ಮಯೂರ ಕನ್ನಡ ಯುವಕರ ಬಳಗದಿಂದ ರಾಜ್ಯೋತ್ಸವ

ಮೈಸೂರು,ನವೆಂಬರ್. ೧: ಮೈಸೂರಿನ
ಚಾಮರಾಜ ಜೋಡಿ ರಸ್ತೆಯಲ್ಲಿರುವ ಮಯೂರ ಕನ್ನಡ ಯುವಕರ ಬಳಗ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಧ್ವಜಾರೋಹಣ ಮಾಡಲಾಯಿತು.

ಈ ವೇಳೆ ವರನಟ ಡಾ. ರಾಜಕುಮಾರ್, ಹಾಗೂ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಜಿ ಶ್ರೀನಾಥ್ ಬಾಬು, ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ , ಜಿ ರಾಘವೇಂದ್ರ,ಎಸ್ ಎನ್ ರಾಜೇಶ್, ಕಿರಣ್, ಅರುಣ್, ಮಂಜುನಾಥ್,ಸತೀಶ್, ಹರೀಶ್ ನಾಯ್ಡು, ಅಭಿಲಾಶ್, ಸದಾಶಿವ್ ಮತ್ತಿತರರು ಹಾಜರಿದ್ದರು.

ಮಯೂರ ಕನ್ನಡ ಯುವಕರ ಬಳಗದಿಂದ ರಾಜ್ಯೋತ್ಸವ Read More

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎನ್ ಎಸ್ ರಾಮೇಗೌಡರಿಗೆ ಸನ್ಮಾನ

ಮೈಸೂರು: ಕರ್ನಾಟಕ ಸರ್ಕಾರದ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎನ್ ಎಸ್ ರಾಮೇಗೌಡ ಅವರಿಗೆ ಮಯೂರ ಕನ್ನಡ ಯುವಕರ ಬಳಗ ಅಭಿನಂದಿಸಿದೆ.

2025ರ ಕರ್ನಾಟಕ ಸರ್ಕಾರ ನೀಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಿಂದ ಡಾ. ಎನ್ ಎಸ್ ರಾಮೇಗೌಡ ಅವರು‌ ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಹಾಗೂ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೂ‌ ಆದ ಡಾಕ್ಟರ್ ಎನ್ ಎಸ್ ರಾಮೇಗೌಡ ಅವರನ್ನು ಕುವೆಂಪು ನಗರದ ಅವರ ನಿವಾಸದಲ್ಲಿ ಮಯೂರ ಕನ್ನಡ ಯುವಕರ ಬಳಗದವರು ಸನ್ಮಾನಿಸಿ,ಅಭಿನಂದಿಸಿದರು.

ಈ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ. ಎಸ್ ಪಿ ಯೋಗಣ್ಣ, ಕೆಪಿಸಿಸಿ ಸದಸ್ಯರಾದ ಜಿ ಶ್ರೀನಾಥ್ ಬಾಬು,ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು, ಕಿಶೋರ್ ಕುಮಾರ್, ಶೇಖರ್, ಕಿರಣ್,ಜಿಬು ಮ್ಯಾಥ್ವಸ್ ಮತ್ತಿತರರು ಡಾಕ್ಟರ್ ಎನ್ ಎಸ್ ರಾಮೇಗೌಡ ಅವರಿಗೆ ಶುಭಕೋರಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎನ್ ಎಸ್ ರಾಮೇಗೌಡರಿಗೆ ಸನ್ಮಾನ Read More

ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ರಾಘವೇಂದ್ರ ಸಲಹೆ

ಮೈಸೂರು: ಮಯೂರ ಕನ್ನಡ ಯುವಕರ ಬಳಗ ವತಿಯಿಂದ ಹಳೆ ಸಂತೆಪೇಟೆಯಲ್ಲಿ
ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ ಪತ್ರಿಕೆ ನೀಡಿ ಎಲ್ಲ ಪತ್ರಿಕೆಗಳನ್ನು ಪ್ರದರ್ಶಿಸುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ ಮಾತನಾಡಿ,ಪತ್ರಕರ್ತರಿಗೆ ಬಿಡುವು ಎನ್ನುವುದಿಲ್ಲ. ಹಗಲು, ರಾತ್ರಿ ಕರ್ತವ್ಯ ನಿರ್ವಹಿಸುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಹ ಅವರಲ್ಲಿ ಸಮಯ ಇರುವುದಿಲ್ಲ ಎಂದು ಹೇಳಿದರು.

ಸದಾ ಒತ್ತಡದ ನಡುವೆಯೇ ಕೆಲಸ ಮಾಡಬೇಕಿದೆ,ಪತ್ರಕರ್ತರ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಸೇರುವ ಹಾಗೆ ಕಾರ್ಯಕ್ರಮ ಏರ್ಪಡಿಸಲು ಪತ್ರಕರ್ತರ ಸಂಘ ಮುಂದಾಗಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ನಡುವೆ ಸ್ಪರ್ಧೆ ಏರ್ಪಡುತ್ತಿದೆ. ಪತ್ರಕರ್ತರು ಆರೋಗ್ಯಪೂರ್ಣ ಸ್ಪರ್ಧೆಗೆ ತೆರೆದುಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಯಾರ ಪ್ರಭಾವಕ್ಕೂ ಮಣಿಯದೆ ನಿರ್ಭಯದಿಂದ ಜವಾಬ್ದಾರಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿದಿನ ಪೈಪೋಟಿ ಹೆಚ್ಚುತ್ತಿದೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ,ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆಯನ್ನು ಓದುವ ದಿನಚರಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ರಾಘವೇಂದ್ರ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಎಸ್ ಎನ್ ರಾಜೇಶ್, ಮಯೂರ ಕನ್ನಡ ಯುವಕರ ಬಳಗದ ಕಾರ್ಯದರ್ಶಿ ಮಂಜುನಾಥ್, ಹಿರಿಯ ಪತ್ರಕ ವಿತರಕರಾದ ರಮಾಬಾಯಿ, ಎಸ್ಎನ್ ರಾಜೇಶ್, ರವಿಚಂದ್ರ, ಯೋಗೇಶ್, ರಾಕೇಶ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.

ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ರಾಘವೇಂದ್ರ ಸಲಹೆ Read More