ಮೈಸೂರು: ಮೈಸೂರಿನ ವಾರ್ಡ್ ನಂ.57 ಮತ್ತು 43ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀವತ್ಸ ಗುದ್ದಲಿ ಪೂಜೆ ನೆರವೇರಿಸಿದರು.
ವಾರ್ಡ್ ನಂ.7 ರ ಆದಿಚುಂಚನಗಿರಿ ರಸ್ತೆ ಆಹಾ ಬೊಂಬಾಟ್ ಹೋಟೆಲ್ ಮುಂಭಾಗ ಚರಂಡಿ ನಿರ್ಮಾಣದ 15ಲಕ್ಷ 25 ಸಾವಿರ ರೂ. ಹಾಗೂ ಪ್ರಮತಿ ಶಾಲೆ ಪಶ್ಚಿಮ ರಸ್ತೆಯ ಡೆಕ್ ಸ್ಲ್ಯಾಬ್, ಪಾದಚಾರಿ ಮಾರ್ಗ ನಿರ್ಮಾಣದ 8ಲಕ್ಷದ 90 ಸಾವಿರ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ವಾರ್ಡ್ ನಂ.43ರ ಕೃಷ್ಣಮೂರ್ತಿ ಬಡಾವಣೆಯ ದಿಗಂತ ವೃತ್ತದ ಪಕ್ಕ 2ನೇ ಮತ್ತು3 ನೇ ಕ್ರಾಸ್ ಮುಖ್ಯ ರಸ್ತೆ ಅಭಿವೃದ್ಧಿ 45 ಲಕ್ಷ ರೂ. ಕಾಮಗಾರಿಗೆ ಚಾಲನೆ ನೀಡಿದರು.
ಇದೇ ವೇಳೆ ಶ್ರೀವತ್ಸ ಅವರು ಸ್ಥಳೀಯರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳುಗೆ ಸೂಚಿಸಿ, ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಆದೇಶಿಸಿದರು.
ಈ ವೇಳೆ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಮೇಶ್, ಜಗದೀಶ್, ಶಂಕರ್, ರಾಜೇಶ್, ಹೇಮಂತ್, ನಾಗೇಂದ್ರ, ಗೋಪಾಲ್ ರಾಜೇ ಅರಸ್, ಮಧು,ಗೋಪಿ, ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ರಾಕೇಶ್ ಗೌಡ, ಬಿಜೆಪಿ ಮುಖಂಡ ಪ್ರದೀಪ್ ಕುಮಾರ್, ಕಿಶೋರ್, ಆದಿತ್ಯ ಮತ್ತಿತರರು ಹಾಜರಿದ್ದರು.
ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಅವರು ವಾರ್ಡ್ ನಂ 52 ರ ವ್ಯಾಪ್ತಿಯ ಕೆ ಸಿ ಲೇಔಟ್ ನಲ್ಲಿ ಪಾದಯಾತ್ರೆ ಮಾಡಿ ನಾಗರೀಕರ ಕುಂದುಕೊರತೆ ಆಲಿಸಿದರು.
ಕೆ ಸಿ ಲೇಔಟ್ ದೊಡ್ಡ ಉದ್ಯಾನದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು, ಮಳೆ ನೀರು ಹರಿವು ತೊಂದರೆ, ಒಳಚರಂಡಿ ಹೂಳು ತೆಗೆಯುವ ಕಾರ್ಯ, ಮತ್ತು ರಾತ್ರಿ ವೇಳೆ ಬೀದಿ ನಾಯಿಗಳ ಕಾಟ ಸೇರಿದಂತೆ ಹಲವಾರು ಸಮಸ್ಯೆಗಳನ್ನ ಸಾರ್ವಜನಿಕರು ಶಾಸಕರಲ್ಲಿ ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಶ್ರೀವತ್ಸ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಛಾಯಾ ನವೀನ್,ಬಿಜೆಪಿ ಮುಖಂಡರಾದ ಪ್ರಸನ್ನ, ನವೀನ್,ಗೋಕುಲ್ ಗೋವರ್ಧನ್, ಹರೀಶ್, ಹೊಯ್ಸಳ,ಸಂತೋಷ್,ಶೇಖರ್, ವಿಜಯ ಲಕ್ಷ್ಮಿ,ಪದ್ಮ ಕೆ. ಸಿ ಬಡಾವಣೆ ನಿವಾಸಿಗಳ ಸಂಘದ ವಿಶ್ವನಾಥ್, ದರ್ಮೆಂದ್ರ,ನಿಂಗೆಗೌಡ, ವೆಂಕಟೇಶ್, ಕೃಷ್ಣ,ಪ್ರದೀಪ್ ಕುಮಾರ್, ಮಧು, ಕಿಶೋರ್ ಮತ್ತಿತರರು ಹಾಜರಿದ್ದರು.
ನಗರಪಾಲಿಕೆಯ ಹಿರಿಯ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಆರೋಗ್ಯ ಅಧಿಕಾರಿಗಳು ಶಾಸಕರಿಗೆ ಸಾಥ್ ನೀಡಿದರು.
ಮೈಸೂರು: ಮಲೆ ಮಾದೇಶ್ವರ ಸಂಸ್ಥೆ ವತಿಯಿಂದ ಸಿದ್ದಾರ್ಥ ಲೇಔಟ್ ನಲ್ಲಿರುವ ವೈಶಾಲಿ ಕಾನ್ವೆಂಟ್ ಮೈದಾನದಲ್ಲಿ ಸೆಪ್ಟೆಂಬರ್ 16ರ ಸಂಜೆ 5 ಗಂಟೆಗೆ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನದ ಪ್ರಚಾರ ಸಾಮಗ್ರಿಗಳನ್ನು ನಗರ ಪಾಲಿಕೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಶಾಸಕ ಟಿ ಎಸ್ ಶ್ರೀವತ್ಸ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಬದುಕಿನ ಭದ್ರತೆ ಜೊತೆಗೆ ನಿಷ್ಠೆ, ಸ್ನೇಹಕ್ಕೆ ಶ್ವಾನಗಳು ಹೆಸರುವಾಸಿಯಾಗಿವೆ ಎಂದು ಬಣ್ಣಿಸಿದರು.
ಮಾನವ ಸಹೋದ್ಯೋಗಿಗಳು ಮತ್ತು ಬಂಧುಗಳೊಂದಿಗೆ ಸ್ನೇಹ ಭಾವನೆಯನ್ನು ತೊರೆಯುತ್ತಿದ್ದಾನೆ. ನಾಯಿಗಳು ಜೀವನ ಸಂಗಾತಿಯ ಸ್ನೇಹವನ್ನು ನೀಡುವುದರ ಜೊತೆಗೆ ಬದುಕಿಗೆ ಭದ್ರತೆ ನೀಡುತ್ತವೆ ಎಂದು ತಿಳಿಸಿದರು.
ಮಲೆ ಮಾದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಮಹಾನ್ ಅಚ್ಚು ಮಾತನಾಡಿ ನೊಂದಣಿ ಶುಲ್ಕ 500 ರೂಪಾಯಿ ಇರುತ್ತದೆ, ವಿಜೇತರಿಗೆ 3 ಅತ್ಯುತ್ತಮ ಟ್ರೋಫಿ ಹಾಗು ಪ್ರಮಾಣ ಪತ್ರ ಹಾಗೂ ಸ್ಪರ್ಧಿಸಿದ ಎಲ್ಲಾ ಶ್ವಾನಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.
ಹೆಸರು ನೊಂದಾವಣಿಗೆ 7829340020 ಮೊಬೈಲ್ ನಂಬರ್ ಸಂಪರ್ಕಿಸಿ
ಬಿಜೆಪಿ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಲೋಹಿತ್, ನಾಗರಾಜ್, ಮೋಹನ್, ಕಿಶೋರ್ ಮತ್ತಿತರರು ಹಾಜರಿದ್ದರು.
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಅವರ ರಾಜಿನಾಮೆ ಪಡಿಯಬೇಕು ಎಂದು ಸರ್ಕಾರವನ್ನು ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ, ಸಂಜೆಯೊಳಗೆ ಭೈರತಿ ಸುರೇಶ್ ಅವರ ರಾಜೀನಾಮೆಯನ್ನೂ ಪಡೆಯಿರಿ ಎಂದು ಆಗ್ರಹಿಸಿದರು.
ಮುಡಾದಲ್ಲಿ ಅದ್ವಾನ ನಡೆಯಲು ಸಚಿವರೇ ಕಾರಣ, ಕೇವಲ ದಿನೇಶ್ ಕುಮಾರ್ ಅಮಾನತು ಸಾಲದು ಅಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಶಾಸಕ ಶ್ರೀವತ್ಸ ಹೇಳಿದರು.
ಮೈಸೂರು: ನಗರದ ವಲಯ 3ರ ವ್ಯಾಪ್ತಿಯ ವಾರ್ಡ್ ನಂಬರ್ 47ರಲ್ಲಿ ಮನೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಶಾಸಕ ಟಿ.ಎಸ್. ಶ್ರೀವತ್ಸ ಆಲಿಸಿದರು.
ಮುಂಜಾನೆ 7.30 ಕ್ಕೆ ಕುವೆಂಪು ಶಾಲೆಯಿಂದ ಪಾದಯಾತ್ರೆ ಪ್ರಾರಂಭ ಮಾಡಿದ ಶಾಸಕರು ಸರಸ್ವತಿಪುರಂ 15,14,13,12 ನೆ ಕ್ರಾಸ್ ಭಾಗದ ಎಲ್ಲಾ ಮನೆ ಮನೆಗೆ ತೆರಳಿ ಸಮಸ್ಯೆಯನ್ನು ಆಲಿಸಿದರು.
ಸಮಸ್ಯೆಗಳನ್ನು ಬೇಗ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆಗಳಲ್ಲಿ ಕಸ ತೆಗೆಸುವುದು, ಮಳೆ ಬಂದಾಗ ನೀರು ನಿಲ್ಲುವುದನ್ನು ಸರಿಪಡಿಸಬೇಕು, ಸುತ್ತಮುತ್ತ ಹಾಗೂ ಪಾರ್ಕ್ ಗಳಲ್ಲಿ ರಾತ್ರಿ ಸಮಯದಲ್ಲಿ ಕೆಲವು ಪುಂಡ ಯುವಕರು ಮಧ್ಯಪಾನ ಮಾಡಿ ಬಾಟಲಿ ತಂದು ಹಾಕುತ್ತಾರೆ ಇದಕ್ಕೆ ಕಡಿವಾಣ ಹಾಕಿ,ಬೆಳ್ಳಗಿನ ಸಮಯ ವಾಯು ವಿಹಾರಿಗಳು ಹಿರಿಯ ನಾಗರೀಕರು ಪಾರ್ಕಿನಲ್ಲಿ ವಾಕಿಂಗ್ ಮಾಡುವುದರಿಂದ ಶೌಚಾಲಯ ವ್ಯವಸ್ಥೆ ಮಾಡಿಕೊಡಿ ಎಂದು ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ ನಾಗರಾಜು ಅವರನ್ನು ಕರೆದು ಈ ಪಾರ್ಕಿನ ಸುತ್ತಮುತ್ತ ಮತ್ತು ಈ ಭಾಗಗಳಲ್ಲಿ ದಿನನಿತ್ಯ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಮಾಡಬೇಕೆಂದು ಶಾಸಕ ಶ್ರೀವತ್ಸ ತಿಳಿಸಿದರು.
ಆರೋಗ್ಯ ಅಧಿಕಾರಿ ಪ್ರಭಾಕರ್ ಅವರಿಗೆ ಇಲ್ಲೆಲ್ಲೂ ಕೂಡ ಕಸ ಹಾಕುವ ಮತ್ತು ಗುಡಿಸುವವರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಈ ಭಾಗದಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಟಿ.ಎಸ್. ಶ್ರೀವತ್ಸ ಸೂಚಿಸಿದರು.
ಎಇಇ ಧನುಷ್,ಅಧಿಕಾರಿ ಬಸವಣ್ಣ, ವಾಟರ್ ಸಪ್ಲೈಯರ್ ಮಂಜುನಾಥ್, ಮಾಜಿ ಮಹಾಪೌರ ಶಿವಕುಮಾರ್, ಉಪೇಂದ್ರ, ಶ್ರೀನಿವಾಸ್, ರಮೇಶ್, ಲಕ್ಷ್ಮಣ್, ರಾಮದಾಸ್, ದೀಪಕ್, ಜೋಗಿ ಮಂಜು, ರಾಕೇಶ್ ಗೌಡ, ಜಯರಾಮ್, ಪ್ರದೀಪ್, ಕಿಶೋರ್,ಗುರುದತ್ತ, ಪಾರ್ಥ ಸಾರಥಿ, ನಿಶಾಂತ್, ಆಪ್ತ ಸಹಾಯಕ ಆದಿತ್ಯ ಮತ್ತಿತರರು ಹಾಜರಿದ್ದರು.