ಹುಣಸೂರಿನಲ್ಲಿ ವಿದ್ಯುತ್ ತೆಗೆದು ರೈತರಿಗೆಅನ್ಯಾಯ: ಮೋರ್ ಪರ ನಿಂತ ಜನಪ್ರತಿನಿಧಿಗಳು

ಹುಣಸೂರು: ಹುಣಸೂರು ತಾಲೂಕಿನಲ್ಲಿ ರೈತರು ಮತ್ತು ಬಡಜನರೊಂದಿಗೆ ಜನಪ್ರತಿನಿಧಿಗಳು ಮತ್ತು ವಿದ್ಯುತ್ ಇಲಾಖೆಯವರು ಕಣ್ಣಾಮುಚ್ಚಾಲೆ ಆಡುತ್ತಾ
ಸುಮ್ಮನೆ ಅಲೆದಾಡಿಸುತ್ತಾರೆ.

ಹುಣಸೂರಿನಲ್ಲಿ ಬಡವರಿಗೊಂದು ನ್ಯಾಯ ಬಲಾಢ್ಯರಿಗೊಂದು ನ್ಯಾಯ ಎಂಬಂತೆ ಆಗಿಬಿಟ್ಟಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕಿಡಿಕಾರಿದ್ದಾರೆ.

ಹುಣಸೂರಿನಲ್ಲಿ ಮೋರ್ ಸೂಪರ್ ಮಾರ್ಕೆಟ್ ಗೆ ಯಾವುದೇ ದಾಖಲೆಗಳಿಲ್ಲದೆ ಕರೆಂಟ್ ಕೊಟ್ಟಿದ್ದಾರೆ.ಆದರೆ ರೈತರು, ಬಡ ಜನರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ ಎಂದು ಕೇಳಿದರೆ ಎನ್ ಒ ಸಿ ತೆಗೆದುಕೊಂಡು ಬನ್ನಿ ಕಟ್ಟಡದ ಪ್ಲಾನ್, ಲೈಸನ್ಸ್ ತೆಗೆದುಕೊಂಡು ಬನ್ನಿ ಎಂದು ಸುಮ್ಮನೆ ಅಲೆದಾಡಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ನಗರಸಭೆ ಸದಸ್ಯರು ಮೋರ್ ಸೂಪರ್ ಮಾರ್ಕೆಟ್ ನೊಂದಿಗೆ ಶಾಮೀಲಾಗಿದ್ದಾರೆ, ಅಧಿಕಾರಿಗಳನ್ನು ದುರುಪಯೋಗ
ಪಡಿಸಿಕೊಳ್ಳುತ್ತಿದ್ದಾರೆ, ಆದರೆ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಲು ಇಚ್ಛಿಸುತ್ತಾರೆ.ಇಲ್ಲಿ ಮೋರ್ ಸೂಪರ್ ಮಾರ್ಕೆಟ್‌ ಓಪನ್ ಮಾಡಿರುವುದೇ‌‌ ಸರಿ ಇಲ್ಲ.ಸರ್ಕಾರದ ಜಾಗ ದುರುಪಯೋಗ‌ ಆಗುತ್ತಿದೆ.ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟವಾಗುತ್ತಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಮೋರ್ ಸೂಪರ್ ಮಾರ್ಕೆಟ್ ಗೆ ನಗರಸಭೆಯವರು ಯಾವುದೇ ದಾಖಲೆ ಕೇಳದೆ ಜಾಗ ಕೊಟ್ಟಿದ್ದಾರೆ ಎಂದು ದೂರಿದ್ದಾರೆ.

ಮೋರ್ ಸೂಪರ್ ಮಾರ್ಕೆಟ್ ನವರು
ಅನಧಿಕೃತವಾಗಿ ವಿದ್ಯುತ್ ಲೈನ್ ಗಳನ್ನು ಎಳೆದುಕೊಂಡು ಕರೆಂಟ್ ಹರಿಸಿಕೊಳ್ಳುತ್ತಾರೆ,ಅನಧಿಕೃತವಾಗಿ ಮಳಿಗೆ ಪ್ರಾರಂಭಿಸಿದ್ದಾರೆ, ಇದನ್ನೆಲ್ಲ ಕೇಳಲು ಹೋದರೆ ಗೂಂಡಾಗಳನ್ನು ಬಿಟ್ಟು ಧಮ್ಕಿ ಹಾಕಿಸುತ್ತಾರೆ ಎಂದು ಚೆಲುವರಾಜು ದೋರಿದ್ದಾರೆ.

ಹುಣಸೂರು ತಾಲೂಕು ಹನಗೋಡು ಹೋಬಳಿ ದೊಡ್ಡ ಹೆಜ್ಜೂರಿನಲ್ಲಿ ರೈತರು ಒಂದು ತಿಂಗಳು ಕರೆಂಟ್ ಬಿಲ್ ಕಟ್ಟಿಲ್ಲವೆಂದು ಕೆಲವರ ಪಂಪ್ ಸೆಟ್ ಗಳ ಕರೆಂಟ್ ಕಿತ್ತು ಹೋಗಿದ್ದಾರೆ. ರೈತರಿಗೆ ಒಂದು ನ್ಯಾಯ ಸೂಪರ್ ಮಾರ್ಕೆಟ್ ನವರಿಗೆ ನ್ಯಾಯವೆ ಇದನ್ನೆಲ್ಲಾ ಕೇಳುವವರೇ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಬೆಳೆ ಬೆಳೆಯದಿದ್ದರೆ ನಮಗೆ ಒಂದು ಹೊತ್ತು ಊಟಕ್ಕೂ ಗತಿ ಇರುವುದಿಲ್ಲ ರೈತರು ದೇಶದ ಬೆನ್ನೆಲುಬು. ಅಂತಹುದರಲ್ಲಿ ರೈತರಿಗೆ ಹುಣಸೂರಿನಲ್ಲಿ ಅನ್ಯಾಯ ಆಗುತ್ತಿದೆ. ದುಡ್ಡಿರುವವರ ಪರ ಕೆಲಸ ಮಾಡಲಾಗುತ್ತಿದೆ.

ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು,ಶಾಸಕರು ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಚಲುವರಾಜು ಎಚ್ಚರಿಸಿದ್ದಾರೆ.

ವಿದ್ಯುತ್ ಇಲಾಖೆಯವರು ಮತ್ತು ನಗರಸಭೆ ಅಧಿಕಾರಿಗಳಿಗೆ ರೈತರ ಪರ ಕೆಲಸ ಮಾಡುವಂತೆ ತಾಕೀತು ಮಾಡಲಿ.ರೈತರಿಗೆ ನ್ಯಾಯ ಕೊಡಲಿ ಎಂದು ಚಲುವರಾಜು ಒತ್ತಾಯಿಸಿದ್ದಾರೆ.

ಹುಣಸೂರಿನಲ್ಲಿ ವಿದ್ಯುತ್ ತೆಗೆದು ರೈತರಿಗೆಅನ್ಯಾಯ: ಮೋರ್ ಪರ ನಿಂತ ಜನಪ್ರತಿನಿಧಿಗಳು Read More

ಹುಣಸೂರಿನಿಂದ ಮೋರ್ ಸೂಪರ್ ಮಾರ್ಕೆಟ್ ಎತ್ತಂಗಡಿಗೆ ಕೆಪಿಪಿ ಆಗ್ರಹ

ಹುಣಸೂರು: ಹುಣಸೂರಿನ ನಗರಸಭೆ ಜಾಗದಲ್ಲಿ ಯಾರೊ ಖಾಸಗಿ ವ್ಯಕ್ತಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು, ಈ ಕಟ್ಟಡದಲ್ಲಿ ಇತ್ತೀಚೆಗೆ ಮೋರ್ ಸೂಪರ್ ಮಾರ್ಕೆಟ್ ತೆರೆದಿರುವುದರಿಂದ ಸ್ಥಳೀಯ ಸಣ್ಣ,ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.

ಮೋರ್ ಎಂಬ ಸೂಪರ್ ಮಾರ್ಕೆಟ್ ತೆರೆಯಲು ಸಂಬಂಧಪಟ್ಟ ಪ್ರಾಧಿಕಾರದಿಂದ ಲೈಸೆನ್ಸ್ ತೆಗೆದುಕೊಳ್ಳದೆ ಆಕ್ರಮವಾಗಿ ಪ್ರಾರಂಭ ಮಾಡಿದ್ದಾರೆ ಎಂದು‌ ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ) ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋಪಿಸಿದ್ದಾರೆ.

ಕೇವಲ ಒಂದು ಅರ್ಜಿ ಮುಖಾಂತರ ಅನುಮತಿ ಪಡೆದು ಈ ಸೂಪರ್ ಮಾರ್ಕೆಟ್ ತೆರೆಯಲಾಗಿದೆ,ಇಲ್ಲಿ ಕಟ್ಟಡ‌ ನಿರ್ಮಾಣ ಮಾಡಿರುವುದೇ ಅಕ್ರಮ. ವಾಣಿಜ್ಯ ಮಳಿಗೆಯಲ್ಲಿ ಈ ಅಕ್ರಮ ಕಟ್ಟಡಕ್ಕೆ ಸಂಬಂಧಪಟ್ಟಂತೆ ಹುಗಾನೂರಿನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಈ ಕಟ್ಟಡದ ಲೈಸೆನ್ಸ್ ಈಗಾಗಲೇ ರದ್ದುಪಡಿಸಲಾಗಿದ್ದರೂ ಮಳಿಗೆಯನ್ನು ತೆರೆದು ವ್ಯಾಪಾರ ವಹಿವಾಟು ಪ್ರಾರಂಭಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕಟ್ಟಡದ ತೀರ್ಮಾನವು ಇನ್ನು ಬಾಕಿ ಇದೆ ಆದ್ದರಿಂದ ನ್ಯಾಯಾಲಯದ ಆದೇಶ ಬರುವವರೆಗೂ ಈ ಕಟ್ಟಡದಲ್ಲಿ ಯಾವುದೇ ಮಳಿಗೆಯನ್ನು ತೆರೆಯಲು ಅನುಮತಿ ಕೊಡಬಾರದು ಹಾಗೂ ಮೋರ್ ಸೂಪರ್ ಮಾರ್ಕೆಟ್ ವ್ಯಾಪರವನ್ನು ಸ್ಥಗಿತಗೊಳಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.

ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಈ ಮಳಿಗೆಯನ್ನು ತೆರೆಯಲು ಅನುಮತಿ ಕೊಟ್ಟರುವ ಅಧಿಕಾರಿಗಳ ಮೇಲೆ ಹಾಗೂ ಮೋರ್ ಸೂಪರ್ ಮಾರ್ಕೆಟ್ ರದ್ದುಪಡಿಸಿ ಇದರ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ)ದ ಪರವಾಗಿ ತಾಲೂಕು ಅಧ್ಯಕ್ಷ ಚೆಲುವರಾಜು ಮೈಸೂರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಮೋರ್ ಒಂದು ಮಾಯಾಜಾಲ ಇದ್ದಂತೆ. ಜನರನ್ನು ಮರುಳು ಮಾಡುತ್ತಿದೆ.ಹೊರಗೆ ಬೇರೆ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ವಸ್ತುಗಳು,ದಿನಸಿ, ಮನೆಗೆ ಬೇಕಾದ ಸಾಮಾನುಗಳು ಸಿಗುತ್ತವೆ.ಆದರೆ ಮೋರ್ ನಲ್ಲಿ ಎಲ್ಲವೂ ದುಬಾರಿ.ಈ ಸೂಪರ್ ಮಾರ್ಕೆಟ್ ಇಲ್ಲೇ ಮುಂದುವರಿದರೆ ಗ್ರಾಮೀಣ ಭಾಗದ ಬಡ ರೈತರು ವ್ಯಾಪಾರಗಾರರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ.

ತಕ್ಷಣ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು,ಅಧಿಕಾರಿಗಳು ಎಚ್ಚತ್ತುಕೊಂಡು ಮೋರ್ ಸೂಪರ್ ಮಾರ್ಕೆಟ್ ಓಡಿಸಬೇಕು ಎಂದು ಚಲುವರಾಜು ಆಗ್ರಹಿಸಿದ್ದಾರೆ.

ಹುಣಸೂರಿನಿಂದ ಮೋರ್ ಸೂಪರ್ ಮಾರ್ಕೆಟ್ ಎತ್ತಂಗಡಿಗೆ ಕೆಪಿಪಿ ಆಗ್ರಹ Read More