ಮುಡಾದಲ್ಲಿ ಮತ್ತೊಂದು ಪ್ರಕರಣ ಬಯಲಿಗೆ

ಮೈಸೂರು: ಮುಡಾದಲ್ಲಿನ ಅಕ್ರಮ ಸೈಟು ಹಂಚಿಕೆ ಹಗರಣದ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.

ಮುಡಾದ ಸಿಬ್ಬಂದಿ ಹಾಗೂ ನೌಕರರೇ
ದಾಖಲೆಗಳನ್ನ ತಿರುಚಿ‌ ನಕಲಿ‌ ದಾಖಲೆ ಸೃಷ್ಠಿಸಿ ಕೋಟಿ ಕೋಟಿ ಹಣ ಗುಳುಂ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮುಡಾ ಪ್ರಾಧಿಕಾರಕ್ಕೆ ಗ್ರಾಹಕರು ಕಟ್ಟಿದ್ದ ಹಣವನ್ನ ಮುಡಾ ಸಿಬ್ಬಂದಿ ಮತ್ತು ನೌಕರರು ನುಂಗಿದ್ದು, ಬೇಲಿಯೇ ಎದ್ದು‌ ಹೊಲ ಮೇಯ್ದಂತೆ ಆಗಿದೆ.

ಈ ಹಗರಣ ಸಂಬಂಧ ಆರ್ ಟಿ ಐ ಕಾರ್ಯಕರ್ತ ಗಂಗರಾಜು ದಾಖಲೆ ಬಿಡುಗಡೆ ಮಾಡಿದ್ದಾರೆ. ಗ್ರಾಹಕರು ತಮ್ಮ ನಿವೇಶನಗಳಿಗೆ ಸೇವೆ ಪಡೆಯಲು ಸಿ ಆರ್, ಖಾತೆ ವರ್ಗಾವಣೆ, ಟೈಟಲ್‌ ಡೀಡ್ ಸೇವೆ ಪಡೆಯಲು ಲಕ್ಷ- ಲಕ್ಷ ಹಣ‌ ಕಟ್ಟಿದ್ದರು.

ಆದರೆ ಮುಡಾ ಸಿಬ್ಬಂದಿ ಬ್ಯಾಂಕಿನ ಖಾತೆಗೆ ಹಣ ಕಟ್ಟದೆ ಗ್ರಾಹಕರನ್ನೇ ಯಾಮಾರಿಸಿ, ನಕಲಿ ಚಲನ್ ಗಳನ್ನು ಸೃಷ್ಠಿ ಮಾಡಿ ಹಣ ದೋಚಿದ್ದಾರೆ.

5 ಕೋಟಿಗೂ ಅಧಿಕ ಹಣವನ್ನ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿಚಿತ್ರವೆಂದರೆ ಪ್ರಕರಣದಲ್ಲಿ ಗ್ರಾಹಕರ ಮೇಲೆಯೇ ಎಫ್ ಐ ಆರ್ ದಾಖಲು ಮಾಡಲಾಗಿದೆ.

ಮುಡಾ ಪ್ರಾಧಿಕಾರದಿಂದ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಮ್ಮ ಮೇಲೆ ದೂರು‌ ದಾಖಲಾದ ಬಳಿಕ ಗ್ರಾಹಕರು ಕಂಗಾಲಾಗಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ‌ ಬಗ್ಗೆ ಸೂಕ್ತ ‌ತನಿಖೆ ನಡೆಸಿ ಸತ್ಯ ಬಯಲಿಗೆ ತಂದು ಗ್ರಾಹಕರಿಗೆ ನ್ಯಾಯ ಕೊಡುವರೆ ಕಾದು ನೋಡಬೇಕಿದೆ.

ಮುಡಾದಲ್ಲಿ ಮತ್ತೊಂದು ಪ್ರಕರಣ ಬಯಲಿಗೆ Read More

ಮುಡಾ‌ 9 ಕಡೆ ಇಡಿ ಅಧಿಕಾರಿಗಳ ದಾಳಿ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಳಿ ಮುಂದುವರಿಸಿದ್ದಾರೆ.

ಇಡಿ ಅಧಿಕಾರಿಗಳು ಸೋಮವಾರ ಬೆಳ್ಳಂಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಸೇರಿ 9 ಕಡೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.

ಇಡಿ ಅಧಿಕಾರಿಗಳು ಮುಡಾದ 50:50 ನಿವೇಶ ಹಂಚಿಕೆಯಲ್ಲಿ ಅಕ್ರಮ ಆರೋಪ ಪ್ರಕರಣ ಸಂಬಂಧ ಮುಡಾ ಮಾಜಿ ಆಯುಕ್ತರಾದ ಡಾ.ನಟೇಶ್, ದಿನೇಶ್ ಹಾಗೂ ಬಿಲ್ಡರ್ ಮಂಜುನಾಥ್ ಅವರುಗಳ ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು ಜತೆಗೆ ಸಿಎಂ ಆಪ್ತ ರಾಕೆಶ್ ಪಾಪಣ್ಣ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ.

ಮೈಸೂರಿನ ಹಿನಕಲ್ ಗ್ರಾಮದಲ್ಲಿರುವ ರಾಕೇಶ್ ಪಾಪಣ್ಣ ನಿವಾಸದ ಮೇಲೆ ಹೆಚ್ಚು ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ,ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ‌ಸಾಮಾಜಿಕ ಕಾರ್ಯಕರ್ತ‌ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಮುಡಾ‌ 9 ಕಡೆ ಇಡಿ ಅಧಿಕಾರಿಗಳ ದಾಳಿ Read More

ಪಾರ್ವತಿ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ

ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿರುದ್ಧ ಆರ್​ಟಿಐ ಕಾರ್ಯಕರ್ತ ಗಂಗರಾಜು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಸಿಎಂ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅನುಮೋದಿತ 20 ಗುಂಟೆ ಜಾಗವನ್ನು ಖರೀದಿ ಮಾಡಿದ್ದಾರೆ. ಅದರಲ್ಲಿ ರಸ್ತೆ ಮತ್ತು ಪೈಪ್‌ ಲೈನ್​ಗೆ ಸೇರಿದ್ದ ಜಾಗವನ್ನು ರಿಜಿಸ್ಟರ್‌ ಮಾಡಿಕೊಂಡಿದ್ದು, ಆ ವಿಚಾರ ತಿಳಿಯುತ್ತಿದ್ದಂತೆ ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ದಾಖಲೆ ಸಮೇತ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿ ಪಾರ್ವತಿ ಮುಡಾ ಅನುಮೋದಿತ 20 ಗುಂಟೆ ಜಾಗವನ್ನು 29.6.2023 ರಲ್ಲಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೆಆರ್​ಎಸ್ ರಸ್ತೆಯಲ್ಲಿರುವ ಸರ್ವೆ ನಂಬರ್‌ 454 ರಲ್ಲಿ ಗಣೇಶ್‌ ದೀಕ್ಷಿತ್‌ ಎಂಬುವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗದಲ್ಲಿ, 20 ಗುಂಟೆ ಜಾಗವನ್ನ 1 ಕೋಟಿ 85 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. 20 ಗುಂಟೆ ಅಂದರೆ 21,771/99 ಚದರ್ ಅಡಿ​ ಜಾಗದ ಪೈಕಿ 8998 ಚದರ್​ ಅಡಿ ರಸ್ತೆ ಮತ್ತು ಪೈಪ್‌ ಲೈನ್‌ ಜಾಗವಾಗಿದ್ದು, ಅದನ್ನು ಸೇರಿಸಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಈ ಬಗ್ಗೆ ಆರ್​ಟಿಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆ ಪಾರ್ವತಿ ಅವರು 31.08.2024 ರಲ್ಲಿ ಮುಡಾಗೆ ಸೇರಿದ ರಸ್ತೆ ಮತ್ತು ಪೈಪ್ ಲೈನ್‌ ಜಾಗವನ್ನ ಬಿಟ್ಟು ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಪಾರ್ವತಿ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ Read More

ಮುಡಾ:ಅಧಿಕಾರಿಗಳು,ಆರೋಪಿಗಳ ಪಾಸ್ ಪೋರ್ಟ್ ವಶಕ್ಕೆ ಅಶೋಕ್ ಆಗ್ರಹ

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಆರೋಪಿಗಳು, ಸಂಭವನೀಯ ಸಾಕ್ಷಿದರರ ಪಾಸ್ ಪೋರ್ಟ್ ಗಳನ್ನು ವಶಕ್ಕೆ ಪಡೆಯಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ ಇದು ಅಗತ್ಯವಿದೆ ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.

ಮೂಡಾದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನ ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ,ಜತೆಗೆ ಮೈಸೂರಿನ ಮೂಡಾ ಕಚೇರಿ,ತಾಲ್ಲೂಕು ಕಚೇರಿಗೂ ಭೇಟಿ ನೀಡಿ ದಾಖಲೆಗಳ ಪರಿಶೀಲನಾ ಕಾರ್ಯ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವವರು, ಅವರ ಕುಟುಂಬ ಸದಸ್ಯರು, ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿರುವುದರಿಂದ, ಈ ಪ್ರಕರಣ ಎಷ್ಟು ಗಂಭೀರವೋ ಅಷ್ಟೆ ಸೂಕ್ಷ್ಮವೂ ಆಗಿದೆ,ಹಾಗಾಗಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ ಸಂಬಂಧಪಟ್ಟ ಎಲ್ಲರ ಪಾಸ್ ಪೋರ್ಟ್ ಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅಶೋಕ್ ಮನವಿ ಮಾಡಿದ್ದಾರೆ.

ಮುಡಾ:ಅಧಿಕಾರಿಗಳು,ಆರೋಪಿಗಳ ಪಾಸ್ ಪೋರ್ಟ್ ವಶಕ್ಕೆ ಅಶೋಕ್ ಆಗ್ರಹ Read More

ಮೂಡಾದಲ್ಲಿ ಎರಡನೇ ದಿನವೂ ಇಡಿ ಶೋಧ ಕಾರ್ಯ ಮುಂದುವರಿಕೆ

ಮೈಸೂರು: ಮೈಸೂರಿನ ಮೂಡಾದಲ್ಲಿ ಎರಡನೇ ದಿನವೂ ಇಡಿ ಶೋಧ ಕಾರ್ಯ ಮುಂದುವರಿದಿದೆ.

ಶನಿವಾರ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ನೀಡಲಾಗಿರುವ ಹದಿನಾಲ್ಕು ನಿವೇಶನಗಳ ದಾಖಲಾತಿಯಲ್ಲಿ ಒಂದು ಪತ್ರಕ್ಕೆ ವೈಟ್ನರ್ ಹಾಕಿರುವ ಕುರಿತು ಮಾಹಿತಿ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

ವೈಟ್ನರ್ ಹಿಂದೆ ಇರುವ ಪದಗಳ ಬಗ್ಗೆ ಇಡಿ ಅಧಿಕಾರಿಗಳು ಮೂಡ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಮೂಲ ದಾಖಲಾತಿಯನ್ನು ನೀಡುವಂತೆ ಇಡಿ ಅಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬದಲಿ ನಿವೇಶನಕ್ಕೆ ಯಾರು,ಯಾರು ಶಿಫಾರಸು ಮಾಡಿದ್ದಾರೆ,ಮೂಡದಲ್ಲಿ ಈ ನಿವೇಶನಕ್ಕಾಗಿ ಶಿಫಾರಸು ಮಾಡಿರುವ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

ಮೂಡ ಆಯುಕ್ತ ರಘು ನಂದನ್ ಅವರು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮುಡಾ ಕಚೇರಿ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮೂಡಾದಲ್ಲಿ ಎರಡನೇ ದಿನವೂ ಇಡಿ ಶೋಧ ಕಾರ್ಯ ಮುಂದುವರಿಕೆ Read More

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣ ಅಲ್ಲ:ಅಶೋಕ್

ಬೆಂಗಳೂರು: ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣ ಅಲ್ಲ,3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರದ್ದೂ ಸೇರಿದಂತೆ ಸುಮಾರು 1,200 ಕ್ಕೂ ಅಧಿಕ ನಿವೇಶನಗಳ ಹಗರಣ ನಡೆದಿದೆ ಎಂಬ ದೂರು ಬಂದಿದ್ದರಿಂದ ದಾಳಿ ಮಾಡಲಾಗಿದೆ ಎಂದು ತಿಳಿಸಿದರು.

3-4 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಮುಡಾ ಅಧ್ಯಕ್ಷರಾಗಿದ್ದ, ಕಾಂಗ್ರೆಸ್‌ನವರೇ ಆದ ಮರಿಗೌಡ ಪತ್ರದಲ್ಲಿ ತಿಳಿಸಿದ್ದರು. ಅದಾದ ಬಳಿಕ ಸ್ನೇಹಮಯಿ ಕೃಷ್ಣ ಇಡಿಗೆ ದೂರು ನೀಡಿದ್ದಾರೆ. ಇದರಲ್ಲಿ ರಾಜಕೀಯದ ಪ್ರಶ್ನೆ ಉದ್ಭವವೇ ಆಗುವುದಿಲ್ಲ. ಇದರಲ್ಲಿ ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲ ಎಂದು ತಿಳಿಸಿದರು.

ಇದನ್ನು ರಾಜಕೀಯವಾಗಿ ನೋಡಬಾರದು, ನಿವೇಶನಗಳು ವಾಪಸ್‌ ಸಿಕ್ಕರೆ ಹಾಗೂ ಹಣ ಸಿಕ್ಕರೆ ರಾಜ್ಯ ಸರ್ಕಾರಕ್ಕೆ ಲಾಭವಾಗುತ್ತದೆ. ಸರ್ಕಾರದಲ್ಲಿ ಖಜಾನೆ ಖಾಲಿಯಾಗಿ ಸಂಬಳ ಕೊಡಲಾಗದ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಖಜಾನೆಗೆ ಹಣ ಬಂದರೆ ಒಳ್ಳೆಯದು. ಇದನ್ನು ಕಾಂಗ್ರೆಸ್‌ನವರು ಸ್ವಾಗತಿಸಬೇಕು. ಇದನ್ನು ರಾಜಕಾರಣ ಎನ್ನಲು ಬಿಜೆಪಿ ನಾಯಕರೇನೂ ದೂರು ನೀಡಿಲ್ಲವಲ್ಲಾ ಎಂದು ಅಶೋಕ್ ಹೇಳಿದರು.

ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂದಾದರೆ 3-4 ಸಾವಿರ ಕೋಟಿ ರೂ. ಹಣದ ಅಕ್ರಮ ನಡೆದಿರುವುದು ಹೇಗೆ ನಿವೇಶನ ಮಂಜೂರಾಗಿದೆ ಎಂದಮೇಲೆ ಅದರ ಹಣ ಯಾರಿಗಾದರೂ ಸಿಕ್ಕೇ ಸಿಕ್ಕಿರುತ್ತದೆ. ಅದಕ್ಕೆ ನಗದಿನಲ್ಲಿ ಹಣ ನೀಡಲಾಗಿರುತ್ತದೆ. ಅಂತಹ ನಗದು ಕಪ್ಪು ಹಣವೇ ಆಗಿರುತ್ತದೆ. ಇಡಿ ಬಗ್ಗೆ ಪ್ರಶ್ನೆ ಮಾಡುವವರು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದಿತ್ತು, ಆದರೆ ಸಿಎಂ ಸಿದ್ದರಾಮಯ್ಯನವರು ಕೋರ್ಟ್‌ಗೆ ಹೋಗಲೇ ಇಲ್ಲ ಎಂದು ಅಶೋಕ್ ತಿಳಿಸಿದರು.

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣ ಅಲ್ಲ:ಅಶೋಕ್ Read More

ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಿರುವ ಸೈಟ್​ಗಳ ರದ್ದಿಗೆ ಶ್ರೀವತ್ಸ ಆಗ್ರಹ

ಮೈಸೂರು: ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಲಾಗಿರುವ ಸೈಟ್​ಗಳನ್ನು ರದ್ದು ಮಾಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಿದ್ದೇನೆ ಶಾಸಕ ಶ್ರೀವತ್ಸ ತಿಳಿಸಿದ್ದಾರೆ.

1,400ಕ್ಕೂ ಹೆಚ್ಚು 50:50 ಅನುಪಾತದ ಸೈಟ್​ಗಳಿವೆ ಎಂಬ ವದಂತಿಗಳು ಹರಡಿವೆ,ಆ ಎಲ್ಲ ಸೈಟ್​ಗಳನ್ನು ‌ಮುಡಾ ಆಸ್ತಿ ಎಂದು‌ ಇ.ಸಿ.ಯಲ್ಲಿ ಬರುವ ಹಾಗೆ ನೋಡಿಕೊಳ್ಳಬೇಕು ಎಂದು ಮನವಿ‌ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸಬ್ ರಿಜಿಸ್ಟರ್ ಕಚೇರಿಯಲ್ಲಿ ‌ಈ ಅನುಪಾತದ ಯಾವುದೇ ಸೈಟ್ ಅನ್ನು ಎರಡನೇ ಸಲ ನೊಂದಣಿ ಮಾಡಿಕೊಳ್ಳಬಾರದು ಎಂದು‌ ಸುತ್ತೋಲೆ ಹೊರಡಿಸಿ ಎಂದು ಕೋರಿದ್ದೇನೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಟೆಕ್ನಿಕಲ್ ಕಮಿಟಿ ವರದಿಯನ್ನು ಆದಷ್ಟು ಬೇಗ ಜಾರಿಗೆ ತಂದು ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಬೇಕು. ಇಬ್ಬರು ಮುಡಾ ಕಮಿಷನರ್​​ಗಳನ್ನು ಇನ್ನೂ ಕೂಡ ಉಳಿಸಿಕೊಂಡಿದ್ದಾರೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈಗಾಗಲೇ ಮುಡಾ ಅಧ್ಯಕ್ಷರ ತಲೆ ದಂಡ ಆಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ ಎಂದು ಅವರೇ ಹೇಳಿದ್ದಾರೆ. ಅವರಿಗೆ ಬರುವ ಸೂಚನೆ ಮುಡಾದಲ್ಲಿನ ಇಬ್ಬರು ಕಮಿಷನರ್​ಗೆ ಏಕೆ ಬರುವುದಿಲ್ಲ ಎಂದು ಶ್ರೀವತ್ಸ ಪ್ರಶ್ನಿಸಿದ್ದಾರೆ.

ಸಿಎಂ ಮತ್ತು ನಗರಾಭಿವೃದ್ಧಿ ಸಚಿವರನ್ನು ಆ ಇಬ್ಬರು ಕಮಿಷನರ್​ಗಳು ನೀವು ನಮ್ಮ ಹೆಸರು ಹೇಳಿದರೆ ನಾವು ನಿಮ್ಮ ಭಷ್ಟಾಚಾರಗಳನ್ನು ಹೊರತರುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿವೆ. ಅದಕ್ಕಾಗಿ ಕಮಿಷನರ್​ಗಳನ್ನು ಮುಟ್ಟಿಲ್ಲ ಎಂದು ಕಾಣಿಸುತ್ತಿದೆ. ಈ ಎಲ್ಲ ಕಾರಣಗಳಿಂದ ತಕ್ಷಣವೇ ತನಿಖೆ ನಡೆಸಬೇಕು ಎಂದು ಒತ್ತಾಯುಸಿದ್ದೇನೆ ಶಾಸಕರು ತಿಳಿಸಿದ್ದಾರೆ.

ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಿರುವ ಸೈಟ್​ಗಳ ರದ್ದಿಗೆ ಶ್ರೀವತ್ಸ ಆಗ್ರಹ Read More

ಮುಡಾ ಕಚೇರಿ‌‌ ಮೇಲೆ ಇಡಿ ದಾಳಿ:ದಾಖಲೆ ಪರಿಶೀಲನೆ

ಮೈಸೂರು: ಮೈಸೂರಿನ ಮೂಡ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ಶುಕ್ರವಾರ ಇ.ಡಿ ಅಧಿಕಾರಿಗಳು ಮುಡಾ ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಮುಡಾ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ದಾಳಿ ನಡೆದಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ಮೇರೆಗೆ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಮುಡಾ ಅಧಿಕಾರಿಗಳಿಗೆ ಇಡಿ 3 ಬಾರಿ ನೋಟೀಸ್ ನೀಡಿ, ಒಂದು ಬಾರಿ ಸಮನ್ಸ್ ಕೊಟ್ಟಿತ್ತು, ದಾಖಲಾತಿ ನೀಡುವಂತೆ ಸೂಚಿಸಿತ್ತು.ಆದರೆ ದಾಖಲೆ ಕೊಡದ ಹಿನ್ನೆಲೆಯಲ್ಲಿ ಮುಡಾ ಮೇಲೆ ದಾಳಿ ಮಾಡಲಾಗಿದೆ.

೨೦ ಇಡಿ ಅಧಿಕಾರಿಗಳ ತಂಡ ದಾಳಿಯಲ್ಲಿ ಪಾಲ್ಗೊಂಡಿದ್ದು ಮುಡಾದಲ್ಲಿನ ಸೈಟು ಹಂಚಿಕೆ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮುಡಾದಲ್ಲಿ ೨ ಸಾವಿರ ಕೋಟಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ದೂರು ದಾಖಲಿಸಿಕೊಂಡು ದಾಖಲಾತಿಗಳಪರಿಶೀಲಿಸುತ್ತಿದ್ದಾರೆ.
ಶನಿವಾರ ಕೂಡಾ ಪರಿಶೀಲನೆ ಮುಂದುವರಿಯಲಿದೆ.

ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರದಲ್ಲಿ ೧೪ ಸೈಟುಗಳನ್ನು ನೀಡಲಾಗಿದೆ ಎಂಬ ಪ್ರಕರಣ ಸೇರಿದಂತೆ ಮುಡಾದಲ್ಲಿ ನಡೆದಿರುವ ಹಗರಣಗಳನ್ನು ಬಗ್ಗೆ ಇಡಿ ತನಿಖೆ ನಡೆಸಲಿದೆ.

ಇದೇ ವೇಳೆ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಮನೆಯ ಮೇಲೂ ಇ.ಡಿ ದಾಳಿ ನಡೆಸಿದೆ.

ಮುಡಾ ಮೇಲಿನ ಇಡಿ ದಾಳಿಯಿಂದ ಎಲ್ಲಾ ಪಕ್ಷಗಳ ಮುಖಂಡರ ಬಣ್ಣ ಬಯಲಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ದಾಳಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್, ಇಡಿ ಅಧಿಕಾರಿಗಳು ಬೆಳಿಗ್ಗೆ ಕಚೇರಿ ವೇಳೆಯಲ್ಲಿ ಆಗಮಿಸಿದ್ದಾರೆ. ದಾಖಲೆ ಪರಿಶೀಲಿಸುತ್ತಿದ್ದು,ತನಿಖೆ ಕೈಗೊಂಡಿದಾರೆ. ಅವರು ಕೇಳುವ ಎಲ್ಲಾ ಮಾಹಿತಿಯನ್ನು ನಾವು ಒದಗಿಸುತ್ತೇವೆ ಎಂದು ತಿಳಿಸಿದರು.

ಮುಡಾ ಕಚೇರಿ‌‌ ಮೇಲೆ ಇಡಿ ದಾಳಿ:ದಾಖಲೆ ಪರಿಶೀಲನೆ Read More

ಮುಡಾ ಹಗರಣದಲ್ಲಿ ಸಿಎಂ ಸೇರಿ ಎಲ್ಲಾ ರಾಜೀನಾಮೆ ಕೊಡುತ್ತಾರೆ:ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಹಗರಣದಲ್ಲಿ ಮರಿಗೌಡ ಅಷ್ಟೇ ಅಲ್ಲ ಸಚಿವ ಮಹದೇವಪ್ಪ ಕೂಡ ರಾಜೀನಾಮೆ ಕೊಡ್ತಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಮುಡಾ ಹಗರಣದಲ್ಲಿ ಸಿಎಂ ಸೇರಿ ಎಲ್ಲರೂ ಕೂಡ ರಾಜೀನಾಮೆ ಕೊಟ್ಟು ಜೈಲಿಗೆ ಹೋಗುವ ಸಮಯ ಬರತ್ತದೆ ಎಂದು‌ ಹೇಳಿದರು.

ಸಚಿವ ಮಹದೇವಪ್ಪ ಕೂಡ ಅಕ್ರಮಗಳಿಗೆ ಸಹಕಾರ ನೀಡಿದ್ದಾರೆ,ಅವರ ತಮ್ಮನ ಮಗ ನವೀನ್ ಬೋಸ್ ಹೆಸರಲ್ಲಿ ಸೆಟೆಲ್ ಮೆಂಟ್ ಡೀಡ್ ಮೂಲಕ ಸೈಟ್ ಪಡೆದುಕೊಂಡಿದ್ದಾರೆ. ಇದಕ್ಕೆ ಮಹದೇವಪ್ಪ ಸಹಕಾರ ಇದೆ ಎಂದು ಸ್ನೇಹಮಯಿ‌ ಕೃಷ್ಣ ಆರೋಪಿಸಿದರು.

ಸಿಎಂ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬುದಾಗಿ ಮರಿಗೌಡ ಹೇಳಿರುವುದು ಸುಳ್ಳು, ತಪ್ಪು ಮಾಡಿದ್ದಾರೆ ಅದಕ್ಕೇನೆ ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ ಎಂದು ತಿಳಿಸಿದರು.

ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ಲಕ್ಷ್ಮಣ್ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ,ಆತ ಅಯೋಗ್ಯ,ಇಂತಹುದಕ್ಕೆಲ್ಲ ನಾನು ಹೆದರುವುದಿಲ್ಲ. ಲಕ್ಷ್ಮಣ್ ಸುಮ್ಮನೆ ಆರೋಪ ಮಾಡ್ತಾರೆ,ಇದುವರೆಗೆ ಒಂದು ದಾಖಲೆ ಬಿಡುಗಡೆ ಮಾಡಿಲ್ಲ.ಅವರಿಗೆ ತಾಕ್ಕತ್ತಿದ್ದರೆ ನನ್ನ ಮೇಲೆ ದಾಖಲೆ ಕೊಟ್ಟು ಮಾತನಾಡಲಿ‌ ಎಂದು ಸ್ನೇಹಮಯಿ ಕೃಷ್ಣ ಸವಾಲು ಹಾಕಿದರು.

ಮುಡಾ ಹಗರಣದಲ್ಲಿ ಸಿಎಂ ಸೇರಿ ಎಲ್ಲಾ ರಾಜೀನಾಮೆ ಕೊಡುತ್ತಾರೆ:ಸ್ನೇಹಮಯಿ ಕೃಷ್ಣ Read More

ಸಿದ್ದರಾಮಯ್ಯರನ್ನ ವಿಚಾರಣೆಗೆ ಒಳಪಡಿಸಲು ಸ್ನೇಹಮಯಿ ಕೃಷ್ಣ ಮನವಿ

ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ವಿಚಾರಣೆಗೆ ಒಳಪಡಿಸಬೇಕೆಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮನವಿ ಸಲ್ಲಿಸಿದ್ದಾರೆ.

ಸೋಮವಾರ ಮೈಸೂರಿನ ಲೋಕಾಯುಕ್ತ ಕಚೇರಿಗೆ ಬಂದಿದ್ದ ಸ್ನೇಹಮಹಿ ಕೃಷ್ಣ ಲೋಕಾಯುಕ್ತಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರು ಸಾಕ್ಷಿ ನಾಶ ಮಾಡುತ್ತಿದ್ದಾರೆ, ಭಾಷಣದಲ್ಲಿ ಪ್ರಚೋದನೆ ನೀಡುತ್ತಿದ್ದಾರೆ. ಸುಳ್ಳು ಜಾಹೀರಾತು ನೀಡುತ್ತಿದ್ದಾರೆ ಹಾಗಾಗಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ
ಎಂದು ಆಗ್ರಹಿಸಿದರು.

ಲೋಕಾಯುಕ್ತ ಕಚೇರಿಗೆ ಕೂಡಲೆ ಸಿಸಿಟಿವಿ ಅಳವಡಿಸಬೇಕು ಎಂದು ಅವರು ಸ್ನೇಹಮಯಿ ಕೃಷ್ಣ ಒತ್ತಾಯಿಸಿದರು.

ಸಿದ್ದರಾಮಯ್ಯರನ್ನ ವಿಚಾರಣೆಗೆ ಒಳಪಡಿಸಲು ಸ್ನೇಹಮಯಿ ಕೃಷ್ಣ ಮನವಿ Read More