ಪ್ರತ್ಯೇಕ ಬುಡಕಟ್ಟು ಅಕಾಡೆಮಿ ಸ್ಥಾಪನೆಗೆ ಡಾ ಜಾನಪದ ಎಸ್ ಬಾಲಾಜಿ ಆಗ್ರಹ

ಮುದ್ದೇಬಿಹಾಳ: ಕರ್ನಾಟಕದಲ್ಲಿ ಪ್ರತ್ಯೇಕ ಬುಡಕಟ್ಟು ಅಕಾಡೆಮಿ ಸ್ಥಾಪನೆ ಆಗಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಸರ್ಕಾರವನ್ನು ಆಗ್ರಹಿಸಿದರು.

ಮುದ್ದೇಬಿಹಾಳ ಪಟ್ಟಣದ ಅಂಜುಮನ್ ಪದವಿ ಕಾಲೇಜು ಸಭಾಂಗಣದಲ್ಲಿ ಮುದ್ದೇಬಿಹಾಳ ತಾಲೂಕು ಕನ್ನಡ ಜಾನಪದ ಪರಿಷತ್ ಘಟಕ ಏರ್ಪಡಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

12 ಲಕ್ಷಕ್ಕಿಂತ ಹೆಚ್ಚು ಬುಡಕಟ್ಟು ಸಮುದಾಯದವರು ಕರ್ನಾಟಕದಲ್ಲಿದ್ದರೂ ಸಹ ಒಬ್ಬ ಬುಡಕಟ್ಟು ಕಲಾವಿದ ಇದುವರೆಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಆಗದಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ಕರ್ನಾಟಕದಲ್ಲಿ ಬುಡಕಟ್ಟು ಅಕಾಡೆಮಿಯನ್ನು ಪ್ರತ್ಯೇಕವಾಗಿ ಸರ್ಕಾರ ಮಾಡಿದ್ದಲ್ಲಿ ಬುಡಕಟ್ಟು ಕಲಾವಿದರಿಗೆ ಬುಡಕಟ್ಟು ಸಮುದಾಯದ ವಿದ್ವಾಂಸರಿಗೆ ಹೆಚ್ಚು ಮನ್ನಣೆ ಹಾಗೂ ಮಾನ್ಯತೆ ಸಿಗುವ ಸಾಧ್ಯತೆಗಳಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನವಿರುತ್ತದೆ, ಗಿಡಮೂಲಿಕೆಗಳ ಮೂಲಕ ಜನಪದ ಔಷಧಿಯನ್ನು ಪರಿಚಯಿಸಿದ ಕೀರ್ತಿ ಬುಡಕಟ್ಟು ಸಮುದಾಯದವರಿಗೆ ಸೇರುತ್ತದೆ, ಪ್ರಾಣಿ ಪಕ್ಷಿಗಳನ್ನು ಗೌರವಿಸುವ ಸಂಸ್ಕೃತಿಯನ್ನು ನಮಗೆ ಕಳಿಸಿದ್ದೆ ಬುಡಕಟ್ಟು ಸಮುದಾಯದವರು, ಅವರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ನೀಡಲು ಸರ್ಕಾರ ಮುಂದಾಗಬೇಕೆಂದು ಡಾ.ಜನಪದ ಎಸ್.ಬಾಲಾಜಿ ಒತ್ತಾಯಿಸಿದರು ‌

ಸಾಹಿತಿ, ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ್ ನರಗುಂದ್ ಮಾತನಾಡಿ ಬುಡಕಟ್ಟು ಸಮುದಾಯವರಿಂದ ನೈತಿಕ ಪಾಠ ಕಲಿಯಬೇಕಾಗಿದೆ, ಅವರು ಆಧುನಿಕತೆಯ ಭರಾಟೆ ಇದ್ದರೂ ಸಹ ಇಂದಿಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಎಂ ಪಿ ಎಸ್ ಶಾಲಾ ಮುಖ್ಯ ಗುರುಗಳು ಎಂ ಬಿ ಪಾಟೀಲ್ ಮಾತನಾಡಿ ಬುಡಕಟ್ಟು ಸಮುದಾಯದವರಿಗೆ ಸರ್ಕಾರ ಎಲ್ಲ ಗೌರವ ನೀಡಬೇಕೆಂದು ತಿಳಿಸಿದರು.

ದೇವರ ಹುಳಗಬಾಳ ಗ್ರಾಮದ ಸೋಬಾನ ಕಲಾವಿದರು ಸೋಬಾನೆ ಪದಗಳ ಕಾರ್ಯಕ್ರಮ ನೀಡಿದರು.

ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎ ಆರ್ ಮುಲ್ಲಾ, ಖಜಾಂಜಿ ಎಸ್ ವೈ ವಗ್ಗರ್,ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಪುಂಡಲಿಕ ಯು ಮುರಳ್, ನಿವೃತ್ತ ಕಂಟ್ರೋಲರ್ ಕೆ ಬಿ ಬ್ಯಾಟಿ, ಅಂಜುಮನ್ ಕಾಲೇಜಿನ ನಾಯ್ಕೋಡಿ, ಸಹಾಯಕ ಪ್ರಾಧ್ಯಾಪಕ ಗಿರೀಶ್, ತಾಳಿಕೋಟಿ ತಾಲೂಕಿನ ಅಧ್ಯಕ್ಷ ಸಿದ್ದನಗೌಡ ಕಾಶಿನಕುಂಟೆ, ಜಾನಪದ ಯುವ ಬ್ರಿಗೇಡ್ ಬಿಜಾಪುರ ಜಿಲ್ಲಾ ಸಹ ಸಂಚಾಲಕ ಅಯಾಜ್ ಅಹಮದ್ ನಗರದಿನ್ನಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯೇಕ ಬುಡಕಟ್ಟು ಅಕಾಡೆಮಿ ಸ್ಥಾಪನೆಗೆ ಡಾ ಜಾನಪದ ಎಸ್ ಬಾಲಾಜಿ ಆಗ್ರಹ Read More

ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ವೇಳೆ ವ್ಯಕ್ತಿಯ ಎಳೆದೊಯ್ದ ಮೊಸಳೆ!

ಮುದ್ದೇಬಿಹಾಳ: ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ವೇಳೆ ಮೊಸಳೆ ಪ್ರತ್ಯಕ್ಷವಾಗಿ ವ್ಯಕ್ತಿ ಯನ್ನ ಎಳೆದೊಯ್ದ ಘಟನೆ ತಾಲೂಕಿನ ಕುಂಚಗನೂರು ಗ್ರಾಮದ ಬಳಿ ನಡೆದಿದೆ.

ತಾಲೂಕಿನ ಕುಂಚಗನೂರು ಗ್ರಾಮದ ಹತ್ತಿರ ಕೃಷ್ಣಾ ನದಿಯಲ್ಲಿ ಈ ಘಟನೆ ನಡೆದಿದ್ದು,ಗ್ರಾಮಸ್ಥ ಕಾಶಪ್ಪ ಹಣಮಂತ ಕಂಬಳಿ (38) ಎಂಬಾತನನ್ನು ಮೊಸಳೆ ಎಳೆದೊಯ್ದಿದೆ.

ಅಮವಾಸ್ಯೆ ಹಿನ್ನೆಲೆ ಎತ್ತುಗಳಿಗೆ ಮೈತೊಳೆಸಲು ನದಿಗೆ ಇಳಿದಾಗ ದಿಢೀರನೆ ಬಂದ ಮೊಸಳೆ ವ್ಯಕ್ತಿಯನ್ನು ಹಿಡಿದು ನೀರೊಳಗೆ ಹೋಗಿಬಿಟ್ಟಿದೆ.

ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನದಿಯಲ್ಲಿ ದೋಣಿ, ತೆಪ್ಪದ ಮೂಲಕ ಶವಕ್ಕಾಗಿ ಶೋಧ ನಡೆಸಿದ್ದಾರೆ.

ಕಾಶಪ್ಪನಿಗೆ ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನದಿ ದಂಡೆಯಲ್ಲಿ ಸೇರಿದ್ದು ದೇಹಕ್ಕಾಗಿ ಕಾಯುತ್ತಿದ್ದಾರೆ.

ಮುದ್ದೇಬಿಹಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳದಲ್ಲಿದ್ದಾರೆ.

ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ವೇಳೆ ವ್ಯಕ್ತಿಯ ಎಳೆದೊಯ್ದ ಮೊಸಳೆ! Read More

ನಾಳೆ ಮುದ್ದೆಬಿಹಾಳದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ:ಪ್ರಶಸ್ತಿ ಪ್ರದಾನ

ಮುದ್ದೆಬಿಹಾಳ: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಾಳೆ ಸ್ವಾಮಿ ವಿವೇಕಾನಂದ ಅವರ 163ನೇ ಜಯಂತ್ಯೋತ್ಸವದ ಪ್ರಯುಕ್ತ ಸ್ವಾಮಿ ವಿವೇಕಾನಂದ ರಾಷ್ಟ್ರ ಮತ್ತು ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಸಮಾರಂಭವು ಮುದ್ದೇಬಿಹಾಳ ಶ್ರೀ ಸಿದ್ದೇಶ್ವರ ವ್ಹಿಬಿಸಿ ಹೈಸ್ಕೂಲ್ ಮೈದಾನದ ಆವರಣದಲ್ಲಿ ನಾಳೆ ಸಂಜೆ 5 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟ, ಬೆಂಗಳೂರು. ವಿಜಯಪುರ ಜಿಲ್ಲಾ ಹಾಗೂ ತಾಲೂಕು ಘಟಕ ಮುದ್ದೇಬಿಹಾಳ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ. ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ಜಾನಪದ ಯುವ ಬ್ರಿಗೇಡ್ ಹಾಗೂ ಸಾಧನ ಮಹಿಳಾ ಒಕ್ಕೂಟ ಮುದ್ದೆಬಿಹಾಳ ಮತ್ತು ಧರ್ಮ ಯುದ್ಧ ದಿನಪತ್ರಿಕಾ ಬಳಗ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಒಟ್ಟು 13 ಮಂದಿಗೆ 2025 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಅಲ್ಲದೆ 26 ಮಂದಿಗೆ 2025 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ ನೀಡಲಾಗುತ್ತದೆ.

ಇದೇ ವೇಳೆ ರಾಷ್ಟ್ರೀಯ ಜಾನಪದ ಶ್ರೀ ಪ್ರಶಸ್ತಿ, ರಾಷ್ಟ್ರೀಯ ಯುವ ಜಾನಪದ ಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

ಸಮಾರಂಭದ ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಸಿದ್ದನಕೊಳ್ಳ ನಿರಂತರ ದಾಸೋಹ ಹಾಗೂ ಕಲಾ ಪೋಷಕರ ಮಠದ ಡಾ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್ ತಂಗಡಗಿ ನೆರವೇರಿಸುವರು,ಅಧ್ಯಕ್ಷತೆಯನ್ನು ಶಾಸಕರಾದ ಸಿ ಎಸ್ ನಾಡಗೌಡ್ರ(ಅಪ್ಪಾಜಿ) ವಹಿಸುವರು.

ಧರ್ಮ ಯುದ್ದ ದಿನದರ್ಶಿಕೆ ಲೋಕಾರ್ಪಣೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಮಾಡುವರು. ಪ್ರಶಸ್ತಿ ಪ್ರದಾನವನ್ನು ವಿಜಯಪುರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ನೀಡುವರು.

ಸಾಂಸ್ಕೃತಿಕ ಯುವ ವೈಭವ ಉದ್ಘಾಟನೆಯನ್ನು ಚಲನಚಿತ್ರ ನಟ ಗುರುರಾಜ ಹೊಸಕೋಟೆ ನೆರವೇರಿಸುವರು. ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ಚ.ದೇಸಾಯಿ ಮತ್ತು ಮುದ್ದೇಬಿಹಾಳ ಸಮಾಜ ಸೇವಕ ನೇತಾಜಿ ಆರ್ ನಲವಡೆ ನೆರವೇರಿಸುವರು.

ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಮುದ್ದೇಬಿಹಾಳ ಸಮಾಜ ಸೇವಕರಾದ ಸಂಗೀತ ನಾಡಗೌಡ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಿತ್ತೂರು ಕರ್ನಾಟಕ ಅಧ್ಯಕ್ಷರಾದ ಕಾಶಿಬಾಯಿ ರಾಂಪೂರ ನೆರವೇರಿಸಲಿದ್ದಾರೆ.

ನಾಳೆ ಮುದ್ದೆಬಿಹಾಳದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ:ಪ್ರಶಸ್ತಿ ಪ್ರದಾನ Read More