ರಾ. ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ಸಿದ್ಧ: ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬೆಂಗಳೂರು-ದಿಂಡಿಗಲ್ (ಕೊಳ್ಳೇಗಾಲ) ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಡಿಪಿಆರ್ ಸಿದ್ದವಾಗಿದೆ. ಅಂಡರ್ ಪಾಸ್ ಕಾಮಗಾರಿ ಕೂಡಾ ಡಿಪಿಆರ್‌ನಲ್ಲಿ ಸೇರಿದೆ
ಎಂದು ‌ಹನೂರು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಮೇಲ್ಸೇತುವೆ ಕಾರ್ಯವನ್ನು ಡಿಪಿಆರ್‌ನಲ್ಲಿ ಸೇರಿಸಿಕೊಳ್ಳುವಂತೆ ಸಲಹೆ ಮಾಡಿದ್ದೇನೆ, ನಾಲ್ಕು ಜಂಕ್ಷನ್ ಗಳಿದ್ದು ಸತ್ತೇಗಾಲ ಜಂಕ್ಷನ್ ಕೊಳ್ಳೇಗಾಲದಿಂದ ಬರುವ ಸತ್ತೇಗಾಲ ಪ್ರವೇಶದ್ವಾರ ಹೆದ್ದಾರಿಯ ಬೈಪಾಸ್ ತಿರುವಿನಿಂದ ಉಗನಿಯ ರಸ್ತೆವರೆಗೆ ಫ್ಲೈ ಓವರ್ ಆಗಿ ಅಲ್ಲಿ 2 ಅಂಡರ್ ಪಾಸ್ ಆದಾಗ ಸಮಸ್ಯೆ ಬಗೆಹರಿದು ಅಪಘಾತಗಳಾಗುವುದು ತಪ್ಪಲಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಜೊತೆ ತಾಲ್ಲೂಕಿನ ನರೀಪುರ ಹಾಗೂ ಸತ್ತೇಗಾಲದ ಬಳಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸಿ ಶಾಸಕರು ಮಾತನಾಡಿದರು.

ಈ ವೇಳೆ ಸತ್ತೇಗಾಲ ಗ್ರಾಮಸ್ಥರು ನಾವು ಜೂನ್ ತಿಂಗಳಲ್ಲಿ ಶಾಸಕರು, ಜಿಲ್ಲಾಧಿ ಕಾರಿಗಳು ಹಾಗೂ ಎನ್‌ಹೆಚ್ ಅಧಿಕಾರಿಗಳಿಗೆ ಸತ್ತೇಗಾಲ ರಸ್ತೆಯಲ್ಲಿ ಹಿಂದೆ ಅಪಘಾತಗೊಂಡು ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಇಲ್ಲಿಯವರೆಗೂ ಎರಡು ಕಡೆ ಹಂಪ್ಸ್ ಬಿಟ್ಟರೆ ಯಾವುದೇ ಸಮಸ್ಯೆ ಬಗೆ ಹರಿದಿಲ್ಲ. ನಾವು ಹೆದ್ದಾರಿಗೆ ಭೂಮಿ ಕೊಟ್ಟಿದ್ದೇವೆ, ಆದರೆ ಇಂದು ನಮ್ಮ ಜಮೀನಿಗೆ ನಾವು ಇಳಿಯಲು ಆಗುತ್ತಿಲ್ಲ, ಸಮಸ್ಯೆ ಬಗೆ ಹರಿಯುವವರೆಗೂ ನಾವು ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಆಗ್ರಹಿಸಿದರು.

ಆಗ ಶಾಸಕರು, ತಕ್ಷಣಕ್ಕೆ ಮೇಲ್ಲೇತುವೆ ನಿರ್ಮಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಡಿಪಿಆರ್ ತಯಾರು ಮಾಡಿ ಸರ್ಕಾರದ ಅನುಮೋದನೆ ಪಡೆಯಬೇಕಾಗಿದೆ. ಕನಿಷ್ಠ ಆರು ತಿಂಗಳಾದರೂ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಸುರಕ್ಷಿತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಶಾಸಕ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಎನ್‌,ಹೆಚ್ ಅಧಿಕಾರಿಗಳಿಗೆ ನಿಮಗೆ ನಾವು ಇದಕ್ಕಿಂತ ಹೆಚ್ಚು ಸಹಾಯ ಮಾಡಲು ಆಗುವುದಿಲ್ಲ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಸಮಸ್ಯೆ ಬಗ್ಗೆ ಹರಿಸಿ ಶಾಶ್ವತ ಪರಿಹಾರಕ್ಕಾಗಿ ಹೆದ್ದಾರಿಗೆ ಮೇಲ್ಲೇತುವೆ ನಿರ್ಮಿಸಬೇಕು, ಗ್ರಾಮಕ್ಕೆ ಸಂಪರ್ಕ ಕಲಿಸಲು ಅಂಡರ್ ಪಾಸ್ ರಸ್ತೆ ಕಲ್ಪಿಸಬೇಕೆಂದು ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ  ಎಂ.ಆರ್.ಮಂಜುನಾಥ್ ಅವರು ಈ ಹೆದ್ದಾರಿ 2012-13ರಲ್ಲಿ ವಿನ್ಯಾಸವಾಗಿ ಕಾಮಗಾರಿ ಪ್ರಾರಂಭಿಸಿ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಇಷ್ಟೆಲ್ಲ ಸಮಸ್ಯೆ ಅವಘಡಕ್ಕೆ ಕಾರಣವಾಗಿದೆ ಕಳೆದ ಹತ್ತು ವರ್ಷಗಳಿಂದ ದಟ್ಟಣೆ ವೇಗವಾಗಿ ಬೆಳೆಯುತ್ತಿರುವುದರಿಂದ ನಾಲ್ಕು ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ವಿಸ್ತೃತ ವರದಿ ಸಿದ್ಧವಾಗುತ್ತಿದೆ ಎಲ್ಲಾ ಘಟನೆಗಳಾಗಿರುವು ದರಿಂದ ಸೂಕ್ಷ್ಮವಾಗಿ ಗಮನಿಸಿ ಈ ”ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಡಿಪಿಆರ್ ಸಿದ್ದವಾಗಿದೆ, ನಾಲ್ಕು ಜಂಕ್ಷನ್ ಗಳಿದ್ದು ಸತ್ತೇಗಾಲ ಜಂಕ್ಷನ್ ಕೊಳ್ಳೇಗಾಲದಿಂದ ಬರುವ ಸತ್ತೇಗಾಲ ಪ್ರವೇಶದ್ವಾರ ಹೆದ್ದಾರಿಯ ಬೈಪಾಸ್ ತಿರುವಿನಿಂದ ಉಗನಿಯ ರಸ್ತೆವರೆಗೆ ಫ್ಲೈ ಓವರ್ ಆಗಿ ಅಲ್ಲಿ 2 ಅಂಡರ್ ಪಾಸ್ (ಕೆಳಸೇತುವೆ) ಆದಾಗ ಈ ಸಮಸ್ಯೆ   ಬಗೆಹರಿದು ಅಪಘಾತಗಳಾಗುವುದು ತಪ್ಪಲಿದೆ. ಹಾಗೆಯೇ ಉಪ್ಪಾರರ ಬೀದಿಯ ರಸ್ತೆ, ಅವರು ಈ ಅಂಡರ್ ಪಾಸ್ ನಲ್ಲೇ ಓಡಾಡಿಕೊಂಡರೆ ಸಮಸ್ಯೆ ಬರುವುದಿಲ್ಲ ಆಗ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

10 ದಿನದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದೇವೆ. ಏನಾಗಬೇಕು ಎಂಬುದನ್ನು ಲಿಸ್ಟ್ ಮಾಡಿ ಸ್ಪೀಡ್ ಬ್ರೇಕರ್ ಹಾಕಿದ್ದಾರೆ, ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಬಾಕಿ ಇದ್ದು ಅದನ್ನು ಮಾಡಿಕೊಡುವಂತೆ ಒತ್ತಾಯ ಮಾಡಿದ್ದೇನೆ. ಬಾಕಿ ಇರುವುದನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಮಾಡುತ್ತಾರೆ ಮಾಡದೇ ಹೋದರೆ ಇದೇ 14ರಂದು ಡಿಸಿ ವರ್ಚುಯಲ್ ಸಭೆ ತೆಗೆದುಕೊಳ್ಳಲು ಸೂಚಿಸಿದ್ದೇನೆ ಅಲ್ಲಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ,ತಹಸೀಲ್ದಾರ್ ಬಸವರಾಜು, ಎನ್‌.ಹೆಚ್ ಅಧಿಕಾರಿಗಳಾದ ಚಾರುಲತಾ ಜೈನ್, ವಿಶ್ವ, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಲೋಕೋಪಯೋಗಿ ಎಇಇ ಪುರುಷೋತ್ತಮ್, ನೀರಾವರಿ ಇಲಾಖೆಯ  ಎಇಇ ರಾಮಕೃಷ್ಣ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ರಾ. ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ಸಿದ್ಧ: ಮಂಜುನಾಥ್ Read More

ಹನೂರು ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜುನಾಥ್ ಚಾಲನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮೇಗಲದೊಡ್ಡಿ, ಜಾಗೇರಿ ಸೇರಿದಂತೆ ಹನೂರು ವಿಧಾನಸಭಾ ಕ್ಷೇತ್ರದ ವಿವಿದೆಡೆ ಸುಮಾರು 75 ಲಕ್ಷ ರೂಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ಅನುದಾನದಡಿ ಮೇಗಲದೊಡ್ಡಿ ಗ್ರಾಮದಿಂದ ಪ್ರಕಾಶ್ ಪಾಳ್ಯದವರೆಗೆ ಕೊಳ್ಳೇಗಾಲ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆಗೆ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಡಾಂಬರು ರಸ್ತೆ, ಚರಂಡಿ, ಹಾಗೂ ಸೇತುವೆ
ನಿರ್ಮಾಣ ಕಾಮಗಾರಿ, ಜಾಗರಿಯ ಫಾಸ್ಕಲ್ ನಗರದ ಅಲ್ಪಸಂಖ್ಯಾತರ ಬೀದಿಯಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಬಂಡಳ್ಳಿ ಗ್ರಾಮದ ಅಲ್ಪಸಂಖ್ಯಾತರ ಬೀದಿಯಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಆರ್.ಮಂಜುನಾಥ್, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಲ್ಪಸಂಖ್ಯಾತರ ಬೀದಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಈ ಗ್ರಾಮದಲ್ಲಿ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಅಲ್ಪಸಂಖ್ಯಾತರಲ್ಲದೆ ಕ್ಷೇತ್ರದ ಎಲ್ಲಾ ಸಮುದಾಯದ ಜನರಿಗೂ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮೇಗಲದೊಡ್ಡಿ ಗ್ರಾಮಸ್ಥರು ಗ್ರಾಮದಲ್ಲಿ ಪುರುಷ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿದ್ದು ಸಂಘದ ಸದಸ್ಯರು ಅಭಿವೃದ್ಧಿ ಚಿಂತನೆ ಕುರಿತು ಚರ್ಚಿಸಲು ಸಭಾಭವನವನ್ನು ನಿರ್ಮಿಸಿ ಕೊಡುವಂತೆ ಶಾಸಕರಿಗೆ ಲಿಖಿತ ಮನವಿ ಸಲ್ಲಿಸಿದರು.

ಈ ವೇಳೆ ಪ್ರಕಾಶ್ ಪಾಳ್ಯ ಚರ್ಚ್ ಫಾದರ್ ಸಿರಿಲ್ ಸಗಯ್ ರಾಜು, ಮುಖಂಡರಾದ ಬಂಡಳ್ಳಿ ಜೆಸ್ಸಿಂಗ್ ಪಾಷ, ವಿಜಯಕುಮಾರ್, ಸಿಂಗಾನಲ್ಲೂರು ರಾಜಣ್ಣ, ಆಂಥೋಣಿ ಚಿಕ್ಕಲ್ಲೂರು ಪಿ.ಡಿ.ಒ ಶಿವಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಹನೂರು ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜುನಾಥ್ ಚಾಲನೆ Read More

ಸರ್ಕಾರದ ಸವಲತ್ತುಗಳನ್ನು‌ ಸದುಪಯೋಗಪಡಿಸಿಕೊಳ್ಳಿ:ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಹನೂರು: ಗಂಗ ಕಲ್ಯಾಣ ಯೋಜನೆ ಫಲಾನುಭವಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ಆಯ್ಕೆಯಾಗಿ ಕೊಳವೆ ಬಾವಿಯಲ್ಲಿ ನೀರು ಬಂದಿರುವ ಫಲಾನುಭವಿಗಳಿಗೆ ಮೋಟಾರ್  ಸ್ವಿಚ್ ಬೋರ್ಡ್, ಪೈಪ್, ಕೇಬಲ್ ಇನ್ನಿತರ ವಿಧ್ಯುತ್ ಪೂರಕ ಪರಿಕರ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕರು,
ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಖುಷ್ಕಿ ಭೂಮಿಯಲ್ಲಿ ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ರೈತರು ಸರ್ಕಾರ ನೀಡುತ್ತಿರುವ ಇಂತಹ  ಉತ್ತಮ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ರೖತರಿಗೆ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಎಂ.ಆರ್.ಮಂಜುನಾಥ್
ಭರವಸೆ ನೀಡಿದರು.

ಈ ವೇಳೆ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು, ಹರೀಶ್, ಚಾಮುಲ್, ಉದ್ದನೂರು ಪ್ರಸಾದ್, ಚಿನ್ನವೆಂಕಟ, ಗೋವಿಂದ, ವೆಂಕಟೇಶ, ಸಾವುಕಯ್ಯ, ಹನೂರು ಪ.ಪಂ.ಸದಸ್ಯರಾದ ಮಹೇಶ್, ಮಹೇಶ್ ನಾಯಕ ಹಾಗೂ ಫಲಾನುಭವಿಗಳು, ಮುಖಂಡರು ಹಾಜರಿದ್ದರು.

ಸರ್ಕಾರದ ಸವಲತ್ತುಗಳನ್ನು‌ ಸದುಪಯೋಗಪಡಿಸಿಕೊಳ್ಳಿ:ಮಂಜುನಾಥ್ Read More

ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕಮಂಜುನಾಥ್ ಗುದ್ದಲಿ ಪೂಜೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.6: ತಾಲೂಕಿನ ಸತ್ತೇಗಾಲ ಗ್ರಾಮದ ಸಿಎಂ ಸಮುದ್ರದ ಎಜೆ ಕಾಲೋನಿಯಲ್ಲಿ 50 ಲಕ್ಷ ರೂ ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆಯ ಎಸ್ ಸಿ ಪಿ ಅನುದಾನದಲ್ಲಿ ಸಿಎಂ ಸಮುದ್ರ ಎ.ಜೆ.ಕಾಲೋನಿಯಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗೆ 50 ಲಕ್ಷ ರೂ ಮಂಜೂರಾಗಿದ್ದು 16 ಲಕ್ಷ ಬಿಡುಗಡೆಯಾಗಿದೆ ಎಂದು ಹೇಳಿದರು.

ಇಷ್ಟೇ ಅಲ್ಲದೆ ಕಾಲೋನಿಗೆ ಇನ್ನೂ ಸಾಕಷ್ಟು ಕಾಮಗಾರಿಗಳ ಅವಶ್ಯಕತೆ ಇದ್ದು ಮುಂದೆ ಹಂತ ಹಂತವಾಗಿ ಕಾಲೋನಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಗ್ರಾಮದ ಅಭಿವೃದ್ಧಿಗೆ ಎರಡು ಕೋಟಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಒಂದು ಕೋಟಿಗೂ ಹೆಚ್ಚು ಅನುದಾನ ಈ ಪಂಚಾಯಿತಿಗೆ ಮಂಜೂರಾಗಿದ್ದು 35 ಲಕ್ಷ ರೂ. ಬಿಡುಗಡೆಯಾಗಿದೆ ಇನ್ನು 10 ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕು. ಪ್ರತಿ ಗ್ರಾಮಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕರು ಆಶ್ವಾಸನೆ ನೀಡಿದರು.

ಸಾಮಾನ್ಯ ಅನುದಾನ ನಂಬಿಕೊಂಡರೆ ಕೆಲಸ ಆಗುವುದಿಲ್ಲ ವಿಶೇಷ ಅನುದಾನವನ್ನು ತಂದು ಕೆಲಸ ಮಾಡಬೇಕಿದೆ ಎಂದ ಮಂಜುನಾಥ್, ಗುಣಮಟ್ಟದ ಕೆಲಸ ಮಾಡಿ ಯಾವುದೇ ಕಾರಣಕ್ಕೂ ರಾಜೀ ಸಂದಾನಕ್ಕೆ ಅವಶಕಾವಿಲ್ಲ. ಮಾಡಿರುವ ಕಾಮಗಾರಿಗಳ ವಿವರದ ಫೋಟೋಗಳನ್ನು ಗ್ರೂಪ್ ಮಾಡಿ ಅಪ್ಲೋಡ್ ಮಾಡಿ ಎಂದು ಚಿಕ್ಕಲಿಂಗಯ್ಯ ರವರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಭವನ ಕಾಮಗಾರಿಗೆ ಪದೇ ಪದೇ ತೊಡಕಾಗುತ್ತಿದೆ. ಹಾಗೂ ಸರ್ಕಾರ ಜಾಗ ಗುರುತಿಸಿದೆ ಆದರೆ ಅಂತ್ಯಸಂಸ್ಕಾರ ಮಾಡಲು ಜೇನು ಹುಳುವಿನ ಕಾಟ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ದೇವಿಕಾ, ಕವಿತಾ, ಗೋವಿಂದ, ಶಾಂತಕುಮಾರಿ ಅರ್ಚಕರಾದ ಚಿಕ್ಕರವಳಿ, ಕಾಂತಣ್ಣ ಹಾಗೂ ಗ್ರಾಮಸ್ಥರು ಮತ್ತು ಕೆ.ಆರ್.ಎ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ ಹಾಜರಿದ್ದರು.

ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕಮಂಜುನಾಥ್ ಗುದ್ದಲಿ ಪೂಜೆ Read More