ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ ವಿಶ್ವನಾಥ್

ಮೈಸೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ. ತಮ್ಮ ಬೆಂಬಲಿಗ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪರಿಣಾಮ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಕಾಂಗ್ರೆಸ್‌ನಿಂದ ೧೪ ಮಂದಿ ಶಾಸಕರನ್ನು ಕಳುಹಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ಗೆಲ್ಲಿಸುವ ಸಲುವಾಗಿ ಶಿಕಾರಿಪುರದಲ್ಲಿ ಕುರುಬ ಸಮುದಾಯದ ನಾಯಕನಿಗೆ ಟಿಕೆಟ್ ತಪ್ಪಿಸಿದರು ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ ನಾನು ಸೋಲಲು ಕೂಡ ಸಿದ್ದರಾಮಯ್ಯ ಕಾರಣ. ಪ್ರತಾಪ್‌ಸಿಂಹಗೆ ನೆರವು ನೀಡಿ ನನ್ನ ಸೋಲಿಗೆ ಕಾರಣರಾದರು ಎಂದು ಗಂಭೀರ ಆರೋಪ ಮಾಡಿದರು.

೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರ ಮೇಶ್ವರ್ ಸೋಲಿಗೆ ಕಾರಣ ಯಾರು? ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಲು ಅವರನ್ನೂ ಸೋಲಿಸಿದರು.

ವರುಣ ಕ್ಷೇತ್ರದಲ್ಲಿ ಸ್ಪರ್ದಿಸಿದಾಗ ಸುತ್ತೂರು ಶ್ರೀಗಳ ಕಾಲು ಹಿಡಿದು ಕಾ.ಪು.ಸಿದ್ದಲಿಂಗ ಸ್ವಾಮಿಯನ್ನು ತಣ್ಣಗಾಗಿಸಿದರು. ಚಾಮುಂಡೇಶ್ವರಿ ಬೈ ಎಲೆಕ್ಷನ್‌ನಲ್ಲಿ ಉಡುಪಿ ಮಠದ ಪೀಠಾಧಿಪತಿಗಳ ಕಾಲು ಹಿಡಿದರು. ಸಿದ್ದರಾಮಯ್ಯ ಒಳಗೊಂದು ಹೊರಗೊಂದು ಎಂಬಂತೆ ಡಬಲ್ ಸ್ಟ್ಯಾಂಡ್ ಹೊಂದಿದ್ದಾರೆ ಎಂದು ಎಚ್.ವಿಶ್ವನಾಥ್ ವಾಚಾಮಗೋಚರವಾಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ ವಿಶ್ವನಾಥ್ Read More

ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬ: ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ,ಹಣ್ಣು ಹಂಪಲು ವಿತರಣೆ

ಮೈಸೂರು: ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ ಜನತಾದಳ (ಜಾತ್ಯತೀತ) 25 ವರ್ಷಗಳ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿಪುರಂನಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ತಿಂಡಿ, ಹಣ್ಣು,ಹಂಪಲು ಹಂಚಲಾಯಿತು.

ಈ ಸಂದರ್ಭದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಿ.ಜಿ.ಸಂತೋಷ್, ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ ನಗರ ಪಾಲಿಕೆ ಮಾಜಿ ಸದಸ್ಯೆ ಶೋಭಾ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಮುಖಂಡರಾದ ಯದುನಂದನ್, ರಾಮು ಹಾಜರಿದ್ದರು.

ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬ: ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ,ಹಣ್ಣು ಹಂಪಲು ವಿತರಣೆ Read More

ಮಹಾ ಗೌರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಾರಂಭವಾದಾಗಿನಿಂದ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ತಾಯಿ ಪಾರ್ವತಿಗೆ ವಿಶಿಷ್ಟ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸುತ್ತಾ ಬರಲಾಗಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ಅದ್ದೂರಿಯಾಗಿ ನೆರವೇರುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ಪ್ರತಿದಿನ ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

ನವರಾತ್ರಿ ಒಂಬತ್ತನೇ ದಿನವಾದ ಮಂಗಳವಾರ ರಾತ್ರಿ ತಾಯಿ ಸೌಮ್ಯಮೂರ್ತಿಯಾಗಿ ಪ್ರಶಾಂತವಾಗಿ ಕಾಣುತ್ತಿದ್ದಾಳೆ.

ಸೋಮವಾರ ರಕ್ಕಸನನ್ನು ಕೊಂದು‌ ವಿಜೃಂಬಿಸಿದ್ದ ತಾಯಿ ಮಂಗಳವಾರ‌ ರಾತ್ರಿ ಮಹಾ ಗೌರಿಯಾಗಿ ಎಲ್ಲರನ್ನೂ‌ ಆಶೀರ್ವದಿಸುತ್ತಿದ್ದಾಳೆ.

ನವರಾತ್ರಿಯಲ್ಲಿ ದುಷ್ಟ ಶಕ್ತಿಯನ್ನು ಸಂಹಾರ ಮಾಡಲೆಂದೇ ಆದಿಶಕ್ತಿಯು ಒಂಬತ್ತು ಅವತಾರಗಳನ್ನು ಎತ್ತುತ್ತಾಳೆ.ಕಡೆಗೆ ರಕ್ಕಸನನ್ನು ಸಂಹರಿಸಿ ವಿಜೃಂಬಿಸುತ್ತಾಳೆ.ಇದೀಗ‌ ವಿಜಯ ಮಾತೆ ಪಾರ್ವತಿ ಸೌಮ್ಯ ಸ್ವರೂಪಿಯಾಗಿ ಕಂಗೊಳಿಸುತ್ತಿದ್ದಾಳೆ.

ಬೆಳ್ಳಿಯ ಕಿರೀಟ,ತ್ರಿಶೂಲ ಧಾರಿಯಾಗಿದ್ದಾಳೆ. ವಿವಿಧ ಬಗೆಯ ಹೂಗಳು,ಚಂಡು ಹೂವಿನ ಹಾರ,ಸೇವಂತಿಗೆ ಮಾಲೆ,ತುಳಸಿ ಮಾಲೆ ಧರಿಸಿ ಕೇಸರಿ‌ ಬಣ್ಣದ ರೇಷ್ಮೆ ಸೀರೆ ಉಟ್ಟು ಸರ್ವಾಲಂಕಾರ ಭೂಶಿತಳಾಗಿ ಕಂಗೊಳಿಸುತ್ತಿದ್ದಾಳೆ ತಾಯಿ ಪಾರ್ವತಿ.ಅಷ್ಟು‌ಚಂದದ ಅಲಂಕಾರ‌ ಮಾಡಿದ್ದಾರೆ ಅಭಿನಂದನ್.

ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು, ಪೂಜಿಸಿ ಪುನೀತರಾಗುತ್ತಿದ್ದಾರೆ.

ಮಹಾ ಗೌರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ Read More

ಸಿದ್ಧಾರ್ಥನಗರ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನವಮಿ

ಮೈಸೂರು, ಏ.6: ಮೈಸೂರಿನ ಸಿದ್ಧಾರ್ಥನಗರ,ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಸಡಗರ,ಭಕ್ತಿಯಿಂದ ಶ್ರೀರಾಮನವಮಿ ಪ್ರಾರಂಭಿಸಲಾಯಿತು.

ಬೆಳಿಗ್ಗೆ ಶ್ರೀರಾಮನವಮಿ ಪ್ರಯುಕ್ತ ಪಂಚವಟಿಯಲ್ಲಿರುವ ಎಲ್ಲಾ ದೇವರುಗಳಿಗೂ ವಿಶೇಷ ಅಭಿಷೇಕ ಮತ್ತು ಸುಗಂಧ ಭರಿತ ಪುಷ್ಪಾಲಂಕಾರ ಮಾಡಲಾಯಿತು.

ಶ್ರೀ ಸೀತಾರಾಮ ಲಕ್ಷ್ಮಣ,ಆಂಜನೇಯಸ್ವಾಮಿ, ಗಣೇಶ,ನವಗ್ರಹಗಳು,ರಾಘವೇಂದ್ರ ಸ್ವಾಮಿ,ಸತ್ಯನಾರಾಯಣ ‌ಸ್ವಾಮಿ,ಅಮ್ಮನವರಿಗೆ ವಿಶೇಷ ಅವಲಂಕಾರ ಮಾಡಲಾಗಿತ್ತು.

ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಭಕ್ತರಿಗೆ ಮಜ್ಜಿಗೆ,ಪಾನಕ ಮತ್ತಿತರ ಪ್ರಸಾದ ವಿನಿಯೋಗ ಮಾಡಲಾಯಿತು.

ಇಂದಿನಿಂದ ಏ.14ರ ವರೆಗೂ ದೇವಾಲಯದ ಆವರಣದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪೂಜಾ ಕಾರ್ಯಗಳನ್ನು ದೇವಾಲಯದ ಪುರೋಹಿತರಾದ ಅರುಣ್ ಮತ್ತು ತಂಡದವರು‌ ನೆರವೇರಿಸಿದರು.

ಮೈಸೂರಿನ ಮಾರ್ವೆಲ್ ಪಿಯು ಕಾಲೇಜಿನ ನಿವೃತ್ತ ಪ್ರಾಧ್ಯಾಪಕರೂ‌‌ ಹಾಗೂ ಕಾರ್ಯದರ್ಶಿ ಗಳಾದ ಡಾ.ಗಿಣಿಸ್ವಾಮಿ ಅವರು ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದರು.

ಸಿದ್ಧಾರ್ಥನಗರ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನವಮಿ Read More

ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ವಂಚನೆ: ಪ್ರಕರಣ ದಾಖಲು

ಮೈಸೂರು,ಫೆ.2: ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ವಂಚನೆ ಎಸಗಿದ ಆರೋಪದ ಮೇಲೆ ನಾಲ್ವರು ಮಧ್ಯವರ್ತಿಗಳು ಸೇರಿ ಹಲವರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯವರ್ತಿಗಳಾದ ಸುಶೀಲ್ ಕುಮಾರ್,ವರದರಾಜನ್,ಪುಟ್ಟಸ್ವಾಮಿ ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಬ್ಯಾಂಕ್ ವ್ಯವಸ್ಥಾಪಕರಾದ ಏಕಾಂತ್ ಪ್ರಕರಣ ದಾಖಲಿಸಿದ್ದಾರೆ.

ಗೀತಾ ಎಂಬುವರು ಜಯಲಕ್ಷ್ಮಿಪುರಂ ಸ್ವತ್ತು ನಂ 23 ಮೇಲೆ ಲ್ಯಾಂಡ್ ಲೋನ್ ಅಪೇಕ್ಷಿಸಿ 1-07-2021 ರಂದು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬ್ಯಾಂಕ್ ಸಿಬ್ಬಂದಿಗಳು ವಕೀಲರ ಬಳಿ ಲೀಗಲ್ ಸಲಹೆ ಪಡೆದು ವಾಲ್ಯುಏಷನ್ ರಿಪೋರ್ಟ್ ಆಧಾರದ ಮೇಲೆ 1,65,00,000 ರೂ ಸಾಲ ನೀಡಿದ್ದಾರೆ.

ಮೈಸೂರು ದಕ್ಷಿಣ ಉಪನೊಂದಣಾಧಿಕಾರಿ ಕಚೇರಿಯಲ್ಲಿ 1 ನೇ ಪುಸ್ತಕ ನಂ1 Mys-1-01451-2021-22 ರಲ್ಲಿ ನೊಂದಣಿ ಆಗಿದೆ.ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ಅವರು ಸ್ವತ್ತಿನ ಮಾರಾಟಗಾರರಾದ ಪುಟ್ಟರಾಜು ಅವರಿಗೆ ಚೆಕ್ ನೀಡಿ ದಾಖಲೆಗಳನ್ನ ಪಡೆದಿದ್ದಾರೆ.

ಆಗಸ್ಟ್ 23 ರ ವರೆಗೆ ಗೀತಾ ಅವರು ಸಾಲದ ಕಂತು ಕಟ್ಟಿ ನಂತರ‌ ಸ್ಥಗಿತಗೊಳಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಸಾಲ ಮರುಪಾವತಿಸುವಂತೆ ತಿಳಿಸಿದಾಗ ತಾವು ಮೋಸ ಹೋಗಿರುವುದಾಗಿ ಗೀತಾ ತಿಳಿಸಿದ್ದಾರೆ.

ಬ್ಯಾಂಕ್ ನವರು ಪರಿಶೀಲನೆ ಮಾಡಿದಾಗ ನೊಂದಣಿ ಆದ ದಾಖಲೆಯಲ್ಲಿ ಸದರಿ ಪುಸ್ತಕದಲ್ಲಿ ಶ್ವೇತಾ ಮೋಹನ್ ಕುಟ್ಟಂಡ ಹೆಸರಿನಲ್ಲಿ ಸ್ವತ್ತು ನೊಂದಣಿ ಆಗಿರುವುದು ಕಂಡುಬಂದಿದೆ.

ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ ಮಧ್ಯವರ್ತಿಗಳಾದ ಸುಶೀಲ್ ಕುಮಾರ್ ನಕಲಿ ದಾಖಲೆಗಳನ್ನ ಸೃಷ್ಟಿಸಿ ಯಾಮಾರಿಸಿರುವುದು ಗೊತ್ತಾಗಿದೆ.

ಪುಟ್ಟರಾಜು ಅವರು ಚೆಕ್ ಪಡೆದು ವರದರಾಜನ್,ವಿಕಾಸಿನಿ ಸೇರದಂತೆ ಹಲವರ ಹೆಸರಲ್ಲಿ ಹಣ ಡ್ರಾ ಮಾಡಿರುವುದು ಕಂಡು ಬಂದಿದೆ.ಇದೀಗ ಗೀತಾ ಅವರು ಬ್ಯಾಂಕ್ ಗೆ ಅಸಲು 97,70,391 ರೂ ಜೊತೆಗೆ ಬಡ್ಡಿ ಸೇರಿ 1,09,10,780 ರೂ ಬಾಕಿ ಉಳಿಸಿಕೊಂಡಿದ್ದಾರೆ.

ಗೀತಾ ಅವರಿಂದ ಹಣ ಮರುಪಾವತಿ ಆಗದ ಹಿನ್ನಲೆ ಬ್ಯಾಂಕ್ ಮ್ಯಾನೇಜರ್ ಏಕಾಂತ್ ಮಧ್ಯವರ್ತಿಗಳ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ವಂಚನೆ: ಪ್ರಕರಣ ದಾಖಲು Read More

ಹೆಚ್ ಡಿ ಕೋಟೆಯಲ್ಲಿ ಒಂದೇ ಜಮೀನಿನಲ್ಲಿಸೆರೆಸಿಕ್ಕ 5 ನೆ ಚಿರತೆ: ಗಾಬರಿಗೊಂಡ ಜನ

ಎಚ್‌.ಡಿ.ಕೋಟೆ: ಇತ್ತೀಚೆಗಷ್ಟೇ ಹೆಚ್ ಡಿ ಕೋಟೆಯ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದರ ಬೆನ್ನಲ್ಲೇ ಮುಂಜಾನೆ ಮತ್ತೊಂದು‌ ಚಿರತೆ ಸೆರೆಸಿಕ್ಕಿದ್ದು ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಒಂದೇ ತಿಂಗಳಲ್ಲಿ ಒಂದೇ ಜಮೀನಿನಲ್ಲಿ ಇದು ಸೇರಿ ಐದು ಚಿರತೆ ಸೆರೆಯಾದಂತಾಗಿದೆ.
ನಾಲ್ಕನೆ ಚಿರತೆ ಸೆರೆ ಸಿಕ್ಕಾಗಲೇ ರೈತರು ಇನ್ನೂ ಹೆಚ್ಚು ಚಿರತೆಗಳು ಇರನಹುದೆಂದು ಅನುಮಾನ ವ್ಯಕ್ತಪಡಿಸಿ ಅರಣ್ಯ ಇಲಾಖೆಗೆ ಮತ್ತೆ ಬೋನು ಇಡುವಂತೆ ಒತ್ತಾಯಿಸಿದ್ದರು.

ಅವರ ಅನುಮಾನ ನಿಜವಾಗಿದೆ,
ಕಳೆದ ವಾರದ ಹಿಂದೆ ಚಿರತೆ ಸಿಕ್ಕಿದ ಸಮೀಪದಲ್ಲೇ ಇನ್ನೊಂದು ಗಂಡು ಚಿರತೆ ಸಿಕ್ಕಿಬಿದ್ದಿದೆ.

‌ಸಾಕು ಪ್ರಾಣಿಗಳನ್ನು ಕೊಂದು ಭೀತಿ ಸೃಷ್ಟಿಸಿದ್ದ 7ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದೆ.

ಒಂದೇ ಜಮೀನಿನಲ್ಲಿ ಐದನೇ ಚಿರತೆ ಬೋನಿಗೆ ಸಿಕ್ಕಿರುವುದು ನೋಡಿ ಜನ ಅಚ್ವರಿಗೊಂಡಿದ್ದಾರೆ,ಜತೆಗೆ ಆತಂಕವೂ ಹೆಚ್ಚಾಗಿದೆ.

ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸಮೀಪದ ಮಾಜಿ‌ ಶಾಸಕ ದಿವಂಗತ ಎನ್.ನಾಗರಾಜು ಅವರ ಜಮೀನಿನಲ್ಲಿ ಹೀಗೆ ಒಂದರ‌ ಹಿಂದೆ ಒಂದು ಚಿರತೆ ಸಿಕ್ಕಿಬಿದ್ದಿವೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೆರೆಸಿಕ್ಕ ಚಿರತೆಯನ್ನು ಅರಣ್ಯಕ್ಕೆ ಬಿಡಲು ಸಿಬ್ಬಂದಿ ನಿರ್ಧಾರಿಸಿದ್ದಾರೆ.ಇತ್ತ ಪಟ್ಟಣದ ಜನ ಚಿರತೆ ನೋಡಲು ಸೇರುತ್ತಲೇ ಇದ್ದಾರೆ.

ಹೆಚ್ ಡಿ ಕೋಟೆಯಲ್ಲಿ ಒಂದೇ ಜಮೀನಿನಲ್ಲಿಸೆರೆಸಿಕ್ಕ 5 ನೆ ಚಿರತೆ: ಗಾಬರಿಗೊಂಡ ಜನ Read More