ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನ ೨೬ನೇ ವರ್ಷದ ಪೂಜಾ ಮಹೋತ್ಸವ:ಮೀನಾಗೆ ಆಹ್ವಾನ
ಮೈಸೂರು: ಮೈಸೂರಿನ ದತ್ತ ನಗರದಲ್ಲಿರುವ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನದ ೨೬ನೇ ವರ್ಷದ ಪೂಜಾ ಮಹೋತ್ಸವ ನ. ೨೯ಮತ್ತು ೩೦ ಅದ್ದೂರಿಯಾಗಿ ಜರುಗಲಿದೆ.
ಪೂಜಾ ಮಹೋತ್ಸವ ಪ್ರಯುಕ್ತ ಶುಕ್ರವಾರ ದಿವಂಗತ ನಟ ತೂಗುದೀಪ ಶ್ರೀನಿವಾಸ್ ಅವರ ಪತ್ನಿ ಮೀನಾ ತೂಗುದೀಪಾ ಅವರಿಗೆ
ಅವರಿಗೆ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಯಿತು.
ದೇವಸ್ಥಾನದ ಮುಖ್ಯಸ್ಥರಾದ ಶ್ರೀ ವಿಜಯ್ ಕುಮಾರ್ ಅವರು ಆಹ್ವಾನ ಪತ್ರಿಕೆ ನೀಡಿ ಮೀನಾ ಅವರನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಂಸಾಳೆ ರವಿ, ಕನ್ನಡ ಕ್ರಾಂತಿದಳ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನ ೨೬ನೇ ವರ್ಷದ ಪೂಜಾ ಮಹೋತ್ಸವ:ಮೀನಾಗೆ ಆಹ್ವಾನ Read More