ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಾಗಿನ

ಮೈಸೂರು: ಮೈಸೂರು ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಾಗಿನ ಅರ್ಪಿಸಲಾಯಿತು.

ಕೆಪಿಸಿಸಿ ಸದಸ್ಯ‌ ಜಿ ಶ್ರೀನಾಥ್ ಬಾಬು‌ ಅವರ ಚಾಮರಾಜ ಜೋಡಿ ರಸ್ತೆಯಲ್ಲಿರುವ
ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ
ಅವರ ಕುಟುಂಬದವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸೀರೆ, ಬಳೆ, ಅರಿಶಿಣ, ಕುಂಕುಮ ಸಹಿತ ದಸರಾ ಬಾಗಿನ ನೀಡಿದರು.

ಈ ಸಂದರ್ಭದಲ್ಲಿ ಕುಮಾರಿ, ಸುನಿತಾ, ನೇತ್ರ, ಉಷಾ, ನಿಕಿತಾ, ಸುನಿತಾ, ಆಧ್ಯ ಮತ್ತಿತರರು ಹಾಜರಿದ್ದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಾಗಿನ Read More

ಲಕ್ಷ್ಮಿ ಹೆಬ್ಬಾಳಕರ್ ಅವರ ಕಾರು ಅಪಘಾತ:ಆಸ್ಪತ್ರೆಗೆ ದಾಖಲು

ಬೆಳಗಾವಿ: ಸಂಕ್ರಾಂತಿ ಹಬ್ಬದ ದಿನವೇ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಕಾರು ಅಪಘಾತವಾಗಿದ್ದು ಸಚಿವೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗ್ಗೆ ಸುಮಾರು ಆರು ಗಂಟೆಗೆ ಬೆಳಗಾವಿಯ ವಿಜಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಲಕ್ಷ್ಮಿ ಅವರಿಗೆ ಬೆನ್ನುಮೂಳೆಯ ಎಲ್1 ಎಲ್4 ಮೂಳೆಯಲ್ಲಿ ಬಲವಾದ ಪೆಟ್ಟಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಚಿವೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯ ಡಾ. ರವಿ ಪಾಟೀಲ ತಿಳಿಸಿದ್ದಾರೆ

ಸಚಿವರ ಜೊತೆ ಅವರ ಸಹೋದರ, ಗನ್‌ಮ್ಯಾನ್, ಡ್ರೈವರ್ ಬಂದಿದ್ದಾರೆ,ಅವರಿಗೂ ಗಾಯಗಳಾಗಿದ್ದು, ಎಲ್ಲರಿಗೂ ಚಿಕಿತ್ಸೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಹೆಬ್ಬಾಳ್ಕರ್ ಅವರಿಗೆ ಸಿಟಿ ಸ್ಕ್ಯಾನ್ ಮಾಡಿದ್ದೇವೆ, ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ,ಚೇತರಿಸಿಕೊಳ್ಳುತ್ತಿದ್ದಾರೆ, ಬೆನ್ನಿನ ಮೂಳೆ ಮುರಿದಿದೆ,ಒಂದು ತಿಂಗಳು ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ

ಲಕ್ಷ್ಮಿ ಹೆಬ್ಬಾಳಕರ್ ಅವರ ಕಾರು ಅಪಘಾತ:ಆಸ್ಪತ್ರೆಗೆ ದಾಖಲು Read More

ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಸಿ.ಟಿ ರವಿಗೆ ಲಕ್ಷ್ಮಿ ಸವಾಲ್‌

ಬೆಂಗಳೂರು: ರಾಮಾಯಣ, ಮಹಾಭಾರತ ಆಗಿದ್ದು, ಮಹಿಳೆಯನ್ನ ಅಪಮಾನ ಮಾಡಿದ್ದಕ್ಕೆ. ಅಲ್ಲಿ ಅಪಮಾನ ಮಾಡಿದ ಎಲ್ಲರಿಗೂ ಶಿಕ್ಷೆ ಆಗಿದೆ ಇಲ್ಲೂ ಆಗೇ ಆಗುತ್ತೆ ಎಂದು ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಕಡಕ್ಕಾಗಿ ಹೇಳಿದ್ದಾರೆ.

ಸಿ.ಟಿ ರವಿ ಅವರು ನನ್ನ ಕುರಿತು ಆ ರೀತಿ ಹೇಳಿಲ್ಲ ಅನ್ನೋದಾದ್ರೆ, ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ. ಆಣೆ ಮಾಡಲಿಕ್ಕೆ ನಾನೂ ನನ್ನ ಕುಟುಂಬ ಸಮೇತವಾಗಿ ಬರುವೆನು ಎಂದು ಸವಾಲು ಹಾಕಿದರು.

ಡಿ.19ರಂದು ಸುವರ್ಣಸೌಧದ ಪರಿಷತ್‌ ಕಲಾಪದಲ್ಲಿ ಸದಸ್ಯ ಸಿ.ಟಿ ರವಿ ಅವರು ಅಸಂವಿಧಾನಿಕ ಪದ ಬಳಸಿ ನಿಂಧಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ, ಸಿ.ಟಿ ರವಿ ಆ ರೀತಿ ಹೇಳಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ ಎಂದು ಹೇಳಿದರು.

ಸಿ.ಟಿ ರವಿ ಈ ರೀತಿ ಅಂದಿದ್ದಾರೆ ಅಂತಾ ನಾನು ನಾಟಕ ಮಾಡೋಕ್ಕಾಗುತ್ತ, ಸದನದಲ್ಲಿ ನಿಂತು ಸುಳ್ಳು ಆರೋಪ ಮಾಡೋದಕ್ಕೆ ಆಗುತ್ತಾ, ಸುಳ್ಳು ಹೇಳಕ್ಕೆ ನನಗೇನು ಹುಚ್ಚಾ, ನಾಟಕವಾಡಿ ರಾಜಕಾರಣದಲ್ಲಿ ನಾನು ಏನಾದ್ರೂ ಗಳಿಸೋದಿದ್ಯ ಎಂದು ಕಾರವಾಗಿ ಪ್ರಶ್ನಿಸಿದರು.

ಫ್ರೆಟ್ಟ್ರೇಟ್‌ ಎಂಬ ಪದ ಬಳಕೆ ಮಾಡಿರುವುದಾಗಿ ಸಿ.ಟಿ ರವಿ ಹೇಳಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಫ್ರೆಸ್ಟ್ರೇಟ್‌ ಅನ್ನೋದಕ್ಕೂ ಆಪದಕ್ಕೂ ವ್ಯತ್ಯಾಸ ಇರಲ್ವಾ, ಅವರು ಹೇಳಿರೋದಕ್ಕೆ ಆಡಿಯೋ, ವಿಡಿಯೋ ಎಲ್ಲವೂ ನನ್ನ‌ ಬಳಿ ಸಾಕ್ಷಿ ಇದೆ ಎಂದು ತಿಳಿಸಿದರು.

ಸಾವಿರಾರು ಜನ ರಾಜಕಾರಣಕ್ಕೆ ಬರಲು ಮುಂದಾಗಿದ್ದಾರೆ, ಈಗ ಹೋರಾಟ ಮಾಡಲಿಲ್ಲ ಅಂದ್ರೆ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿದಂತೆ ಆಗುತ್ತದೆ. ನಾನು ಸಂಘರ್ಷ, ಅಪಮಾನ ಮೆಟ್ಟಿನಿಂತು ಬೆಳೆದಿದ್ದೇನೆ. ಆದ್ರೆ ಈ ಘಟನೆಯಿಂದ ನನ್ನ ಮನಸ್ಸಿಗೆ ಆಘಾತ ಉಂಟಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ನೊಂದು ನುಡಿದರು

ಕೊಲೆಗಾರ ಎಂದು ನೀವು ಹೇಳಿದ್ದೀರಿ ಎಂಬ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ, ಸಿ.ಟಿ ರವಿ ಆಕ್ಸಿಡೆಂಟ್‌ ಮಾಡಿರುವ ವೀಡಿಯೋ ನನ್ನ ಬಳಿಯಿದೆ. ನಾನು ಕೊಲೆಗಾರ ಅಂದಿಲ್ಲ ಅಂತ ಹೇಳ್ತಿಲ್ಲಾ ಅವರ ಹಾಗೆ ನನಗೆ ಚಪಲಾನಾ, ಪ್ರತಿಯೊಂದಕ್ಕೆ ಎದ್ದು ನಿಂತು ಮಾತಾಡೋದಕ್ಕೆ ನಾನು ಗಾಂಧಿ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆಯುತ್ತಿರುವವಳು, ಗೋಡ್ಸೆ ಮಾರ್ಗದಲ್ಲಿ ನಡೆಯುವಂತಹವರಲ್ಲ ಎಂದು ಹೇಳಿದರು.

ಆ ರೀತಿಯ ಯಾವುದೇ ವಿಡಿಯೋ ಇಲ್ಲ, ಅದು ನಕಲಿ ಎಂಬ ಸಭಾಪತಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ,ಹಲವಾರು ಸಂದರ್ಭದಲ್ಲಿ ಸಭಾಪತಿಗಳು ನನಗೆ ಮಾರ್ಗದರ್ಶನ ಕೊಟ್ಟಿದ್ದಾರೆ, ನನಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ಅವರು ಯಾಕೆ ಈ ರೀತಿ ಹೇಳಿದ್ದಾರೋ ನನಗೆ ಗೊತ್ತಿಲ್ಲ, ಅವರ ರೂಲಿಂಗ್ ಬಗ್ಗೆ ಮಾತಾಡುವಷ್ಟು ಹಿರಿಯಳು ನಾನಲ್ಲ ಎಂದು ತಿಳಿಸಿದರು.

ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಸಿ.ಟಿ ರವಿಗೆ ಲಕ್ಷ್ಮಿ ಸವಾಲ್‌ Read More

ಸಿ.ಟಿ. ರವಿ ಪದ ಬಳಕೆ ನೋವು ತಂದಿದೆ:ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ:ಚಿಂತಕರ ಚಾವಡಿ, ಹಿರಿಯರ ಸದನ ಎನ್ನಿಸಿಕೊಂಡ ಸ್ಥಳದಲ್ಲೇ ಸಿ. ಟಿ. ರವಿ ಅವರು ತೀರಾ ಅಸಹ್ಯ ಭಂಗಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ನನಗೆ ತೀವ್ರ ನೋವು ತಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭಾವುಕರಾಗಿ ನುಡಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನೋವಿನಿಂದಲೇ ಮಾತು ಪ್ರಾರಂಭಿಸಿದ ಸಚಿವೆ, ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತು ಬಿಜೆಪಿಯ ಕೇಂದ್ರದ ನಾಯಕರು ಆಡಿದ ಮಾತಿಗೆ ಸದನದಲ್ಲಿ ನಾವು ಕಾಂಗ್ರೆಸ್ ಶಾಸಕರು ಆಕ್ಷೇಪಣೆಯ ಪ್ರತಿಭಟನೆ ಸಲ್ಲಿಸಿ ಶಿಸ್ತುಬದ್ಧವಾಗಿ ನಡೆದುಕೊಂಡಿದ್ದೆವು.
ಆದರೆ ಸಿ. ಟಿ. ರವಿ ಅವರು ತೀರಾ ಕಳಪೆ ಮಟ್ಟದ, ನಾಗರಿಕ ಸಮಾಜ ಸಹಿಸಿಕೊಳ್ಳದ, ವೈಯಕ್ತಿಕವಾಗಿ ಇನ್ನೊಬ್ಬರ ಚಾರಿತ್ರ್ಯ ಹರಣ ಮಾಡುವ ಹೇಳಿಕೆ ಸದನದಲ್ಲಿ ನೀಡಿದ್ದು ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಅಪರಾಧವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ರಾಷ್ಟ್ರೀಯ ವರಿಷ್ಠರಾದ ರಾಹುಲ್ ಗಾಂಧಿ ಅವರ ಬಗ್ಗೆ ಸಿ. ಟಿ. ರವಿ ಅವರು ಡ್ರಗ್ ಅ್ಯಡಿಕ್ಟ್ ಎಂದು ಆಕ್ಷೇಪಾರ್ಹವಾಗಿ ಮಾತನಾಡಿದ್ದಕ್ಕೆ ಪ್ರತಿಯಾಗಿ ನೀವು ರಸ್ತೆ ಅಪಘಾತ ಮಾಡಿದ್ದೀರಿ ನೀವು ಕೊಲೆಗಡುಕರು ಅಲ್ಲವೇ ಎಂದು ನಾನು ತಿರುಗೇಟು ಕೊಟ್ಟಿದ್ದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕಾಗಿದ್ದ ಸಿ. ಟಿ. ರವಿ ಅವರು ಚಾರಿತ್ರ್ಯ ಹರಣ, ವೈಯಕ್ತಿಕ ಗೌರವಕ್ಕೆ ಧಕ್ಕೆ ಹಾಗೂ ಮಹಿಳಾ ಸಮಾಜಕ್ಕೆ ಅವಹೇಳನ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಆಕ್ಷೇಪಿಸಿದರು.

ಸಿ.ಟಿ. ರವಿ ಪದ ಬಳಕೆ ನೋವು ತಂದಿದೆ:ಲಕ್ಷ್ಮೀ ಹೆಬ್ಬಾಳ್ಕರ್ Read More