ಮುಡಾ ಅಕ್ರಮ:ಮತ್ತೊಂದ ಪ್ರಕರಣ ಬಯಲು

ಮೈಸೂರು: ಮುಡಾ ಅಕ್ರಮ ಹಗರಣ ಕುರಿತು ಲೋಕಾಯುಕ್ತ ತನಿಖೆ ನಡೆಯತ್ತಿರುವಾಗಲೆ ಮತ್ತೊಂದ ಪ್ರಕರಣ ಬಯಲಾಗಿದೆ.

ಭೂಮಿಯನ್ನೇ ವಶಕ್ಕೆ ಪಡೆಯದೆ ಕೋಟ್ಯಾಂತರ ರೂ. ಮೌಲ್ಯದ ಸೈಟ್ ಗಳನ್ನ ನೀಡಿದ ಮತ್ತೊಂದು ಪ್ರಕರಣ ಬಯಲಾಗಿದೆ.

ಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್ ಅವರು ಸುಳ್ಳು ದಾಖಲೆ ಸೃಷ್ಠಿಸಿ 50:50 ಯಲ್ಲಿ ಸೈಟ್ ಗಳನ್ನ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ
ಈ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ, ವಕೀಲ ರವಿಕುಮಾರ್, ಮುಡಾ ಮಾಜಿ ಉದ್ಯೋಗಿ ಪಿ.ಎಸ್.ನಟರಾಜ್ ಮಾತನಾಡಿದರು.

ನಾನು ಕೇವಲ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿಲ್ಲ. ಮುಡಾ ಪ್ರಕರಣದಲ್ಲಿ ಜೆಡಿಎಸ್ ವಿರುದ್ಧವೂ ಹೋರಾಡಿದ್ದೆ. ಈಗ ಬಿಜೆಪಿ ವಿರುದ್ಧವೂ ಹೋರಾಟ ಮಾಡುತ್ತಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

ಮುಡಾ 50:50 ಹಗರಣ ಪ್ರಕರಣ ಸಂಬಂಧ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಸಿ.ರಮೇಶ್ ಅಕ್ರಮ ಎಸಗಿದ್ದಾರೆ. ಮುಡಾದ 50:50 ಅನುಪಾತದಲ್ಲಿ ಅಕ್ರಮವಾಗಿ ಸೈಟ್ ಪಡೆದಿದ್ದಾರೆ.

ಎಂ.ಸಿ.ರಮೇಶ್ ವಿರುದ್ಧ ಮೊದಲ ಐಟಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ‌ ಸಿಬಿಐಗೂ ಕೂಡ ವರ್ಗಾವಣೆ ಆಗುತ್ತದೆ. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲೇಬೇಕು ಎಂದು ಅವರು ಒತ್ತಾಯಿಸಿದರು.

ಮುಡಾವನ್ನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಂದು ತೆಗೆದು ಹಾಕಿ. ಉಳ್ಳವರ ಆಸ್ತಿ ರಕ್ಷಣೆಯ ಪ್ರಾಧಿಕಾರ ಎಂದು ಮಾಡಿಬಿಡಲಿ ಎಂದು ಕೃಷ್ಣ ಟೀಕಿಸಿದರು.

ಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್ ವಿರುದ್ಧ ಕಿಡಿ ಕಾರಿದ ವಕೀಲ ರವಿಕುಮಾರ್, ಮುಡಾದ ಪಾದಯಾತ್ರೆಯಲ್ಲಿ ರಮೇಶ್ ಭಾಗಿಯಾಗಿದ್ದರು. ದೊಡ್ಡ ದೊಡ್ಡ ವಿಪಕ್ಷ ನಾಯಕರ ಜೊತೆ ಬೆಂಗಳೂರಿನಿಂದ ಮೈಸೂರಿಗೆ ಹೆಜ್ಜೆ ಹಾಕಿದ್ದರು. ಮುಡಾದ ಅಕ್ರಮ ಕುರಿತು ತನಿಖೆ ನಡೆಸಿ ಎಂದು ಪ್ರತಿಭಟನೆಯಲ್ಲಿ‌ ಭಾಗಿಯಾಗಿ ನಾಟಕವಾಡಿದ್ದಾರೆ. ಮಗನನ್ನೇ ಅಪ್ಪ ಮಾಡಿ ಮುಡಾ ಸೈಟ್ ಪಡೆದುಕೊಂಡಿದ್ದಾರೆ.1994 ರಲ್ಲಿ ವಶಪಡಿಸಿಕೊಳ್ಳಲಾಗಿದೆ‌ ಎಂಬ ಭೂಮಿ 2023ಕ್ಕೆ ಜಿಪಿಎ, 30 ವರ್ಷದ ಬಳಿಕ ಎಂ.ಸಿ‌.ರಮೇಶ್ ಎಂಬವರಿಗೆ ಭೂಮಿ ಜಿಪಿಎ ಮಾಡಲಾಗಿದೆ. ಕೇವಲ 3000 ರೂಪಾಯಿಗೆ ಅಧಿಕಾರಿಗಳು ಕ್ರಯ ಮಾಡಿಕೊಟ್ಟಿದ್ದಾರೆ.60/90 ಅಳತೆಯ ಎರಡು ಸೈಟ್ ನೀಡಿರುವ ಮುಡಾದ ಏಕೈಕ ಪ್ರಕರಣ ಇದಾಗಿದೆ ಎಂದು ಹೇಳಿದರು.

50:50 ಪ್ರಕರಣದಲ್ಲಿ 50/60 ಗಿಂತ ದೊಡ್ಡ ಅಳತೆಯ 20/30 ಗಿಂತ ಚಿಕ್ಕ ಅಳತೆಯ ಸೈಟ್ ನೀಡುವಂತಿಲ್ಲ. ಈ ಮೂಲಕ ಮುಡಾದ ನಿಯಮಾವಳಿ ಗಳನ್ನ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ಬಸವನಹಳ್ಳಿ ಸರ್ವೆ ನಂಬರ್ 121ರಲ್ಲಿ 1 ಎಕರೆ 2 ಗುಂಟೆ ಕಳೆದುಕೊಂಡಿದ್ದಾರೆಂದು‌ ಸುಳ್ಳು ದಾಖಲೆ ಸೃಷ್ಠಿಸಿ, ಮುಡಾ ಮಾಲೀಕರಾದ ಮೇಲೆ 30 ವರ್ಷದ ಬಳಿಕ ಎಂ.ಸಿ.ರಮೇಶ್ ಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ವಿಜಯನಗರ ಎರಡನೇ ಹಂತದಲ್ಲಿ ಅಡಿಗೆ 10 ಸಾವಿರಕ್ಕೂ‌ ಹೆಚ್ವು ಬೆಲೆ ಬಾಳುವ ಸೈಟ್ ಗಳು ಕೇವಲ 3 ಸಾವಿರ ರೂಪಾಯಿಗೆ ನೀಡಿದ್ದಾರೆ. 60/90 ಅಳತೆಯ ಸೈಟ್ ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ವಕೀಲ ರವಿಕುಮಾರ್ ಹೇಳಿದರು.

ಮುಡಾದ ಮಾಜಿ ಉದ್ಯೋಗಿ ಪಿ.ಎಸ್.ನಟರಾಜ್ ಮಾತನಾಡಿ, ಎಂ.ಸಿ.ರಮೇಶ್ ಎಂಬವರು ರೈತರಿಗೆ ವಂಚನೆ ಮಾಡಿದ್ದಾರೆ. ಭೂಮಿ ಕಳೆದುಕೊಂಡ‌ ರೈತನಿಗೆ ನೀಡುವ ಬದಲು ಜಿಪಿಎ ಪಡೆದುಕೊಂಡು ನಿವೇಶನ ಪಡೆದುಕೊಂಡಿದ್ದಾರೆ, ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಎಂದು ದೂರಿದರು.

ನಿವೃತ್ತ ನೌಕರರ ಸಂಘದಿಂದ ರಮೇಶ್ ಅವರಲ್ಲಿ‌ ಮನವಿ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಕುಟುಂಬ ಸೈಟ್ ವಾಪಸ್ ನೀಡಿದ ರೀತಿ ವಾಪಸ್ ನೀಡಿ ಎಂದು ಪತ್ರ ಬರೆಯಲಾಗುತ್ತದೆ. ಅವರು ನಮ್ಮ ಅಹವಾಲು ಸ್ವೀಕರಿಸಬೇಕು. ಇಲ್ಲವಾದರೆ ಅವರ ಸವಾಲನ್ನ ನಾವು ಸ್ವೀಕರಿಸುತ್ತೇವೆ. ಅವರ ಮನೆಯ ಎದುರು ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಮುಡಾಗೆ ಪ್ರತ್ಯೇಕ ಕಾಯ್ದೆ ರಚಿಸುವ ಸರ್ಕಾರದ ತೀರ್ಮಾನ ನಿಜಕ್ಕೂ ಸಂತೋಷದ ವಿಚಾರ. ಮುಡಾದಿಂದ ರಾಜಕಾರಣಿಗಳನ್ನ ದೂರವಿಡಿ ಎಂದು ಹೇಳಿದರು.

ಮುಡಾ ಅಕ್ರಮ:ಮತ್ತೊಂದ ಪ್ರಕರಣ ಬಯಲು Read More

ಕೇವಲ 3 ಸಾವಿರಕ್ಕೆ ಉದ್ಯಮಿಗೆ 60*40 ಅಳತೆಯ 23 ಸೈಟ್ ಬರೆದುಕೊಟ್ಟ ಮುಡಾ

ಮೈಸೂರು: ಮುಡಾ ಸೈಟ್ ಅಕ್ರಮ ಹಗರಣ ಬಗೆದಷ್ಟು ಬಯಲಾಗುತ್ತಿದ್ದು,ಕೋಟಿ,ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಕೇವಲ 3,000 ಗೆ ಮಾರಾಟ ಮಾಡಲಾಗಿದ್ದು,ತೀವ್ರ ಚರ್ಚೆಗೆ‌ ಗ್ರಾಸ‌ ಒದಗಿಸಿದೆ.

ಮೈಸೂರಿನಲ್ಲಿ 60*40 ಸೈಟ್‌ಗಳು ಕಡ್ಲೆಪುರಿಗಿಂತಲೂ ಕಡೆಯಾಗಿಬಿಟ್ಟಿದೆ. ಮೂರು ಸಾವಿರಕ್ಕೆ ಒಂದರಂತೆ ಸುಮಾರು 23 ಸೈಟ್‌ಗಳನ್ನ ರಿಯಲ್ ಎಸ್ಟೇಟ್ ಉದ್ಯಮಿಗೆ ಮುಡಾ ಬರೆದುಕೊಟ್ಟಿದೆ.

ಮುಡಾ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಬಡಾವಣೆ ಮಂಜುನಾಥ್‌ನಿಂದ ಮಹಾ ಭೂಗಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ.

5 ದಿನದಲ್ಲಿ ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಒಂದು ಸೈಟ್‌ಗೆ 3 ಸಾವಿರದಂತೆ 23 ಸೈಟ್‌ಗಳನ್ನು ಉದ್ಯಮಿ ಮಂಜುನಾಥ್‌ಗೆ ಮುಡಾ ರಿಜಿಸ್ಟೇಷನ್ ಮಾಡಿಕೊಟ್ಟಿದೆ.

ಕ್ರಯ ಪತ್ರದಲ್ಲಿ ಮಂಜುನಾಥ್ ಯಾವ ಜಾಗ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯೇ ಇಲ್ಲ. ಸುಮ್ಮನೆ ಪ್ರೋತ್ಸಾಹದಾಯಕ ಎಂದು ನಮೂದಿಸಿ ಸೈಟ್‌ಗಳನ್ನು ರಿಜಿಸ್ಟರ್ ಮಾಡಲಾಗಿದೆ.

ಎರಡೆರೆಡು ದಿನಗಳ ಅಂತರದಲ್ಲಿ ಒಟ್ಟು 6 ದಿನದಲ್ಲಿ ಪ್ರಾಧಿಕಾರಕ್ಕೆ ಸೇರಿದ ಎಲ್ಲಾ 23 ಸೈಟಗಳು ಉದ್ಯಮಿ ಮಂಜುನಾಥ್ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ.

ಕೇವಲ 600 ರೂಪಾಯಿ ಶುಲ್ಕ ಕಟ್ಟಿಸಿಕೊಂಡು ಸೈಟ್ ಮಾರಾಟ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ನಿವೇಶನಕ್ಕೆ ಕನಿಷ್ಟ 97 ಲಕ್ಷ ನಷ್ಟ ಆಗಿದೆ.

5 ಲಕ್ಷ ಶುಲ್ಕ ಪಾವತಿ ಸ್ಥಳದಲ್ಲಿ ಕೇವಲ 600 ರೂಪಾಯಿ ಪಾವತಿಯಾಗಿದೆ. ಉಪ ನೋಂದಣಾಧಿಕಾರಿ ಶಾಮಿಲಿನಿಂದ ಭಾರಿ ಅಕ್ರಮ ಶಂಕೆ ವ್ಯಕ್ತವಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್‌ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಬರೆದುಕೊಟ್ಟಿರುವ ನಿವೇಶನಗಳ ವಿವರ
5.04.2023 ರಂದು 6040 ಅಳತೆಯ ಮೂರು ನಿವೇಶನ. 6.04.2023 ರಂದು 6040 ಅಳತೆಯ ಮೂರು ನಿವೇಶನ.
18.04.2023ರಂದು 6040 ಅಳತೆಯ 8 ನಿವೇಶನ. 19.04.2023 ರಂದು 6040 ಅಳತೆಯ 9 ನಿವೇಶನ ಸೇರಿ ಒಟ್ಟು
23 ನಿವೇಶನಗಳು ರಿಜಿಸ್ಟರ್ ಮಾಡಿಕೊಡಲಾಗಿದೆ.

ಕೇವಲ 3 ಸಾವಿರಕ್ಕೆ ಉದ್ಯಮಿಗೆ 60*40 ಅಳತೆಯ 23 ಸೈಟ್ ಬರೆದುಕೊಟ್ಟ ಮುಡಾ Read More

ಮುಡಾ ಹಗರಣ:ಮಹತ್ವದ ದಾಖಲೆ ಲಭ್ಯ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಹತ್ವದ ದಾಖಲೆ ಲಭ್ಯವಾಗಿದೆ.

ಮುಡಾದಿಂದ ಒಟ್ಟು 1095 ಸೈಟುಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಅಕ್ರಮವಾಗಿ ನೀಡಲಾಗಿರುವ ಸೈಟ್ ಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಗೆ 14 ಸೈಟ್ ಗಳನ್ನು ಹಸ್ತಾಂತರಿಸಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ಮೂಲಗಳು‌ ತಿಳಿಸಿವೆ

ಮುಡಾದಲ್ಲಿ ನಡೆದಿರುವ ಅಕ್ರಮ ಸೈಟುಗಳ ತನಿಖೆ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ನೀಡಿ ಈ ಕುರಿತು ತನಿಖೆ ನಡೆಸುವಂತೆ ಇಡಿ ಸೂಚಿಸಿದೆ

1095 ಸೈಟುಗಳ ಬೇನಾಮಿ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ, ಭೂ ಪರಿವರ್ತನೆ, ಸಹಿಗಳ ಫೋರ್ಜರಿ ಸೇರಿದಂತೆ ಇನ್ನೂ ಹಲವು ಸಾಕ್ಷಾಧಾರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್‌.ಜಿ ದಿನೇಶ್ ಕುಮಾರ್ (ಕುಮಾರ್) ಅವರು ಈ ಪ್ರಕ್ರಿಯೆಯಲ್ಲಿ ಅನಗತ್ಯವಾಗಿ ಪ್ರಭಾವ ಬೀರಿದ್ದಾರೆ ಎಂಬುದಕ್ಕೂ ಸಾಕ್ಷಿಗಳು ದೊರೆತಿವೆ ಎಂದು ಇಡಿ ತನ್ನ ವರದಿಯಲ್ಲಿ ತಿಳಿಸಿದೆ.

ಮುಡಾ ಹಗರಣ:ಮಹತ್ವದ ದಾಖಲೆ ಲಭ್ಯ Read More

ಮುಡಾ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ಐಎಎಸ್ ಅಧಿಕಾರಿ ದೀಪಾ ಚೋಳನ್

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಕರಣ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಡಾ ದಾಖಲೆ ತಿದ್ದಿದ ಆರೋಪದ ಮೇಲೆ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಇದೀಗ ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ದಾಖಲೆಗಳ ಸಮೇತ ದೀಪಾ ಚೋಳನ್ ಹಾಜರಾಗಿ ವಿಚಾರಣೆ ಎದುರಿಸಿದರು.

ಮುಡಾ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ಐಎಎಸ್ ಅಧಿಕಾರಿ ದೀಪಾ ಚೋಳನ್ Read More

ಮುಡಾ ತನಿಖಾ ವರದಿ ನ್ಯಾಯಾಲಯಕ್ಕೆ

ಮೈಸೂರು: ಮುಡಾ 50:50 ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.

ಈ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಕೋರ್ಟ್ ನ.26ಕ್ಕೆ ಡೆಡ್ ಲೈನ್ ನೀಡಿದ್ದು ಲೋಕಾಯುಕ್ತ ಎಸ್ ಪಿ ಉದೇಶ್ ಬೆಂಗಳೂರಿಗೆ ತೆರಳಿ ವರದಿ ಸಲ್ಲಿಸಲಿದ್ದಾರೆ.

ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಲಿರುವ ಲೋಕಾಯುಕ್ತ ಎಸ್ಪಿ ಉದೇಶ್ ಸುಮಾರು 400 ಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಕೆ ಮಾಡಲಿದ್ದಾರೆ.

ವರದಿಯಲ್ಲಿ ಎ1 ಆರೋಪಿ ಸಿದ್ದರಾಮಯ್ಯ, ಎ2 ಆರೋಪಿ ಬಿ.ಎನ್.ಪಾರ್ವತಿ, ಎ3 ಆರೋಪಿ ಮಲ್ಲಿಕಾರ್ಜುನ ಸ್ವಾಮಿ , ಎ4 ಆರೋಪಿ ದೇವರಾಜು ಅವರ ಪೂರ್ಣ ವಿಚಾರಣಾ ವರದಿ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ, ಕೆಸರೆ ಸರ್ವೆ ನಂಬರ್ 464 ರ 3.16 ಎಕರೆ ಭೂಮಿ‌ ಸರ್ವೆ, ವಿಜಯನಗರದ 14 ಸೈಟ್ ಗಳ ಸರ್ವೆ ಕಾರ್ಯ, ಈ ಹಿಂದೆ ಸಚಿವರಾಗಿದ್ದ ಬಚ್ಚೇಗೌಡರ ವಿಚಾರಣಾ‌ ವರದಿ, ಹಿಂದಿನ ಆಯುಕ್ತರಾದ ನಟೇಶ್, ಪಾಲಯ್ಯ ಅವರ ಹೇಳಿಕೆ , ಹಿಂದಿನ ಅಧ್ಯಕ್ಷರಾದ ದ್ರುವಕುಮಾರ್ ಅವರಿಗೆ ನೀಡಿರುವ ನೋಟಿಸ್, ಹಿಂದೆ ಮುಡಾದಲ್ಲಿ ಕೆಲಸ ಮಾಡಿರುವ ಅಧಿಕಾರಿಗಳ ವಿಚಾರಣೆ, ಮುಡಾದಲ್ಲಿ ದಾಖಲೆಗಳ ಸಂಗ್ರಹದ ವರದಿ, ಅಧಿಕಾರಿಗಳು ಈವರಗೆ ನಡೆಸಿರುವ ವಿಚಾರಣೆ, ತನಿಖೆಯ ವರದಿಯನ್ನು ನ್ಯಾಯಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ನಾಳೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಮುಖ ದಿನವಾಗಿದ್ದು,ಮಂಗಳವೊ ಅಮಂಗಳವೊ ಕಾದು ನೋಡಬೇಕಿದೆ.

ನಾಳೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರು ಕೇಳುವ ಪ್ರಶ್ನೆಗೆ ಉತ್ತರಿಸಬೇಕಿದೆ.

ಮುಡಾ ತನಿಖಾ ವರದಿ ನ್ಯಾಯಾಲಯಕ್ಕೆ Read More

ಸಿಎಂ ವಿರುದ್ದ ಮತ್ತೊಂದು ದಾಖಲೆ ಬಿಡುಗಡೆ

ಮೈಸೂರು: ಮುಡಾ ಹಗರಣದ ಬಗ್ಗೆ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ದಾಖಲೆ ಬಿಡುಗಡೆ ಮಾಡಿದ್ದಾರೆ.

ಸಿಎಂ ಪ್ರಭಾವ ಬೀರಿದ್ದರಿಂದ ಡಿಸಿಯಾಗಿದ್ದ ಕುಮಾರನಾಯಕ ಅವರು ಭೂಮಿಯನ್ನು ಅನ್ಯ ಕ್ರಾಂತ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಭೂಮಿಯನ್ನು ಅನ್ಯಾಕ್ರಂತ ಮಾಡಬಾರದೆಂದು ದಾಖಲೆ ಇದ್ದರೂ ಸಹ ಅದನ್ನು 2005ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕುಮಾರನಾಯಕ್ ಅವರು ಅನ್ಯಕ್ರಾಂತ ಮಾಡಿದ್ದಾರೆ ಎಂದು ಸ್ನೇಹ ಕೃಷ್ಣ ಆರೋಪಿಸಿದ್ದಾರೆ.

ಸಿಎಂ ವಿರುದ್ದ ಮತ್ತೊಂದು ದಾಖಲೆ ಬಿಡುಗಡೆ Read More

ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳ ವಿಚಾರಣೆಗೆ ಲೋಕಾ ನಿರ್ಧಾರ

ಮೈಸೂರು: ಮುಡಾ ಹಗರಣದಲ್ಲಿ ಮಾಜಿ ಆಯುಕ್ತರಿಗೂ ಸಂಕಷ್ಟ ಶುರುವಾಗಿದೆ, ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳ ವಿಚಾರಣೆಗೆ ಲೋಕಾಯುಕ್ತ ಎಸ್ಪಿ ಉದೇಶ್ ಮುಂದಾಗಿರುವುದೆ ಇದಕ್ಕೆ ಕಾರಣ.

ಕೆಲ ದಿನಗಳ ಹಿಂದೆ ಮುಡಾ ಆಯುಕ್ತರಾಗಿ ನಿವೃತ್ತರಾಗಿದ್ದ ಸಧ್ಯ ಜೆಎಸ್ಎಸ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿಯಾಗಿರುವ ಸಿ.ಜಿ.ಬೆಟ್ಸೂರ್ ಮಠ್ ಅವರನ್ನು ಲೋಕಾಯುಕ್ತ ಎಸ್ಪಿ ಉದೇಶ್ ಅವರು ವಿಚಾರಣೆಗೊಳಪಡಿಸಿದ್ದರು.

ಈ ಹಿಂದೆ ಮುಡಾ ಆಯುಕ್ತರಾಗಿ ಹೆಚ್ಚುವರಿ ಪ್ರಭಾರ ವಹಿಸಿದ್ದರಿಂದ ಹೇಳಿಕೆ ನೀಡಲು ಅವರನ್ನು ಕರೆಸಿ,ಅರ್ಧ ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತು.

ಮುಡಾ ಮಾಜಿ ಆಯುಕ್ತ ನಟೇಶ್ ಅವರಿಗೆ ನೋಟಿಸ್ ನೀಡಿದ ಬೆನ್ನಲ್ಲೆ ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿಂದಿನ ಆಯುಕ್ತರು ಹಾಗೂ ಅಧಿಕಾರಿಗಳಿಗೆ ನೋಟಿಸ್ ನೀಡಲು ಲೋಕಾಯುಕ್ತ ಎಸ್ಪಿ ಉದೇಶ್ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಆಯುಕ್ತರಾಗಿದ್ದ ಡಾ.ಮಹೇಶ್, ಪಿ.ಎಸ್.ಕಾಂತರಾಜ್, ದಿನೇಶ್ ಸೇರಿದಂತೆ ಒಟ್ಟಾರೆ 2010 ರಿಂದ ಈವರೆಗೆ ಮುಡಾದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಎಲ್ಲಾ ಅಧಿಕಾರಿಗಳಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳ ವಿಚಾರಣೆಗೆ ಲೋಕಾ ನಿರ್ಧಾರ Read More

ಮುಡಾ ಹಗರಣ:ಇಡಿ ಮುಂದೆಕೆ.ಮರೀಗೌಡ ವಿಚಾರಣೆಗೆ ಹಾಜರು

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಇದೀಗ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ವಿಚಾರಣೆಗೆ ಹಾಜರಾಗಿದ್ದಾರೆ.

ಬೆಂಗಳೂರಿನ ಇಡಿ ಕಚೇರಿಗೆ ಮುಡಾ ಮಾಜಿ ಅಧ್ಯಕ್ಷ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ಸಿಎಂ ಪತ್ನಿಗೆ ಸೈಟ್ ಹಂಚಿಕೆ ಬಗ್ಗೆ ವಿಚಾರಣೆ ನಡೆದಿದೆ.

ಇತ್ತಚೆಗಷ್ಟೆ ಕೆ. ಮರೀಗೌಡ ಅವರು ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ಮುಡಾ ಪ್ರಕರಣವನ್ನ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಈಗಾಗಲೇ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಅವರನ್ನ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಈಗ ಇಡಿ ಅಧಿಕಾರಿಗಳು ಮರಿಗೌಡ ವಿಚಾರಣೆ ನಡೆಸಿರುವುದು‌ ಇನ್ನಷ್ಟು ಕುತೂಹಲ ಕೆರಳಿಸಿದೆ.

ಮುಡಾ ಹಗರಣ:ಇಡಿ ಮುಂದೆಕೆ.ಮರೀಗೌಡ ವಿಚಾರಣೆಗೆ ಹಾಜರು Read More

ಮುಡಾ ಪ್ರಕರಣ:ಮತ್ತೊಂದು ಸಾಕ್ಷಿ ಬಹಿರಂಗ ಪಡಿಸಿದ ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾದಲ್ಲಿ ಸಿಎಂ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಸಾಕ್ಷಿ ಬಹಿರಂಗಪಡಿಸಿದ್ದು ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದಂತಾಗಿದೆ.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಕ್ರಯಪತ್ರದ ಮುದ್ರಾಂಕದ ಶುಲ್ಕವನ್ನು ತಹಶೀಲ್ದಾರ್ ಅವರೇ ಪಾವತಿಸಿದ್ದಾರೆಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಮುಡಾದಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಪಡೆದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಸಿಎಂ ಪತ್ನಿ ಪಾರ್ವತಿ ಅವರ ಕ್ರಯಪತ್ರದ ಮುದ್ರಾಂಕ ಶುಲ್ಕವನ್ನು ತಹಶೀಲ್ದಾರರು ಪಾವತಿ ಮಾಡಿದ್ದಾರೆ ಎಂದು ದೂರಿದ್ದಾರೆ.

ಅದೇ ರೀತಿ ಮತ್ತೊಂದು ಕ್ರಯಪತ್ರದ ಉದಾಹರಣೆ ನೀಡಿ ದೂರುದಾರ ಆರೋಪಿಸಿದ್ದಾರೆ. ಆ ಕ್ರಯ ಪತ್ರದಲ್ಲಿ ನೋಂದಣಿ ಮಾಡಿಸಿಕೊಂಡ ವ್ಯಕ್ತಿಯಿಂದ ಹಣ ಪಾವತಿಯಾಗಿದೆ ಎಂದಿದ್ದಾರೆ.

ಸಿಎಂ ಪತ್ನಿ ವಿಚಾರದಲ್ಲಿ ಮುಡಾ ವಿಶೇಷ ತಹಶೀಲ್ದಾರ್‌ರಿಂದ ಹಣ ಪಾವತಿಯಾಗಿದೆ. ನನ್ನ ಆರೋಪಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ.

ಮುಡಾ ಪ್ರಕರಣ:ಮತ್ತೊಂದು ಸಾಕ್ಷಿ ಬಹಿರಂಗ ಪಡಿಸಿದ ಸ್ನೇಹಮಯಿ ಕೃಷ್ಣ Read More

ಮುಡಾದಲ್ಲಿ ಫೈಲ್ ಸುಟ್ಟು ಹಾಕಿದ್ದಾರೆ : ಶ್ರೀವತ್ಸ ಆರೋಪ

ಮೈಸೂರು: ಮುಡಾದಲ್ಲಿ ಕೆಲವು ಸೈಟ್‌ಗಳ ದಾಖಲಾತಿಗಳನ್ನು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿರುವ ಶಾಸಕ ಶ್ರೀವತ್ಸ, 50:50 ಅನುಪಾತದಲ್ಲಿ ಮನೆ ಕಟ್ಟುವುದಕ್ಕೆ ಅನುಮತಿ ನೀಡಬೇಡಿ ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ಸೈಟ್‌ಗಳ ದಾಖಲೆಗಳ ತೆಗೆದುಕೊಂಡು ಹೋಗಿದ್ದಾರೆ ಎಂದು ಮುಡಾ ಸಭೆಯಲ್ಲೇ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ನಡುವೆ 50:50 ಅನುಪಾತದಲ್ಲಿ ಮನೆ ನಿರ್ಮಿಸಲು ನಕ್ಷೆಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು. ಈಗಾಗಲೇ ನಕ್ಷೆಗೆ ಅನುಮತಿ ಪಡೆದು ಕಾಮಗಾರಿ ಮಾಡುತ್ತಿರುವವರಿಗೆ ತಡೆಯಾಜ್ಞೆ ನೀಡಿ ಎಂದು ಮನವಿ ಮಾಡಿದ್ದಾರೆ.

250 ರಿಂದ 300 ಮಂದಿ ಮನೆ ಕಟ್ಟುವುದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ಖಾಲಿ ಸೈಟ್‌ ಇದ್ದರೆ ಮುಡಾ ಜಪ್ತಿ ಮಾಡಿಕೊಳ್ಳುವುದು ಸುಲಭ ಆಗುತ್ತದೆ. ಒಂದು ವೇಳೆ ನಿರ್ಮಾಣ ಕಾಮಗಾರಿ ನಡೆದಿದ್ದರೆ ಅದನ್ನು ಕಟ್ಟದಂತೆ ತಡೆಯಬೇಕಾಗುತ್ತದೆ. ಈ ಎರಡೂ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾನು ಮನವಿ ಪತ್ರ ಕೊಟ್ಟಿದ್ದೇನೆ ಎಂದು ತಿಳಿಸಿದರು.

ಮುಡಾದಲ್ಲಿ ಫೈಲ್ ಸುಟ್ಟು ಹಾಕಿದ್ದಾರೆ : ಶ್ರೀವತ್ಸ ಆರೋಪ Read More