ಶೆಡ್ ನಲ್ಲಿ ಬೆಂಕಿ:55 ಲಕ್ಷ ರೂ ಮೌಲ್ಯದ ಕೊಬ್ಬರಿ ನಾಶ

ಮಂಡ್ಯ‌: ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಪುಟ್ಟೇಗೌಡರ ಪುತ್ರ ಜಿ.ಪಿ.ಪ್ರಸನ್ನ ಅವರು ಕಾಯಿ ವ್ಯಾಪಾರಿಯಾಗಿದ್ದು, ಕೊಬ್ಬರಿ ಖರೀದಿಸಿ ತಮ್ಮ ಶೆಡ್ಡನಲ್ಲಿ ಇಟ್ಟಿದ್ದರು ಬುಧವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಕೊಬ್ಬರಿ ಜತೆಗೆ ಶೆಡ್ ನಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿದೆ.12 ಟನ್ ಕೊಬ್ಬರಿ ಸೇರಿ ಸುಮಾರು 55 ಲಕ್ಷ ರೂ.ನಷ್ಟವಾಗಿದೆ
ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿದೆಯೊ ತಿಳಿದುಬಂದಿಲ್ಲ.

ವಿಷಯ ತಿಳಿದು ಎರಡು ಅಗ್ನಿಶಾಮಕದಳ ತಂಡದ ಸಿಬ್ಬಂದಿಗಳ ಸತತ ಪ್ರಯತ್ನದಿಂದಾಗಿ ಬೆಂಕಿ ನಂದಿಸಿದರು.

ಮಧ್ಯಮ ಕುಟುಂಬ ವರ್ಗದ ಜಿ.ಪಿ.ಪ್ರಸನ್ನ ಅವರು ಕೊಬ್ಬರಿ, ಕಾಯಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು.ಈ ಅವಘಡದಿಂದ ಅವರು ಆತಂಕಗೊಂಡಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಶೆಡ್ ನಲ್ಲಿ ಬೆಂಕಿ:55 ಲಕ್ಷ ರೂ ಮೌಲ್ಯದ ಕೊಬ್ಬರಿ ನಾಶ Read More

ನೂತನ ದೇವಾಲಯದ ಬಳಿ ವಾಮಾಚಾರ!

ಮಂಡ್ಯ: ನೂತನ ದೇವಾಲಯದ ಕಳಶಸ್ಥಾಪನೆಯಾಗಿ 12 ದಿನ ಕಳೆಯುವ ಷ್ಟರಲ್ಲೇ ಯಾರೊ ರಾತ್ರೋರಾತ್ರಿ ಕೋಣವನ್ನು ಬಲಿಕೊಟ್ಟು ವಾಮಾಚಾರ ನಡೆಸಿರುವ ಘಟನೆ ಜಿಲ್ಲೆಯ‌ ಕಿಕ್ಕೇರಿ ಯಲ್ಲಿ ನಡೆದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಗೊಂದಹಳ್ಳಿ ಗ್ರಾಮದಲ್ಲಿ ನೂತನವಾಗಿ ದಂಡಮ್ಮ ದೇವಸ್ಥಾನ ನಿರ್ಮಿಸಿ ಉದ್ಘಾಟನೆ ಪ್ರಯುಕ್ತ ಹಲವು 12‌ ದಿನ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹೋಮ ಅವನ ಮುಂತಾದ ವಿಧಿ ವಿಧಾನಗಳು ನಡೆಯುತ್ತಿದ್ದವು‌

12 ದಿನಗಳ ಕಾರ್ಯಕ್ರಮ ಮುಗಿಯಲು ಇನ್ನೊಂದು ದಿನ ಬಾಕಿ ಇತ್ತು,ಅಷ್ಟರಲ್ಲಿ ಮಧ್ಯರಾತ್ರಿ ಅಪರಿಚಿತರು ಕೋಣವನ್ನು ಬಲಿಕೊಟ್ಟು ರುಂಡ ಮುಂಡವನ್ನು ಬೇರ್ಪಡಿಸಿ ದೇಹವನ್ನು ಅಲ್ಲಿಯೇ ಬಿಟ್ಟು ರುಂಡವನ್ನು ಹೊತ್ತೊಯ್ದಿದ್ದಾರೆ.

ಸ್ಥಳದಲ್ಲಿ ರಕ್ತ ಚೆಲ್ಲಾಡಿದೆ, ಜತೆಗೆ ಅನೇಕ ರೀತಿಯ ವಾಮಾಚಾರ ನಡೆಸಿದ್ದಾರೆ.ಸ್ಥಳದಲ್ಲಿ ಮಡಿಕೆ, ಕುಡಿಕೆ, ದಾರ, ಅರಿಶಿನ, ಕುಂಕುಮ ಮುಂತಾದ ವಸ್ತುಗಳು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಬೆಳಗ್ಗೆ ಎಂದಿನಂತೆ ಜಮೀನಿನ ಹತ್ತಿರ ರೈತರು ಬಂದಾಗ ವಾಮಾಚಾರ ಮಾಡಿರುವುದು ಕಂಡು ಆತಂಕದಿಂದ ಮುಖಂಡರಿಗೆ ತಿಳಿಸಿದ್ದಾರೆ.

ವಿಚಾರ ಗ್ರಾಮದಲ್ಲೆಲ್ಲ ಹರಡಿ ಜನ ಭಯದಿಂದ ಗುಂಪು ಗುಂಪಾಗಿ ಬಂದು ಈ ಕೃತ್ಯವನ್ನು ವೀಕ್ಷಿಸಿದರು.

12ನೇ ದಿನದ ಪೂಜಾ ಕಾರ್ಯಕ್ರಮ ಸಮಾಪ್ತಿಗೊಳ್ಳುವ ಮುನ್ನವೇ ಇಂತಹ ದುಷ್ಕೃತ್ಯ ನಡೆಸಿರುವ ವಾಮಾಚಾರಿಗಳನ್ನು ಕೂಡಲೇ ಬಂಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಮುಖಂಡರಾದ ನಂಜಣ್ಣ, ಅಣ್ಣೇಗೌಡ, ಮಂಜೇಗೌಡ, ಆನಂದ್, ಬೊಮ್ಮೇಗೌಡ, ಬಸವರಾಜು, ಕುಮಾರ್, ರಂಜಿತ್ ಮುಂತಾದವರು ಸ್ಥಳ ಪರಿಶೀಲನೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ನೂತನ ದೇವಾಲಯದ ಬಳಿ ವಾಮಾಚಾರ! Read More

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ಮಂಡ್ಯ: ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ.

ಅಗಟಹಳ್ಳಿಗ್ರಾಮದ ತ್ರಿಪುರ ಸುಂದರ (42)ಆತ್ಮಹತ್ಯೆ ಮಾಡಿಕೊಂಡ ರೈತ.

ಬೆಳೆ ಸಾಲ, ಕೈ ಸಾಲ, ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಸೇರಿ ಸುಮಾರು 10 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದರು.

ರೇಷ್ಮೆಗೆ ಸಿಂಪಡಿಸುವ ಔಷಧಿ ಸೇವಿಸಿ ತ್ರಿಪುರ ಸುಂದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಂಡವಪುರ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ Read More

ಮೇಲುಕೋಟೆಗೆ ನ.9ಕ್ಕೆ ಉಪರಾಷ್ಟ್ರಪತಿ:ಅಗತ್ಯ ಸಿದ್ದತೆಗೆ ಡಿಸಿ ಸೂಚನೆ

ಮಂಡ್ಯ: ಪುರಾಣ ಪ್ರಸಿದ್ಧ ಮೇಲುಕೋಟೆಗೆ ನ.9 ರಂದು ಉಪ ರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು‌ ಆದೇಶಿಸಿದರು.

ಮಾರ್ಗಸೂಚಿಯಂತೆ ಅಧಿಕಾರಿಗಳು ಕೆಲಸ ನಿರ್ವಹಣೆ ಮಾಡಬೇಕು. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕೆಂದು ತಿಳಿಸಿದರು.

ನಿರಂತರವಾಗಿ ವಿದ್ಯುತ್ ಸಂಪರ್ಕ, ಇಂಟರ್ ನೆಟ್ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು,ಎಲ್ಲೂ ಸ್ವಲ್ಪ ಕೂಡಾ ಲೋಪ ಆಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದರು.

ಸುಸ್ಸಜ್ಜಿತ ಅಂಬುಲೆನ್ಸ್ ನೊಂದಿಗೆ ನುರಿತ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು, ಸ್ಥಳದಲ್ಲಿ ಹಸಿರು ಕೊಠಡಿಯಲ್ಲಿ ಗಣ್ಯರಿಗೆ ಬೇಕಾಗುವ ವ್ಯವಸ್ಥೆಯ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಗ್ನಿಶಾಮಕ ದಳ, ಹೆಲಿಪ್ಯಾಡ್ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಶಿಷ್ಟಾಚಾರ ದಂತೆ ಅಗತ್ಯ ಕ್ರಮ ವಹಿಸಬೇಕೆಂದು‌ ಡಿಸಿ ಆದೇಶಿಸಿದರು.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಸ್ಥಳ ಪರಿಶೀಲನೆ
ಸಭೆಗೂ ಮುನ್ನ ಜಿಲ್ಲಾಧಿಕಾರಿಗಳಾದ ಡಾ ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಹೆಲಿಪ್ಯಾಡ್‌ಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಶ್ರೀನಿವಾಸ್, ಪಾಂಡವಪುರ ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್.ಪಿ ಶಾಂತಮಲ್ಲಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇಲುಕೋಟೆಗೆ ನ.9ಕ್ಕೆ ಉಪರಾಷ್ಟ್ರಪತಿ:ಅಗತ್ಯ ಸಿದ್ದತೆಗೆ ಡಿಸಿ ಸೂಚನೆ Read More

ವಿಶ್ವವಿಖ್ಯಾತ ಕೆ.ಆರ್.ಎಸ್.ನಲ್ಲಿ ಸೈಕ್ಲಿಂಗ್:ಕೇಳೋರೇ ಇಲ್ಲ

ಮಂಡ್ಯ: ಜಿಲ್ಲೆಯ ಇತಿಹಾಸ ಪ್ರಸಿದ್ಧ
ಕೆ.ಆರ್.ಎಸ್.ನಲ್ಲಿ ಮತ್ತೆ ಭದ್ರತಾ ಲೋಪದ ಕೂಗು ಕೇಳಿ ಬಂದಿದೆ.

ಪದೇ ಪದೇ ಭದ್ರತಾ ಲೋಪವಾದರೂ ಸಂಬಧಪಟ್ಟ ಅಧಿಕಾರಿಗಳು ಏನೂ ಆಗಿಯೇ‌ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ವಿಶ್ವವಿಖ್ಯಾತ ಬೃಂದಾವನ ಗಾರ್ಡನ್ ನ ಫುಟ್ ಪಾತ್ ನಲ್ಲಿ ರಾಜಾರೋಷವಾಗಿ ಸೈಕ್ಲಿಂಗ್ ಮಾಡಿರುವ ದೃಶ್ಯ ವೈರಲ್ ಆಗಿದೆ.

ಮುಖ್ಯ ಧ್ವಾರದ ಮುಂದೆ ಫೋಟೋಗೆ ಮೂವರು ಪೋಸ್ ಕೊಟ್ಟಿದ್ದಾರೆ. ಕಾವೇರಿ ಆರತಿ ನಡೆದ ಸ್ಥಳದಲ್ಲಿ ಶೂ ಹಾಕಿ ಸೈಕ್ಲಿಂಗ್ ಮಾಡಿದ್ದಾರೆ.

ಸಾಮಾನ್ಯ ಜನರಿಗೆ ಒಂದು, ಪ್ರಭಾವಿಗಳಿಗೆ ಮತ್ತೊಂದು ಕಾನೂನು ಎಂಬಂತಾಗಿದೆ, ಜನ ಇದನ್ನು ಕಾರವಾಗಿ ಪ್ರಶ್ನಿಸಿದ್ದಾರೆ.

ಕೆ ಆರ್ ಎಸ್ ಭದ್ರತೆಯ ಜವಾಬ್ದಾರಿ ಹೊತ್ತ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಕಾವೇರಿ ನೀರಾವರಿ ನಿಗಮ, ಪೊಲೀಸ್ ಇಲಾಖೆ, ಮಂಡ್ಯ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ವಿಶ್ವವಿಖ್ಯಾತ ಕೆ.ಆರ್.ಎಸ್.ನಲ್ಲಿ ಸೈಕ್ಲಿಂಗ್:ಕೇಳೋರೇ ಇಲ್ಲ Read More

ಪಾತ್ರೆ ತೊಳೆಯಲು ಹೋದ ಮೂವರು ವಿಧ್ಯಾರ್ಥಿಗಳು ನೀರುಪಾಲು

ಮಂಡ್ಯ,ನ.2: ಪಾತ್ರೆ ತೊಳೆಯಲು ಹೋದ ಮೂವರು ವಿಧ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಸಮೀಪದ ಬೋರೆ ಗ್ರಾಮದ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದೆ.

ಅನಿ 9ನೇ ತರಗತಿ, ತರ್ಬೀನ್ 7ನೇ ತರಗತಿ, ಆಫ್ರಿನ್ 7ನೇ ತರಗತಿ ಓದುತ್ತಿದ್ದರು,
ಈ ವಿದ್ಯಾರ್ಥಿಗಳು ಮಹದೇವಪುರ ಸಮೀಪದ ರಾಮಸ್ವಾಮಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಮೈಸೂರಿನ ಉದಯಗಿರಿಯ ಹಜಿರ ನಿಶ್ವಾನ್ ಅರೇಬಿಕ್ ಶಾಲೆ ವಿದ್ಯಾರ್ಥಿಗಳು. ಬಟ್ಟೆ, ಪಾತ್ರೆ ತೊಳೆಯುವ ಸಲುವಾಗಿ 15 ವಿದ್ಯಾರ್ಥಿಗಳನ್ನ ನಾಲ್ವರು ಸಿಬ್ಬಂದಿ ಕರೆತಂದಿದ್ದರು.

ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದ. ಆತನ ರಕ್ಷಣೆಗೆ ಹೋದವರು ಐವರು ಮುಳುಗಡೆಯಾಗಿದ್ದಾರೆ.

ಈ ವೇಳೆ ಮೂವರನ್ನ ಸ್ಥಳೀಯರು ರಕ್ಷಿಸಿದ್ದಾರೆ.ಉಳಿದ ಮೂವರು ನೀರು ಪಾಲಾಗಿದ್ದಾರೆ.

ಅರಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾತ್ರೆ ತೊಳೆಯಲು ಹೋದ ಮೂವರು ವಿಧ್ಯಾರ್ಥಿಗಳು ನೀರುಪಾಲು Read More

ಕೋಟ್ಯಾಂತರ ರೂ ನಷ್ಟ: ಮೈಶುಗರ್ ಜಿಎಂ ಸೇವೆಯಿಂದ ಔಟ್

ಮಂಡ್ಯ: ಮಂಡ್ಯದ ಮೈ ಶುಗರ್ ಕಾರ್ಖಾನೆಗೆ ಕೋಟ್ಯಾಂತರ ರೂ ನಷ್ಟವಾದ ಹಿನ್ನಲೆಯಲ್ಲಿ
ಮೈಶುಗರ್ ಜಿಎಂ ರನ್ನ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ಜಿಎಂ ಅಪ್ಪಾ ಸಾಹೇಬ ಪಾಟೀಲ್ ಗೆ ಮನೆಗೆ ಕಳಿಸಲಾಗಿದೆ.

ಕಾರ್ಖಾನೆಯ ತಾಂತ್ರಿಕ ವಿಭಾಗದ ಪ್ರಭಾರ ಜನರಲ್ ಮ್ಯಾನೇಜರ್ ಆಗಿದ್ದ ಅವರನ್ನ ತೆಗೆಯಲು ಅ. 8ರ ಮೈಶುಗರ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ನಿರ್ಣಯದಂತೆ ಅ 8ರಂದೇ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ಅಪ್ಪಾ ಸಾಹೇಬ ಪಾಟೀಲ್ ವಿರುದ್ಧ ಮಂಡ್ಯ ನಗರಸಭೆ ಸದಸ್ಯ ಶಿವಕುಮಾರ್ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರು.

ಅಪ್ಪಾ ಸಾಹೇಬ ಪಾಟೀಲ್ ವಿರುದ್ಧ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರದ ಆರೋಪ ಹೊರಿಸಿ ದೂರಿ ನೀಡಿದ್ದರು.

ಶಿವಕುಮಾರ್ ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದರು.

ಅದರಂತೆ ಮುಂದಿನ ವಿಚಾರಣೆ ಕಾಯ್ದಿರಿಸಿ ಮೈ ಶುಗರ್ ಎಂಡಿ ಮಂಗಲ್ ದಾಸ್ ಅವರು ಅಪ್ಪಾ ಸಾಹೇಬ್ ಪಾಟೀಲರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದಾರೆ.

ಕೋಟ್ಯಾಂತರ ರೂ ನಷ್ಟ: ಮೈಶುಗರ್ ಜಿಎಂ ಸೇವೆಯಿಂದ ಔಟ್ Read More

ಜಮೀನಿನಲ್ಲಿ ಉಳುಮೆ ಮಾಡುವಾಗಲೇ ಹಾರ್ಟ್ ಅಟ್ಯಾಕ್:ರೈತ ಸಾವು

ಮಂಡ್ಯ: ಜಮೀನಲ್ಲಿ ಉಳುಮೆ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ರೈತ ಮೃತಪಟ್ಟ ಘಟನೆ
ಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಣ್ಣಗೌಡ(55) ಮೃತಪಟ್ಡ ರೈತ.
ಅವರು ತಮ್ಮದೇ ಜಮೀನಿನಲ್ಲಿ ಹಿಪ್ಪುನೇರಳೆ ಉಳುಮೆ ಮಾಡುತ್ತಿದ್ದರು.

ರೈತ ರೇಷ್ಮೆ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು.ಉಳುಮೆ ಮಾಡುವಾಗಲೇ ಪಾಪ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಈ ವೇಳೆ ಎತ್ತುಗಳು ಏನೂ ಮಾಡಲಾಗದೆ ಮೂಕ ವೇದನೆ‌ ಅನುಭವಿಸಿದವು.

ಎತ್ತುಗಳು ಸುಮ್ಮನೆ ನಿಂತಿದ್ದನ್ನು‌ ಗಮನಿಸಿದ ಅಕ್ಕ ಪಕ್ಕದ ಜಮೀನಿನವರು ಧಾವಿಸಿ ಉಪಚಾರ ಮಾಡಿದರೂ ಪ್ರಯೋಜನ ಆಗಿಲ್ಲ.ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಕುಟುಂಬಕ್ಕೆ ಆಸರೆಯಾಗಿದ್ದ ರೈತನ ಸಾವಿನಿಂದ ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಅನಾಥರಾಗಿದ್ದಾರೆ.ಅವರ ದುಃಖದ ಕಟ್ಟೆ ಒಡೆದಿತ್ತು.

ಜಮೀನಿನಲ್ಲಿ ಉಳುಮೆ ಮಾಡುವಾಗಲೇ ಹಾರ್ಟ್ ಅಟ್ಯಾಕ್:ರೈತ ಸಾವು Read More

ಭ್ರೂಣ ಹತ್ಯೆ ನಡೆಸುತ್ತಿದ್ದ ಪಾಪಿಗಳು‌ ಅಂದರ್

ಮೈಸೂರು: ಭ್ರೂಣ ಹತ್ಯೆ ನಡೆಸುತ್ತಿದ್ದ ಪಾಪಿಗಳಿಗೆ ಪೊಲೀಸರು ಮತ್ತು ಅಧಿಕಾರಿಗಳು ‌ಚಳಿ‌‌ ಬಿಡಿಸಿದ್ದಾರೆ.

ಮೈಸೂರು ತಾಲೂಕು ಹನುಗನಹಳ್ಳಿಯಲ್ಲಿ
ಈ‌ ಸಂಬಂಧ ಕೆಲವರನ್ನು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ. ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು.

ಆರೋಗ್ಯ ಇಲಾಖೆ ಡಿಡಿ ವಿವೇಕ್, ಮಂಡ್ಯ ಡಿಎಚ್ ಒ ಮೋಹನ್, ಮೈಸೂರು ಡಿಎಚ್ಒ ಪಿ.ಸಿ.ಕುಮಾರಸ್ವಾಮಿ ಅವರುಗಳ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ
ಕಾರ್ಯಾಚರಣೆ ನಡೆಯಿತು.

ದುಷ್ಕರ್ಮಿಗಳು ಐಷಾರಾಮಿ ಮನೆಯಲ್ಲಿ ಭ್ರೂಣ ಹತ್ಯೆಯಂತಹ ಹೀನ ಕೃತ್ಯ ಎಸಗುತ್ತಿದ್ದರು.

ಗ್ರಾಮೀಣ ಭಾಗದ ಮುಗ್ದ ಮಹಿಳೆಯರನ್ನ ಟಾರ್ಗೆಟ್ ಮಾಡಿ ಅವರ ತಲೆ ಕೆಡಿಸಿ, ಲಕ್ಷ ಲಕ್ಷ ಹಣ ಪಡೆದು ಸ್ಕ್ಯಾನಿಂಗ್ ಮಾಡಿಸುತ್ತಿದ್ದರು.

ಸ್ಕ್ಯಾನಿಂಗ್ ಮಾಡಿಸಿ,
ಹೊಟ್ಟೆಯಲ್ಲಿರುವ ಮಗು ಗಂಡೋ, ಹೆಣ್ಣೋ ಎಂದು ತಿಳಿದುಕೊಂಡು ಹೆಣ್ಣು ಮಗುವಾದರೆ ಗರ್ಭಪಾತ ಮಾಡಿಸುತ್ತಿದ್ದರು.

ಇದನ್ನೇ ದಂದೆ ಮಾಡಿಕೊಂಡು ಕೋಟಿ,ಕೋಟಿ ಹಣ ಸಂಪಾದನೆ ಮಾಡುತ್ತಿದ್ದರು ಪಾಪಿಗಳು.ಇನ್ನಾದರೂ ಈ ಹೀನ ಕೃತ್ಯಕ್ಕೆ ಕಡಿವಾಣ‌ ಬೀಳುವುದೆ ಕಾದು ನೋಡಬೇಕಿದೆ.

ಭ್ರೂಣ ಹತ್ಯೆ ನಡೆಸುತ್ತಿದ್ದ ಪಾಪಿಗಳು‌ ಅಂದರ್ Read More

ಧಾರಾಕಾರ ಮಳೆಗೆ ವಿಧ್ಯಾರ್ಥಿ ನಿಲಯಕ್ಕೆ ನುಗ್ಗಿದ ಚರಂಡಿ ನೀರು!

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ವಿಧ್ಯಾರ್ಥಿನಿಲಯಕ್ಕೆ ನುಗ್ಗಿದ್ದು ವಿದ್ಯಾರ್ಥಿಗಳು ಇಡೀ ರಾತ್ರಿ ಪಡಿಪಾಟಲು ಪಟ್ಟರು.

ಶ್ರೀರಂಗಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ನೀರಿನಿಂದ ಜಲಾವೃತವಾಗಿದೆ.

ಜಲಾವೃತವಾದುದರಿಂದ ಕೊಠಡಿಗಳಿಂದ ಹೊರ ಬರಲಾಗದೆ ವಿಧ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ.

ಚರಂಡಿ ನೀರು ಜಲಾವೃತವಾಗಿ ಸ್ಥಳದಲ್ಲಿ ಗಬ್ಬೆದ್ದು ನಾರುತ್ತಿದೆ.,ಕಳಪೆ ಕಾಮಗಾರಿ, ಅವೈಜ್ಞಾನಿಕ ಚರಂಡಿ ವ್ಯವಸ್ಥೆಗೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ವಸತಿ ನಿಲಯದ ಕೊಠಡಿಗಳಿಗೆ ನೀರು ನುಗ್ಗಿ ಮಲಗಲು ಸಾಧ್ಯವಾಗದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಪಟ್ಡಿದ್ದು,ತಕ್ಷಣ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಧಾರಾಕಾರ ಮಳೆಗೆ ವಿಧ್ಯಾರ್ಥಿ ನಿಲಯಕ್ಕೆ ನುಗ್ಗಿದ ಚರಂಡಿ ನೀರು! Read More