ತುಳಸಿಗಿಡ ಹಿಂದೂ ಧರ್ಮದವರ ಅವಿಭಾಜ್ಯ ಅಂಗ-ಹರೀಶ್ ಗೌಡ

ಮೈಸೂರು: ತುಳಸಿಗಿಡವು ಹಿಂದೂ ಧರ್ಮದ ಜನರ ಅವಿಭಾಜ್ಯ ಅಂಗ ಮತ್ತು ಇದನ್ನು ಮನೆಯಲ್ಲಿ ಬೆಳೆಸಿ ಬಳಸಿದರೆ ವಿವಿಧ ಕಾಯಿಲೆಗಳು ಬರುವುದಿಲ್ಲ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.

ಶ್ರೀ ಗುರುರಾಘವೇಂದ್ರ ಸ್ವಾಮಿ ಗಳ 355ನೇ ವರ್ಧಂತಿ ಅಂಗವಾಗಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದು ನಂತರ ಭಕ್ತಾದಿಗಳಿಗೆ ತುಳಸಿ ಸಸಿ ವಿತರಿಸಿ ಹರೀಶ್ ಗೌಡ ಮಾತನಾಡಿದರು.

ತುಳಸಿಗಿಡವು ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ ಆದ್ದರಿಂದ ಅಂದಿನ ದಿನಗಳಲ್ಲೇ ರಾಯರು ತುಳಸಿ ಗಿಡದ ಮಹತ್ವವನ್ನು ಜಗಕ್ಕೆ ಸಾರಿದ್ದರು ಆದ್ದರಿಂದಲೇ ಅವರು ಬೃಂದಾವನದಲ್ಲಿ ಲೀನವಾದರು ಎಂದು ರಾಯರನ್ನು ಸ್ಮರಿಸಿ ಹೇಳಿದರು.

ತುಳಸಿ ಗಿಡದ ಎಲೆಗಳನ್ನು ಬಳಸಿದರೆ ಡೆಂಗ್ಯೂ ಕಾಯಿಲೆಯೂ ವಾಸಿಯಾಗುತ್ತದೆ ಎಂದು ಹರೀಶ್ ಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ನವೀನ್, ಮಹದೇವ್, ನಾಗರಾಜು, ಬೋಟಿ ಬಜಾರ್ ಸಂದೀಪ್, ಮಂಜುಳಾ, ಮಂಜು, ಶ್ರೀಕಾಂತ್ ಕಶ್ಯಪ್, ಮಂಜುನಾಥ್, ರವಿಚಂದ್ರ ಮತ್ತಿತರರು ಹಾಜರಿದ್ದರು.

ತುಳಸಿಗಿಡ ಹಿಂದೂ ಧರ್ಮದವರ ಅವಿಭಾಜ್ಯ ಅಂಗ-ಹರೀಶ್ ಗೌಡ Read More

ಕೆ ಹರೀಶ್ ಗೌಡ ಅವರಿಗೆ ಶುಭ ಕೋರಿದಬಿ ಸುಬ್ರಹ್ಮಣ್ಯ

ಮೈಸೂರು: ಮೈಸೂರು ನಗರ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ ಅವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಅವರು ಜನುಮದಿನದ ಶುಭ ಕೋರಿದರು.

ಭಾರೀ ಗಾತ್ರದ ಗುಲಾಬಿ ಹಾರ ಹಾಕಿ ಶಾಲು ಹೊದಿಸಿ ಹರೀಶ್ ಗೌಡರಿಗೆ ಜನುಮದಿನದ ಶುಭಕಾಮನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮಾದೇಗೌಡ, ಕೆಆರ್ ಮಾರ್ಕೆಟ್ ದಿನೇಶ್, ಎಚ್ ಡಿ ಕೋಟೆ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಆನಂದ್, ಪಿರಿಯಾಪಟ್ಟಣ ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಸುನಿಲ್, ಮುಖಂಡರುಗಳಾದ ಕಾಂಜೀಗೌಡ, ಮಂಜುನಾಥ್ ಮತ್ತಿತರರು ಹಾಜರಿದ್ದರು.

ಕೆ ಹರೀಶ್ ಗೌಡ ಅವರಿಗೆ ಶುಭ ಕೋರಿದಬಿ ಸುಬ್ರಹ್ಮಣ್ಯ Read More

ಯುವಜನರಿಗೆ ರಾಮನ ಆದರ್ಶ ಸ್ಫೂರ್ತಿ: ಹರೀಶ್ ಗೌಡ

ಮೈಸೂರು, ಏ.6: ದೈವಿ ಪುರುಷನಾದ ರಾಮನ ಬದುಕಿನ ಆದರ್ಶಗಳು ಎಲ್ಲ ಧರ್ಮದ ಯುವಜನರಿಗೆ ಸ್ಫೂರ್ತಿ ಎಂದು
ಶಾಸಕ ಹರೀಶ್ ಗೌಡ ತಿಳಿಸಿದರು.

ಶ್ರೀ ರಾಮನವಮಿ ಪ್ರಯುಕ್ತ ದೇವರಾಜ ಅರಸು ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು
ನಂತರ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ವಿತರಿಸಿ ಮಾತನಾಡಿದ ಶಾಸಕರು ಮಾತನಾಡಿದರು.

ರಾಮ ವನವಾಸಕ್ಕೆ ತೆರಳಿದಾಗ ಪತ್ನಿ ಸೀತೆಯೂ ಜೊತೆಯಾಗಿ ಹೋಗುವ ಸನ್ನಿವೇಶ ಎಲ್ಲ ದಂಪತಿಗೆ ಮಾರ್ಗದರ್ಶಿ ಆಗಿದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದಾಗಲೂ ಪತಿ- ಪತ್ನಿ ಕೈಜೋಡಿಸಿ ಸಂಸಾರದ ನೌಕೆ ಸಾಗಿಸಬೇಕು ಎಂಬ ಅಮೂಲ್ಯ ಸಂದೇಶ ಅದು ಸಾರುತ್ತದೆ ಎಂದು ತಿಳಿಸಿದರು.

ಜಯಂತಿಗಳು ಮೆರವಣಿಗೆ ಮಾಡುವುದರಿಂದ ಸಾರ್ಥಕ ಆಗುವುದಿಲ್ಲ, ಬದಲಿಗೆ ಮಹನೀಯರ ಆದರ್ಶಗಳನ್ನು ಬದುಕಿನಲ್ಲಿ ಆಚರಣೆಗೆ ತಂದಾಗ ಮಾತ್ರ ಅರ್ಥ ಬರುತ್ತದೆ ಎಂದು ಹೇಳಿದರು.

ಎಲ್ಲರೂ ರಾಮಾಯಣವನ್ನು ನಿತ್ಯ ಪಾರಾಯಣ ಮಾಡಬೇಕು. ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹರೀಶ್ ಗೌಡ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ವರ್ಗದವರು, ಪುರೋಹಿತರಾದ ವೆಂಕಟೇಶ್, ಆನಂದ್, ಧ್ಯಾನ್, ಮುಖಂಡರಾದ ರಾಮರಾಜ, ಪುರುಷೋತ್ತಮ್ , ಸತ್ಯ, ಗುರುರಾಜ್, ರವಿಚಂದ್ರ, ಹರೀಶ್ ಗೌಡ, ನಿತಿನ್, ನವೀನ್, ಸುರಿ ಶೆಟ್ಟಿ ಮತ್ತಿತರರು ಹಾಜರಿದ್ದರು.

ಯುವಜನರಿಗೆ ರಾಮನ ಆದರ್ಶ ಸ್ಫೂರ್ತಿ: ಹರೀಶ್ ಗೌಡ Read More

18 ಶಾಸಕರ ಅಮಾನತು; ಸ್ಪೀಕರ್ ನಡೆ ಸಮರ್ಥಿಸಿದ ಹರೀಶ್ ಗೌಡ

ಮೈಸೂರು: ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಯು.ಟಿ ಖಾದರ್ ಅವರ ನಡೆಯನ್ನ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಶಾಸಕರು, ನಾನು ಶಾಸಕನಾಗಿ 2 ವರ್ಷಗಳಾಗುತ್ತಿದೆ, ಹಲವು ಕಲಾಪಗಳಲ್ಲಿ ಭಾಗವಹಿಸಿದ್ದೇನೆ, ಇಷ್ಟೊಂದು ರೂಡ್ ಆಗಿ ವರ್ತಿಸಿದವರನ್ನ ನಾನು ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭಾಧ್ಯಕ್ಷರ‌ ಸ್ಥಾನ ಒಂದು ಗೌರವಯುತ ಸ್ಥಾನ, ಆ ಸ್ಥಾನಕ್ಕೆ ಅಗೌರವ ಬರುವ ಹಾಗೆ ಬಿಜೆಪಿಯವರು ನಡೆದುಕೊಂಡಿರುವುದು ಖಂಡನೀಯ ಎಂದು ಹೇಳಿದರು.

ಇದೆಲ್ಲವನ್ನ ನೋಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಇದ್ದೀವಾ ಎನಿಸಿತು. ಇದೊಂದು ಘೋರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರ ಪುಂಡಾಟಿಕೆ ಹೆಚ್ಚಾಗಿದೆ, ಇವರ ನಡೆ ಸದನದಲ್ಲಿ ಹೇಸಿಗೆ ಹುಟ್ಟಿಸಿದೆ. ಹತಾಶರಾಗಿ ಈ ರೀತಿ ಗುಳ್ಳೆನರಿಗಳಂತೆ ವರ್ತಿಸುತಿದ್ದಾರೆ ಎಂದು ಹರೀಶ್ ಗೌಡ ಕಿಡಿಕಾರಿದರು.

18 ಶಾಸಕರ ಅಮಾನತು; ಸ್ಪೀಕರ್ ನಡೆ ಸಮರ್ಥಿಸಿದ ಹರೀಶ್ ಗೌಡ Read More

ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಟ್ಟೇ ಇಡುತ್ತೇವೆ:ಹರೀಶ್ ಗೌಡ

ಮೈಸೂರು: ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಟ್ಟೇ ಇಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಹರೀಶ್ ಗೌಡ,ಸಿಎಂ ಸಿದ್ದರಾಮಯ್ಯ ಅವರು ಸುಮ್ಮನೆ ವಿವಾದ ಸೃಷ್ಟಿಸೋದು ಬೇಡ ಅಂತ ಅದನ್ನ ಬಿಟ್ಟು ಬಿಡಿ ಅಂತ ಹೇಳಿದ್ದಾರೆ. ಆದರೂ ನಾನು ಸಂಸದ ಯದುವೀರ್ ಒಡೆಯರ್ ಅವರಿಗೂ ಕೂಡ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಎಲ್ಲರಿಗೂ ಮನವರಿಕೆ ಮಾಡಿ ಆ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ಪ್ರಯತ್ನ ಮಾಡುತ್ತೇವೆ. ಈ ರಸ್ತೆಗೆ ಪ್ರಿನ್ಸೆಸ್ ರಸ್ತೆ ಅಂತ ಹೆಸರಿರೋದು ದಾಸಪ್ಪ ಸರ್ಕಲ್ ನಿಂದ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದವರಗೆ ಮಾತ್ರ. ಅಲ್ಲಿಂದ ಮುಂದಕ್ಕೆ ಯಾವುದೇ ಹೆಸರು ಇಲ್ಲ. ಅಲ್ಲಿಂದ ಮುಂದಕ್ಕಾದರೂ ಸಿದ್ದರಾಮಯ್ಯ ಅವರ ಹೆಸರಿಡುತ್ತೇವೆ. ಅವರ ಹೆಸರ ಇಡದೆ ಬೇರೆ ಯಾರು ಹೆಸರು ಇಡಬೇಕು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಮೈಸೂರಿಗೆ ಕೊಟ್ಟಿರುವ ಕೊಡುಗೆ ಏನು ಅಂತ ಎಲ್ಲರಿಗೂ ಗೊತ್ತು. ಆ ರಸ್ತೆಯಲ್ಲಿ ತಲೆ ಎತ್ತಿರುವ ಜಯದೇವ, ಜಿಲ್ಲಾಸ್ಪತ್ರೆ, ಇಎಸ್ಐ ಆಸ್ಪತ್ರೆ ರಿನೋವೇಷನ್, ಸ್ಯಾನಿಟೋರಿಯಮ್ ಆಸ್ಪತ್ರೆ ಸೇರಿದಂತೆ ಹಲವಾರು ಆಸ್ಪತ್ರೆಗಳ ಅಭಿವೃದ್ಧಿ ಮಾಡಿದ್ದಾರೆ. ಮೈಸೂರಿಗೆ ಹಲವಾರು ಯೋಜನೆಗಳನ್ನು ಕೊಟ್ಟಿದ್ದಾರೆ.

ಮೈಸೂರು ಮಹಾರಾಜರ ನಂತರ ಮೈಸೂರಿನ ಅಭಿವೃದ್ಧಿಗೆ ಅಪಾರ ಪಾತ್ರ ಇರೋದು ಸಿದ್ದರಾಮಯ್ಯ ಅವರದ್ದು. ನಂಜನಗೂಡು ಆರ್.ಎಂ.ಸಿ ಜಂಕ್ಷನ್ ಗೂ ಸಿದ್ದರಾಮಯ್ಯ ಅವರ ಹೆಸರು ಇಟ್ಟರೂ ಕೆ.ಆರ್.ಎಸ್ ರಸ್ತೆ ಮಾರ್ಗಕ್ಕೂ ಕೂಡ ಹೆಸರಿಡುತ್ತೇವೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಹರೀಶ್ ಗೌಡ ಹೇಳಿದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಹರೀಶ್ ಗೌಡ, ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗಿರಬೇಕು. ಜೊತೆಗೆ ಮುಂದಿನ ಬಾರಿಯೂ ಅವರೇ ಮುಖ್ಯಮಂತ್ರಿ ಆಗಿರಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅವರನ್ನು ಮೀರಿಸುವವರಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮಗೆ ಪೂರಕವಾದ ಫಲಿತಾಂಶ ಬರಬೇಕಾದರೆ ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗಿರಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಇರಬೇಕು ಎಂದು ಹೇಳಿದರು.

ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಟ್ಟೇ ಇಡುತ್ತೇವೆ:ಹರೀಶ್ ಗೌಡ Read More

ಕೆಎಂಪಿಕೆ ಟ್ರಸ್ಟ್ ನಿಂದ ಮಾನವೀಯ ಕಾರ್ಯ:ನಿರಾಶ್ರಿತರಿಗೆ ಹೊದಿಗೆ ವಿತರಣಾ ಅಭಿಯಾನ

ಮೈಸೂರು: ಈಗಾಗಲೆ ಚುಮು,ಚುಮು‌ ಚಳಿ,ಹಿಮಗಾಳಿ ಬೀಸಲಾರಂಭಿಸಿದೆ.ಮನೆ‌ ಇರುವವರೇನೊ ಬೆಚ್ಚಗೆ ಕಂಬಳಿ ಹೊದ್ದು ಮಲಗಿಬಿಡುತ್ತಾರೆ.ಆದರೆ ನಿರ್ಗತಿಕರ ಪಾಡು ನಿಜಕ್ಕೂ ಹೇಳತೀರದು.

ಸಮಾಜಸೇವೆಯಲ್ಲಿ ತೊಡಗಿರುವ
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಇಂತಹ ಅಸಹಾಯಕರು,ನಿರ್ಗತಿಕರ ಬವಣೆಗೆ ಮರುಗಿ ಪ್ರತಿ ವರ್ಷ ನೆರವಾಗುತ್ತಿದೆ.

ಕೆಎಂಪಿಕೆ ಟ್ರಸ್ಟ್ ನವರ ಈ ಕಾರ್ಯ ನಿಜಕ್ಕೂ ಇತರರಿಗೆ ಮಾದರಿಯಾಗಿದೆ,ಜತೆಗೆ ಸ್ತುತ್ಯಾರ್ಹ ಕೂಡಾ ಹೌದು.

ನಿರಾಶ್ರಿತರಿಗೆ ಹಾಗೂ ಅಸಹಾಯಕರಿಗೆ ಗ್ರಾಮೀಣ ಪ್ರದೇಶದ ಹಾಡಿ ಜನಾಂಗಕ್ಕೆ ಹೊದಿಕೆ ವಿತರಣಾ ಅಭಿಯಾನವನ್ನು ಕೆಎಂಪಿಕೆ ಟ್ರಸ್ಟ್‌ ಹಮ್ಮಿಕೊಂಡಿದೆ.

ಈ ಅಭಿಯಾನದ ಪ್ರಚಾರ ಸಾಮಗ್ರಿಗಳನ್ನು
ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಹುಣಸೂರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಟ್ರಸ್ಟ್‌ ಕಾರ್ಯಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಶಾಸಕರು, ಸಾಂಸ್ಕೃತಿಕ ನಗರಿ ಎಲ್ಲರಿಗೂ ಆಶ್ರಯ ನೀಡಿದೆ, ಕೆಲವರ ಜೀವನದಲ್ಲಿ ವಿಧಿಯ ಆಟ ಅಥವಾ ಪರಿಸ್ಥಿತಿ ತೊಂದರೆಗೆ ಸಿಲುಕುವಂತೆ ಮಾಡಿಬಿಡುತ್ತದೆ‌ ಎಂದು ‌ವಿಷಾದಿಸಿದರು.

ಕೆಲವರು ಬಹಳ
ತೊಂದೆರೆಯಲ್ಲಿರುತ್ತಾರೆ,ಅನಿವಾರ್ಯವಾಗಿ ಮಳೆ ಚಳಿ ಎನ್ನದೇ ಬಸ್ ನಿಲ್ದಾಣ, ರೈಲ್ವೇನಿಲ್ದಾಣ, ದೇವಸ್ಥಾನ,ಚಿತ್ರಮಂದಿರ, ಸರ್ಕಾರಿ ಕಟ್ಟಡಗಳೆ ಅವರಿಗೆ ಆಶ್ರಯತಾಣವಾಗಿರುತ್ತದೆ ಅಲ್ಲೆ ಮಲಗಿರುತ್ತಾರೆ.

ಹೀಗೆ ಮೈಸೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಿರಾಶ್ರಿತರಿದ್ದು, ಮಾನವೀಯತೆ ದೃಷ್ಟಿಯಿಂದ ಚಳಿ ಮಳೆಯಿಂದ ನಿರಾಶ್ರಿತರ ರಕ್ಷಣೆ ಸಾರ್ವಜನಿಕರ ಹೊಣೆ ಎನ್ನುವ ಸಂಕಲ್ಪದೊಂದಿಗೆ ಅವರಿರುವ ಜಾಗಕ್ಕೆ ಹೋಗಿ ಹೊದಿಕೆ ನೀಡುವ ಕೆ.ಎಂ.ಪಿ.ಕೆ ಟ್ರಸ್ಟ್ ಪ್ರಾರಂಭಿಸಿರುವ ಅಭಿಯಾನ ನಿಜಕ್ಕೂ ಶ್ಲಾಘನೀಯ ಎಂದು ಹರೀಶ್ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಸ್ಟ್ ನ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ,ಕಳೆದ ವರ್ಷ 1000 ಮಂದಿಗೆ ಕಂಬಳಿ ನೀಡಿದ್ದೆವು ಎಂದು ತಿಳಿಸಿದರು.

ರಸ್ತೆ ಬದಿ ಮಲಗುವ ನಿರಾಶ್ರಿತರು, ಅಸಹಾಯಕರು, ರಾತ್ರಿ ವೇಳೆ ರೈಲ್ವೆ ನಿಲ್ದಾಣ ,ಸಬ್ ಅರ್ಬನ್ ಬಸ್ ಸ್ಟ್ಯಾಂಡ್ ಸಿಟಿಬಸ್ ಸ್ಟ್ಯಾಂಡ್, ಮಾರುಕಟ್ಟೆ ಸೇರಿದಂತೆ ಸತತ 4 ವರ್ಷ ರಾತ್ರಿ ವೇಳೆ 1 ತಿಂಗಳು ನಿರಂತರವಾಗಿ ಅಭಿಯಾನವನ್ನು ಹಮ್ಮಿಕೊಂಡು ಯಶಸ್ವಿ ಗೊಳಿಸಿದ್ದೇವೆ ಎಂದು ಹೇಳಿದರು.

ಈ ವರ್ಷ ಕೂಡಾ ಇದೇ ಡಿಸೆಂಬರ್ 1ರಿಂದ ಜನವರಿ 15ರವರೆಗೂ ಪ್ರತಿದಿನ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿರುವ ಅಸಹಾಯಕರು ಹಾಗೂ ನಿರಾಶ್ರಿತರಿಗೆ 1000 ಹೊದಿಕೆ ವಿತರಿಸಲು ನಿರ್ಧರಿಸಿದ್ದೇವೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಸಾರ್ವಜನಿಕರು ಕೈಜೋಡಿಸಿ ನೆರವು ನೀಡಬಯಸಿದರೆ ಮೊಬೈಲ್ ನಂಬರ್ 9880752727 ಸಂಪರ್ಕಿಸಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಯುವ ಮುಖಂಡರಾದ ನವೀನ್ ,ರವಿಚಂದ್ರ, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.

ಕೆಎಂಪಿಕೆ ಟ್ರಸ್ಟ್ ನಿಂದ ಮಾನವೀಯ ಕಾರ್ಯ:ನಿರಾಶ್ರಿತರಿಗೆ ಹೊದಿಗೆ ವಿತರಣಾ ಅಭಿಯಾನ Read More

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು:ಹರೀಶ್ ಗೌಡ

ಮೈಸೂರು: ಸಂಡೂರು,ಚನ್ನಪಟ್ಟಣ, ಶಿಗ್ಗಾವಿ ಉಪ ಚುನಾವಣೆಯಲ್ಲಿ ತೌಸೆಂಡ್ ಪರ್ಸೆಂಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಶಾಸಕ ಹರೀಶ್ ಗೌಡ ವಿಶ್ವಾಸದಿಂದ ಹೇಳಿದ್ದಾರೆ.

ನಗರದ ವಾರ್ಡ್ ನಂಬರ್ 23ರ ವ್ಯಾಪ್ತಿಯ
ಕೊಲ್ಲಾಪುರದಮ್ಮ ದೇವಸ್ಥಾನದ ಹಿಂಭಾಗ
ಅಂದಾಜು 3.5 ಲಕ್ಷ ವೆಚ್ಚದ
ಕೊಳವೆಬಾವಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು

ಅಧಿಕಾರದಲ್ಲಿ ನಮ್ಮ ಸರ್ಕಾರ ಇದೆ,ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ, ಉಪ ಮುಖ್ಯ ಮಂತ್ರಿ‌ ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಚತುರತೆಯಿಂದ ನಮಗೆ ಗೆಲುವು‌ ಖಚಿತ, ಜನತೆ ಕಾಂಗ್ರೆಸ್ ಪಕ್ಷದ ಪರ ಇದ್ದಾರೆ ಎಂದು ಹೇಳಿದರು.

ವಾರ್ಡ್ 23 ರ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ ಹಾಗಾಗಿ ಬೋರ್ ವೆಲ್ ಕನೆಕ್ಷನ್ ಕೊಡುವ ಕೆಲಸ ಮಾಡಲಾಗುತ್ತಿದೆ.ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಈ ವೇಳೆ ಹರೀಶ್ ಗೌಡ ಭರವಸೆ ನೀಡಿದರು.

ಟ್ಯಾಂಕ್ ನಿರ್ಮಾಣದ ಕೆಲಸ‌ ಶೇ.70 ರಷ್ಟು ಮುಗಿದಿದೆ.ರಮಾವಿಲಾಸ್‌ ರೋಡ್, ಬಂಡಿಕೇರಿ,ಮರಿಮಲ್ಲಪ್ಪ ಶಾಲೆ ಹಿಂಬಾಗ ಮತ್ತು ಮುಂಭಾಗ‌ ಹೀಗೆ ಈ ಭಾಗದ ಎಲ್ಲಾ ಕಡೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ, ಇನ್ನು ಒಂದು ತಿಂಗಳೊಳಗೆ ಕಾಮಗಾರಿ ಮುಗಿದು ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ಹರೀಶ್ ಗೌಡ ಭರವಸೆ ನೀಡಿದರು

ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ನಾಗಭೂಷಣ , ಕಾಂಗ್ರೆಸ್ ಮುಖಂಡರುಗಳಾದ ರಾಜೀವ, ಮಹದೇವ, ಆನಂದ, ರವಿಚಂದ್ರ, ಮಂಜುನಾಥ,ಶಾಂತ ,ಮಂಗಳ, ಸಂಜಯ, ಲೋಕೇಶ,ಮುಸ್ತಾಫ ,ಯುಜಿಡಿ ವಾಟರ್ ಸಪ್ಲೈ ಅಧಿಕಾರಿ ಜಗದೀಶ್ ಆರ್, ವಾಟರ್ ಇನ್ಸ್ಪೆಕ್ಟರ್ ಮಹದೇವ್ ಹಾಗೂ ಅನೇಕ ಮುಖಂಡರು ಹಾಜರಿದ್ದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು:ಹರೀಶ್ ಗೌಡ Read More

ನಗರದ ಆರೋಗ್ಯ ರಕ್ಷಕರು ಪೌರಕಾರ್ಮಿಕರು – ಹರೀಶ್ ಗೌಡ

ಮೈಸೂರು: ನಗರದ ಆರೋಗ್ಯ ರಕ್ಷಕರು ಪೌರಕಾರ್ಮಿಕರು ಎಂದು ಶಾಸಕ ಹರೀಶ್ ಗೌಡ ಬಣ್ಣಿಸಿದರು.

ಪೌರ ಕಾರ್ಮಿಕರು ಸೂರ್ಯೋದಯ ಆಗುವಷ್ಟರಲ್ಲೇ ಕೆಲಸ ಪ್ರಾರಂಭಿಸಿ, ನಗರದ ಕಸ ತೆಹೆದು ಸ್ವಚ್ಛ ಮಾಡುತ್ತಾರೆ,ಕಸ ಎಸೆಯುವ ಮೊದಲು,ಅವರ ಶ್ರಮವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು, ಅವರು ನಗರದ ಆರೋಗ್ಯ ರಕ್ಷಕರು ಎಂದು ತಿಳಿಸಿದರು

ನಗರದ ದೇವರಾಜ ಮೊಹಲ್ಲಾ ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ದಸರಾ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ವಾರ್ಡ್ ನಂಬರ್ 23ರ ಸ್ವಚ್ಛತಾ ಸೇನಾನಿ ಗಳಾದ ಪೌರಕಾರ್ಮಿಕರು ಹಾಗೂ ಒಳಚರಂಡಿ ವಿಭಾಗದ ಕಾರ್ಮಿಕರು, ನೀರು ಸರಬರಾಜು ಕಾರ್ಮಿಕ ಸಿಬ್ಬಂದಿಗಳಿಗೆ
ಸಮವಸ್ತ್ರ ಹಾಗೂ ಸಿಹಿ ವಿತರಿಸಿ ಅಭಿನಂದನೆ ಸಲ್ಲಿಸಿ ಶಾಸಕರು ಮಾತನಾಡಿದರು.

ಪೌರಕಾರ್ಮಿಕರು ಪ್ರತಿ ವರ್ಷದಂತೆ ಈ ವರ್ಷವೂ ಸಹ ದಸರಾ ಸಂದರ್ಭದಲ್ಲಿ ನಗರವನ್ನು ಸ್ವಚ್ಛತೆಗೊಳಿಸುವ ಮೂಲಕ ಮೈಸೂರಿನ ಸೌಂದರ್ಯವನ್ನು ಹೆಚ್ಚಿಸಿ,
ಮೈಸೂರಿಗೆ ಹಿರಿಮೆ ತಂದಿದ್ದಾರೆ ಎಂದು ತಿಳಿಸಿದರು.

ಬೆಳಿಗ್ಗೆ ಸ್ವಚ್ಛ ಮಾಡಿದ್ದರೂ ಸಂಜೆಯಷ್ಟರಲ್ಲಿ ಮತ್ತಷ್ಟೇ ಕಸ ತುಂಬಿರುತ್ತದೆ. ಸ್ವಚ್ಛತೆಯ ಬಗ್ಗೆ ನಾಗರಿಕರಲ್ಲಿ ಇನ್ನಷ್ಟು ಅರಿವು ಬೆಳೆಯಬೇಕು. ನಗರ ಸ್ವಚ್ಛವಾಗುವುದರ ಜೊತೆಗೇ ನಮ್ಮ ವಿಚಾರಗಳಲ್ಲೂ ಬದಲಾವಣೆ ತಂದುಕೊಳ್ಳಬೇಕು. ಸ್ವಚ್ಛತೆ ಕಾಪಾಡುವಲ್ಲಿ ನಾವೇನು ಮಾಡಿದ್ದೇವೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಹರೀಶ್ ಗೌಡ ಹೇಳಿದರು.

ಕನ್ನಡ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್, ಕಾಂಗ್ರೆಸ್ ಮುಖಂಡರುಗಳಾದ ರಾಜೀವ್ , ಮಂಜುನಾಥ್,ನವೀನ್, ಆನಂದ್,ಜ್ಞಾನೇಶ್ ರವಿಚಂದ್ರ, ಗುರುರಾಜ್,
ನಿತಿನ್,ಮಂಜುಳಾ, ಶಾಂತ ಮಂಗಳ ,ಲೀಲಾ, ಪವನ್, ನಂಜುಂಡಿ, ಹರೀಶ್ ಗೌಡ, ಈರೇಗೌಡ, ಪ್ರಜ್ವಲ್, ಹರ್ಷ, ಎಸ್ ಎನ್ ರಾಜೇಶ್, ಉಪಸ್ಥಿತರಿದ್ದರು.

ನಗರದ ಆರೋಗ್ಯ ರಕ್ಷಕರು ಪೌರಕಾರ್ಮಿಕರು – ಹರೀಶ್ ಗೌಡ Read More