ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು

ಬೆಂಗಳೂರು: ಜನತೆಯನ್ನು ಕುಡುಕರನ್ನಾಗಿಸುವ ಸರ್ಕಾರದ ನೀತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷದ‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಮಧ್ಯ ಹಾಗೂ ಡ್ರಗ್ಸ್ ಹಾವಳಿಯಿಂದಾಗಿ ಯುವಜನತೆ ಮತ್ತು ಸಮಾಜ ನೈತಿಕ ಅಧಃಪತನಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಸರ್ಕಾರವು ಮತ್ತಷ್ಟು ಮಧ್ಯದ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.

ಪಕ್ಕದ ತಮಿಳುನಾಡು, ಕೇರಳ ಇನ್ನಿತರ ರಾಜ್ಯಗಳಲ್ಲಿ ಊರಾಚೆ ಮಧ್ಯದ ಅಂಗಡಿಗಳು ಇವೆ. ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಂಪೂರ್ಣ ಮದ್ಯಪಾನ ನಿಷಿದ್ಧವಾಗಿದೆ.ಈ ಹಿಂದೆ ಬಂಗಾರಪ್ಪ ಸರ್ಕಾರದ ಅವಧಿಯಲ್ಲಿ ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಲೈಸೆನ್ಸ್ ಗಳನ್ನು ನೀಡಿದ ಪರಿಣಾಮದಿಂದ ಈಗಾಗಲೇ ಸಮಾಜವು ದುಷ್ಪರಿಣಾಮವನ್ನು ಎದುರಿಸುವಂತಾಗಿದೆ ಎಂದು ಚಂದ್ರು‌ ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರವು ಯುವಜನತೆಯನ್ನು ನಶೆ ಮುಕ್ತರನ್ನಾಗಿಸಲು ಅಲ್ಲಲ್ಲಿ ಕೇಂದ್ರಗಳನ್ನು ತೆರೆಯುವುದನ್ನು ಬಿಟ್ಟು ಸರ್ಕಾರವೇ ಎಂ ಎಸ್ ಐ ಎಲ್ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಮಧ್ಯದ ಅಂಗಡಿಗಳನ್ನು ತೆರೆದು ಜನತೆಯನ್ನು ಮತ್ತಷ್ಟು ಕುಡುಕರನ್ನಾಗಿಸುತ್ತಿದೆ. ಅಲ್ಲದೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ವೈಫಲ್ಯಗಳಿಂದಾಗಿ ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಮಧ್ಯ ರಾಜಾರೋಶವಾಗಿ ಸರಬರಾಜಾಗುತ್ತಿದೆ. ಇವುಗಳನ್ನು ತಡೆಗಟ್ಟುವುದನ್ನು ಬಿಟ್ಟು ಮುಖ್ಯಮಂತ್ರಿಗಳೇ ಮುಂದೆ ನಿಂತು ತಮ್ಮ ಕಮಿಷನ್ ಧನದಾಹದಿಂದ ಮತ್ತಷ್ಟು ಲೈಸೆನ್ಸ್ ಗಳನ್ನು ವಿತರಿಸಲು ಹೊರಟಿರುವುದನ್ನು ರಾಜ್ಯದ ಮಹಿಳೆಯರು ಸೇರಿದಂತೆ ಯಾರು ಸಹ ಒಪ್ಪುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಮಾಜವನ್ನು ಹಾಳು ಗೆಡವಿ ಅಬಕಾರಿ ಆದಾಯದಿಂದಲೇ ಸರ್ಕಾರವನ್ನು ನಡೆಸಲು ಹೊರಟಿರುವ ಮುಖ್ಯಮಂತ್ರಿಗಳ ಆರ್ಥಿಕ ನೀತಿಯ ವಿರುದ್ಧ ಆಮ್ ಆದ್ಮಿ ಪಕ್ಷವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.

ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು Read More

ನಗರಾಭಿವೃದ್ಧಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಗಟ್ಟಲು ಸಿಎಂಗೆ ಆಪ್ ಪತ್ರ

ಬೆಂಗಳೂರು: ಖಾಸಗಿ ಬಡಾವಣೆಗಳ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಸಚಿವರ ಒಪ್ಪಿಗೆ ಪಡೆಯಬೇಕೆಂಬ ನೂತನ ಆದೇಶ ವ್ಯಾಪಕ ಭ್ರಷ್ಟಾಚಾರಕ್ಕೆ ನಾಂದಿ ಮಾಡಿಕೊಡುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.

ರಾಜ್ಯದ ಅನೇಕ ನಗರ, ಪಟ್ಟಣಗಳಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳಿಂದ ಸುಸಜ್ಜಿತವಾದ ಬಡಾವಣೆಗಳು ನಿರ್ಮಾಣವಾಗಿ ಜನತೆಗೆ ಕೈಗೆಟುಕುವ ಬೆಲೆಯಲ್ಲಿ ಸೂರನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿದೆ.

ಇದುವರೆಗೂ1961 ರ ಆರ್.ಡಿ.ಪಿ.ಅರ್ ಕಾಯ್ದೆಯ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರಗಳು ಆಯಾ ಖಾಸಗಿ ನಿವೇಶನಗಳ ನೀಲಿ ನಕಾಶೆಯನ್ನು ತಯಾರಿಸಿ ಅನುಮತಿಯನ್ನು ನೀಡಿ ಖಾಸಗಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿತ್ತು.

ಆದರೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಮ್ಮ ಇತ್ತೀಚಿನ ಸಭೆಯಲ್ಲಿ ರಾಜ್ಯದಲ್ಲಿ ಯಾವುದೇ ಖಾಸಗಿ ಬಡಾವಣೆಗಳ ನಿರ್ಮಾಣಕ್ಕಾಗಿ ಅಂತಿಮ ಅನುಮತಿಯನ್ನು ಸಚಿವಾಲಯದ ಮೂಲಕವೇ ಆಗಬೇಕೆಂದು ಕಾಯ್ದೆಗೆ ತಿದ್ದುಪಡಿ ತರಲು ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಮಂತ್ರಿಗಳ ಈ ನಡೆ ಸಂಪೂರ್ಣವಾಗಿ ಅಧಿಕಾರ ವಿಕೇಂದ್ರೀಕರಣದ ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಬೀಳುವಂತಿದೆ ಎಂದು ಚಂದ್ರು ಸಿಎಂಗೆ ಬರೆದಿರುವ ಪತ್ರದಲ್ಲಿ ತಿಳಿದ್ದಾರೆ.

ನಗರಾಭಿವೃದ್ಧಿ ಸಚಿವಾಲಯದಿಂದ ನೇರವಾಗಿ ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಈ ರೀತಿಯ ತಿದ್ದುಪಡಿಯನ್ನು ಮಾಡಲು ಹೊರಟಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ತಿದ್ದುಪಡಿಯು
ನಗರ/ ಪಟ್ಟಣ ಯೋಜನಾ ಪ್ರಾಧಿಕಾರಗಳ
ಸ್ವಾಯತ್ತತೆಗೆ ಧಕ್ಕೆ ತರುವಂತಿದೆ ಎಂದು ಪತ್ರದಲ್ಲಿ ಮುಖ್ಯ ಮಂತ್ರಿಗಳ ಗಮನ ಸೆಳೆದಿದ್ದಾರೆ.

ತಕ್ಷಣವೇ ತಾವು ಮಧ್ಯಪ್ರವೇಶ ಮಾಡಿ ನಿಮ್ಮ ನಗರಾಭಿವೃದ್ದಿ ಮಂತ್ರಿಯವರ ಕಾಯ್ದೆಯ ತಿದ್ದುಪಡಿಯ ಯೋಚನೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮುಖ್ಯ ಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಈ ಮೂಲಕ ಮುಂದಾಗಬಹುದಾದ ವ್ಯಾಪಕ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಮತ್ತು ವಿಕೇಂದ್ರೀಕರಣದ ಪರಿಕಲ್ಪನೆಯ ಮಹತ್ವವನ್ನು ಎತ್ತಿ ಹಿಡಿಯಬೇಕು ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಗಟ್ಟಲು ಸಿಎಂಗೆ ಆಪ್ ಪತ್ರ Read More

ಅಧಿಕಾರಿಗಳ ನಟ್ಟು,ಬೋಲ್ಟ್ರ್ ಸರಿ ಮಾಡಿ: ಮುಖ್ಯಮಂತ್ರಿ ಚಂದ್ರು ಆಗ್ರಹ

ಬೆಂಗಳೂರು: ಭ್ರಷ್ಟ ಲೋಕಸೇವಾ ಆಯೋಗದ ಅಧಿಕಾರಿಗಳ ನಟ್ಟು ಮತ್ತು ಬೋಲ್ಟ್ ಗಳನ್ನು ಮೊದಲು ಸರಿ ಮಾಡಿ, ಇಲ್ಲದಿದ್ದಲ್ಲಿ ನಾವೆಲ್ಲ ಸೇರಿ ಯಾರ ನಟ್ಟು , ಬೋಲ್ಟ್ ಸರಿ ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯ ಮಂತ್ರಿ ಚಂದ್ರು ಹೇಳಿದರು.

ಲೋಪ ದೋಷದ ಆಯೋಗ, ಲೂಟಿಕೋರರ ಆಯೋಗ, ಅಯೋಗ್ಯರ ಆಯೋಗವಾಗಿ ಮಾರ್ಪಟ್ಟಿರುವ ಲೋಕಸೇವಾ ಆಯೋಗವನ್ನು ಕೂಡಲೇ ರದ್ದು ಮಾಡಬೇಕು,ನೂತನ ಆಯೋಗವನ್ನು ರಚಿಸಬೇಕು,ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡಿ ತಪ್ಪು ಮಾಡಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು
ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಟಿ.ಎ.ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಆದ್ಯತೆ ನೀಡದೆ ಭಾಷಾಂತರ ಮಾಡಿ, ಕೃಪಾಂಕ ನೀಡುವ ಮೂಲಕ ಜಾರಿಕೊಳ್ಳುತ್ತಿರುವ ಇಂತಹ ಅಧಿಕಾರಿಗಳಿಂದ ಪರೀಕ್ಷೆ ಬರೆಸಿದರು ಅವರು ಸಹ ನಾಲ್ಕೈದು ಬಾರಿ ಫೇಲ್ ಆಗುತ್ತಾರೆ. ಇಂತಹ ಅಯೋಗ್ಯರಿಂದಲೆ ಮತ್ತೆ ತಪ್ಪನ್ನು ಸರಿಪಡಿಸುವ ಮುಖ್ಯಮಂತ್ರಿಗಳ ಮಾತು ನಿಜಕ್ಕೂ ಹಾಸ್ಯಾಸ್ಪದ ಎಂದು ಟೀಕಿಸಿದರು.

ತಕ್ಷಣ ಅಮರಣಾಂತ ಉಪವಾಸ ಕೂತಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಅಧಿಕಾರಿಗಳ ನಟ್ಟು,ಬೋಲ್ಟ್ರ್ ಸರಿ ಮಾಡಿ: ಮುಖ್ಯಮಂತ್ರಿ ಚಂದ್ರು ಆಗ್ರಹ Read More

ಗ್ಯಾರೆಂಟಿಗಳ ಖರ್ಚಿನ ಅಂದಾಜೇ ಗೊತ್ತಿಲ್ಲದೆ ಮಂಡಿಸಿದ ದೋಷಪೂರಿತ ಬಜೆಟ್ : ಮು. ಮ ಚಂದ್ರು

ಬೆಂಗಳೂರು, ಮಾ.7: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಈ ಸಾಲಿನ ಬಜೆಟ್ ನಲ್ಲಿ ಪಂಚ ಗ್ಯಾರಂಟಿಗಳ ಖರ್ಚಿನ ನಿಖರ ಮೊತ್ತವೇ ಸರಕಾರಕ್ಕೆ ಗೊತ್ತಿಲ್ಲದಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯ ಮಂತ್ರಿ ಚಂದ್ರು ಟೀಕಿಸಿದ್ದಾರೆ

ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯ ಪ್ರಥಮ ಬಜೆಟ್ ನಲ್ಲಿ ಗ್ಯಾರಂಟಿಗಳಿಗಾಗಿ 17000 ಕೋಟಿ ಎಂದು ಅಂದಾಜು ಮಾಡಿದ್ದರು. ಆದರೆ ಅದು 28,000 ಕೋಟಿ ರೂಪಾಯಿಗಳಿಗೆ ತಲುಪಿತು. ಕಳೆದ ಬಜೆಟ್ ನಲ್ಲಿಯೂ ಸಹ ಗ್ಯಾರೆಂಟಿಗಳಿಗಾಗಿ ಮೀಸಲಿಟ್ಟಿದ್ದ ಹಣಕ್ಕೂ ಖರ್ಚು ಮಾಡಿದ ಹಣಕ್ಕೂ ಶೇ.47 ನಷ್ಟು ಹೆಚ್ಚಾಯಿತು.

ಅಂದರೆ ಈ ಸರ್ಕಾರಕ್ಕೆ ತಾವು ನೀಡುತ್ತಿರುವ ಗ್ಯಾರಂಟಿಗಳಿಗೆ ಎಷ್ಟು ಖರ್ಚಾಗುತ್ತದೆ ಎಂಬ ಪ್ರಾಥಮಿಕ ಅಧ್ಯಯನವೇ ಇಲ್ಲದಂತಹ ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ಘೋಷಿಸಿರುವಂತಹ ಯೋಜನೆ ಎಂಬುದು ಸಾಬೀತಾಗುತ್ತಿದೆ.

ಇದರಿಂದಾಗಿ ಬಜೆಟ್ ಮೀಸಲಿಟ್ಟಿರುವ ಮೊತ್ತಕ್ಕೂ ಖರ್ಚಾಗುವ ಮುತ್ತಕ್ಕೂ ಅಜಗಜಾಂತರ ವ್ಯತ್ಯಾಸವಾಗಿ ಸರ್ಕಾರವು ಆರ್ಥಿಕ ಕೊರತೆಯಿಂದಾಗಿ ತತ್ತರಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಟೀಕಿಸಿದ್ದಾರೆ.

ರಾಜ್ಯದ ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದಾರೆ. ಆದರೆ ಈ ಇಲಾಖೆಯಲ್ಲಿ ಈಗಾಗಲೇ 31,000 ಕೋಟಿ ರೂಗಳನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ವರ್ಷವೂ ಸಹ ಯಾವುದೇ ನಯಾ ಪೈಸೆ ನೀರಾವರಿ ಯೋಜನೆಗಳು ಆಗುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಇದೊಂದು ಬೋಗಸ್ ಬಜೆಟ್ ಎಂದು ಹೇಳಿದ್ದಾರೆ

ಈ ವರ್ಷವೂ ಸಹ 1,06,000 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ. ರಾಜ್ಯದ ಸಾಲದ ಮೊತ್ತ ಈಗ 4,73, 477 ಕೋಟಿ ರೂಪಾಯಿಗಳಾಗಿದೆ. ಪ್ರತಿ ವರ್ಷ ಕೇವಲ ಬಡ್ಡಿ ಪಾವತಿಗಾಗಿ 50,000 ಕೋಟಿ ರೂಪಾಯಿಗಳನ್ನು ನೀಡಬೇಕಾಗಿರುವುದು ರಾಜ್ಯದ ಪಾಲಿನ ಜನತೆಯ ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ತೆರಿಗೆ ಪಾಲು ಸರಿಯಾಗಿ ಬಂದಿಲ್ಲವೆಂದು ಪದೇ ಪದೇ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪ ಮಾಡುತ್ತಲೇ ಇದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸದೆ ಇರುವುದರಿಂದ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ, ಆಸ್ತಿ ತೆರಿಗೆಗಳ ಹೆಚ್ಚಳಕ್ಕಾಗಿ, ನಗರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ನೀಡುವ ಮೊತ್ತಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬೇಕಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಚಂದ್ರು ತಿಳಿಸಿದ್ದಾರೆ.

ಬೆಂಗಳೂರು ನಗರ ಅಭಿವೃದ್ಧಿಗಾಗಿ 7000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಆದರೆ ಸ್ಥಳೀಯ ಆಡಳಿತ ಸಂಸ್ಥೆಯಾದ ಬಿಬಿಎಂಪಿಗೆ ಇದನ್ನು ನೇರವಾಗಿ ನೀಡದೆ ವಿಶೇಷ ಉದ್ದೇಶತ ವಾಹನ ಎಂದು ಪ್ರತ್ಯೇಕಿಸಿ ಈ ಮೂಲಕ ನೇರವಾಗಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ವೃತ್ತಿಪರ ತೆರಿಗೆಯನ್ನು 200 ರೂ ಗಳಿಂದ ಏಕಾಏಕಿ 300 ರೂ.ಗಳಿಗೆ ಏರಿಸಿರುವುದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಆತಂಕ ಪಟ್ಟಿದ್ದಾರೆ‌

23ರ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 14.8 % ಅನುದಾನವನ್ನು ಮೀಸಲು ಇಡಲಾಗಿತ್ತು.
ಆದರೆ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನುಕ್ರಮವಾಗಿ ಕಳೆದ ಮೂರು ಬಜೆಟ್ ಗಳಿಂದ 11 % , 11.7% ಈಗ ಕೇವಲ 10% ಗೆ ಇಳಿಸಿರುವುದು ನಿಜಕ್ಕೂ ಶಿಕ್ಷಣ ಕ್ಷೇತ್ರಕ್ಕೆ ಇವರಿಗಿರುವ ತಾತ್ಸಾರ ಮನೋಭಾವನೆ ಎದ್ದು ಕಾಣುತ್ತದೆ.

ಕಳೆದ ಬಜೆಟ್ ನಲ್ಲಿ 4.9% ನಷ್ಟು ಇದ್ದ ಅನುದಾನವನ್ನು ಈಗ ಕೇವಲ 0.1% ನಷ್ಟು ಏರಿಸಿ 4332 ರೂಗಳನ್ನು ಘೋಷಿಸಿದ್ದಾರೆ. ಆನೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಅನುದಾನದ ಕೊರತೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಯಾವುದೂ ಇಲ್ಲದರ ಪ್ರಾಣವನ್ನು ಒತ್ತೆ ಇಡುವಂತಹ ಪರಿಸ್ಥಿತಿ ಇದೆ ಎಂದು ಜರಿದಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಬೆಂಗಳೂರಿನ ಸುರಂಗ ಮಾರ್ಗ ನಿರ್ಮಾಣಕ್ಕೆ 40,000 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಮುಖ್ಯ ಮಂತ್ರಿ ಚಂದ್ರು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯನವರು ಅನ್ನ ರಾಮಯ್ಯ ಎಂದು ಪ್ರಖ್ಯಾತವಾಗಿರುವ ಅನ್ನಭಾಗ್ಯ ಯೋಜನೆಯನ್ನು ಕೃಷಿ ಇಲಾಖೆಗೆ ನೀಡುವ ಅನುದಾನದಲ್ಲಿ ಸೇರಿಸಿದ್ದಾರೆ. ರೈತರು, ಯಂತ್ರೋಪಕರಣ , ಬೀಜ ,ರಸಗೊಬ್ಬರ , ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವಂತಹ ಸಾಮಗ್ರಿಗಳ ಸಬ್ಸಿಡಿಗಾಗಿ ಈ ಇಲಾಖೆಗೆ ಒದಗಿಸುವ ಅನುದಾನವನ್ನು ಉಪಯೋಗಿಸಬೇಕಿದೆ. ಆದರೆ ಅನ್ನಭಾಗ್ಯ ಯೋಜನೆಗೆ ಮಾತ್ರವೇ 10,000 ಕೋಟಿ ರೂಪಾಯಿಗಳು ಖರ್ಚಾಗುತ್ತದೆ. ರೈತರ ಯಂತ್ರೋಪಕರಣಗಳ ಖರೀದಿಗೆ ಯಾವುದೇ ಸಬ್ಸಿಡಿ ದೊರಕುವುದಿಲ್ಲ. ರಾಜ್ಯದ ಕೋಟ್ಯಾಂತರ ರೈತರುಗಳಿಗೆ ಮಾಡುತ್ತಿರುವ ಮಹಾ ಮೋಸ ಎಂದು ಹೇಳಬಹುದು ಎಂದು ಮುಖ್ಯ ಮಂತ್ರಿ ಚಂದ್ರು‌ ವಿಶ್ಲೇಷಿಸಿದ್ದಾರೆ

ಈ ಬಜೆಟ್ ರಾಜ್ಯದ ರೈತರು, ಜನಸಾಮಾನ್ಯರಿಗೆ ಯಾವುದೇ ವಿಶೇಷವಾದಂತಹ ಅನುಕೂಲಗಳನ್ನು ನೀಡಲಾಗದಂತಹ ದೋಷಪೂರಿತ ಬಜೆಟ್ ಆಗಿದೆ ಎಂದು ಅವರು ಟೀಕಿಸಿದ್ದಾರೆ.

ಗ್ಯಾರೆಂಟಿಗಳ ಖರ್ಚಿನ ಅಂದಾಜೇ ಗೊತ್ತಿಲ್ಲದೆ ಮಂಡಿಸಿದ ದೋಷಪೂರಿತ ಬಜೆಟ್ : ಮು. ಮ ಚಂದ್ರು Read More

ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು – ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು ನಿರರ್ತಕ ಎಂದು
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ ‌

ಮುಖ್ಯಮಂತ್ರಿಗಳು ನಡೆಸುತ್ತಿರುವ ಬಜೆಟ್ ಪೂರ್ವ ಸಭೆಗಳಿಗೆ ಅಲ್ಪಸಂಖ್ಯಾತರ ಮುಖಂಡರುಗಳೊಂದಿಗೆ ಇದುವರೆಗೂ ಸಭೆ ನಡೆಸದಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಾಕಾರಕ್ಕೆ ಧಕ್ಕೆ ತರುವಂತಿದೆ ಎಂದು ಡಾ.ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ದಲಿತ ವರ್ಗ ಹಾಗೂ ಹಿಂದುಳಿದ ವರ್ಗಗಳ ಅನೇಕ ಸಂಘ ಸಂಸ್ಥೆಗಳು ಮತ್ತು ನಾಯಕರುಗಳ ಸಭೆಗಳನ್ನು ನಡೆಸಿ ಅವರುಗಳ ಅನೇಕ ಬೇಡಿಕೆಗಳನ್ನು ಆಲಿಸಿ ಬಜೆಟ್ ಪೂರ್ವ ತಯಾರಿಯನ್ನು ಮುಖ್ಯ ಮಂತ್ರಿಗಳು ನಡೆಸಿದ್ದಾರೆ,ಅದು ಶ್ಲಾಘನೀಯ,ಆದರೆ ಇದೇ ರೀತಿಯಲ್ಲಿ ರಾಜ್ಯದ ಅಲ್ಪಸಂಖ್ಯಾತರುಗಳ ಯಾವುದೇ ಸಭೆಯನ್ನು ಇದುವರೆಗೂ ನಡೆಸದೆ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ. ಕೇವಲ ತಮ್ಮ ಮಂತ್ರಿಮಂಡಲದ ಪ್ರಮುಖ ಸಚಿವರೊಬ್ಬರೇ ಎಲ್ಲಾ ಅಲ್ಪಸಂಖ್ಯಾತರ ಧ್ವನಿ ಎಂಬಂತೆ ಭಾಸವಾಗುತ್ತಿರುವುದು ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಅಲ್ಪಸಂಖ್ಯಾತರುಗಳಲ್ಲಿ ಮುಸ್ಲಿಂ ಜನಾಂಗದೊಂದಿಗೆ ಕ್ರಿಶ್ಚಿಯನ್ ,ಜೈನ್, ಬೌದ್ಧ ,ಪಾರ್ಸಿ, ಸಿಖ್ ಸಮುದಾಯಗಳು ಸಹ ಸೇರಿರುವುದು ಇತ್ತೀಚಿನ ದಿನಗಳಲ್ಲಿ ಆಳುವವರು ಮರೆಯುತ್ತಿರುವಂತಿದೆ. ಆದುದರಿಂದ ಕೂಡಲೇ ಅಲ್ಪಸಂಖ್ಯಾತರ ಎಲ್ಲ ವರ್ಗಗಳ ಮುಖಂಡರುಗಳನ್ನು ಸಂಘ ಸಂಸ್ಥೆಗಳನ್ನು ತಮ್ಮ ಬಜೆಟ್ ಪೂರ್ವ ಸಭೆಗೆ ಕರೆದು ಅವರ ಅನೇಕ ವರ್ಷಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಹಾಗೂ ನೈಜ ಸಾಮಾಜಿಕ ಪರಿಕಲ್ಪನೆಯನ್ನು ಎತ್ತಿ ಹಿಡಿಯಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು – ಮುಖ್ಯಮಂತ್ರಿ ಚಂದ್ರು Read More

ಮೈಕ್ರೋ ಫೈನಾನ್ಸ್ :ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ ಮು.ಮಂ ಚಂದ್ರು

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ಮೈಕ್ರೋ ಫೈನಾನ್ಸ್ ಗಳ ವಸೂಲಿ ದಂಧೆಗಳಿಗೆ ರೈತರು ಆತ್ಮಹತ್ಯೆ ಮಾರ್ಗ ಹಿಡಿದಿರುವುದಕ್ಕೆ ರಾಜ್ಯ ಸರ್ಕಾರ ಹೊಣೆ ಹೊರಬೇಕು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಚಂದ್ರು,ಮೈಕ್ರೋ ಫೈನಾನ್ಸ್‌ ಹಾವಳಿಗೆ ಕೂಡಲೇ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಅಕ್ರಮ ಕಂಪನಿಗಳು ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಾಗಿ ರೈತಾಪಿ ಮಕ್ಕಳ ಮೇಲೆ ಆರ್ ಬಿ ಐ ನಿಯಮಾವಳಿಗಳು ಹಾಗೂ ಈ ನೆಲದ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮ ವಸೂಲಿ, ಬೆದರಿಕೆ, ಅಪಮಾನ ದಂತಹ ಕ್ರಿಮಿನಲ್ ಮಾರ್ಗಗಳಿಂದ ಚಕ್ರ ಬಡ್ಡಿ ವಸೂಲಿ ಮಾಡುತ್ತಿರುವುದು ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯಗೊಂಡಿರುವುದರ ಸಂಕೇತವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸಹಕಾರಿ ಸಂಸ್ಥೆಗಳು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ನೆರವು ನೀಡದೆ ಕೇವಲ ಪ್ರಭಾವಿಗಳ, ಸ್ಥಳೀಯ ಶಾಸಕರುಗಳ ಬಿಗಿ ಮುಷ್ಟಿಯಲ್ಲಿ ಸಿಲುಕಿಕೊಂಡಿವೆ. ಮತ್ತೊಂದು ಕಡೆ ಸರ್ಕಾರದಿಂದ ರೈತಾಪಿ ವರ್ಗಗಳಿಗೆ ಬೆಳೆ ನಷ್ಟ ಪರಿಹಾರಗಳಿಗೆ ಪರಿಣಾಮಕಾರಿ ಯಾದ ಯೋಜನೆಗಳು ತಲುಪದೇ ಅನಿವಾರ್ಯವಾಗಿ ರೈತರು ಸಾಲಕ್ಕಾಗಿ ಇಂತಹ ಅಕ್ರಮ ಫೈನಾನ್ಸ್ ಕಂಪನಿಗಳ ಮೊರೆ ಹೋಗಿ ತಮ್ಮ ಜೀವಗಳನ್ನೇ ಬಲಿ ಕೊಡುವಂತಹ ವಾತಾವರಣ ಹಾಗೂ ಸಂದರ್ಭಗಳು ರಾಜ್ಯದಲ್ಲಿ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪೊಲೀಸ್ ಇಲಾಖೆ ಹಾಗೂ ಕೇಂದ್ರದ ಜಾರಿ ನಿರ್ದೇಶನಾಲಯ ಕಣ್ಮುಚ್ಚಿ ಕುಳಿತಿರುವುದು ಬೇಸರದ ಸಂಗತಿಯಾಗಿದೆ. ಆರಂಭದಲ್ಲೇ ಈ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದರೆ ರೈತರ ಜೀವವನ್ನು ಉಳಿಸಬಹುದಾಗಿತ್ತು. ಆದರೆ ಹಲವು ತಿಂಗಳುಗಳಿಂದ ಸರ್ಕಾರ ಹಾಗೂ ವಿಪಕ್ಷಗಳು ಇಲ್ಲಸಲ್ಲದ ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ,ಹಾಗಾಗಿ ರೈತರ ಆತ್ಮಹತ್ಯೆಗೆ ತಾವುಗಳೇ ನೇರ ಹೊಣೆ ಹೊರಬೇಕೆಂದು ಒತ್ತಾಯಿಸಿದ್ದಾರೆ.

ಕೂಡಲೇ ಕಾನೂನಿನ ಬಿಗಿ ಕುಣಿಕೆಯನ್ನು ಹಣಕಾಸು ಕಂಪನಿಗಳ ವಿರುದ್ಧ ಪ್ರಯೋಗಿಸಬೇಕು ಹಾಗೂ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೆ ಕ್ರಮ ತೆಗೆದುಕೊಳ್ಳಲು ಶೀಘ್ರ ಶಿಫಾರಸ್ಸು ಮಾಡಿ ರೈತರ ಆತ್ಮಹತ್ಯೆ,ಶೋಷಣೆಗಳನ್ನು ತಪ್ಪಿಸಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಮುಖ್ಯ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಮೈಕ್ರೋ ಫೈನಾನ್ಸ್ :ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ ಮು.ಮಂ ಚಂದ್ರು Read More

ಹಂಪಿ ಕನ್ನಡ ವಿವಿ ಉಳಿವಿಗೆ ಕೂಡಲೇ 23 ಕೋಟಿ ಬಿಡುಗಡೆಗೆ ಮು ಮ ಚಂದ್ರು ಆಗ್ರಹ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಕೂಡಲೇ 23 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ

ಕಳೆದ 32 ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಭಾಗವಾದ ಐತಿಹಾಸಿಕ ಸ್ಥಳ ಹಂಪಿಯಲ್ಲಿ ಕನ್ನಡ ನಾಡು, ನುಡಿ ,ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನೆಗೆ ಮೀಸಲಾಗಿ ಈ ಹಂಪಿ ವಿಶ್ವವಿದ್ಯಾಲ ಸ್ಥಾಪನೆಯಾಯಿತು ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಸೂಕ್ತ ಅನುದಾನವಿಲ್ಲದೆ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಲು, ಇವುಗಳನ್ನು ಪ್ರಕಟಿಸಲು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳ ವೇತನ ಹಾಗೂ ದಿನನಿತ್ಯದ ನಿರ್ವಹಣಾ ಕಾರ್ಯಗಳಿಗೆ ತೊಡಕುಂಟಾಗಿದೆ ಹಾಗಾಗಿ ಕೂಡಲೇ 23 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನವನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಪಾದರ್ಪಣೆ ಮಾಡಿ ಇಂದು ಮುಖ್ಯಮಂತ್ರಿಗಳಾಗಿರುವ ಸಂದರ್ಭದಲ್ಲಿ ಕನ್ನಡದ ಕೈಂಕರ್ಯಕ್ಕಾಗಿಯೇ ಮೀಸಲಿಟ್ಟಿರುವ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕುಲಪತಿಗಳು ಪತ್ರ ಬರೆದು ನಂತರ ಸ್ವತಹ ಮುಖ್ಯಮಂತ್ರಿಗಳೇ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದ್ದರೂ ಸಹ ಆರ್ಥಿಕ ಇಲಾಖೆಯಿಂದ ಐದು ತಿಂಗಳಾದರೂ ಅನುದಾನ ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಪತ್ರದಲ್ಲಿ ಚಂದ್ರು ಹೇಳಿದ್ದಾರೆ.

ಇದರಲ್ಲಿ ಎಸ್ಸಿ ಎಸ್ ಪಿ / ಟಿ ಎಸ್ ಪಿ ಯೋಜನೆ ಹಾಗೂ ಗಿರಿಜನ ಉಪ ಯೋಜನೆಗೆ ಮೀಸಲಿಟ್ಟಿರುವ ಹಣವೂ ಸೇರಿದೆ.ಕೂಡಲೇ ಅನುದಾನ ಬಿಡುಗಡೆ ಮಾಡದಿದ್ದಲ್ಲಿ ಕನ್ನಡ ಕಟ್ಟಾಳುವಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಹಂಪಿ ಕನ್ನಡ ವಿವಿ ಉಳಿವಿಗೆ ಕೂಡಲೇ 23 ಕೋಟಿ ಬಿಡುಗಡೆಗೆ ಮು ಮ ಚಂದ್ರು ಆಗ್ರಹ Read More

ಅಂಬೇಡ್ಕರ್ ಬಗೆಗಿನ ಅಮಿತ್ ಶಾ ಅವಹೇಳನ ಭಾಷಣ:ಮುಖ್ಯಮಂತ್ರಿ ಚಂದ್ರು ಖಂಡನೆ

ಬೆಂಗಳೂರು: ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಭಾಷಣ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಮಿತ್ ಶಾ ಅವರನ್ನ ರಾಷ್ಟ್ರದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಕೂಡಲೇ ರಾಜೀನಾಮೆ ನೀಡಬೇಕು ಎಂದು ಅಗ್ರಹಿ ಸಿದರು.

ದೇಶದ ಕೋಟ್ಯಾಂತರ ಭಾರತೀಯರಿಗೆ ಅಂಬೇಡ್ಕರ್ ಅವರು ದೈವ ಸಮಾನರೆಂದು ಪೂಜ್ಯ ಭಾವನೆಯಿಂದ ಅವರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದಾರೆ.

ಸಂವಿಧಾನ ಉಳಿವಿಗಾಗಿ ಆದರ್ಶ ಬದುಕನ್ನು ನಡೆಸುತ್ತಿರುವ ಭಾರತೀಯರಿಗೆ ಅಮಿತ್ ಶಾ ಅವರ ಸಂಸತ್ತಿನ ಭಾಷಣ ಯಾವುದೇ ನಾಗರೀಕ ಸಮಾಜ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಶಾ ಅಂತರಾಳದಲ್ಲಿ ಅಂಬೇಡ್ಕರ್ ಅವರ ಬಗೆಗಿನ ಅಸಮ್ಮತಿ ಅವರ ಭಾಷಣದಲ್ಲಿ ಸ್ಪಷ್ಟವಾಗಿ ಅನಾವರಣಗೊಂಡಿದೆ, ಕೂಡಲೇ ಕೇಂದ್ರದ ಗೃಹ ಸಚಿವರು ರಾಜೀನಾಮೆ ಕೊಡಲೇಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

ಅಂಬೇಡ್ಕರ್ ಬಗೆಗಿನ ಅಮಿತ್ ಶಾ ಅವಹೇಳನ ಭಾಷಣ:ಮುಖ್ಯಮಂತ್ರಿ ಚಂದ್ರು ಖಂಡನೆ Read More