ಸಿಂಧೂರ್ ಕಾರ್ಯಾಚರಣೆ:ನಿಮಿಷಾಂಭ ದೇಗುಲದಲ್ಲಿ ಸೈನಿಕರಿಗಾಗಿ ವಿಶೇಷ ಪೂಜೆ

ಮಂಡ್ಯ: ಭಾರತೀಯ ಸೇನೆಯಿಂದ ನಡೆದ ಸಿಂಧೂರ್ ಆಪರೇಷನ್ ಯಶಸ್ವಿಯಾದ ಹಿನ್ನಲೆ ರಾಜ್ಯ ಸರ್ಕಾರದಿಂದ ಮುಜರಾಯಿ ದೇಗುಲಗಳಲ್ಲಿ ಸೈನಿಕರಿಗಾಗಿ ಪೂಜೆ ಸಲ್ಲಿಕೆಗೆ ಆದೇಶವಾಗಿದೆ.

ಹಾಗಾಗಿ ಶ್ರೀರಂಗಪಟ್ಟಣದ ನಿಮಿಷಾಂಭ ದೇಗುಲದಲ್ಲಿ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಲಾಯಿತು.

ರಾಜ್ಯದ ಪ್ರಸಿದ್ಧ ದೇಗುಲದಲ್ಲಿ ಒಂದಾದ ಮಂಡ್ಯ ಜಿಲ್ಲೆಯ ನಿಮಿಷಾಂಭ
ದೇಗುಲದಲ್ಲಿ ಇಂದು ಮುಂಜಾನೆ ಸೈನಿಕರಿಗಾಗಿ ದೇವಿಗೆ ಮೊದಲ ಪೂಜೆ ಸಲ್ಲಿಕೆಯಾಯಿತು.

ಸೈನಿಕರಿಗಾಗಿ ಸಂಕಲ್ಪ ಮಾಡಿ ದೇವಿಗೆ ದೇಗುಲದ ಅರ್ಚಕರು ಮೊದಲ ಪೂಜೆ ಸಲ್ಲಿಸಿದರು.

ದೇಶ ಕಾಯುವ ಯೋಧರಿಗೆ ಯಾವುದೇ ತೊಂದರೆ ಆಗದಂತೆ ದೇವಿಯಲ್ಲಿ ಪ್ರಾರ್ಥಿಸಿ ಸಂಕಲ್ಪ ಮಾಡಿದರು.

ಸಿಂಧೂರ್ ಕಾರ್ಯಾಚರಣೆ:ನಿಮಿಷಾಂಭ ದೇಗುಲದಲ್ಲಿ ಸೈನಿಕರಿಗಾಗಿ ವಿಶೇಷ ಪೂಜೆ Read More

ಹೊತ್ತಿ ಉರಿದ ಖಾಸಗಿ ಬಸ್

ಮಂಡ್ಯ: ಚಲಿಸುತ್ತಿದ್ದ ಖಾಸಗಿ ಬಸ್ ಹೊತ್ತಿ ಉರಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಹಳ್ಳಿ ಬಳಿ ನಡೆದಿದೆ.

ಬಸ್ನಲ್ಲಿದ್ದ 25 ಕ್ಕೂ ಹೆಚ್ಚು ಪ್ರಯಾಣಿಕರು
ಅದೃಷ್ಟಾವಶಾತ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

ಬೆಂಗಳೂರು-ಮಂಗಳೂರು ಹೈವೇಯಲ್ಲಿ
ಉಡುಪಿಯಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ನಲ್ಲಿ
ಬೆಳಗಿನ ಜಾವ 5 ಗಂಟೆಯಲ್ಲಿ
ಇದ್ದಕ್ಕಿದ್ದ ಹಾಗೆ ಬೆಂಕಿಗೆ ಕಾಣಿಸಿಕೊಂಡಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರನ್ನ ಬಸ್ ನಿಂದ ಕೆಳಗಿಳಿಸಲಾಗಿದ್ದು ಎಲ್ಲರೂ ಪಾರಾಗಿದ್ದಾರೆ.

ಅಗ್ನಿಶಾಮಕ ದಳ ಸಿಬ್ಬಂದಿ ಸುದ್ದಿ ತಿಳಿದು ಧಾವಿಸಿ ಬಂಕಿ ನಂದಿಸುವ ಕಾರ್ಯ ಮಾಡಿದರು.ಆದರೆ ಬಸ್ ಹೊತ್ತಿ ಉರಿದು ಸುಟ್ಟುಕರುಕಲಾಗಿದೆ.

ಚಾಲಕನ ಸಮಯ ಪ್ರಜ್ಞೆಯಿಂದ 25ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಂಡಿಗನವಿಲೆ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೊತ್ತಿ ಉರಿದ ಖಾಸಗಿ ಬಸ್ Read More

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ:ನಾಲ್ಕು ಮಂದಿ ದುರ್ಮರಣ

ಮಂಡ್ಯ,ಏ.3: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ ಹೊಡೆದು ಅರಸು ಮನೆತನದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕು ತೂಬಿನಕೆರೆ ಎಕ್ಸಿಟ್ ಬಳಿ ನಡೆದಿದೆ.

ಕಾರು ಬೆಂಗಳೂರಿಂದ ಮೈಸೂರು ಕಡೆಗೆ ಹೊರಟಿತ್ತು. ಈ ವೇಳೆ ಎಕ್ಸ್ ಪ್ರೆಸ್ ವೇ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲ ಉಂಟಾಗಿದ್ದು, ಮತ್ತೆ ಕಾರನ್ನು ಎಕ್ಸ್ಪ್ರೆಸ್ ವೇಗೆ ತಿರುಗಿಸಿದ್ದಾನೆ. ಇದೇ ವೇಳೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಬಂದಿದ್ದು, ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತರು ಬೆಂಗಳೂರಿನ ಜೆಪಿ ನಗರದಲ್ಲಿ ವಾಸಿಸುತ್ತಿದ್ದರು.

ಮೂಲತಃ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ತುಂಗ ನಿವಾಸಿ ಸುವೇದಿನಿ ರಾಣಿ(50), ಅವರ ಪತಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಮರೂರು ಗ್ರಾಮದ ಚಂದ್ರು(62),ಪಿರಿಯಾಪಟ್ಟಣ ತಾಲೂಕು ಬೇಲಾಳು ಗ್ರಾಮದ ಸತ್ಯಾನಂದ ರಾಜೇ ಅರಸ್ ಮತ್ತು ಅವರ ಪತ್ನಿ ನಿಶ್ಚಿತಾ ಮೃತಪಟ್ಟ‌ ದುರ್ದೈವಿಗಳು.

ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಪೊಲೀಸ್ ಅಧಿಕಾತಿಗಳು ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಟ್ರಾಫೀಕ್ ಜಾಮ್ ಸರಿಪಡಿಸಿ ಮೃತ ದೇಹಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ:ನಾಲ್ಕು ಮಂದಿ ದುರ್ಮರಣ Read More

ನಾಳೆಯಿಂದ ಶ್ರೀ ವೈರಮುಡಿ ಬ್ರಹೋತ್ಸವ

ಮಂಡ್ಯ: ಮಂಡ್ಯ ಜಿಲ್ಲೆ ಮೇಲುಕೋಟೆ ಪುರಾಣ ಪ್ರಸಿದ್ದ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್ 2 ರಿಂದ
ಶ್ರೀ ವೈರಮುಡಿ ಬ್ರಹೋತ್ಸವ ನಡೆಯಲಿದೆ.

ಏ.14 ರವರೆಗೆ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ನೆರವೇರಲಿದೆ.

ಈ ದಿವ್ಯ ಮಹೋತ್ಸವಗಳ ಸೇವೆಯನ್ನು ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಕೋರಿವೆ.

ನಾಳೆಯಿಂದ ಶ್ರೀ ವೈರಮುಡಿ ಬ್ರಹೋತ್ಸವ Read More

ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಮಂಡ್ಯ: ಓದಿ ವಿದ್ಯಾವಂತಳಾಗಿ ತಂದೆ,ತಾಯಿಯನ್ನು ನೋಡಿಕೊಳ್ಳಬೇಕಾದ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕ್ಕರೆ ನಾಡು ಮಂಡ್ಯಾದಲ್ಲಿ ನಡೆದಿದೆ.

ಈ ಘಟನೆ ಮಂಡ್ಯ ಜಿಲ್ಲೆಯ ಬಂದೀಗೌಡ ಬಡಾವಣೆಯಲ್ಲಿ ನಡೆದಿದ್ದು,
ಸುಹಾನಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮಂಡ್ಯದ ಸಶಸ್ತ್ರ ಮೀಸಲು ಪಡೆಯ ಎಎಸ್ಐ ಅನ್ಸರ್ ಪಾಷಾ ಅವರ ಮಗಳು ಸುಹಾನಾ (19) ಎಂದು ಗುರುತಿಸಲಾಗಿದೆ.

ಈಕೆ ಮೈಸೂರಿನಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಬಂದಿದ್ದಾಳೆ. ಬಂದ ಕೂಡಲೇ ಸ್ಕೂಟಿ ತೆಗೆದುಕೊಂಡು ಹೋದವಳು ನೇರವಾಗಿ ರೈಲ್ವೆ ಹಳಿ ಬಂದು ಸ್ಕೂಟಿ ನಿಲ್ಲಿಸಿ, ರೈಲು ಹಳಿ ಬಳಿ ತೆರಳಿ ಬರುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುಹಾನಾ ರೈಲು ಹಳಿ ಬಳಿ ಸ್ಕೂಟಿ ನಿಲ್ಲಿಸಿ, ಹಳಿಯತ್ತ ಸಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಕೆಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ Read More

ಸ್ಪಂದನ ಇಂಟರ್ನ್ಯಾಷನಲ್ ಶಾಲಾ ವಾರ್ಷಿಕೋತ್ಸವ

ಮಂಡ್ಯ: ಮಂಡ್ಯಾದ ಸ್ಪಂದನ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಯಿತು.

ಶುಕ್ರವಾರ ಸಂಜೆ ಮಂಡ್ಯಾದ ಪಾಂಡುರಂಗ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸ್ಪಂದನ ಇಂಟರ್ನ್ಯಾಷನಲ್ ಶಾಲೆ ವಾರ್ಷಿಕೋತ್ಸವನ್ನು ದೀಪ ಬೆಳಗುವ ಮೂಲಕ ಕನ್ನಡ ಜಾನಪದ ಪರಿಷತ್ ರಾಜ್ಯದ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಉದ್ಘಾಟನೆ ಮಾಡಿದರು.

ಸ್ವರ್ಣ ನ್ಯೂಸ್ ಚಾನೆಲ್ ಸಿ ಇ ಒ ಶಂಭು, ಸಂಸ್ಥೆಯ ಸಂಸ್ಥಾಪಕ ವಿಜಯ್ ಕೊಪ್ಪ, ಮೈಸೂರು ಯುವರಾಜಾ ಕಾಲೇಜಿನ ಶ್ರೀ ವೆಂಕಟೇಶ್, ಕನ್ನಡ ಜಾನಪದ ಪರಿಷತ್ ರಾಮನಗರ ಜಿಲ್ಲಾ ಅಧ್ಯಕ್ಷ ಕೆ ಸಿ ಕಾಂತಪ್ಪ, ಮತ್ತಿತರೆ ಗಣ್ಯರು ಪಾಲ್ಗೊಂಡಿದ್ದರು.

ಈ ವೇಳೆ ಪ್ರತಿಭಾನ್ವಿತ ಮಕ್ಕಳಿಗೆ ಸರ್ಟಿಫಿಕೆಟ್ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಮುಖ್ಯ ಅತಿಥಿಗಳನ್ನು‌ ಸನ್ಮಾನಿಸಿ ಗೌರವಿಸಲಾಯಿತು.

ಸ್ಪಂದನ ಇಂಟರ್ನ್ಯಾಷನಲ್ ಶಾಲಾ ವಾರ್ಷಿಕೋತ್ಸವ Read More

ಪಾಂಡವಪುರ ಬಳಿ ನಾಲೆಗೆ ಕಾರು ಉರುಳಿದ ಪ್ರಕರಣ:ಮೃತರ ಸಂಖ್ಯೆ ಮೂರಕ್ಕೆ ಏರಿಕೆ

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ವಿಸಿ ನಾಲೆಗೆ ಕಾರು ಉರುಳಿದ ಘಟನೆಯಲ್ಲಿ ಮತ್ತೊಂದು ದೇಹ ಪತ್ತೆಯಾಗಿದೆ.

ಹಾಲಹಳ್ಳಿ ಸ್ಲಂ ನಿವಾಸಿ ಪೀರ್ ಖಾನ್ ಶವ ಪತ್ತೆಯಾಗಿದ್ದು ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಫೆ.3 ರಂದು ತಿಬ್ಬನಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿದ ವೇಳೆ ಒಬ್ಬನನ್ನ ರಕ್ಷಿಸಲಾಗಿತ್ತು. ಇಬ್ಬರ ದೇಹ ಪತ್ತೆಯಾಗಿತ್ತು.

ಪಾಂಡವಪುರಕ್ಕೆ ತೆರಳಿದ್ದ ನಾಲ್ವರು ಕಾರಿನಲ್ಲಿ ಮಂಡ್ಯ ಕಡೆಗೆ ವಾಪಸಾಗುವಾಗ ಚಾಲಕನ ನಿಯಂತ್ರಣ ತಪ್ಪಿಕಾರು ನಾಲೆಗೆ ಉರುಳಿದೆ.

ನಾಲೆ ಪಕ್ಕ ತಡೆಗೋಡೆ ಇಲ್ಲದಿದ್ದರಿಂದ ಕಾರು ನಾಲೆಯೊಳಗೆ ಉರುಳಿದೆ.. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಆ ಸಮಯದಲ್ಲಿ ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದ ನಯಾಜ್‌ನನ್ನು ನೀರಿನಿಂದ ಹೊರತಂದು ಪ್ರಾಣ ರಕ್ಷಿಸಿದ್ದಾರೆ. ನಂತರದಲ್ಲಿ ಕಾರು ನೀರಿನೊಳಗೆ ಮುಳುಗಿದ್ದರಿಂದ ಮೂವರು ಮೃತಪಟ್ಟಿದ್ದಾರೆ.

ಪಾಂಡವಪುರ ಬಳಿ ನಾಲೆಗೆ ಕಾರು ಉರುಳಿದ ಪ್ರಕರಣ:ಮೃತರ ಸಂಖ್ಯೆ ಮೂರಕ್ಕೆ ಏರಿಕೆ Read More

ಅಂಕನಾಥೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕನಮರಡಿ ಗ್ರಾಮದ ಶ್ರೀ ಅಂಕನಾಥೇಶ್ವರಸ್ವಾಮಿ ದೇವಾಲಯವನ್ನು ಮರುನಿರ್ಮಾಣ ಮಾಡಲಾಗಿದ್ದು ಲೋಕಾರ್ಪಣೆ ಮಾಡಲಾಯಿತು.

ಶ್ರೀ ಆದಿಚುಂಚನಗಿರಿ ಮಠದ ಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ದೇವಾಲಯ ಲೋಕಾರ್ಪಣೆ‌ ಗೊಳಿಸಲಾಯಿತು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅಂಕನಾಥೇಶ್ವರಸ್ವಾಮಿ ದೇವಾಲಯವನ್ನು ಲೋಕಾರ್ಪಣೆ ಮಾಡಿ ಸ್ವಾಮಿಯ ದರ್ಶನ ಪಡೆದರು.

ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡರು ಹಾಗೂ ಗ್ರಾಮದ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ಅಂಕನಾಥೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ Read More

ಗುದ್ದಲಿ ಪೂಜೆ:ರಾಜಕೀಯ ಮಾಡಲು ಇಚ್ಛಿಸಲ್ಲ-ಹೆಚ್ ಡಿ ಕೆ

ಮಂಡ್ಯ: ನಾನು ಭೂಮಿಪೂಜೆ ಮಾಡಿದ ಮೇಲೆ ಉಸ್ತುವಾರಿ ಸಚಿವರು ಇನ್ನೊಮ್ಮೆ ಗುದ್ದಲಿ ಪೂಜೆ ಮಾಡಿದರೆ ನಾನೇನು ಮಾಡಲಿ, ಇದರಲ್ಲಿ ನಾನು ರಾಜಕೀಯ ಮಾಡಲು ಇಚ್ಛೆ ಪಡುವುದಿಲ್ಲ ಎಲ್ಲವನ್ನೂ ಜನರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಕನಕೆರೆಗೆ ಶನಿವಾರ ಬಾಗಿನ ಅರ್ಪಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ಮಾಡಬೇಕು.ಆದರೆ, ಕೇಂದ್ರ ಸರಕಾರದ ಕಾರ್ಯಕ್ರಮಕ್ಕೆ ಮತ್ತೆ ಅವರೇ ಗುದ್ದಲಿ ಪೂಜೆ ಮಾಡಿದ್ದಾರೆ, ಇದರಲ್ಲಿ ನಾನು ರಾಜಕೀಯ ಮಾಡಲ್ಲ, ನಾನು ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳು ಅನೇಕ. ಕಲ್ಲಿನ ಮೇಲೆ ಹೆಸರು ಬರೆಸಿಕೊಂಡು ಶಂಕುಸ್ಥಾಪನೆ ಮಾಡುತ್ತಾ ಹೋಗಿದ್ದಿದ್ದರೆ ರಾಜ್ಯಾದ್ಯಂತ ನನ್ನ ಹೆಸರಿನ ಕಲ್ಲುಗಳೇ ಇರುತ್ತಿದ್ದವು ಎಂದು ಹೇಳಿದರು.

ನಾನು ಪ್ರಚಾರ ಪಡೆಯಬೇಕೆಂದು ಕೆಲಸ ಮಾಡಿಲ್ಲ. ಅದು ನನ್ನ ಕರ್ತವ್ಯ ಆಗಿತ್ತು. ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡುವುದು ನನ್ನ ನೀತಿ. ಕೇಂದ್ರದ ಅನುದಾನ ತರಲಿ, ನಾವು ಕುಮಾರಸ್ವಾಮಿ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಚಲುವರಾಯಸ್ವಾಮಿ ನನಗೆ ಅಭಿನಂದಿಸೋದು ಬೇಡ. ಅವರಿಗೆ ಸಿಕ್ಕಿರುವ ಅವಕಾಶದಲ್ಲಿ ಇವರು ಏನು ಮಾಡಬೇಕೋ ಅದನ್ನು ಮಾಡಲಿ ಸಾಕು ಎಂದು ತಿಳಿಸಿದರು.

ಭತ್ತದ ಬೆಲೆ 1700ರಿಂದ 1800ಕ್ಕೆ ಬಂದಿದೆ.
ನಾನು ಕಳೆದ ವಾರವೇ ಭತ್ತ ಖರೀದಿ ಕೇಂದ್ರ ತೆರೆಯಿರಿ ಎಂದು ಡಿಸಿಗೆ ಹೇಳಿದ್ದೆ, 15ನೇ ತಾರೀಖಿನೊಳಗೆ ಮಾಡುವುದಾಗಿ ಹೇಳಿದ್ದರು, ಪಾಪ. ಇನ್ನೂ ಗೋಣಿ ಚೀಲ ಖರೀದಿ ಮಾಡ್ತಾ ಇದಾರೆ ಎಂದು ಕಾಣುತ್ತೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಕಾಂಗ್ರೆಸ್ ಬಣ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ,ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ಡಿನ್ನರ್ ಮೀಟಿಂಗ್ ಸೇರ್ತಾರೋ, ಇನ್ಯಾವುದಕ್ಕೋ ಸೇರ್ತಾರೋ ಏನಾದರೂ ಮಾಡಿಕೊಳ್ಳಲಿ ಎಂದರು.

ಮಂಡ್ಯದಲ್ಲಿ ಮೈತ್ರಿಧರ್ಮ ಪಾಲನೆಯಾಗುತ್ತಿಲ್ಲ ಎಂಬ ಮಾಜಿ ಸಚಿವ ನಾರಾಯಣಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯುಸಿ
ನಾನು ಕೂಡ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಸಾರ್ವಜನಿಕವಾಗಿ ಈ ಬಗ್ಗೆ ಮಾತಾಡಿದ್ದಕ್ಕೆ ಉತ್ತರ ಕೊಡಲು ಆಗುತ್ತಾ, ನಾಲ್ಕು ಗೋಡೆ ನಡುವೆ ಮಾತನಾಡುತ್ತೇವೆ.
ಇವೆಲ್ಲ ಹೊರಗಡೆ ಚರ್ಚೆ ಮಾಡಲು ಆಗಲ್ಲ.
ನನ್ನ ಬಳಿ ಏನು ಸಮಸ್ಯೆ ಎಂದು‌ ಹೇಳಿದರೆ ಖಂಡಿತಾ ಸರಿಪಡಿಸಬಹುದು ಎಂದು ಹೆಚ್ ಡಿ ಕೆ ತಿಳಿಸಿದರು.

ಸುಮಲತಾ ಬಳಸಿದ್ದ ಕಾರು ಹತ್ತಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಸಚಿವ ಚಲುವರಾಯಸ್ವಾಮಿ ಆರೋಪಕ್ಕೆ ‌ಪ್ರತಿಕ್ರಿಯಿಸಿದ ಕೇಂದ್ರ ಸಚಿವರು,
ನಾನು ಅವರ ಕಾರು, ಇವರ ಕಾರು ಹತ್ತಲ್ಲ ಎಂದಿಲ್ಲ. ಹಾಗಂತ ಎಲ್ಲಾದರೂ ಹೇಳಿದ್ದೇನೆಯೇ,ಚಿಲ್ಲರೆ ರಾಜಕಾರಣ ಮಾಡುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.

ಮಾಜಿ ಸಚಿವ ಡಿ.ಸಿ ತಮ್ಮಣ್ಣ, ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮತ್ತಿತರರು ಉಪಸ್ಥಿತರಿದ್ದರು.

ಗುದ್ದಲಿ ಪೂಜೆ:ರಾಜಕೀಯ ಮಾಡಲು ಇಚ್ಛಿಸಲ್ಲ-ಹೆಚ್ ಡಿ ಕೆ Read More

87 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ 87 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ‌ ದೊರೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂದೇ ಹೆಸರು ಪಡೆದಿರುವ ಹಾಗೂ ಸಕ್ಕರೆ ನಗರಿ ಎಂದು ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅಭಿಮಾನದಿಂದ ಹಾಗೂ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದು ಈ ವೇಳೆ ಸಿದ್ದರಾಮಯ್ಯ ನುಡಿದರು.

ಶ್ರೀ ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.

ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ. ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ ಚಂದ್ರ ಶೇಖರ ಕಂಬಾರ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಚಿವರಾದ ಚೆಲುವರಾಯಸ್ವಾಮಿ,ಡಾ ಹೆ.ಚ್.ಸಿ.ಮಹದೇವಪ್ಪ, ಮುನಿಯಪ್ಪ, ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಪಿ.ರವಿಕುಮಾರ್, ಎಂ.ಬಿ‌.ರಮೇಶ್ ಬಂಡಿ ಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಂಡ್ಯದಲ್ಲಿ ನಡೆಯುತ್ತಿರುವ 87 ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬಂದಿದೆ.

ಬೆಳಗ್ಗೆ 8 ಗಂಟೆಯಿಂದಲೇ ಸ್ಥಳೀಯರು, ಮಹಿಳೆಯರು, ವಿದ್ಯಾ ರ್ಥಿಗಳು ತಂಡೋಪ ತಂಡವಾಗಿ ಆಗಮಿಸಿದರು. ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳಿಂದ ಕನ್ನಡಾಭಿಮಾನಿ ಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ನಗರಕ್ಕೆ ಆಗಮಿಸಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳಿಗೆ ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದು, ಸಮ್ಮೇಳನದ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು.

ಜನಸಾಗರ ಸೇರಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಭಾರೀ ಬಂದೋಬಸ್ತ್ ಮಾಡಿದೆ. ಒಟ್ಟು 3,200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಂಡ್ಯ ನಗರದಲ್ಲಿ ನಗರ ಸಾರಿಗೆ ಬಸ್ ಉಚಿತವಾಗಿ ಬಿಟ್ಟಿರುವುದರಿಂದ ನಗರದ ಜನತೆ ಅತಿ‌ ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಹಿಸಿದ್ದಾರೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ನಗರ ಹಾಗೂ ಜಿಲ್ಲೆಯ ಶಾಲಾ,ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

87 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ Read More