ಮೈಸೂರು: ರೋಟರಿ ಮೈಸೂರು ಅಂಬಾರಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ನ.2 ರಂದು ಸಂಜೆ ಬೃಂದಾವನ ಬಡಾವಣೆಯ, ರೋಟರಿ ಬೃಂದಾವನ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ರೋ.ಪಿಎಚ್ಎಫ್. ಹರೀಶ್ ಮತ್ತು ಗೌರವ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ವಲಯ8 ರ ಪಿ ಎಚ್ ರೋ, ಜಗದೀಶ್ ಎಸ್ .ಹೆಚ್. ವಲಯ 8 ರ ಸೇನಾನಿಗಳಾದ ರೋ.ಶಿವಕುಮಾರ್ ರೋ.ಸಂತೋಷ ಗೌಡ, ರೋಟರಿ ಮೈಸೂರ್ ಅಂಬಾರಿ ಅಧ್ಯಕ್ಷರಾದ ಹರೀಶ್, ಕಾರ್ಯದರ್ಶಿ ಮಂಜುನಾಥ್, ಕನ್ನಡ ರಾಜ್ಯೋತ್ಸವ ಚೇರ್ಮನ್ ರೋ ಜಗದೀಶ್. ಎಲ್.,ಮಾಜಿ ಅಧ್ಯಕ್ಷರುಗಳಾದ ರೋ ಜಗದೀಶ್.ಆರ್, ರೋ.ಭರತ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರೋ.ಲೋಕೇಶ್, ರೋ.ಪಂಡರಿನಾಥ್, ರೋ ಮನು, ರೋ ನಿತ್ಯಾನಂದ ಹಾಗೂ ಸಾಂಸ್ಕೃತಿಕ ಕಲಾವಿದರು ಭಾಗವಹಿಸಿ ಕನ್ನಡ ಹಾಡುಗಳನ್ನು ಹಾಡಿದರು.ಈ ವೇಳೆ ಅವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ಮೈಸೂರು,ನವೆಂಬರ್.೧: ಮೈಸೂರಿನ ಬ್ರಾಹ್ಮಣ ಧರ್ಮ ಸಭಾದ ನೂತನವಾಗಿ ಚುನಾಯಿತರಾದ ಪದಾಧಿಕಾರಿಗಳನ್ನು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ಮಿತ್ರ ಬಳಗದ ವತಿಯಿಂದ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಚಾಮುಂಡಿಪುರಂ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬ್ರಾಹ್ಮಣ ಧರ್ಮ ಸಹಾಯ ಸಭಾದ ನೂತನ ಅಧ್ಯಕ್ಷರಾದ ಎಂ ಶ್ರೀನಿವಾಸ ಅವರು,ಧನ್ಯವಾದ ಸಲ್ಲಿಸಿ ಮಾತನಾಡಿದರು.
ಎನ್.ಎಂ.ನವೀನ್ ಕುಮಾರ್ ಅವರ ತಂದೆ,ಕೆ.ಆರ್.ಮೋಹನ್ ಕುಮಾರ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ,ಬ್ರಾಹ್ಮಣ ಧರ್ಮ ಸಹಾಯಸಭಾ ಗೆ ನಾಗರಿಕ ಸೌಕರ್ಯ ನಿವೇಶನ (ಸಿಎ ಸೈಟ್) ನೀಡಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವೀನ್ ಕುಮಾರ್ ಅವರು ನೂತನವಾಗಿ ಚುನಾಯಿತರಾದ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆ ತಿಳಿಸಿದರು.
ವಿಪ್ರ ಸಮಾಜದ ಒಗಟ್ಟಿಗಾಗಿ ಮತ್ತು ಒಳಿತಿಗಾಗಿ ಶರ್ಮಿಸುವಂತೆ ಪದಾಧಿಕಾರಿಗಳಲ್ಲಿ ಕೋರಿದರು.
ಕಾರ್ಯಕ್ರಮದಲ್ಲಿ,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಆರ್.ಸತ್ಯನಾರಾಯಣ,ವಿಪ್ರ ಮುಖಂಡರಾದ ಗಜಾನನ ಹೆಗ್ಡೆ ಸೇರಿದಂತೆ ನೂರಾರು ಮಂದಿ ವಿಪ್ರ ಸಮಾಜದವರು ಹಾಜರಿದ್ದರು.
ಮೈಸೂರು: ,ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಎನ್ಐಇ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾದರು.
ವಿಶ್ವೇಶ್ವರ ನಗರದಲ್ಲಿರುವ ಎನ್ಐಇ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಜಿಲ್ಲಾ ಏಡ್ಸ್ ಪ್ರತಿಬಂದಕ ಮತ್ತು ನಿಯಂತ್ರಣ ಘಟಕ ಮೈಸೂರು ಹಾಗೂ ಎನ್ ಐ ಇ ಪ್ರಥಮ ದರ್ಜೆ ಕಾಲೇಜು, ಲಯನ್ಸ್ ಬ್ಲಡ್ ಸೆಂಟರ್ ಜೀವದಾರ ವತಿಯಿಂದ ಹಮ್ಮುಕೊಂಡಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ವೇಳೆ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ರಕ್ತ ನೀಡಿ ಬರವಸೆ ನೀಡಿ, ಜೊತೆಯಾಗಿ ನಾವು ಜೀವ ಉಳಿಸೋಣ ಎಂಬ ಘೋಷ ವಾಕ್ಯದೊಂದಿಗೆ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 70ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾದರು.
ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಜಿಲ್ಲಾ ಮೇಲ್ವಿಚಾರಕರಾದ ಸವಿತಾ ಅವರು ಮಾತನಾಡಿ,ರಕ್ತದಾನದ ಮೂಲಕ ಹಲವರ ಜೀವ ಉಳಿಸಲು ಸಾಧ್ಯ ಎಂದು ಹೇಳಿದರು.
ಎನ್ಐಇ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್ ಗೋಪಾಲಕೃಷ್ಣ ಅರಸ್ ಮಾತನಾಡಿ,ಇಂದಿನ ಯುವಜನತೆ ದೇಶದ ಸಂಪತ್ತು,ನಿಮ್ಮ ಒಂದು ಸೇವೆ ದೇಶವನ್ನು ಮತ್ತು ಜೀವವನ್ನು ಕಾಪಾಡಬಲ್ಲದು ಎಂದು ತಿಳಿಹೇಳಿದರು.
ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ನಮ್ಮ ಮನಸ್ಸು ಇನ್ನೊಬ್ಬರ ಉಳಿವಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ರಕ್ತದಾನ ಮಾಡುವವರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಜಾಸ್ತಿ ಇರಬೇಕು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ನಿಮ್ಮ ಸೇವಾಗುಣ ಸಮಾಜಕ್ಕೆ ಮಾದರಿ ಆಗಬೇಕೆಂದು ಕಿವಿಮಾತು ಹೇಳಿದರು
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರು ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳು ಹಾಗೂ ರಕ್ತದಾನದ ಜಾಗೃತಿಯ ಬಗ್ಗೆ ತಿಳಿಸಿಕೊಟ್ಟರು.
ಶಿಬಿರದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಕಾಲೇಜು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಕುಮಾರ್, ಸಹ ಕಾರ್ಯಕ್ರಮ ಅಧಿಕಾರಿ ದಿನಕರ್,ಯೂತ್ ರೆಡ್ ಕ್ರಾಸ್ ಸಂಯೋಜನ ಅಧಿಕಾರಿ ಶೈಲಜ, ನವ್ಯ ಮತ್ತಿತರರು ಹಾಜರಿದ್ದರು.