ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೇ‌ 47.72 ಲಕ್ಷವಂಚಿಸಿದ ವಾಣಿಜ್ಯ‌ ವಿಭಾಗದ ವ್ಯವಸ್ಥಾಪಕ!

ಮೈಸೂರು : ವ್ಯಕ್ತಿಯೊಬ್ಬ ಕೆಲಸ ಬಿಟ್ಟ ನಂತರವೂ ಗ್ರಾಹಕರಿಂದ ಹಣ ಸಂಗ್ರಹಿಸಿ ಬ್ಯಾಂಕ್‌ಗೆ 47,72ಲಕ್ಷ ರೂ. ವಂಚಿಸಿರುವ ಪ್ರಸಂಗ‌ ನಡೆದಿದ್ದು,ಈ ಬಗ್ಗೆ ದೂರು ದಾಖಲಾಗಿದೆ.

ನಂಜನಗೂಡಿನ ನಿವಾಸಿ ಮಹದೇವ ಸ್ವಾಮಿ ಎಂಬಾತ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೆ ವಂಚಿಸಿದ ವ್ಯಕ್ತಿ.

ಮಹದೇವ ಸ್ವಾಮಿ ಈ ಹಿಂದೆ ಇಂಡಸ್ ಬ್ಯಾಂಕ್‌ನ ವಾಣಿಜ್ಯ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದನು.

ಕಳೆದ ಮೇ ತಿಂಗಳಿನಿಂದ ಆತ ಕೆಲಸಕ್ಕೆ ಬಂದಿರಲಿಲ್ಲ. ಅವರ ಮೊಬೈಲ್ ಕೂಡ ಬಂದ್ ಆಗಿತ್ತು. ಹಾಗಾಗಿ ಅನುಮಾನಗೊಂಡ ಸಿಬಂದಿ ಮಹದೇವಸ್ವಾಮಿ ಅವರು ಈ ಹಿಂದೆ ವಾಹನಗಳ ಸಾಲಗಳ ವಸೂಲಾತಿ ಮಾಡುತ್ತಿದ್ದವರ ಖಾತೆಗಳನ್ನು ಪರಿಶೀಲಿಸಿದ ವೇಳೆ ಹಲವು ಮಂದಿ ಸಾಲದ ಕಂತು ಕಟ್ಟಿಲ್ಲದಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ.

ಹೀಗಾಗಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ವೇಳೆ ಆತ ೪೭,೭೨,೮೧೦ ರೂ. ಹಣವನ್ನು ಗ್ರಾಹಕರಿಂದ ಸಂಗ್ರಹಿಸಿ ಬ್ಯಾಂಕ್‌ಗೆ ಪಾವತಿಸಿಲ್ಲದಿರುವುದು ಗೊತ್ತಾಗಿದೆ,ಈಗ ಆತನ ವಿರುದ್ಧ ಬ್ಯಾಂಕ್‌ನ ಅಧಿಕಾರಿಗಳು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೇ‌ 47.72 ಲಕ್ಷವಂಚಿಸಿದ ವಾಣಿಜ್ಯ‌ ವಿಭಾಗದ ವ್ಯವಸ್ಥಾಪಕ! Read More