ಮೋದಿ‌ಜಿ ಹುಟ್ಟುಹಬ್ಬ:ಆರೋಗ್ಯಾಧಿಕಾರಿ,ಪೌರ‌ ಕಾರ್ಮಿಕರಿಗೆ ಅಭಿನಂದನೆ

ಮೈಸೂರು: ಭಾರತ ಕಂಡ ಶ್ರೇಷ್ಠ ನಾಯಕ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಮುಖಂಡರಾದ ಸಂದೀಪ್ ಸಿ ಅವರ ನೇತೃತ್ವದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಮತ್ತು ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಮೈಸೂರಿನ ಚಾಮುಂಡಿಪುರಂ ವೃತದಲ್ಲಿ ಮೋದಿಯವರ ಕನಸಿನ ಆಶಯದಂತೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಹಕಾರ ನೀಡಿ ಯಶಸ್ವಿಯಾಗಿ ಕಸ ವಿಲೇವಾರಿ ನಿರ್ವಹಣೆ ಮಾಡುತ್ತಾ ಬಂದಿರುವ ಮೈಸೂರು ಮಹಾನಗರ ಪಾಲಿಕೆ ವಲಯ 1ರಲ್ಲಿನ ಆರೋಗ್ಯ ಅಧಿಕಾರಿಯಾದ ಹೆಚ್.ಎಂ. ಶಿವಪ್ರಸಾದ್ ಹಾಗೂ ಚಾಮುಂಡಿಪುರಂನ ಪೌರಕಾರ್ಮಿಕರಾದ ನವೀಂದ್ರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಇದೇ ವೇಳೆ ಮೋದಿಯವರ ಜನುಮದಿನಕ್ಕಾಗಿ ಸಾರ್ವಜನಿಕರಿಗೆ ಕಜ್ಜಾಯ ಮತ್ತು ಟೀ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಪ್ರಧಾನ ಕಾರ್ಯದರ್ಶಿ ಮಹೇಶ್, ಕೆ ಆರ್ ಕ್ಷೇತ್ರದ ಅಧ್ಯಕ್ಷ ರಘು ಅರಸ್, ಮುಖಂಡರಾದ ಚಂದ್ರಣ್ಣ, ಜಯರಾಮ್, ವಿದ್ಯಾ ಅರಸ್, ಚಂದ್ರಕಲಾ, ಪುರುಷೋತ್ತಮ್, ಶಿವಪ್ಪ, ಮುರಳಿಧರ್ , ಮಂಜುಳ, ಲತಾ, ಕಿಶೋರ್ ಜೈನ್, ಮುರಳಿ, ಪ್ರದೀಪ್ ಕುಮಾರ್, ಮಹೇಶ್, ಅಡಿಗೆ ಕಂಟ್ರಾಕ್ಟ್ ಕುಮಾರ್ , ಕಿರಣ್, ಅಂಬಳೆ ಶಿವಣ್ಣ, ವಿಜಯಾ, ಸಿಂಧೆ, ಧನುಷ್, ವಿನಯ್ ಸಾಗರ್, ಪವನ್, ಚೇತನ್ , ಹೇಮಂತ್, ಬಸವರಾಜು, ನಿಶಾಂತ್, ಭಾನು ಕುಮಾರ್, ಅಜ್ಗರ್, ರಮೇಶ್, ಸಂದೇಶ್ , ಪಾರ್ವತಿ, ದ್ರಾಕ್ಷಾಯಿಣಿ, ರಾಜೇಂದ್ರ, ಮೋಹನ್, ಕಿಟ್ಟಿ, ಗೋವಿಂದ್ , ಸೋಮು, ಸುರೇಶ್, ದೀಪಕ್, ವಿನಯ್, ಟಿಪೇಶ್, ಶಿವರಾಜ್, ನಂಜುಂಡಸ್ವಾಮಿ , ದೇವೇಂದ್ರ ಸ್ವಾಮಿ, ಗಾಯತ್ರಿ , ಸುಶೀಲಾ , ಮಧುರ, ರಿಂಕು, ರಾಮಸ್ವಾಮಿ ಮತ್ತಿತರರು ಹಾಜರಿದ್ದರು.

ಮೋದಿ‌ಜಿ ಹುಟ್ಟುಹಬ್ಬ:ಆರೋಗ್ಯಾಧಿಕಾರಿ,ಪೌರ‌ ಕಾರ್ಮಿಕರಿಗೆ ಅಭಿನಂದನೆ Read More

ಮಹಾರಾಷ್ಟ್ರದ ಜನರನ್ನು ಬಿಜೆಪಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ: ಸಿ.ಎಂ

ಸಂಡೂರು: ಮಹಾರಾಷ್ಟ್ರದ ಜನರನ್ನು ಬಿಜೆಪಿ ಸರಣಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಂಡೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಎಂ,ಮಹಾರಾಷ್ಟ್ರದ ಬಿಜೆಪಿಯು ಕರ್ನಾಟಕ ಸರ್ಕಾರ ವಾದಾ ಕಿಯಾ: ಧೋಖಾ ದಿಯಾ ಎಂದು ಸುಳ್ಳು ಜಾಹಿರಾತು ನೀಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎಂಬ ಅರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೆ ನೀಡಿದೆ ಎಂದು ಕಿಡಿಕಾರಿದರು.

ಸುಳ್ಳಿನ ಜಾಹಿರಾತನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಅವರು ಅವರದೇ ಶೈಲಿಯಲ್ಲಿ ವಾದಾ ದಿಯಾ ಪೂರಾ ಕಿಯಾ ಎಂದು ತಿರುಗೇಟು ನೀಡಿದರು.

ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂತ ಹೇಳಿದ್ರಲ್ಲಾ ಮೋದಿಯವರೇ ಕೊಟ್ರಾ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಉದ್ಯೋಗ ಸೃಷ್ಟಿ ಮಾಡಿದ್ರಾ ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮಾಡಿದ್ರಾ ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದರು.

ಮಹಾರಾಷ್ಟ್ರದ ಜನರನ್ನು ಬಿಜೆಪಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ: ಸಿ.ಎಂ Read More

ನರೇಂದ್ರ ಮೋದಿಯವರ ದಾರಿಯಲ್ಲೇ ನಾವೆಲ್ಲ ಸಾಗಬೇಕು:ಎಲ್.ನಾಗೇಂದ್ರ

ಮೈಸೂರು: ಪಕ್ಷಕ್ಕಾಗಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ದಾರಿಯಲ್ಲೇ ನಾವೆಲ್ಲರೂ ಸಾಗಬೇಕು ಎಂದು
ಬಿಜೆಪಿ ನಗರ ಅಧ್ಯಕ್ಷ ಎಲ್. ನಾಗೇಂದ್ರ ಹೇಳಿದರು.

ನಗರದ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಸ್ಟ ಮತ್ತು ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಮೋದಿಯವರ ಹುಟ್ಟುಹಬ್ಬ ಪ್ರಯುಕ್ತ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಈ ವೇಳೆ ಅವರು ಜನರಿಗೆ ಚಹಾ ವಿತರಿಸಿದರು

ಯಾವುದೇ ಪ್ರತಿಫಲಾಕ್ಷೆ ಇಲ್ಲದೆ 18 ಗಂಟೆಗಳ ಕಾಲ ದೇಶ ಸೇವೆ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ದೇಶಧ ಯುವ ಸಮೂಹ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೆ ಮತ್ತಷ್ಟು ಹುರುಪು ತುಂಬುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಪ್ರಧಾನ ಕಾರ್ಯದರ್ಶಿ ಬಿ ಎಂ ರಘು, ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್, ಬಿಜೆಪಿ ವೈದ್ಯಕೀಯ ಪ್ರಕೋಸ್ಟ ಸಂಚಾಲಕರಾದ ಗಿರೀಶ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಪ್ರಧಾನ ಕಾರ್ಯದರ್ಶಿ ದಾಸ್ ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯರಾದ ರಂಗಸ್ವಾಮಿ, ಕೇಬಲ್ ವಿಜಿ, ಕುಮಾರ್ ಗೌಡ, ಸೂರಜ್, ಸದಾಶಿವ್, ದಾರಿಪುರ ಚಂದ್ರಶೇಖರ್, ಅರವಿಂದ್, ಮತ್ತಿತರರು ಹಾಜರಿದ್ದರು.

ನರೇಂದ್ರ ಮೋದಿಯವರ ದಾರಿಯಲ್ಲೇ ನಾವೆಲ್ಲ ಸಾಗಬೇಕು:ಎಲ್.ನಾಗೇಂದ್ರ Read More

ನಾಗಮಂಗಲ ಗಲಭೆ: ಪ್ರಭಾವಿಗಳಾಗಲಿ ಕಠಿಣ ಕ್ರಮ ಆಗಲಿ-ಸೋಮಣ್ಣ

ಮೈಸೂರು: ನಾಗಮಂಗಲ ಗಲಭೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ ಅವರ ಮೇಲೆ ಕ್ರಮ ಆಗಬೇಕು ಎಂದು ಕೇಂದ್ರ ಸಚಿವ
ಗೃಹ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಸಚಿವರು ಹಿರಿಯರು, ಅನುಭವಿಗಳು,
ಯಾವ ಕಾರಣಕ್ಕಾಗಿ ಇದನ್ನ ಸಣ್ಣ ಪ್ರಕರಣ ಎಂದಿದ್ದಾರೊ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಮೊದಲು ಮತ ಓಲೈಕೆ ರಾಜಕಾರಣ ಬಿಡಬೇಕು,ಎಲ್ಲಕ್ಕಿಂತ ದೇಶ ಮುಖ್ಯ
ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕು,
ಗಣೇಶ ಮೂರ್ತಿ ನಮ್ಮ ಭಾವನೆಗಳ ಸಂಕೇತ
ಅದರ ಮೆರವಣಿಗೆ ಅಡ್ಡಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸೋಮಣ್ಣ‌ ಹೇಳಿದರು.

ಗಣಪತಿ ಪೂಜೆ‌ ವೇಳೆ ಮುಖ್ಯ ನ್ಯಾಯಾಧೀಶರ ಜೊತೆಗೆ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ,ಅದರಲ್ಲಿ ತಪ್ಪೇನಿದೆ,
ಇಬ್ಬರು ರಾಷ್ಟ್ರದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು,ಇಬ್ಬರು ಸೇರಿ ಗಣಪತಿ ಪೂಜೆ ಮಾಡಿದರೆ ಅದರಲ್ಲಿ ತಪ್ಪನ್ನೇಕೆ ಹುಡುಕಬೇಕು,ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಎಂದು ಸೋಮಣ್ಣ ಕಾಂಗ್ರೆಸ್ ನವರಿಗೆ‌ ಟಾಂಗ್ ನೀಡಿದರು.

ಅವರಿಬ್ಬರು ರಾಷ್ಟ್ರದ ಉನ್ನತಿಗಾಗಿ ದುಡಿಯುತ್ತಿದ್ದಾರೆ,
ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ,
ಇದನ್ನೇ ದೊಡ್ಡ ವಿಚಾರ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಹೇಳಿದರು.

ನಾಗಮಂಗಲ ಗಲಭೆ: ಪ್ರಭಾವಿಗಳಾಗಲಿ ಕಠಿಣ ಕ್ರಮ ಆಗಲಿ-ಸೋಮಣ್ಣ Read More