ನಾಗರೀಕ ಸಮಾಜದಲ್ಲಿ ಇರಲು ರವಿಕುಮಾರ್ ಯೋಗ್ಯರಲ್ಲ: ಅಂಜನಾ ಗೌಡ

ಬೆಂಗಳೂರು: ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯ ಸಚೇತಕ ಎನ್. ರವಿಕುಮಾರ್ ತಮ್ಮ ಹೇಳಿಕೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಮೇಲೆ ಅವಹೇಳನ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು
ಆಪ್ ಟೀಕಿಸಿದೆ.

ರವಿಕುಮಾರ್ ಹೇಳಿಕೆ ದೇಶದ ಮಹಿಳಾ ಅಧಿಕಾರಿಗಳು ಹಾಗೂ ದೇಶದ ಮಹಿಳೆಯರ ಘನತೆಗೆ, ಗೌರವಕ್ಕೆ ಮಾಡಿರುವ ಘೋರ ಅಪಮಾನ,ಇಂತಹ ವ್ಯಕ್ತಿಗಳು ನಾಗರಿಕ ಸಮಾಜದಲ್ಲಿ ಇರಲು ಯೋಗ್ಯರಲ್ಲ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಅಂಜನ ಗೌಡ ವಾಗ್ದಾಳಿ ನಡೆಸಿದರು.

ಪಕ್ಷದ ವತಿಯಿಂದ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ನಂತರ ಮಾತನಾಡಿದ ಅವರು,ಇಂತಹ ನೀಚ ಮನಸ್ಸಿನ ವ್ಯಕ್ತಿಯು ರಾಜ್ಯದ ಚಿಂತಕರ ಚಾವಡಿ ಯಾಗಿರುವ ವಿಧಾನಪರಿಷತ್ತಿನಲ್ಲಿ ಇರುವುದು ಹಾಗೂ ಮುಖ್ಯ ಸಚೇತಕ ಹುದ್ದೆಯಲ್ಲಿ ಮುಂದುವರೆದಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾಡಿರುವಂತಹ ಅಪಮಾನ. ಇಂತಹ ವ್ಯಕ್ತಿಯು ಯಾವುದೇ ಕಾರಣಕ್ಕೂ ಇಂತಹ ಘನತೆಯ ಅಧಿಕಾರದಲ್ಲಿ ಮುಂದುವರಿಯಲು ಎಳ್ಳಷ್ಟು ಯೋಗ್ಯ ಅಲ್ಲ ಎಂದು ಹೇಳಿದರು.

ಕೂಡಲೇ ರವಿಕುಮಾರ್ ಅವರನ್ನು ವಿಧಾನಪರಿಷತ್ತಿನಿಂದ ಉಚ್ಛಾಟಿಸಬೇಕು ಮತ್ತು ಮುಖ್ಯ ಸಚೇತಕ ಪದವಿಯಿಂದ ಮುಂದುವರಿಯದಂತೆ ವಿಧಾನ ಪರಿಷತ್ತಿನ ಸಭಾಧ್ಯಕ್ಷರಿಗೆ ಶಿಫಾರಸ್ಸು ಮಾಡಬೇಕು ಹಾಗೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಅಂಜನಾ ಗೌಡ ಒತ್ತಾಯಿಸಿದರು.

ನಾಗರೀಕ ಸಮಾಜದಲ್ಲಿ ಇರಲು ರವಿಕುಮಾರ್ ಯೋಗ್ಯರಲ್ಲ: ಅಂಜನಾ ಗೌಡ Read More

ಗುಂಡು ಹಾರಿಸಿ ಬರ್ತಡೆ ಸೆಲೆಬ್ರೇಟ್!ಗ್ರಾಪಂ ಸದಸ್ಯ ಅರೆಸ್ಟ್

ಬೆಳಗಾವಿ: ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಸಾರ್ವಜನಿಕವಾಗಿ
ಗಾಳಿಯಲ್ಲಿ ಗುಂಡು ಹಾರಿಸಿ, ಚಾಕು ತೋರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಈಗ ಕಂಬಿ ಎಣಿಸುವಂತಾಗಿದೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಕುಡುಚಿ ಪಟ್ಟಣದ ಗ್ರಾಮೀಣ ಗ್ರಾಮ ಪಂಚಾಯತ್ ಸದಸ್ಯ ಈ ರೀತಿ ಗೂಂಡಾ ವರ್ತನೆ ತೋರಿದ್ದು ಅರೆಸ್ಟ್ ಆಗಿದ್ದಾರೆ.

ಆತ ಆಚರಿಸಿಕೊಂಡ ಹುಟ್ಟುಹಬ್ಬದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಬಾಜಾನ್ ಖಾಲಿಮುಂಡಾಸೈ ಎಂಬಾತ ನಡುರಸ್ತೆಯಲ್ಲಿ ಗಾಳಿಯಲ್ಲಿ ಗುಂಡು ಹೊಡೆದು, ಕೈಯಲ್ಲಿ ಚಾಕು ಹಿಡಿದು ಗೂಂಡಾ ವರ್ತನೆ ತೋರಿ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಿದ್ದಾನೆ.

ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಇದ್ದರೂ ಯಾವುದೇ ಭಯವಿಲ್ಲದೇ ಈತ ಹುಚ್ಚಾಟ ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಎಚ್ಚೆತ್ತ ಸ್ಥಳೀಯ ಪೊಲೀಸರು ಬಾಬುಜಾನ್ ನನ್ನು ಬಂಧಿಸಿದ್ದಾರೆ,ಕುಡುಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡು ಹಾರಿಸಿ ಬರ್ತಡೆ ಸೆಲೆಬ್ರೇಟ್!ಗ್ರಾಪಂ ಸದಸ್ಯ ಅರೆಸ್ಟ್ Read More

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಬೆಂಗಳೂರು,ಏ.4: ಮಡಿಕೇರಿ ಬಿಜೆಪಿ ಕಾರ್ಯಕರ್ತರೊಬ್ಬರು ತೀವ್ರ ಬೇಸರದಿಂದ ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತ.

ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದ್ದಕ್ಕೆ ಮನನೊಂದು ಬೆಂಗಳೂರಿನ ನಾಗವಾರದ ಕಚೇರಿಯಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದು, ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ

ಹಿಂದೆ ವಿನಯ್ ಸೋಮಯ್ಯ ಅವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಅವರ ಬಗ್ಗೆ ಅಪಹಾಸ್ಯ ಮಾಡಿ ವಾಟ್ಸಪ್ ಪೋಸ್ಟ್ ಮಾಡಿದ್ದರು.

ಪೋಸ್ಟ್‌ ವಿರುದ್ಧ ಕಾಂಗ್ರೆಸ್ ಮುಖಂಡ ತನ್ನೀರ ಮೈನಾ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ವಿನಯ್ ಸೋಮಯ್ಯ ಅವರನ್ನು ಪೊಲೀಸರು ಎರಡು ತಿಂಗಳ ಹಿಂದೆ ಬಂಧಿಸಿದ್ದರು.ಆ ನಂತರ ಅವರು ಮನನೊಂದಿದ್ದರು ಎಂದು ವಿನಯ್‌ ಕಡೆಯವರು ಹೇಳಿದ್ದಾರೆ.

ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮ್ಯಾನ್ ಪವರ್ ಸಪ್ಲೈ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿದ್ದ ವಿನಯ್‌ ಅವರಿಗೆ ಮದುವೆಯಾಗಿ ಮಗು ಇದೆ.ಅವರು ಕುಟುಂಬ ದೊಂದಿಗೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ವಾಸವಾಗಿದ್ದರು.

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ Read More