37 ಮೊಬೈಲ್ ವಾರಸುದಾರರಿಗೆ ನೀಡಿದ ದೇವರಾಜ ಪೊಲೀಸರು

ಮೈಸೂರು: ಕಳೆದುಹೋಗಿದ್ದ 37 ಮೊಬೈಲ್ ಫೋನ್ ಗಳನ್ನು ದೇವರಾಜ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು,ವಾರಸುದಾರರಿಗೆ
ನೀಡಿದ್ದಾರೆ.

ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಘು.ಕೆ.ಆರ್. ಉಪ ನಿರೀಕ್ಷಕರಾದ ಜಯಕೀರ್ತಿ,ಪ್ರಭು, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ್, ಸುನೀಲ್, ಮಧುಕೇಶ್ ಮಹೇಶ್, ಶಶಿಕಿರಣ್ ಅವರು CEIR Portal ಮೂಲಕ ಮೊಬೈಲ್ ಪೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ತಲುಪಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.

37 ಮೊಬೈಲ್ ವಾರಸುದಾರರಿಗೆ ನೀಡಿದ ದೇವರಾಜ ಪೊಲೀಸರು Read More

ಕಂಟೈನರ್ ಅಪಹರಿಸಿ 3 ಕೋಟಿ ಮೊಬೈಲ್ ದೋಚಿದ ಭೂಪ!

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಸಾವಿರಾರು ಮೊಬೈಲ್ ಗಳನ್ನು ತುಂಬಿದ್ದ ಕಂಟೈನರ್‌ ಒಂದನ್ನ ಅಪಹರಿಸಿ ಮೊಬೈಲ್ ದೋಚಿರುವ ಘಟನೆ ನಡೆದಿದೆ.

ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಕಳವು ಮಾಡಲಾಗಿದೆ.

ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಕಂಟೈನರ್ ಬೆಂಗಳೂರನ್ನು ತಲುಪೆ ಇರಲಿಲ್ಲ. ಕಳೆದ ನ. 22ರಂದು ಈ ಘಟನೆ ನಡೆದಿದೆ. ಕಂಟೈನರ್ ಸರಿಯಾದ ಸಮಯಕ್ಕೆ ಬೆಂಗಳೂರು ತಲುಪದ ಕಾರಣ ಅನುಮಾನಗೊಂಡ ಕಂಪನಿಯವರು ಗಾಡಿಯ ಜಿಪಿಎಸ್‌ ಪರಿಶೀಲಿಸಿದ್ದಾರೆ.ಆಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ನಿಂತಿರುವುದು ಗೊತ್ತಾಗಿದೆ.

ಹೀಗಾಗಿ ಗಾಡಿಯ ಲೊಕೇಶನ್ ಮಾಹಿತಿಯನ್ನು ಪೆರೇಸಂದ್ರೆ ಠಾಣೆ ಪೊಲೀಸರಿಗೆ ಕಂಪನಿಯವರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಖಾಲಿ ಕಂಟೈನ‌ರ್ ಅಲ್ಲಿ ನಿಲ್ಲಿಸಿ ಚಾಲಕ ನಾಪತ್ತೆಯಾಗಿರುವುದು ಗೊತಗತಾಗಿದೆ.

ಕಂಟೈನರ್ ನ ಚಾಲಕ ರಾಹುಲ್ ಕೋಟ್ಯಂತರ ರೂಪಾಯಿಗಳ ಮೊಬೈಲ್ ದೋಚಿ ಪರಾರಿಯಾಗಿದ್ದು,ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕಂಟೈನರ್ ಅಪಹರಿಸಿ 3 ಕೋಟಿ ಮೊಬೈಲ್ ದೋಚಿದ ಭೂಪ! Read More