ಮೇಟಗಳ್ಳಿ ಸ್ಮಶಾನಕ್ಕೆ ಬೆಳಕಿನ ವ್ಯವಸ್ಥೆ:ಪುಂಡರ ಆಟಕ್ಕೆ‌ ಬ್ರೇಕ್

ಮೈಸೂರು: ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಮುಳುಗುತ್ತಿದ್ದ ಮೇಟಗಳ್ಳಿ ಸ್ಮಶಾನಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು,ಪುಂಡು ಪೋಕರಿಗಳ ಆಟಗಳಿಗೆ ಬ್ರೇಕ್ ಬಿದ್ದಂತಾಗಿದೆ.

ಸ್ಮಶಾನದ ಸುತ್ತ ಅಳವಡಿಸಲಾಗಿದ್ದ ಹೈಮಾಸ್ಕ್ ದೀಪಗಳನ್ನ ದುರಸ್ಥಿ ಮಾಡಲಾಗಿದೆ.

ಕಳೆದ 5 ವರ್ಷಗಳಿಂದ ನಿರ್ಜೀವವಾಗಿದ್ದ ಹೈಮಾಸ್ಕ್ ದೀಪಗಳಿಗೆ ಮರುಜೀವ ದೊರೆತಂತಾಗಿದೆ.

ಮೈಸೂರು ಮಹಾನಗರ ಪಾಲಿಕೆ, ಕೆಇಬಿ ಇಂಜಿನಿಯರ್ ಗೋವಿಂದ ನಾಯಕ್ ಮತ್ತು ಸಿಬ್ಬಂದಿ ದೀಪಗಳನ್ನ ಅಳವಡಿಸಿ ಸ್ಮಶಾನಕ್ಕೆ ಬೆಳಕಿನ ಭಾಗ್ಯ ನೀಡಿದ್ದಾರೆ.

ಮೇಟಗಳ್ಳಿ ಇನ್ಸ್ಪೆಕ್ಟರ್ ಅರುಣ್ ಅವರು ಬೀದಿ ದೀಪಗಳನ್ನ ಸರಿಪಡಿಸುವಂತೆ ಪಾಲಿಕೆಗೆ ಮಾಡಿದ್ದ ಮನವಿಗೂ ಸ್ಪಂದನೆ ದೊರೆತಂತಾಗಿದೆ.

5 ಹೈ ಮಾಸ್ಕ್ ವಿದ್ಯುತ್ ಕಂಬಗಳಿಗೆ ಮರುಜೀವ ಬಂದಿದೆ

ಕತ್ತಲಾದರೆ ಮೇಟಗಳ್ಳಿ ಸ್ಮಶಾನ ಗಾಂಜಾ ವ್ಯಸನಿಗಳ ತಾಣವಾಗುತ್ತಿತ್ತು.
ಸ್ಥಳೀಯರಿಗಂತೂ ಕಿರಿಕಿರಿ ಆಗುತ್ತಿತ್ತು.ಕೆಲವು ದಿನಗಳ ಹಿಂದೆ ಇನ್ಸ್ಪೆಕ್ಟರ್ ಅರುಣ್ ಅ
ವರು ಧಢೀರ್ ದಾಳಿ ನಡೆಸಿ ಗಾಂಜಾ ವ್ಯಸನಿಗಳಿಗೆ ಎಚ್ಚರಿಕೆ ನೀಡಿದ್ದರು.

ಕತ್ತಲು ಇರುವ ಕಾರಣ ವ್ಯಸನಿಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದರು.ಬೀದಿ ದೀಪಗಳನ್ನ ಸರಿಪಡಿಸುವಂತೆ ಸಾಕಷ್ಟು ಮನವಿಗಳನ್ನು ಸಲ್ಲಿಸಲಾಗಿತ್ತು.

ಕಡೆಗೂ ಎಚ್ಚೆತ್ತ ಅಧಿಕಾರಿಗಳು ಹೈಮಾಸ್ಕ್ ದೀಪಗಳಿಗೆ ಬಲ್ಪ್ ಗಳನ್ನ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ.ಇದರಿಂದಾಗಿ ಗಾಂಜಾ ವ್ಯಸನಿಗಳ ಕಾಟ ಪುಂಡು ಪೋಕರಿಗಳ ಆಟ ತಪ್ಪಿದಂತಾಗಿದೆ.

ಮೇಟಗಳ್ಳಿ ಸ್ಮಶಾನಕ್ಕೆ ಬೆಳಕಿನ ವ್ಯವಸ್ಥೆ:ಪುಂಡರ ಆಟಕ್ಕೆ‌ ಬ್ರೇಕ್ Read More

ಚೋಳರ ಕಾಲದ ದೇವಾಲಯದ ಬೀಗ ಮುರಿದು ಕಳವು

ಮೈಸೂರು: ಪುರಾತನ ಚೋಳರ ಕಾಲದ ದೇವಾಲಯದ ಬೀಗ ಮುರಿದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ ಮೈಸೂರಿನ ಮೇಟಗಳ್ಳಿ ಗ್ರಾಮದಲ್ಲಿ ನಡೆದಿದೆ.

ಮೇಟಗಳ್ಳಿ ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಪಂಚಲೋಹದ ಕೊಳಗ,
ತೂಗುದೀಪ,ಹಿತ್ತಾಳೆ ಚೊಂಬು,
ಮಂಗಳಾರತಿ ತಟ್ಟೆ,ತಾಮ್ರದ ಗಂಟೆ ದೋಚಿ ಪರಾರಿಯಾಗಿದ್ದಾರೆ.

ಚೋಳರ ಕಾಲದ ಪುರಾತನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ.ಸೋಮವಾರ ಬೆಳಿಗ್ಗೆ ಅರ್ಚಕರಾದ ಮೋಹನ್ ಪ್ರಸಾದ್ ದೇವಾಲಯಕ್ಕೆ ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

ದೇವಾಲಯದ ಸಮೀಪ ಅಭಿವೃದ್ದಿ ಕಾಣದ ಹಿನ್ನಲೆ ಗಾಂಜಾ ವ್ಯಸನಿಗಳು ಈ ಸ್ಥಳವನ್ನ ಅಡ್ಡೆ ಮಾಡಿಕೊಂಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಗಾಂಜಾ ವ್ಯಸನಿಗಳೇ ಈ ಕೃತ್ಯ ಎಸಗಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು ಭೇಟಿ ನೀಡಿ ಪರಿಶಿಲಿಸಿದರು.

ತಹಸೀಲ್ದಾರ್ ಮಹೇಶ್ ಕುಮಾರ್ ಸೂಚನೆ ಮೇರೆಗೆ ಸ್ಥಳಕ್ಕೆ ಆರ್.ಐ.ಹೇಮಂತ್ ಕುಮಾರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಮಹೇಶ್ ಭೇಟಿ ನೀಡಿ ಅರ್ಚಕ ಮಹದೇವ್ ಪ್ರಸಾದ್ ರಿಂದ ಮಾಹಿತಿ ಪಡೆದು ಮೇಟಗಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಚೋಳರ ಕಾಲದ ದೇವಾಲಯದ ಬೀಗ ಮುರಿದು ಕಳವು Read More

ಮಳೆಗೆ ಕುಸಿದು ಬಿದ್ದ ರಸ್ತೆ: 15 ಅಡಿ‌ ಕಂದಕ ನಿರ್ಮಾಣ

ಮೈಸೂರು:‌ ಸತತ ಮಳೆಗೆ ರಾಜಧಾನಿ ಬೆಂಗಳೂರು ನಲುಗಿದ್ದಾಯಿತು,ಈಗ ಮೈಸೂರಿನ ಸರದಿ.

ನಿರಂತರ ಮಳೆಗೆ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ಸಮೀಪ ರಸ್ತೆ ಕುಸಿದುಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡಿದೆ.

ಮಣ್ಣು ಕುಸಿದ ಪರಿಣಾಮ ರಸ್ತೆಯಲ್ಲಿ ಸುಮಾರು 15 ಅಡಿಯಷ್ಟು ಕಂದಕ ಸೃಷ್ಟಿಯಾಗಿದೆ.

ಸ್ಥಳಕ್ಕೆ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ರಸ್ತೆಯಲ್ಲಿ ಸಂಚರಿಸುವವರು ಹುಷಾರಾಗಿ ಚಲಿಸಬೇಕಿದೆ.ಕಂದಕದ ಸುತ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಳೆಗೆ ಕುಸಿದು ಬಿದ್ದ ರಸ್ತೆ: 15 ಅಡಿ‌ ಕಂದಕ ನಿರ್ಮಾಣ Read More

ಭಾವಮೈದುನನ ಕೊಂದ ಭಾವ

ಮೈಸೂರು: ಕುಡಿದ ಮತ್ತಲ್ಲಿ ಬಾಮೈದನನ್ನು ಭಾವ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರಿನ ಮೇಟಗಳ್ಳಿಯಲ್ಲಿ ಈ ಘಟನೆ ನಡೆದಿದ್ದು,ಮೈಸೂರು ಜಿಲ್ಲೆ
ಪಿರಿಯಾಪಟ್ಟಣದ ಈಡಿಗರ ಬೀದಿ ನಿವಾಸಿ.ಮನೋಜ್ ( 26) ಕೊಲೆಯಾದ ದುರ್ದೈವಿ.ವಿನೋದ್ ಬಾಮೈದನನ್ನ ಕೊಲೆಗೈದ ಬಾವ.

ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು.ಕುಡಿದು ಮನೋಜ್ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ,
ಮನೋಜ್ ನ ಉಪಟಳ ತಾಳಲಾರದೆ ವಿನೋದ್ ಕೊಲೆ ಮಾಡಿದ್ದಾನೆ.

ಟ್ರೂ ಸ್ಪಿರಿಟ್ ಬಾರ್ ನಲ್ಲಿ ಕುಡಿದು ಗಲಾಟೆ ನಡೆದ ನಂತರ ವಿನೋದ್ ಈ ಹತ್ಯೆ ಮಾಡಿದ್ದಾನೆ.

ಬಾರ್ ನಲ್ಲಿ ರೂಮ್ ಬಾಡಿಗೆ ಪಡೆದು ಬಾವಾ,ಬಾಮೈದನ ಜೊತೆಯಲ್ಲೆ ಕುಡಿದಿದ್ದಾರೆ.ಕಂಠಪೂರ್ತಿ ಕುಡಿಸಿ ಪ್ರಜ್ಞೆ ತಪ್ಪಿದ ಮೇಲೆ ಮನಸೋ ಇಚ್ಛೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬಾವ ವಿನೋದ್ ಪರಾರಿಯಾಗಿದ್ದಾನೆ.

ಮೇಟಗಳ್ಳಿ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿನೋದ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಭಾವಮೈದುನನ ಕೊಂದ ಭಾವ Read More