ಅಂತರ್ಜಲ ಇದ್ದರೂ ನೀರು ಕೊಡಲಾಗುತ್ತಿಲ್ಲ-ಶಾಸಕ ಎಂ.ಆರ್. ಮಂಜುನಾಥ್ ವಿಷಾದ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.7: ಬೇರೆ ಜಿಲ್ಲೆಯವರು ಸಾವಿರಾರು ಕೋಟಿ ಹಣ ತಂದು ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೀರಾವರಿ ಕಲ್ಪಿಸಿಕೊಂಡು ಬೆಳೆ ಬೆಳೆಯುತ್ತಾರೆ ಆದರೆ ಇಲ್ಲಿ ಹತ್ತಿರದಲ್ಲೇ ನೀರು ಹರಿಯುತ್ತಿದ್ದರು ಏಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್
ಪ್ರಶ್ನಿಸಿದ್ದಾರೆ.

ತಾಲ್ಲೂಕಿನ ಸತ್ತೇಗಾಲ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ನೀರಾವರಿ ಇಲಾಖೆ ಏರ್ಪಡಿಸಿದ್ದ ಧನಗೆರೆ ಜಹಗೀರ್ ದಾರ್ ನಾಲೆ, ಸತ್ತೇಗಾಲ ಏತ ನೀರಾವರಿ ಹಾಗೂ ಸರಗೂರು ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತಾಸಕ್ತಿ ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಆಲಿಸಿ ನಂತರ ಶಾಸಕರು ಮಾತನಾಡಿದರು.

ಇದುವರೆಗೆ ಕಬಿನಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರು ಇರಲಿಲ್ಲ. ಆ ಜವಾಬ್ದಾರಿಯನ್ನು ಎಇಇ ಗಳಾದ ರಾಮಕೃಷ್ಣ ಹಾಗೂ ರಮೇಶ್ ನೋಡಿಕೊಳ್ಳುತ್ತಿದ್ದರು ಈಗ ಕಾರ್ಯಪಾಲಕ ಅಭಿಯಂತರರಾಗಿ ಈರಣ್ಣರವರು ಬಂದಿದ್ದಾರೆ.

ನಾನು ಪ್ರತಿ ಭಾರಿ ಇಲ್ಲಿಗೆ ಬಂದಾಗಲೂ ನಾಲೆ ದುರಸ್ತಿ ಪಡಿಸಿ ಕೊಡುವಂತೆ ಒತ್ತಾಯ ಕೇಳಿ ಬರುತ್ತಿತ್ತು ಆದರೂ ಇದು ಜವಾಬ್ದಾರಿ ಕೆಲಸ. ಬೇರೆ ಜಿಲ್ಲೆಯವರು ಸಾವಿರಾರು ಕೋಟಿ ಹಣ ತಂದು ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೀರಾವರಿ ಕಲ್ಪಿಸಿಕೊಂಡು ಬೆಳೆ ಬೆಳೆಯುತ್ತಾರೆ ಆದರೆ ಇಲ್ಲಿ ಹತ್ತಿರದಲ್ಲಿ ನೀರು ಹರಿಯುತ್ತಿದ್ದರು ಏಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ,ಇದು ಮದುವೆ ಮನೆಯಲ್ಲಿ ಗಂಜಿಗೆ ಅತ್ತಂತಾಗಿದೆ ಇಲ್ಲಿನ ಸ್ಥಿತಿ‌ ಎಂದು ‌ಬೇಸರ ಪಟ್ಟರು.

ಈ ಹೋಬಳಿಯ ರೈತರಿಗೆ ನೀರು ಕೊಡುವುದು ಸುಲಭ. ಈ ಜ್ವಲಂತ ಸಮಸ್ಯೆಗಳನ್ನು ನಿಮ್ಮ ಮುಂದೆ ಕುಳಿತು ಪರಿಹರಿಸಲು ಬಂದಿದ್ದೇನೆ ಕಾಲಾವಕಾಶ ಕೊಡಿ ವರ್ಷಕ್ಕೆ ಎರಡು ಬೆಳೆ ಬೆಳೆಯುವಂತಹ ಕೆಲಸ ಮಾಡುತ್ತೇನೆ. ಇದರಿಂದ ಧನಗೆರೆ ಜಹಗೀರ್ ದಾರ್ ನಾಲೆಯ 6060 ಎಕರೆ, ಸತ್ತೇಗಾಲ ಏತ ನೀರಾವರಿಯ 500 ಎಕರೆ ಹಾಗೂ ಸರಗೂರು ಅಚ್ಚುಕಟ್ಟು ವ್ಯಾಪ್ತಿಯ 450 ಎಕರೆ ರೈತರ ಕುಟುಂಬಗಳಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು.

ಆದರೆ ಹನೂರು ಕ್ಷೇತ್ರದ ಉಳಿದ ಹೋಬಳಿಗಳ ರೈತರ ಜಮೀನುಗಳಿಗೆ ನೀರು ತೆಗೆದುಕೊಂಡು ಹೋಗುವುದು ದುಸ್ಥರ. ಕೃಷಿಗೆ ನೀರಿಲ್ಲದೆ ಈಗಾಗಲೇ ಶೇಕಡ 30 ರಷ್ಟು ರೈತರು ಗುಳೆ ಹೋಗಿದ್ದಾರೆ, ಒಟ್ಟಾರೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ 52 ಕೋಟಿ ಅನುದಾನ ಬಂದಿದೆ. ಅದನ್ನು ಅನುಮೋದನೆ ಮಾಡಿಸಿ ಹಣ ಬಿಡುಗಡೆ ಮಾಡಿಸಲು ಕ್ರಮವಹಿಸುತ್ತೇನೆ. 52 ಕೋಟಿ ರೂ.ಗಳಿಗೆ ಡಿ.ಪಿ.ಆರ್ ಮಾಡದೆ ಆಗಲೇ ಎರಡು ಕೋಟಿ ಅನುದಾನ ತಂದಿದ್ದೆ ಎಂದರು.

ನೀರಿನ ಲಭ್ಯತೆಗೆ ದಾರಿ ಹುಡುಕುತ್ತೇನೆ ಆದರೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ವಾಗಬೇಕಿದೆ. ಇಲ್ಲಿ ಕನಿಷ್ಠ ಅಂತರ್ಜಲವಿದ್ದು, ಹೆಚ್ಚು ಕೆಲಸವಾಗಬೇಕು, ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದೇನೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಮುಂದಿನ ವರ್ಷದೊಳಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಮಂಜುನಾಥ್ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕಬಿನಿ ಕಚೇರಿಯಲ್ಲಿ ಸಭೆ ಕರೆಯಲು ಚರ್ಚಿಸಲು ಅವಕಾಶ ಮಾಡಿಕೊಡಿ,ಇವೇ ಮುಂತಾದ ಬೇಡಿಕೆಗಳನ್ನು ರೈತರು ಶಾಸಕರ ಮುಂದಿಟ್ಟರು.

ಮಾರಮ್ಮ ದೇವಸ್ಥಾನದಿಂದ ಕಾವೇರಿ ನದಿ ಹೋಗುವ ರಸ್ತೆ ತೀರಾರ ಹದಗೆಟ್ಟಿದ್ದು ಕೂಡಲೇ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು 3.20 ಕೋಟಿ ರೂ ಗಳಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
 
ಕಬಿನಿ ಕಾರ್ಯಪಾಲಕ ಅಭಿಯಂತರ ಈರಣ್ಣ ಮಾತನಾಡಿ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡುತ್ತೇವೆ. ಶೇಕಡ 75 ರಷ್ಟು ಇಲ್ಲಿ ಒಣ ಭೂಮಿ ಇದೆ ಶೇ. 35 ರಿಂದ 40 ರಷ್ಟು ರೈತರು ಗುಳೆ ಹೋಗಿದ್ದಾರೆ ಅವರುಗಳನ್ನು ಕರೆತಂದು ಮತ್ತೆ ರೈತರಿಂದ ಪುನರ್ ಕೃಷಿ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ದೇವಿಕಾ, ಕವಿತಾ, ಗೋವಿಂದ, ಶಾಂತಕುಮಾರಿ, ಚಿಕ್ಕರವಳಿ, ಕಾಂತಣ್ಣ, ಕಬಿನಿ ಇಲಾಖೆ ಕಾರ್ಯಪಾಲಕ ಅಬಿಯಂತರ  ಈರಣ್ಣ,ಸಹಾಯಕ ಕಾರ್ಯಪಾಲಕ ಅಬಿಯಂತರರುಗಳಾದ ರಾಮಕೃಷ್ಣ, ರಮೇಶ್, ಜಿ.ಪಂ. ಎಇಇ ಹಾಗೂ ಕೆ.ಆರ್.ಎ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ ಸತ್ತೇಗಾಲ ಪಿಡಿಒ ಜುನೈದ್ ಅಹಮದ್, ಧನಗೆರೆ ಪಿಡಿಒ ಕಮಲ್ ರಾಜು, ಮತ್ತಿತರರು ಪಾಲ್ಗೊಂಡಿದ್ದರು.

ಅಂತರ್ಜಲ ಇದ್ದರೂ ನೀರು ಕೊಡಲಾಗುತ್ತಿಲ್ಲ-ಶಾಸಕ ಎಂ.ಆರ್. ಮಂಜುನಾಥ್ ವಿಷಾದ Read More

ಯತ್ನಾಳ್ ಹೊಸ ಪಕ್ಷ:ಯಡಿಯೂರಪ್ಪ ಓಲೈಕೆ ಬಿಡಲಿ-ಹೈಕಮಾಂಡ್ ಗೆ ಎಚ್ಚರಿಕೆ

ವಿಜಯಪುರ: ಬಿಜೆಪಿಯಿಂದ ನಾನು ಉಚ್ಛಾಟನೆಯಾಗಿಲ್ಲ,ಹೊರಗೂ ಬಂದಿಲ್ಲ,ಒಂದು ವೇಳೆ ಅವರಿಗೆ ಬುದ್ದಿ ಬಂದು ನನ್ನನ್ನ ಕರೆದರೆ ಇಲ್ಲೇ ಇರುತ್ತೇನೆ,ಇಲ್ಲದಿದ್ದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಕುಟುಂಬ ರಾಜಕಾರಣಕ್ಕೆ ಬೆಲೆ ಕೊಡುತ್ತಿದ್ದಾರೆ ಅವರು ಯಡಿಯೂರಪ್ಪ ಮತ್ತು ಅವರ ಕುಟುಂಬದವರನ್ನು ದೂರ ಇಡುವವರೆಗೂ ಅವರು ಉದ್ದಾರ ಆಗುವುದಿಲ್ಲ ಎಂದು ಹೇಳಿದರು.

ನನ್ನದೇನಿದ್ದರೂ ಇನ್ನು ಸಿಕ್ಸರ್ ಬಾರಿಸುವುದಷ್ಟೇ, ಫೋರ್, ಡಬಲ್,ಸಿಂಗಲ್ ಯಾವುದೂ ಇಲ್ಲ, ಸಿಕ್ಸರ್ ಹೊಡೆದೆ ನಾನು ಮುಂದಿನ ನಡೆ ತೀರ್ಮಾನಿಸುತ್ತೇನೆ, ಅನಿವಾರ್ಯವಾಗಿ ಹೊಸ ಪಕ್ಷ ಕಟ್ಟಬೇಕಾಗುತ್ತದೆ ಎಂದು ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು.

ಚುನಾವಣೆಗೆ ಇನ್ನು ಮೂರು ವರ್ಷಗಳು ಇದೆ ಅಲ್ಲಿಯವರೆಗೂ ನಮ್ಮ ಅಭಿಮಾನಿಗಳು ಮತ್ತು ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ನಮ್ಮ ಜನ ಏನು ತೀರ್ಮಾನ ತೆಗೆದುಕೊಳ್ಳುವಂತೆ ಹೇಳುತ್ತಾರೋ ನೋಡುತ್ತೇನೆ, ಬಿಜೆಪಿಯವರಿಗೆ ಬುದ್ಧಿ ಬಂದು ಯಡಿಯೂರಪ್ಪ ಕುಟುಂಬವನ್ನು ದೂರ ಇಟ್ಟು ಹಿಂದುತ್ವಕ್ಕೆ ಬೆಲೆಕೊಟ್ಟು ನನ್ನನ್ನು ಬೆಂಬಲಿಸಿದರೆ ಎಲ್ಲಿಯೂ ಹೋಗುವುದಿಲ್ಲ ಇಲ್ಲೇ ಮುಂದುವರೆಯುತ್ತೇನೆ ಇಲ್ಲದಿದ್ದರೆ ನಾನು ಪಕ್ಷ ಕಟ್ಟುತ್ತೇನೆ,ಪ್ರೊಸೆಸಿಂಗ್ ಪ್ರಾರಂಭ ವಾಗಿದೆ ಎಂದು ನೇರವಾಗಿ ಬಸನಗೌಡ ಪಾಟೀಲ್ ನುಡಿದರು.

ಯತ್ನಾಳ್ ಹೊಸ ಪಕ್ಷ:ಯಡಿಯೂರಪ್ಪ ಓಲೈಕೆ ಬಿಡಲಿ-ಹೈಕಮಾಂಡ್ ಗೆ ಎಚ್ಚರಿಕೆ Read More

ಹರಿಶ್ಚಂದ್ರಘಾಟ್ ನಲ್ಲಿ ೧.೦೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶ್ರೀವತ್ಸ‌‌ ಚಾಲನೆ

ಮೈಸೂರು: ಕೆ.ಆರ್ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಗುರುವಾರ
ಹರಿಶ್ಚಂದ್ರಘಾಟ್ ಸ್ಮಶಾನಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.

ಇದೇ ವೇಳೆ ಸ್ಮಶಾನದಲ್ಲಿ೧.೦೫ ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಮಳೆ ಬಂದರೇ ನೀರು ನಿಂತು ಸಮಸ್ಯೆ ಉಂಟಾಗುತ್ತದೆ ಎಂಬ ಜನರ ದೂರಿಗೆ ಸ್ಪಂದಿಸಿ, ಮುಡಾ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಸ್ಮಶಾನದಲ್ಲಿ ಪರಿಶೀಲಿಸಿ, ಸಮಸ್ಯೆ ಪರಿಹಾರಕ್ಕೆ ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಸ್ಮಶಾನದ ಆವರಣದಲ್ಲಿ ಸುಮಾರು ೯೮ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಯೋಗ್ಯಾಸ್ ಉತ್ಪಾದನೆಯ ಕಾಮಗಾರಿಯನ್ನು ಪರಿಶೀಲಿಸಿ, ಅಗತ್ಯ ಮಾಹಿತಿ ಪಡೆದುಕೊಂಡು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆದೇಶಿಸಿದರು.

ಇದೇ ವೇಳೆ ಪಿಂಜರಾಪೋಲ್ ರಸ್ತೆಯಲ್ಲಿ ಸಂಚರಿಸಿ ಈ ಮಾರ್ಗದಲ್ಲಿ ಮಳೆ ನೀರು ಮುಂದಕ್ಕೆ ಹರಿಯದೇ ತೊಂದರೆ
ಯಾಗುತ್ತಿರುವುದಕ್ಕೆ ಮಾರ್ಗ ಮಧ್ಯೆ ಕೌಂಪೌಂಡ್ ನಿರ್ಮಾಣ ಮಾಡಿರುವುದೆ ಕಾರಣ ಎಂಬುದನ್ನು ತಿಳಿದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಳೆ ನೀರು ಸರಾಗವಾಗಿ ಹರಿಯಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶ್ರೀವತ್ಸ ನಿರ್ದೇಶಿಸಿದರು.

ಹರಿಶ್ಚಂದ್ರಘಾಟ್ ನಲ್ಲಿ ೧.೦೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶ್ರೀವತ್ಸ‌‌ ಚಾಲನೆ Read More

ಶ್ರೀವತ್ಸ ಅವರಿಗೆ ಶುಭ‌ ಹಾರೈಕೆ

ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್ ಶ್ರೀವತ್ಸ ಅವರು ಅಗ್ರಹಾರದಲ್ಲಿ ನೂತನ ಶಾಸಕರ ಕಚೇರಿ ಕರ್ತವ್ಯ ಭವನ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಅವರನ್ನು ಬ್ರಾಹ್ಮಣ‌ ಸಂಘಟನೆಯವರು ಗೌರವಿಸಿ ಶುಭ ಹಾರಿಸಿದರು.

ಕಾರ್ಯಕ್ರಮದಲ್ಲಿ ಟಿ ಎಸ್ ಶ್ರೀವತ್ಸ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ನೇತೃತ್ವದಲ್ಲಿ ಅಡಿಗೆ ಗುತ್ತಿಗೆದಾರರಾದ ಹೆಚ್ ಎಸ್. ಪ್ರಶಾಂತ್ ತಾತಾಚಾರ್ (ಕಣ್ಣ), ಚಕ್ರಪಾಣಿ, ಮತ್ತಿತರರು ಶ್ರೀ ರಾಮಾನುಜಾಚಾರ್ಯರ ಭಾವಚಿತ್ರ ನೀಡಿ ಶುಭ‌ ಹಾರೈಸಿದರು.

ಶ್ರೀವತ್ಸ ಅವರಿಗೆ ಶುಭ‌ ಹಾರೈಕೆ Read More

ಮುನಿರತ್ನ ಬಾಯಿಯನ್ನು ಮೊದಲು ಶುದ್ಧ ಮಾಡಿ:ಸಿದ್ದರಾಮಯ್ಯ

ಬೆಂಗಳೂರು: ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಮೊದಲು ಶುದ್ಧ ಮಾಡಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಕ್ರೋಶದಿಂದ ಹೇಳಿದ್ದಾರೆ.

ಬಾಯಿ ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ದಿ ಹೇಳಿ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿಯವರ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಬರೀ ಚುನಾವಣಾ ಕಾಲಕ್ಕಷ್ಟೇ ಸೀಮಿತ.ಚುನಾವಣೆ ಮುಗಿದರೆ ಈ ನಾಡಿನ ದಲಿತರು, ಶೋಷಿತರನ್ನು ಅವರು ಹಿಂದೂವಾಗಿ, ತಮ್ಮಲ್ಲಿ ಒಬ್ಬನಾಗಿ ಕಾಣುವುದಿಲ್ಲ, ಈ ಸಮುದಾಯಗಳ ಬಗ್ಗೆ ಬಿಜೆಪಿ ನಾಯಕರ ಮನಸ್ಸಿನಲ್ಲಿ ತುಂಬಿರುವ ದ್ವೇಷ, ಅಸೂಯೆ, ಅಸಹನೆಗೆ ಮುನಿರತ್ನ ಬಾಯಿಂದ ಉದುರಿದ ಅಣಿಮುತ್ತುಗಳು ಸಾಕ್ಷಿ ಎಂದು ಹೇಳಿದ್ದಾರೆ.

ವೈರಲ್‌ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ,ಆತನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇವೆಲ್ಲ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ ಎಂದು ಸಿಎಂ ಹೇಳಿದ್ದಾರೆ.

ಶೇ.40 ಕಮಿಷನ್‌ ಸರ್ಕಾರ ತೊಲಗಿದರೂ ಅದರಿಂದ ಹುಟ್ಟಿರುವ ರಕ್ತಬೀಜಾಸುರರು ಉಳಿದಿದ್ದಾರೆ.ಈಗ ನಾವು ಕೈಗೆತ್ತಿಕೊಂಡಿರುವ ಸ್ವಚ್ಚತಾ ಅಭಿಯಾನದಲ್ಲಿ ಈ ಹೊಲಸನ್ನು ಎಲ್ಲಿ ಇಡಬೇಕು ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ ಎಂದಿದ್ದಾರೆ.

ಮಾದ್ಯಮಗಳ ಮುಂದೆ ನಿಂತು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಉಪದೇಶ ಕೊಡುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೆಂದ್ರ ಮತ್ತು ವಿಪಕ್ಷ ನಾಯಕ ಆರ್ ಆಶೋಕ್ ಅವರಿಗೆ ತಮ್ಮದೇ ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಇದೆಯೆ ಎಂದು ಸಿದ್ದು ಪ್ರಶ್ನಿಸಿದ್ದಾರೆ.

ಈಗ ಬಿಜೆಪಿ ನಾಯಕರಿಗೆ ಉಳಿದಿರುವುದು ಎರಡೇ ದಾರಿ.ಒಂದು ಮುನಿರತ್ನ ಅವರ ಹೇಳಿಕೆಗೆ ಬೆಂಬಲ ಕೊಟ್ಟು ತಾವು ದಲಿತ ವಿರೋಧಿಗಳು ಎಂದು ಒಪ್ಪಿಕೊಳ್ಳುವುದು, ಇಲ್ಲವೇ ನಾಡಿನ ದಲಿತ ಸಮುದಾಯದವರ ಬಳಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬುವುದು ಎಂದು ಮುಖ್ಯ ಮಂತ್ರಿ ಹೇಳಿದ್ದಾರೆ.

ಮುನಿರತ್ನ ಬಾಯಿಯನ್ನು ಮೊದಲು ಶುದ್ಧ ಮಾಡಿ:ಸಿದ್ದರಾಮಯ್ಯ Read More

ಅಕ್ರಮ ಹಣ ವರ್ಗಾವಣೆ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತಿತರರನ್ನು ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿದೆ.

ರಾಷ್ಟ್ರೀಯ ರಾಜಧಾನಿಯ ಓಖ್ಲಾ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಬೆಳಗ್ಗೆ ಶೋಧ ನಡೆಸಿದ ನಂತರ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್ ಐಆರ್ ಹಾಗೂ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ದೆಹಲಿ ಎಸಿಬಿ ದಾಖಲಿಸಿರುವ ಮತ್ತೊಂದು ಎಫ್ ಐಆರ್ ನಿಂದ ಅಮಾನತುಲ್ಲಾ ಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೊನೆಯದಾಗಿ ಪ್ರಶ್ನಿಸಿದಾಗಿನಿಂದ ಖಾನ್ ಕನಿಷ್ಠ ಹತ್ತು ಇಡಿ ಸಮನ್ಸ್‌ಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ Read More