂದಿದ್ದಾನೆ.

ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ನಾಯಕ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಮಹಿಳೆಯ ಅಣ್ಣ ನೀಡಿದ ದೂರಿನ ಮೇರೆಗೆ ಸುರಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೊಡಲಿಯಿಂದ ಕೊಚ್ಚಿ ಪತ್ನಿಯ‌ ಕೊಂ*ದ ಪಾಪಿ ಪತಿ Read More

ಕೌಟುಂಬಿಕ ಕಲಹ:ಇಬ್ಬರ ಮಕ್ಕಳ ಕೊಂದ ಪಾಪಿ ಅಪ್ಪ

ಯಾದಗಿರಿ: ಮಕ್ಕಳಿಗೆ‌ ತಾಯಿ ದೇವತೆಯಾದರೆ ತಂದೆ ಕೂಡಾ‌ ದೇವರ ಸಮಾನ,ಆದರೆ‌ ಅಂತಹ ಸ್ಥಾನದಲ್ಲಿರು ಅಪ್ಪ ತನ್ನ ಇಬ್ಬರು ಮಕ್ಕಳನ್ನು ಕೊಂದ ಹೇಯ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಶರಣಪ್ಪ ದುಗನೂರ ಎಂಬ ವ್ಯಕ್ತಿ ತನ್ನದೇ ಮಕ್ಕಳನ್ನು ನಿರ್ದಯ ವಾಗಿ ಕೊಂದುಬಿಟ್ಟಿದ್ದಾನೆ.

ಈತ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ.ಅದೇನಾಯಿತೊ ಗುರುವಾರ ಮುಂಜಾನೆ ಪತ್ನಿ ಬಹಿರ್ದೇಸೆಗೆ ಹೋಗಿದ್ದಾಗ ಮಂಚದ ಮೇಲೆ ಸಿಹಿ ನಿದ್ರೆಯಲ್ಲಿದ್ದ ಮೂರೂ ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.

ಇದರಿಂದ ಇಬ್ಬರು ಮಕ್ಕಳು ಮಲಗಿದ್ದಲ್ಲೇ ಮೃತಪಟ್ಟರೆ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ.

ಪುತ್ರ ಭಾರ್ಗವ(5), ಪುತ್ರಿ ಸಾನ್ವಿ(3) ಮೃತ ದುರ್ದೈವಿಗಳು.

ಗಾಯಗೊಂಡ ಹೇಮಂತ (8) ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ವೈಧ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳಿಸಲಾಗಿದೆ.

ಕೊಲೆ ಮಾಡಿ ನಂತರ ಪಾಪಿ ಅಪ್ಪ ಪರಾರಿಯಾಗಿದ್ದಾನೆ.

ಕೆಲವು ವರ್ಷಗಳಿಂದ ಶರಣಪ್ಪ ಹಾಗೂ ಪತ್ನಿ ಪದೇ ಪದೇ ಜಗಳವಾಡುತ್ತಿದ್ದರು, ಇದನ್ನು ಗಮನಿಸಿದ ಪತ್ನಿಯ ತಂದೆ-ತಾಯಿ ಸ್ವಗ್ರಾಮ ಕೊಡ್ಲಾಕ್ಕೆ ೮ ತಿಂಗಳ ಹಿಂದೆ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.

ನಂತರ ರಾಜಿ ಪಂಚಾಯಿತಿ ಮಾಡಲಾಗಿತ್ತು.

ಶರಣಪ್ಪನಿಗೆ ಸ್ವಲ್ಪ ಮಾನಸಿಕ ರೋಗವಿದ್ದುದರಿಂದ ಚಿಕಿತ್ಸೆ ಕೊಡಿಸಿ ಸರಿಯಾಗಿರುವುದಾಗಿಯೂ ಪತ್ನಿ ಜೊತೆ ಸಂಸಾರ ಮಾಡುವುದಾಗಿ ತಿಳಿಸಿದ್ದರಿಂದ ಇತ್ತೀಚೆಗೆ ಪತ್ನಿ ಮಕ್ಕಳನ್ನು ಹತ್ತಿಕುಣಿಗೆ ಕರೆ ತರಲಾಗಿತ್ತು.

ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಗ್ರಾಮೀಣ ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ನೀಡಿ, ಪರಿಶೀಲಿಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಕೌಟುಂಬಿಕ ಕಲಹ:ಇಬ್ಬರ ಮಕ್ಕಳ ಕೊಂದ ಪಾಪಿ ಅಪ್ಪ Read More

ಕುಡಿತಕ್ಕೆ ಹಣ ನೀಡದ್ದಕ್ಕೆ ಪತ್ನಿಯ ಕೊಂ*ದ ಪಾಪಿ ಪತಿ

ಮೈಸೂರು: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಹಣ ನೀಡದ ಪತ್ನಿಯನ್ನ ಮೊಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಗರದ ಮಹದೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಗಾಯಿತ್ರಿ ಕೊಲೆಯಾದ ನತದೃಷ್ಟೆ.ಈಗ ಪತಿ ಪಾಪಣ್ಣ ಎಣಿಸುತ್ತಿದ್ದಾನೆ.

ಈ ಹಿಂದೆ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಪಾಪಣ್ಣ ಸಾಲ ಮಾಡಿಕೊಂಡಿದ್ದ,ಜೊತೆಗೆ ಕುಡಿತದ ಚಟ ಅಂಟಿಸಿಕೊಂಡಿದ್ದ.

ಕೆಲಸವಿಲ್ಲದೆ ಅಲೆಯುತ್ತಿದ್ದ ಪಾಪಣ್ಣ ಸದಾ ಹಣಕ್ಕಾಗಿ ಪತ್ನಿ ಹಾಗೂ ಮಕ್ಕಳನ್ನ ಪೀಡಿಸುತ್ತಿದ್ದ.ಪಾಪಣ್ಣನ ಮಗಳ ಮದುವೆಯನ್ನ ಇಬ್ಬರು ಗಂಡು ಮಕ್ಕಳು ಸೇರಿ ಮಾಡಿದ್ದರು.ಇದಕ್ಕಾಗಿ ಮಾಡಿದ್ದ ಸಾಲ ಗಂಡು ಮಕ್ಕಳೇ ತೀರಿಸುತ್ತಿದ್ದರು.ಆದರೂ ಕುಡಿತಕ್ಕೆ ಮಾಡಿದ್ದ ಸಾಲ ತೀರಿಸಲು ಆಗಾಗ ಹಣಕ್ಕಾಗಿ ಪತ್ನಿಯನ್ನ ಹಾಗೂ ಮಕ್ಕಳನ್ನು ಪಾಪಣ್ಣ ಪೀಡಿಸುತ್ತಿದ್ದ.

ಸಾಹುಕಾರ ಹುಂಡಿಯಲ್ಲಿ ಜಮೀನು ಇತ್ತು.ಜಮೀನು ಮಾರಾಟ ಮಾಡಿ ಹಣ ಕೊಡುವಂತೆ ಪಟ್ಟು ಹಿಡಿದಿದ್ದ.ಈ ವಿಚಾರದಲ್ಲಿ ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು.ಇದೇ ವಿಚಾರದಲ್ಲಿ ನಿನ್ನೆಯೂ ಜಗಳ ಮಾಡಿದ ಪಾಪಣ್ಣ ಮನೆಯಲ್ಲಿ ಮಕ್ಕಳು ಇಲ್ಲದಿದ್ದಾಗ ಪತ್ನಿ ಗಾಯಿತ್ರಿಯನ್ನ ಮೊಚ್ಚಿನಿಂದ ಹಲ್ಲೆ ನಡೆಸಿ ಕೊಂದಿದ್ದಾನೆ.

ನಂತರ ಪಾಪಣ್ಣ ಗಾಬರಿಯಿಂದ ಹೊರಗಿನಿಂದ ಬೀಗ ಹಾಕುತ್ತಿದ್ದ ದೃಶ್ಯ ಮಗ ನೋಡಿದ್ದಾರೆ,ಕೈಗಳು ರಕ್ತಮಯವಾಗಿರುವುದನ್ನ ಗಮನಿಸಿ ಬಾಗಿಲು ತೆರೆದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಕಂಡುಬಂದಿದ್ದಾರೆ.

ತಾಯಿ ಗಾಯಿತ್ರಿಯನ್ನ ತಂದೆ ಕೊಲೆ ಮಾಡಿದ್ದಾನೆಂದು ಪುತ್ರ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯನಗರ ಪೊಲೀಸರು ಪಾಪಣ್ಣ ನನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕುಡಿತಕ್ಕೆ ಹಣ ನೀಡದ್ದಕ್ಕೆ ಪತ್ನಿಯ ಕೊಂ*ದ ಪಾಪಿ ಪತಿ Read More

ಪತ್ನಿ ಶೀಲ ಶಂಕಿಸಿ ಹತ್ಯೆ ಮಾಡಿದ್ದ ಪತಿಗೆಜೀವಾವಧಿ ಸೆರೆವಾಸ ವಿಧಿಸಿದ ಕೋರ್ಟ್

ಕೊಳ್ಳೇಗಾಲ: ಪತ್ನಿ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಸೆರೆವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪಟ್ಟಣದ ಮುಡಿಗುಂಡ ಬಡಾವಣೆ ನಿವಾಸಿ ಕೊಪ್ಪಳಿ ನಾಯಕ ಎಂಬುವರ ಮಗ ಕುಮಾರ್ (55) ಶಿಕ್ಷೆಗೆ ಒಳಗಾದ ವ್ಯಕ್ತಿ.

ಈತ 10 ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಕಾಮರಾಜ ನಾಯಕನ ಮಗಳು ಚಿನ್ನಮ್ಮಳನ್ನು ಮದುವೆಯಾಗಿದ್ದ. ಕೆಲ ವರ್ಷಗಳ ನಂತರ ಪತ್ನಿಯ ಶೀಲ ಶಂಕಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ.

ಇದರಿಂದ ಬೇಸರಗೊಂಡ ಚಿನ್ನಮ್ಮ ತವರು ಮನೆ ಸೇರಿದ್ದಳು. ಈ ನಡುವೆ 2022 ಮಾ.31 ರಂದು ಕುಮಾರ್ ಮುಳ್ಳೂರು ಗ್ರಾಮಕ್ಕೆ ತೆರಳಿ ಯುಗಾದಿ ಹಬ್ಬ ಮಾಡೋಣ ಬಾ ಎಂದು ಹೇಳಿದ್ದಲ್ಲದೆ ಪತ್ನಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಚಿನ್ನಮ್ಮಳ ತಂದೆ ಕಾಮರಾಜ ನಾಯಕ ಮತ್ತು ತಾಯಿ ರಾಜಮ್ಮ ಅವರಿಗೆ ಭರವಸೆ ನೀಡಿ ಮುಡಿಗುಂಡದ ಮನೆಗೆ ಕರೆ ತಂದಿದ್ದ.

ಆದರೂ ತನ್ನ ಚಾಳಿ ಬಿಡದ ಕುಮಾರ್, 2022 ಏ.1 ರಂದು ಬೆಳಗಿನ ಜಾವ 4.15 ರಲ್ಲಿ ಗಲಾಟೆ ಮಾಡಿ ಚಿನ್ನಮ್ಮಳ ಕಪಾಳಕ್ಕೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ದೃಶ್ಯ ನೋಡಿ ಕೂಗಿಕೊಂಡ ಮಗ ದರ್ಶನ್ ನನ್ನು ಕೊಠಡಿಗೆ ಕೂಡಿ ಹಾಕಿದ್ದನು.

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಅಂದಿನ ಸಿಪಿಐ ಶಿವರಾಜ್ ಆರ್.ಮುಧೋಳ್ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಸಿ.ಶ್ರೀಕಾಂತ್ ಅವರು, ಕುಮಾರ್ ಮಾಡಿ ರುವ ಅಪರಾಧಗಳು ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಸೆರೆವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಅಲ್ಲದೆ, ಕುಮಾರ್ ಪುತ್ರ ದರ್ಶನ್ ಮೈನ‌ರ್ ಆಗಿದ್ದು, ಆತನ ಪೋಷಣೆಗೆ ಕಾನೂನು ಸೇವಾ ಪ್ರಾಧಿಕಾರ ದಿಂದ ಸೂಕ್ತ ಪರಿಹಾರಕ್ಕೆ ಆದೇಶಿಸಿದ್ದಾರೆ.

ಈ ಪ್ರಕರಣ ಕುರಿತು ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ, ಸಿ.ಬಿ.ಗಿರೀಶ್ ಅವರು ವಾದ ಮಂಡಿಸಿದ್ದರು.

ಪತ್ನಿ ಶೀಲ ಶಂಕಿಸಿ ಹತ್ಯೆ ಮಾಡಿದ್ದ ಪತಿಗೆಜೀವಾವಧಿ ಸೆರೆವಾಸ ವಿಧಿಸಿದ ಕೋರ್ಟ್ Read More

ಬೆಳಗಾವಿಯಲ್ಲಿ ಯೋಧನ ತಂದೆಯ ಬರ್ಬರ ಹತ್ಯೆ

ಬೆಳಗಾವಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯೋಧರೊಬ್ಬರ ತಂದೆಯನ್ನು ಭೀಕರವಾಗಿ ಹತ್ಯೆ‌ ಮಾಡಿರುವ ಘಟನೆ ಜಿಲ್ಲೆಯ ‌ಕಾಗವಾಡ ತಾಲೂಕಿನಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳದ ಕಬ್ಬಿನ ಗದ್ದೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಶೇಡಬಾಳ ಗ್ರಾಮದ ರಾವಸಾಹೇಬ್ ಪಾಟೀಲ್ ಅವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಕೊಲೆ ನಡೆದಿದ್ದು, ಅದೆ ಗ್ರಾಮದ ಶಶಿಕಾಂತ್ ಕೃಷ್ಣಾ ಹೊನಕಾಂಬಳೆ (55) ಕೊಲೆಯಾದವರು.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಶಶಿಕಾಂತನನ್ನು ಕೊಲೆ ಮಾಡಲಾಗಿದೆ ಎಂದು ಶಶಿಕಾಂತ್ ಅವರ ಪುತ್ರ ರಾಹುಲ್‌ ಶಂಕೆ ವ್ಯಕ್ತಪಡಿಸಿದ್ದಾರೆ.

ಶಶಿಕಾಂತ ಅವರಿಗೆ ಇಬ್ಬರು ಪುತ್ರರು ಇದ್ದು, ಅದರಲ್ಲಿ ಒಬ್ಬರು ಯೋಧನಾಗಿದ್ದಾರೆ.

ತಂದೆಯ ಶವದ ಬಳಿ ಮಕ್ಕಳ ರೋಧನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಕಾಗವಾಡ ಮತ್ತು ಅಥಣಿ ಪೊಲೀಸರು ಭೇಟಿ ನೀಡಿ ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಯೋಧನ ತಂದೆಯ ಬರ್ಬರ ಹತ್ಯೆ Read More

ಕಾಂಗ್ರೆಸ್ ಸರ್ಕಾರದಿಂದ ಕೀಳು ಮಟ್ಟದ ರಾಜಕೀಯ- ಅಶೋಕ್ ಟೀಕೆ

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಆತನ ತಾಯಿ ನಾನು ಬೈರತಿ ಬಸವರಾಜ್ ವಿರುದ್ಧ ದೂರು ಕೊಟ್ಟಿಲ್ಲ, ಪೊಲೀಸರೇ ಹೆಸರು ಹಾಕಿಕೊಂಡಿದ್ದಾರೆ ಎಂದು ಹೇಳಿರುವುದು ಕಾಂಗ್ರೆಸ್ ಸರ್ಕಾರದ ಕೀಳು ಮಟ್ಟದ ರಾಜಕೀಯ ತೋರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಮಾತೆತ್ತಿದರೆ ಸಿಬಿಐ, ಐಟಿ, ಇಡಿ ಮೂಲಕ ಕೇಂದ್ರ ಸರ್ಕಾರ ವಿಪಕ್ಷಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುವ ಕರ್ನಾಟಕದ ‌ಕಾಂಗ್ರೆಸ್ ನಾಯಕರು, ದೂರಿನಲ್ಲಿ ಶಾಸಕರ ಹೆಸರೇ ಇಲ್ಲದಿದ್ದರೂ ಅವರ ಮೇಲೆ ದುರುದ್ದೇಶದಿಂದ ಎಫ್ಐಆರ್ ಹಾಕಿರುವುದು ಯಾವ ಸೀಮೆ ನ್ಯಾಯ ಎಂದು ಅಶೋಕ್ ‌ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಸುಳ್ಳು ಕೇಸುಗಳನ್ನು ಹಾಕುವ ಮೂಲಕ ಬಿಜೆಪಿ ಶಾಸಕರಿಗೆ ಬೆದರಿಕೆ ಹಾಕಬಹುದು ಎಂಬ ಭ್ರಮೆಯಿಂದ ಕಾಂಗ್ರೆಸ್ ಸರ್ಕಾರ ಹೊರಬರಲಿ, ಬಿಜೆಪಿ ಯಾವುದೇ ಅಪರಾಧಿಗಳನ್ನು ರಕ್ಷಿಸುವುದಿಲ್ಲ. ಆರೋಪ ಇದ್ದರೆ ಕಾನೂನು ಪ್ರಕಾರ ತನಿಖೆ ಮಾಡಲಿ, ನ್ಯಾಯಾಲಯದಲ್ಲಿ ಸಾಬೀತು ಮಾಡಲಿ, ಅದು ಬಿಟ್ಟು ಈ ರೀತಿ ದ್ವೇಷ ರಾಜಕಾರಣ ಮಾಡಿ ವಿಪಕ್ಷ ಶಾಸಕರನ್ನು ಟಾರ್ಗೆಟ್ ಮಾಡಿದರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಕೀಳು ಮಟ್ಟದ ರಾಜಕೀಯ- ಅಶೋಕ್ ಟೀಕೆ Read More

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಅಪ್ರಾಪ್ತನನ್ನು ಠಾಣೆಯಿಂದ ಎಳೆತಂದು ಹತ್ಯೆ

ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ ಗುಂಪೊಂದು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದಲೇ ಹೊತ್ತು ತಂದು ಹೊಡೆದು ಕೊಂದ ಬೀಭತ್ಸ ಘಟನೆ ನಡೆದಿದೆ.

ಲೋವರ್ ದಿಬಾಂಗ್ ಕಣಿವೆ ಜಿಲ್ಲೆಯ ರೋಯಿಂಗ್‌ನಲ್ಲಿ ಈ ಘಟನೆ ನಡೆದಿದೆ.

ಕೊಲೆಯಾದವನು ಕಾರ್ಮಿಕ ಹಾಗೂ ಅಪ್ರಾಪ್ತ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ರೋಯಿಂಗ್‌ನ ಮೌಂಟ್ ಕಾರ್ಮೆಲ್ ಶಾಲೆಯ 5 ರಿಂದ 7 ವರ್ಷ ವಯಸ್ಸಿನ ಕನಿಷ್ಠ ಏಳು ಬಾಲಕಿಯರ ಮೇಲೆ ಈ ಪಿಶಾಚಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತಿಳಿದುಬಂದಿದೆ.

ಬಾಲಕಿಯರು ಶಾಲೆಯ ಹಾಸ್ಟೆಲ್‌ನಲ್ಲಿ ತಂಗಿದ್ದರು. ಹೀಗಾಗಿ ಆರೋಪಿ ಮಧ್ಯರಾತ್ರಿಯಲಿ ಹಾಸ್ಟೆಲ್ ಗೆ ನುಗ್ಗಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಾಲಕಿಯರು ಹೊಟ್ಟೆನೋವು ಎಂದು ಆರೋಪಿಸಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಲೈಂಗಿಕ ದೌರ್ಜನ್ಯ ‌ಆಗಿರುವುದು ಬೆಳಕಿಗೆ ಬಂದಿದೆ.

ಕಳೆದ ಗುರುವಾರ ಆರೋಪಿಯನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು.

ಶುಕ್ರವಾರ ಪೋಷಕರು ಮತ್ತು ಸ್ಥಳೀಯರು ಪೊಲೀಸ್ ಠಾಣೆಗೆ ನುಗ್ಗಿ, ಆರೋಪಿಯನ್ನು ಎಳೆದು ತಂದು ತೀವ್ರವಾಗಿ ಥಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೂ ಹಿಂಬಾಲಿಸಿದ ಗುಂಪು ಮತ್ತೆ ಆತನಿಗೆ ಥಳಿಸಿತ್ತು. ಇದರಿಂದಾಗಿ ಅಪ್ರಾಪ್ತ ಮೃತಪಟ್ಟಿದ್ದಾನೆ.

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಅಪ್ರಾಪ್ತನನ್ನು ಠಾಣೆಯಿಂದ ಎಳೆತಂದು ಹತ್ಯೆ Read More

ಪತ್ನಿಯ ಕುತ್ತಿಗೆ ತುಳಿದು ಕೊಂ*ದ ಪಾಪಿ ಪತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊಲೆಗಳು ಸಾಮಾನ್ಯವಾಗಿಬಿಟ್ಟಿದೆ

ಶಾಪಿಂಗ್‌ಗೆ ಹೋಗಿದ್ದಕ್ಕೆ ಪತ್ನಿಯ ಕುತ್ತಿಗೆ ತುಳಿದು‌ ಪತಿರಾಯ ಹೇಯವಾಗಿ ಕೊಂದಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪದ್ಮಜ (29) ಕೊಲೆಯಾದ ಪತ್ನಿ. ಪತಿ ಹರೀಶ್ ಕೊಲೆ ಆರೋಪಿ. ಶಾಪಿಂಗ್ ಹೋಗಿದ್ದಕ್ಕೆ ಕುತ್ತಿಗೆಯನ್ನು ಕಾಲಿನಿಂದ ತುಳಿದು ಉಸಿರು ಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ದಂಪತಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರು. ಸ್ಥಳಕ್ಕೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ,ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗಂಡ,ಹೆಂಡತಿ ಬಿಇ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಕೆಲ ತಿಂಗಳಿನಿಂದ ಗಂಡ ಹರೀಶ್ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಪತ್ನಿಯ ಜತೆಗೆ ಸದಾ ಗಲಾಟೆ ಮಾಡುತ್ತಿದ್ದ. ನೆನ್ನೆ ಶಾಪಿಂಗ್‌ಗೆ ಹೋಗಿ ಬಂದಿದ್ದಕ್ಕೆ ಪತ್ನಿ ಜತೆಗೆ ಹರೀಶ್ ಜಗಳ ತೆಗೆದಿದ್ದಾನೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಪತ್ನಿಯ ಕುತ್ತಿಗೆ ತುಳಿದು ಕೊಂ*ದ ಪಾಪಿ ಪತಿ Read More