ಸ್ಮಶಾನದಲ್ಲಿ ಗಾಂಜಾ ವ್ಯಸನಿಗಳ ಕಾರುಬಾರು:ಕ್ರಮ ಕೈಗೊಳ್ಳದ ಪೋಲೀಸರು

ಮೈಸೂರು: ಮೃತಪಟ್ಟವರ ದೇಹಗಳಿಗೆ ಸಂಪ್ರದಾಯ ಹಾಗೂ ಗೌರವಯುತವಾಗಿ ಸಂಸ್ಕಾರ ಮಾಡುವ ಸ್ಥಳದಲ್ಲೂ ಗಾಂಜಾ ವ್ಯಸನಿಗಳ ಕಾರುಬಾರು ರಾಜಾರೋಶವಾಗಿ ನಡೆದಿದ್ದರೂ ಪೊಲೀಸರು ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ.

ಹೌದು ಇದು ನಿಜ.ಈಗ ಸ್ಮಶಾನ ಗಾಂಜಾ ವ್ಯಸನಿಗಳ ಜಾಗವಾಗಿ ಪರಿಣಮಿಸಿದೆ.

ಹಗಲು ರಾತ್ರಿ ಬೈಕ್ ನಲ್ಲಿ ಬರುವ ಗಾಂಜಾ ವ್ಯಸನಿಗಳು ಸ್ಮಶಾನ ಹಾಗೂ ಅಕ್ಕಪಕ್ಕದಲ್ಲಿ ಪೊದೆಗಳ ಬಳಿ ರಾಜಾರೋಷವಾಗಿ ಗಾಂಜಾ ಸೇವನೆ ಮಾಡುತ್ತಾರೆ.

ಈ ಬಗ್ಗೆ ಸ್ಥಳೀಯರು ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ,ಸ್ಮಶಾನ ಕೂಡಾ ಗಾಂಜಾ ವ್ಯಸನಿಗಳ ಗಮ್ಮತ್ತಿಗೆ ಬಲಿಯಾಗುತ್ತಿದೆ.

ಯಾವ ಸ್ಮಶಾನ ಎಂಬ ಕುತೂಹಲವೆ?ಹೌದು ಇದೆಲ್ಲಾ ನಡೆಯುತ್ತಿರುವುದು ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ಹಾಗೂ ವಾರ್ಡ್ ನಂ.7 ರ ವ್ಯಾಪ್ತಿಯಲ್ಲಿರುವ ಸ್ಮಶಾನದಲ್ಲಿ.

ಸ್ಮಶಾನದ ಅಭಿವೃದ್ದಿಗಾಗಿ ಮೈಸೂರು ಮಹಾನಗರಪಾಲಿಕೆ ಲಕ್ಷಾಂತರ ರೂ ಖರ್ಚು ಮಾಡುತ್ತದೆ.ಹೈ ಮಾಸ್ ಸೇರಿದಂತೆ ವಿವಿಧ ದೀಪಗಳನ್ನ ಅಳವಡಿಸಿದೆ.

ಆದರೆ ಕಳೆದ ಮೂರು ತಿಂಗಳಿಂದ ಈ ಸ್ಮಶಾನದಲ್ಲಿ ದೀಪಗಳು ಬೆಳಗುತ್ತಿಲ್ಲ,ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಗಾಂಜಾ ವ್ಯಸನಿಗಳು ರಾಜಾರೋಷವಾಗಿ ಸ್ಮಶಾನದಲ್ಲಿ ಗಾಂಜಾ ಸೇವಿಸಿ ಮತ್ತಿನಲ್ಲಿ ತೇಲುತ್ತಾರೆ.

ಗಾಂಜಾ ವ್ಯಸನಿಗಳನ್ನು ಈ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಮಾಡಿದ್ದೂ ಇದೆ.

ಸ್ಮಶಾನದ ಪಕ್ಕದಲ್ಲೇ ಇರುವ ಆಲದ ಮರದ ಕೆಳಗೂ ಧಮ್ಮಾರೆ ಧಂ ಇದ್ದೇ ಇರುತ್ತದೆ.

ಪಕ್ಕದಲ್ಲೇ ಹಾದು ಹೋಗಿರುವ ರೈಲ್ವೆ ಹಳಿಯ ಮೇಲೂ ಈ ವ್ಯಸನಿಗಳು ಗಾಂಜಾ ಸೇವಿಸುತ್ತಾರೆ.

ಲಕ್ಷಾಂತರ ರೂ ಖರ್ಚು ಮಾಡಿ ಅಭಿವೃದ್ದಿ ಪಡಿಸಿದ ಸ್ಮಶಾನ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ.

ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಸ್ಮಶಾನದ ಪಾವಿತ್ರ್ಯವನ್ನು ಕಾಪಾಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಮಶಾನದಲ್ಲಿ ಗಾಂಜಾ ವ್ಯಸನಿಗಳ ಕಾರುಬಾರು:ಕ್ರಮ ಕೈಗೊಳ್ಳದ ಪೋಲೀಸರು Read More