ಮೈಸೂರಿಗೆ ಆಗಮಿಸಿದ ಭೈರತಿ‌ಸುರೇಶ್: ಭವ್ಯ ಸ್ವಾಗತ ಕೋರಿದ ಮುಖಂಡರು

ಮೈಸೂರು: ಮೈಸೂರಿಗೆ ನಗರ ಅಭಿವೃದ್ಧಿ ಸಚಿವರಾದ ಶ್ರೀ ಭೈರತಿ ಸುರೇಶ್ ಆಗಮಿಸಿದ್ದರು.

ಶುಕ್ರವಾರ ಮೈಸೂರಿಗೆ ಭೇಟಿ ನೀಡಿದ ಭೈರತಿ ಸುರೇಶ್ ಅವರನ್ನು ರಾಡಿಸನ್ ಬ್ಲೂ ಹೋಟೆಲ್ ಮುಂಬಾಗ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಹಾರಾಕಿ ಶಾಲು ಹೊಂದಿಸಿ ಸ್ವಾಗತಿಸಿದರು.

ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ್ ರಾಮಪ್ಪ, ಕಡಕೋಳ ಶಿವಲಿಂಗ, ರಾಮಚಂದ್ರು, ಗಾಂಧಿನಗರ ಪ್ರಕಾಶ್, ರವಿಚಂದ್ರ ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.

ಮೈಸೂರಿಗೆ ಆಗಮಿಸಿದ ಭೈರತಿ‌ಸುರೇಶ್: ಭವ್ಯ ಸ್ವಾಗತ ಕೋರಿದ ಮುಖಂಡರು Read More

ಪುರಭವನಕ್ಕೆ ಬಂದ ರಾಷ್ಟ್ರಪತಿಗಳು!

ಮೈಸೂರು: ನಗರದ ಪುರಭವನಕ್ಕೆ ರಾಷ್ಟ್ರಪತಿ, ಸಚಿವರು ಪೊಲೀಸ್ ಭಾಜಾ ಬಜಂತ್ರಿ ಜತೆ ಬಂದದ್ದು ಕಂಡು ಜನ ಒಮ್ಮೆಗೆ ದಂಗಾದರು.

ಇದು ನಿಜ ಆದರೆ ಬಂದದ್ದು ರಷ್ಟ್ರಪತಿ ಹಾಗೂ ಸಚಿವರೇ ಆದರೂ ಅವರೆಲ್ಲ ಅಸಲಿಯಲ್ಲ.

ಪೊಲೀಸ್ ಗಸ್ತಿನೊಂದಿಗೆ, ಬ್ಯಾಂಡ್‌ಸೆಟ್ ಮೆರವಣಿಗೆ ಮೂಲಕ ರಾಷ್ಟ್ರಪತಿ, ಸಚಿವರು ಮತ್ತು ಶಾಸಕರರು ಪುರಭವನ ಪ್ರವೇಶಿಸಿದ್ದನ್ನು ಕಂಡು ಸಾರ್ವಜನಿಕರು ಕೂಡಾ ಕುತೂಹಲದಿಂದ ಧಾವಿಸಿದರು.

ಇದೆಲ್ಲ ಆದದ್ದು ಭಾನುವಾರ ಸಂಜೆ. ಪುರಭವನದಲ್ಲಿ ಮೈಸೂರು ತಾಲ್ಲೂಕು ವರುಣಾ ಹೋಬಳಿ ಹಡಜನ, ಚೋರನಹಳ್ಳಿ ಮತ್ತಿತರ ಗ್ರಾಮದ ಯುವಕರು ಅಭಿನಯಿಸಿದ ರತ್ನ ಮಾಂಗಲ್ಯ ಅಥವಾ ಮರಳಿ ಬಂದ ಮಾಂಗಲ್ಯ ಸಾಮಾಜಿಕ ನಾಟಕದ ಪರಿ.

ಇದನ್ನು ವೀಕ್ಷಿಸಲು ಅಸಲಿ ಪೊಲೀಸರು, ಗಣ್ಯರ ವೇಷತೊಟ್ಟ ಎರಡೂ ಗ್ರಾಮದ ಕೆಲವು ಮುಖಂಡರು ಮೆರವಣಿಗೆ ಮೂಲಕ ಪುರಭವನ ಪ್ರವೇಶಿಸಿ ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದರು.

ರಾಷ್ಟ್ರಪತಿಯಾಗಿ ಗುರುಸ್ವಾಮಿ, ರಾಷ್ಟ್ರಪತಿ ಅಂಗರಕ್ಷಕರಾಗಿ ಯಶವಂತ್ ಮತ್ತು ವಿಜಯ್, ಶಾಸಕರಾಗಿ ಅಂಬಳೆ ಶಿವಣ್ಣ, ಮಂಜು ನಟಿಸಿ ಜನರು ನಂಬುವಂತೆ ಮಾಡಿದ್ದು ವಿಶೇಷ.

ಪುರಭವನಕ್ಕೆ ಬಂದ ರಾಷ್ಟ್ರಪತಿಗಳು! Read More

ಬಿಎಂಟಿಸಿ ಚಾಲಕರು ನಿರ್ವಾಹಕರ ಮೇಲೆ ಹಲ್ಲೆ :ರಾಮಲಿಂಗಾರೆಡ್ಡಿ ಬೇಸರ

ಬೆಂಗಳೂರು: ಬಿಎಂಟಿಸಿ ಚಾಲಕರು ನಿರ್ವಾಹಕರ ಮೇಲೆ ಯಾರೋ ಕೆಲವರು ಪುಂಡರು ಹಲ್ಲೆ ನಡೆಸಿರುವುದಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ‌ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರಿಗೆ ಪತ್ರ ಬರೆದಿದ್ದು ಇನ್ನು ಮುಂದೆ ಯಾರೇ ಆಗಲಿ ಬಿಎಂಟಿಸಿ ಚಾಲಕರು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದು ಕಂಡುಬಂದರೆ ತಕ್ಷಣ ಅವರನ್ನು ಹಿಡಿದು ಕಠಿಣ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ.

ಅಕ್ಟೋಬರ್ ಒಂದೇ ತಿಂಗಳಿನಲ್ಲಿ ಬಿಎಂಟಿಸಿ ಚಾಲಕರು ನಿರ್ವಾಹಕರ ಮೇಲೆ ನಾಲ್ಕು ಕಡೆ ಹಲ್ಲೆ ನಡೆದಿದೆ ಹಾಗಾಗಿ ಚಾಲಕರು ನಿರ್ವಾಹಕರು ಭಯ ಗೊಂಡಿದ್ದಾರೆ ಇದು ಸಹಜವು ಹೌದು, ಈ ರೀತಿ ಜನರು ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿ ಅಷ್ಟೇ ಅಲ್ಲ ರಾಜ್ಯದಲ್ಲಿ ಸಾರಿಗೆ ನೌಕರರ ಮೇಲೆ ಎಲ್ಲೂ ಹಲ್ಲೆ ಅಥವಾ ಇತರೆ ದೌರ್ಜನ್ಯ ನಡೆಯ ಕೂಡದು ಒಂದು ವೇಳೆ ಆ ರೀತಿ ನಡೆದದ್ದು ಕಂಡು ಬಂದರೆ ಸಾರ್ವಜನಿಕರೇ ಹಿಡಿದು ಕೊಡಬೇಕೆಂದು ಮನವಿ ಮಾಡಿದ್ದಾರೆ.

ಇಂತಹ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ನಮ್ಮ ಚಾಲಕರು ನಿರ್ವಾಹಕರು ಕೆಲಸ ಮಾಡಲು ಹಿಂದೆಗೆಯುವಂತಾಗಿದೆ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ.

ಚಾಲಕರು ನಿರ್ವಾಹಕರು ಕೂಡ ನಮ್ಮವರೇ ಎಂದು ತಿಳಿದುಕೊಳ್ಳಿ ಅವರು ನಿಮ್ಮನೆಯಲ್ಲಿ ಒಬ್ಬರೆಂದು ತಿಳಿಯಿರಿ. ಅವರ ಮೇಲೆ ಸುಮ್ಮನೆ ದೌರ್ಜನ್ಯ ನಡೆಸುವುದು ಸರಿಯಲ್ಲ ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಎಂಟಿಸಿ ಚಾಲಕರು ನಿರ್ವಾಹಕರ ಮೇಲೆ ಹಲ್ಲೆ :ರಾಮಲಿಂಗಾರೆಡ್ಡಿ ಬೇಸರ Read More

ರೈತರಿಗೆ ನೆರವಾಗಿ:ಕೃಷಿ ಸಚಿವರಿಗೆ ಆರ್.ಅಶೋಕ್ ಸಲಹೆ

ಬೆಂಗಳೂರು: ವಿಪಕ್ಷಗಳು ಟೀಕೆ ಮಾಡಿದ ಮೇಲಾದರೂ ಎಚ್ಚೆತ್ತುಕೊಂಡು ಕಾರ್ಯೋನ್ಮುಖವಾಗುವ ಬದಲು ವಿಪಕ್ಷಗಳ ಮೇಲೆಯೇ ಹರಿಹಾಯುವುದೂ ಯಾವ ಸೀಮೆ ನ್ಯಾಯ ಸ್ವಾಮಿ ಎಂದು ಪ್ರತಿಪಕ್ಷ ನಾಯಕ ಅಶೋಕ್ ಸಚಿವ ಚಲುವರಾಯಸ್ವಾಮಿ ಅವರಿಗೆ ಪ್ರಶ್ನಿಸಿದ್ದಾರೆ.

ಸರ್ಕಾರದ ತಪ್ಪುಗಳು, ಆಡಳಿತದಲ್ಲಿರುವ ನ್ಯೂನ್ಯತೆಗಳನ್ನ ಎತ್ತಿ ತೋರಿಸಿ, ಜನರ ದನಿಯನ್ನ ಸರ್ಕಾರಕ್ಕೆ ತಲುಪಿಸುವುದೇ ವಿರೋಧ ಪಕ್ಷದ ಕೆಲಸ. ವಿರೋಧ ಪಕ್ಷದ ನಾಯಕನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಅಶೋಕ್‌ ಹೇಳಿದ್ದಾರೆ.

ನಿಮ್ಮ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುವುದಿರಲಿ. ಸ್ವತಃ ನಿಮ್ಮ ಪಕ್ಷದ ಶಾಸಕರೇ ಅನೇಕ ಸಂದರ್ಭಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ರೈತರ ಪರ ಯಾವುದೇ ವಿಶೇಷ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಸರಕಾರದ ಧೋರಣೆ ನೋಡಿದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎನಿಸುವಷ್ಟು ಬೇಸರವಾಗಿದೆ ಎಂದು ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಇತ್ತೀಚೆಗಷ್ಟೇ ಬೇಸರ ವ್ಯಕ್ತಪಡಿಸಿದ್ದುದು ಗೊತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ನವಲಗುಂದದ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಬಹುತೇಕ ರೈತರಿಗೆ ಮುಂಗಾರು ಬರ ಪರಿಹಾರವೇ ವಿತರಣೆ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿ ಬಗ್ಗೆ ತಮ್ಮ ಸರ್ಕಾರಕ್ಕೆ ಅರಿವಿದೆ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಉಡಾಫೆ ಮಾತುಗಳು, ಹಾರಿಕೆ ಉತ್ತರಗಳು ರೈತರ ಸಮಸ್ಯೆ ಬಗೆಹರಿಸುವುದಿಲ್ಲ. ಕೃಷಿ ಸಚಿವರಾಗಿ ತಾವು ಎಷ್ಟು ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಿ, ಯಾವ್ಯಾವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೀರಿ ಎಂದು ಆರ್.ಅಶೋಕ್ ಕಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ಅನೇಕ ಮುತ್ಸದ್ದಿಗಳು, ಹಿರಿಯರು ನಿರ್ವಹಿಸಿದ ಕೃಷಿ ಇಲಾಖೆಯ ಮಂತ್ರಿ ಆಗಿದ್ದೀರಿ. ಇಲಾಖೆಯ ಗಂಭೀರತೆ ಅರಿತು ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.

ಅಭದ್ರವಾಗಿರುವ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯನವರ ಜೊತೆ ಇರಬೇಕೋ ಅಥವಾ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಜೊತೆ ಇರಬೇಕೋ ಎನ್ನುವ ತಳಮಳ, ಗೊಂದಲ ತಮ್ಮನ್ನ ಕಾಡುತ್ತಿದೆ ಎಂದು ಗೊತ್ತಿದೆ, ತಾವು ನಾಡಿನ ರೈತರ ಜೊತೆಗೆ ಇರಿ, ಆಗ ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ. ತಮ್ಮ ಕರ್ತವ್ಯ ನಿರ್ವಹಣೆ ಮಾಡಿ ರೈತರಿಗೆ ನೆರವಾಗಿ ಅದೇ ನಿಮ್ಮನ್ನ ಕಾಪಾಡುತ್ತದೆ ಎಂದು ಅಶೋಕ್ ಚಲುವರಾಯ ಸ್ವಾಮಿ ಅವರಿಗೆ ಕಿವಿ ಮಾತು ಹೇಳಿದ್ದಾರೆ.

ರೈತರಿಗೆ ನೆರವಾಗಿ:ಕೃಷಿ ಸಚಿವರಿಗೆ ಆರ್.ಅಶೋಕ್ ಸಲಹೆ Read More

ಸಿಎಂ ತವರು ಜಿಲ್ಲೆಯ ಸಚಿವರು ಶಾಸಕರನ್ನು ಭೇಟಿ ಮಾಡಿದ ಸತೀಶ್ ಜಾರಕಿಹೊಳಿ

ಮೈಸೂರು: ಮೈಸೂರಿಗೆ ತಾವು ಭೇಟಿ ನೀಡಿರುವುದರ ಹಿಂದೆ‌ ಯಾವುದೇ ಮಹತ್ವದ ವಿಚಾರ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮೈಸೂರಿಗೆ ಆಗಮಿಸಿರುವ ಅವರು,ಜಿಲ್ಲೆಯ ಸಚಿವರು,ಶಾಸಕರನ್ನು ಭೇಟಿ ಮಾಡಿದ್ದು ಚರ್ಚೆಗೆ ಗ್ರಾಸ‌ ಒದಗಿಸಿದೆ.

ಆದರೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಮೈಸೂರು ದಸರಾ ಫೇಮಸ್ ಅಲ್ವಾ ಹಾಗಾಗಿ ಮೈಸೂರಿನಲ್ಲಿ ಓಡಾಡಿಕೊಂಡು ದಸರಾ ನೋಡುತ್ತೇನೆ‌ ಅದು ಬಿಟ್ಟರೆ ಬೇರೆ ಯಾವ‌ ಮಹತ್ವವೂ ಇಲ್ಲ ಎಂದು ತಿಳಿಸಿದರು.

ಸಚಿವ ಮಹದೇವಪ್ಪ ಅವರನ್ನ ಭೇಟಿ ಮಾಡಿದ್ದೇನೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು ಎಂದರು.

ಸಿದ್ದರಾಮಯ್ಯನವರೇ ಮುಖ್ಯ ಮಂತ್ರಿ ಆಗಿ ಇರುತ್ತಾರೆ.ಆದರೆ 5 ವರ್ಷಾನೊ ಮೂರು ವರ್ಷವೂ ಗೊತ್ತಿಲ್ಲ. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ,ಹಾಗಾಗಿ ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು
ಹೇಳಿದರು.

ನಮ್ಮಲ್ಲಿ ಎಲ್ಲೂ ಸಿಎಂ ಬದಲಾವಣೆ ಚರ್ಚೆಗಳು ನಡೆದೇ ಇಲ್ಲ, ಸಿಎಂ ಜೊತೆ ನಾನು ಸಚಿವನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ನೀವೆ ಸಿಎಂ‌ ಎಂದು ವಿಪಕ್ಷ ನಾಯಕರು ಹೇಳುತ್ತಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಪಕ್ಷದವರು ಪ್ರೀತಿಯಿಂದ ನನ್ನ ಹೆಸರು ಹೇಳುತ್ತಿದ್ದಾರೆ ಅಷ್ಟೇ, ನಮ್ಮಲ್ಲಿ ಯಾವುದೇ ಚರ್ಚೆನೂ ಆಗಿಲ್ಲ, ಬೆಳವಣಿಗೆಯೂ ನಡೆದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಸಮಾರಂಭದ ಸಂದರ್ಭದಲ್ಲಿ ಬೆಂಬಲಿಗರು ಸಿಎಂ ಎಂದು ಜೈಕಾರ ಹಾಕುವುದು ಸಾಮಾನ್ಯ,ಹಾಗಂತ ಏನೋ ಬದಲಾವಣೆ ಆಗುತ್ತೆ ಅಂತ ಹೇಳೋದು ಸರಿಯಲ್ಲ ಎಂದು ಸಚಿವರು ಹೇಳಿದರು.

ಸಿಎಂ ತವರು ಜಿಲ್ಲೆಯ ಸಚಿವರು ಶಾಸಕರನ್ನು ಭೇಟಿ ಮಾಡಿದ ಸತೀಶ್ ಜಾರಕಿಹೊಳಿ Read More

ಒಂದು ದೇಶ ಒಂದು ಚುನಾವಣೆ ರಾಷ್ಟ್ರೀಯ ಪ್ರಮಾದ: ಮಹದೇವಪ್ಪ

ಮೈಸೂರು: ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಎಂಬುದನ್ನು ಮರೆತಿರುವ ಕೇಂದ್ರ ಸರ್ಕಾರ ಈಗ ಒಂದು ದೇಶ ಒಂದು ಚುನಾವಣೆಯನ್ನು ಮಾಡಲು ಹೊರಟಿದೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಖಂಡಿಸಿದ್ದಾರೆ.

ನೆಲ ಜಲ ಮತ್ತು ಭಾಷೆ ವಿಷಯದಲ್ಲಿ ಸಾಕಷ್ಟು ವೈವಿಧ್ಯಮಯ ಸನ್ನಿವೇಶವನ್ನು ಹೊಂದಿರುವ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆ ಆದ ಮೇಲೆ ಒಕ್ಕೂಟ ವ್ಯವಸ್ಥೆಯ ಭಾಗವಾಗಿ ತಮ್ಮದೇ ಆದ ಕೆಲವೊಂದು ಅಧಿಕಾರವನ್ನು ಪಡೆದಿವೆ.

ರಾಜ್ಯಗಳಿಗೆ ಇರುವಂತಹ ಚುನಾವಣಾ ವ್ಯಾಪ್ತಿಯನ್ನು ಬದಲಿಸುವಂತಹ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ರಾಜ್ಯದ ಅಸ್ತಿತ್ವವನ್ನು ವಿಪರೀತವಾಗಿ ಅವಮಾನಿಸುತ್ತಿದೆ ಎಂದು ಪ್ರಕಟಣೆಯಲ್ಲಿ ಸಚಿವರು ತೀವ್ರ‌ ವಿರೋಧ ವ್ಯಕ್ತಪಡಿಸಿದ್ದಾರೆ.

ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಿಲ್ಲಬೇಕಾದರೆ, ಆಯಾ ರಾಜ್ಯಗಳೇ ಚುನಾವಣಾ ವ್ಯವಸ್ಥೆ ನಡೆಯಲು ಹಣಕಾಸನ್ನು ಒದಗಿಸಬೇಕು,
ಆಗ ಮಾತ್ರ ಚುನಾವಣಾ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಬಹುದು.

ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಯೋಚಿಸಬೇಕೇ ವಿನಃ, ಒಂದು ದೇಶ ಒಂದು ಚುನಾವಣೆ ಎಂಬುದಾಗಿ ಅಲ್ಲ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಸೋಲುವ ಭಯದಿಂದ ಲೋಕಸಭೆ ಚುನಾವಣೆಯನ್ನೇ ಏಳು ಹಂತದಲ್ಲಿ ನಡೆಸಿದ ಇವರು, ಜಮ್ಮು ಮತ್ತು ಕಾಶ್ಮೀರ ಚುನಾವಣೆಯನ್ನು ಒಟ್ಟಾಗಿ ನಡೆಸಿದರೆ ಎಲ್ಲಿ ಅದರ ಮೇಲಿನ ನಿಯಂತ್ರಣ ಕೈತಪ್ಪುವುದೋ ಎಂದು ಹೆದರಿ ಪ್ರತ್ಯೇಕವಾಗಿ ಈ ರಾಜ್ಯಗಳ ಚುನಾವಣೆ ನಡೆಸುತ್ತಿದ್ದಾರೆ.

ಇಂತವರು ಒಂದು ದೇಶ ಒಂದು ಚುನಾವಣೆ ಎನ್ನುವುದು ಒಂದು ಹಾಸ್ಯಾಸ್ಪದ ಸಂಗತಿಯಾಗಿದ್ದು, ಸ್ಪಷ್ಟತೆ ಇಲ್ಲದ ಮತ್ತು ರಾಜ್ಯ ವಿರೋಧಿ ಆಗಿರುವ ಇವರ ಧೋರಣೆಯ ಬಗ್ಗೆ ದೇಶದ ವಿಪಕ್ಷಗಳು ಗಂಭೀರವಾಗಿ ಹೋರಾಟ ಮಾಡುವಂತಾಗಬೇಕು ಮತ್ತು ಸ್ಟೇಟ್ ಫಂಡಿಂಗ್ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಎಲ್ಲರೂ ಒತ್ತಾಯಿಸಬೇಕು ಎಂದು ಸಚಿವ ಮಹದೇವಪ್ಪ ಕರೆ ನೀಡಿದ್ದಾರೆ.

ಒಂದು ದೇಶ ಒಂದು ಚುನಾವಣೆ ರಾಷ್ಟ್ರೀಯ ಪ್ರಮಾದ: ಮಹದೇವಪ್ಪ Read More

ದಸರಾ ಪ್ರಾಯೋಜಕತ್ವ ವಹಿಸಿಕೊಳ್ಳಲು ಪ್ರಾಯೋಜಕರಿಗೆ ಹೆಚ್.ಸಿ.ಎಂ ಕರೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳಬೇಕೆಂದು ಪ್ರಾಯೋಜಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಕರೆ ನೀಡಿದರು.

ನಗರದ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ಬುಧವಾರ ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಸಾವಿರಾರು ಜನ ಆಗಮಿಸುತಿದ್ದು, ತಮ್ಮ ಉತ್ಪನ್ನಗಳು, ಕಂಪನಿ, ಕೈಗಾರಿಕೆಗಳನ್ನು, ಜನರ ಬಳಿ ಕೊಂಡೊಯ್ಯಲು ಉತ್ತಮ ವೇದಿಕೆ ಇದಾಗಲಿದ್ದು,ವಿಜೃಂಭಣೆಯ ದಸರಾದಲ್ಲಿ ಪಾಲುದಾರರಾದ ಕೀರ್ತಿ ನಿಮ್ಮದಾಗಲಿದೆ ಎಂದು ಹೇಳಿದರು.

ಪ್ರಾಯೋಜಕತ್ವದಲ್ಲಿ ಜಂಬೂಸವಾರಿ, ಅಂಬಾರಿ, ಪ್ಲಾಟಿನಂ, ಗೋಲ್ಡನ್, ಸಿಲ್ವರ್ ಎಂಬ ವಿಧಗಳಿದ್ದು ತಾವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳಾವಕಾಶದ ಅವಕಾಶಗಳಿದ್ದು ಬಳಸಿಕೊಳ್ಳಿ, ಸ್ವಯಂಪ್ರೇರಿತವಾಗಿ ಮುಂದೆ ಬನ್ನಿ ಎಂದು ಮಹದೇವಪ್ಪ ಕರೆ ನೀಡಿದರು.

ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆ ಮಾಡಲಾಗುತ್ತಿದೆ. ಅಂದು ಬೀದರ್‌ನಿಂದ
ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಈ ಮಾನವ ಸರಪಳಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಎಂದು ಸಚಿವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ತಾವು ತಮಗೆ ಅನುಕೂಲವಾಗುವಂತಹ ಪ್ರಾಯೋಜಕತ್ವವನ್ನು ತಾವು ಉಪಯೋಗಿಸಿಕೊಳ್ಳಬಹುದಾಗಿದ್ದು, ತಕ್ಷಣಕ್ಕೆ ತಿಳಿಸಲಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ತಿಳಿಸಬಹುದಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತ ಮಾತನಾಡಿ,ಜಂಬೂ ಸವಾರಿ ಪ್ರಾಯೋಜಕತ್ವದಲ್ಲಿ 2 ಕೋಟಿ, ಅಂಬಾರಿ ಪ್ರಾಯೋಜಕತ್ವದಲ್ಲಿ 1 ಕೋಟಿ, ಪ್ಲಾಟಿನಂ ಪ್ರಾಯೋಜಕತ್ವದಲ್ಲಿ 75 ಲಕ್ಷ, ಗೋಲ್ಡನ್ ಪ್ರಾಯೋಜಕತ್ವದಲ್ಲಿ 50 ಲಕ್ಷ, ಸಿಲ್ವರ್ ಪ್ರಾಯೋಜಕತ್ವದಲ್ಲಿ 25 ಲಕ್ಷ ಸ್ಪಾನ್ಸರ್ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್,ಜಿಪಂ ಸಿಇಒ ಗಾಯತ್ರಿ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಸೇರಿದಂತೆ ಉದ್ಯಮಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ದಸರಾ ಪ್ರಾಯೋಜಕತ್ವ ವಹಿಸಿಕೊಳ್ಳಲು ಪ್ರಾಯೋಜಕರಿಗೆ ಹೆಚ್.ಸಿ.ಎಂ ಕರೆ Read More

ಸಚಿವ ಭೈರತಿ ಸುರೇಶ್ ಅವರ ರಾಜಿನಾಮೆಗೆಶಾಸಕ‌ ಶ್ರೀವತ್ಸ ಆಗ್ರಹ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಅವರ ರಾಜಿನಾಮೆ ಪಡಿಯಬೇಕು ಎಂದು ಸರ್ಕಾರವನ್ನು ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು,
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ, ಸಂಜೆಯೊಳಗೆ ಭೈರತಿ ಸುರೇಶ್ ಅವರ ರಾಜೀನಾಮೆಯನ್ನೂ ಪಡೆಯಿರಿ ಎಂದು ಆಗ್ರಹಿಸಿದರು.

ಮುಡಾದಲ್ಲಿ ಅದ್ವಾನ ನಡೆಯಲು ಸಚಿವರೇ ಕಾರಣ, ಕೇವಲ ದಿನೇಶ್ ಕುಮಾರ್ ಅಮಾನತು ಸಾಲದು ಅಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಶಾಸಕ ಶ್ರೀವತ್ಸ ಹೇಳಿದರು.

ಸಚಿವ ಭೈರತಿ ಸುರೇಶ್ ಅವರ ರಾಜಿನಾಮೆಗೆಶಾಸಕ‌ ಶ್ರೀವತ್ಸ ಆಗ್ರಹ Read More