ವಿಷಯದಲ್ಲಿ ನಿಖರತೆ ಸಿಗುವ ತನಕ ಧ್ಯಾನ ಮಾಡಿ:ಹಂಸಲೇಖ

ಮೈಸೂರು: ವಿಷಯದಲ್ಲಿ ನಿಖರತೆ ಸಿಗುವ ತನಕ ಧ್ಯಾನ ಮಾಡಿ,ಸ್ಪಷ್ಟತೆ ಸಿಕ್ಕ ಮೇಲೆ ಪ್ರತಿಫಲ ದೊರಕುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ನಗರದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ 2025-26ನೇ ಸಾಲಿನ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಂಸಲೇಖ ಮಾತನಾಡಿದರು.

ನಾವು ಸತ್ಯದ ಹಾದಿಯ ಮೇಲೆ ನಡೆಯಬೇಕು. ಪ್ರತಿಫಲವು ತನಗೆ ತಾನೇ ದೊರೆಯುತ್ತದೆ. ಏಕೆಂದರೆ ನಮಗೆ ವಿಷಯದಲ್ಲಿ ನಿಖರತೆ ದೊರಕಬೇಕು. ನಾನು ಈ ಕಾರ್ಯಕ್ರಮಕ್ಕೆ ಬಹಳ ಗೌರವದಿಂದ ಬಂದಿದ್ದೇನೆ. ಸಂಶೋಧಕರದ್ದು ಒಂದು ಸಂಘವಿದೆ, ಅವರ ಹಿಂದೆ ಇಷ್ಟೆಲ್ಲಾ ಅಧಿಕಾರಿ ವರ್ಗವಿದೆ ಎಂಬುದೇ ಕುತೂಹಲ ಮತ್ತು ಸಂತೋಷವನ್ನುಂಟು ಮಾಡಿದೆ ಎಂದು ನುಡಿದರು.

ನಾನು 20 ವರ್ಷದ ಹಿಂದೆ ಸಂಶೋಧನೆ ಕೈಗೊಂಡಿದ್ದೆ. ಹೀಗೆ ಸಂಶೋಧಿಸಿದ್ದರ ಫಲವಾಗಿ ಇಂದು ನಿಮ್ಮ ಸಂಘಟನೆಯ ಕಾರ್ಯಕ್ರಮಕ್ಕೆ ಆಗಮಿಸುವಂತಾಗಿದೆ. ಐದನಿ ಎಂಬುದನ್ನು ಸಂಶೋಧಿಸಿದ್ದೆ. ಗಿಡಕ್ಕೆ ನೀರು ಎರೆದಂತೆ ಸತ್ಯದ ಬೀಜ ಕೈಗೆತ್ತಿಕೊಂಡು ಅದನ್ನು ಪೋಷಿಸಬೇಕು ಎಂದು ಹಂಸಲೇಖ ಅವರು ಹೇಳಿದರು.

ನಾನು ಐದನಿಯನ್ನು ಸಂಶೋಧಿಸಿದರೂ, ನನ್ನನ್ನು ನಾದಬ್ರಹ್ಮ ಎಂದು ಕರೆಯುತ್ತಾರೆ. ಸಂಗೀತ ಲೋಕದಲ್ಲಿ ಯಾರಾದರೂ ನಾದಬ್ರಹ್ಮ ಇದ್ದರೆ ಅದು ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಎಂಬುದಾಗಿ ತಿಳಿಸಿದರು.

ಸಂಘಕ್ಕೆ ವರಹಳ್ಳಿ ಆನಂದ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಆಯ್ಕೆ ಆಗಿರುವುದು ಕೇವಲ ಅವರ ಬಣಕ್ಕೆ ಅಧ್ಯಕ್ಷರಾಗಿ ಅಲ್ಲ. ಅವರು ಒಟ್ಟಾರೆ ಸಂಘದ ಅಧ್ಯಕ್ಷರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ 558 ಸಂಸ್ಥಾನಗಳನ್ನು ಒಂದುಗೂಡಿಸಲಾಯಿತು. ಹಲವು ಧರ್ಮಗಳು ಸೇರಿ ಸ್ವಾತಂತ್ರ್ಯ ಸಂಗ್ರಾಮ ನಡೆಸಿದವು. ಸಂಗ್ರಾಮದ ಬಿರುಸು ಈಗ ಇಲ್ಲ. ಆ ಪೀಳಿಗೆಯ ದಾರಿಯಲ್ಲಿ ಮುನ್ನಡೆಯಬೇಕು. ನಿಂದಿಸುವುದರಿಂದ ಕೊರಗುವುದರಿಂದ ಪ್ರಯೋಜನವಿಲ್ಲ ಎಂದು ಹಂಸಲೇಖ ಹೇಳಿದರು.

ಮಾಜಿ ಮೇಯರ್ ಪುರುಷೋತ್ತಮ್, ಶಿಕ್ಷಣ ತಜ್ಞ ಶ್ರೀಪಾದ ಭಟ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಪತ್ರಕರ್ತೆ ರಶ್ಮಿ ಕೋಟಿ, ಮುಖಂಡ ಅಹಿಂದ ಜವರಪ್ಪ, ಸವಿತಾ ಪ. ಮಲ್ಲೇಶ್, ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಕ್ಯಾತನಹಳ್ಳಿ ನಾಗರಾಜ್, ವಕೀಲ ಶಿವಪ್ರಸಾದ್, ನವೀನ್ ಮೌರ್ಯ, ಎಸ್. ಮರಿದೇವಯ್ಯ, ವರಹಳ್ಳಿ ಆನಂದ್ ಮೊದಲಾದವರು ಹಾಜರಿದ್ದರು.

ವಿಷಯದಲ್ಲಿ ನಿಖರತೆ ಸಿಗುವ ತನಕ ಧ್ಯಾನ ಮಾಡಿ:ಹಂಸಲೇಖ Read More

ಯುವ ಸಂಭ್ರಮ: ಭಾವೈಕ್ಯತೆಯ ಸಂದೇಶ

ಮೈಸೂರು: ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ‘ಯುವಸಂಭ್ರಮ’ದಲ್ಲಿ ದೇಶ ಪ್ರೇಮ, ಕನ್ನಡ ನಾಡು ನುಡಿ , ರಾಷ್ಟ್ರೀಯ‌ ಭಾವೈಕ್ಯತೆ ಮೇಳೈಸಿತು.

ಜಾನಪದ, ಮಹಿಳಾ ಸಬಲೀಕರಣ, ಜೈ ಜವಾನ್‌-ಜೈ ಕಿಸಾನ್, ಆಪರೇಷನ್ ಸಿಂಧೂರ್ ಕುರಿತ ವಿವಿಧ ನೃತ್ಯರೂಪಕಗಳು ಯುವ ಸಮೂಹವನ್ನು ಕುಣಿದು ಕುಪ್ಪಳಿಸುವಂತೆ ಮಾಡಿದವು.

ಮಂಡ್ಯದ ಪ್ರೇರಣಾ ವಿಶೇಷ ಚೇತನರ ಟ್ರಸ್ಟ್‌ನ ವಿಶೇಷ ಚೇತನ ಮಕ್ಕಳು ‘ಈ ಕನ್ನಡ ಮಣ್ಣನ್ನು ಮರಿಬೇಡ’ ಎಂಬ ಹಾಡಿಗೆ ನೃತ್ಯ ಮಾಡಿ ಕನ್ನಡ್ ಕಂಪು ಚೆಲ್ಲಿದರು.

ಗಂಗೋತ್ರಿಯ ಜ್ಞಾನ ದೀಪ ಪ್ರಥಮ ದರ್ಜೆ ಕಾಲೇಜಿನ ತಂಡ ಹಿರಣ್ಯ ಕಶ್ಯಪನ ಜೀವನ ಚರಿತ್ರೆಯನ್ನು ಭಕ್ತ ಪ್ರಹ್ಲಾದ ಸಿನಿಮಾದ ತುಣುಕು ಮತ್ತು ಸಂಭಾಷಣೆಗಳ ನೃತ್ಯ ರೂಪಕಗೊಳಿಸಿ ನಾರಾಯಣ ದೇವರ ಭಕ್ತಿ ತುಂಬಿದರು.

ಮಂಡ್ಯ ಜಿಲ್ಲೆ, ಮಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನಾಯಕ ನೀನು ಭೀಮ ರಾವ್’ ಹಾಡಿನ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆ ಮತ್ತು ಸಂವಿಧಾನ ಮಹತ್ವವನ್ನು ಸಾರಿದರು.

ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾನಪದ ನೃತ್ಯ ಸೊಬಗನ್ನು ಉಣಬಡಿಸಿದರು. ಮೈಸೂರಿನ ಎಂ ಸಿ ರಸ್ತೆಯ ಸೆಂಟ್ ಜಾನ್ಸ್ ಕಾಂಪೋಸಿಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಯೋಧರ ಕೆಚ್ಚೆದೆಯ ಹೋರಾಟವನ್ನು ನೃತ್ಯದಲ್ಲಿ ತಂದು ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ದಟ್ಟಗಳ್ಳಿಯ ಶ್ರೀ ಲಕ್ಷ್ಮೀ‌‌ ಹಯಗ್ರೀವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪೌರಾಣಿಕ ಪ್ರಸಂಗವನ್ನು ನೃತ್ಯದ ಮೂಲಕ ಊಣಬಡಿಸಿದರು.

ನಂಜನಗೂಡಿನ ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ದೇವ ಶ್ರೀ ಗಣೇಶ’ ಹಾಡಿನಲ್ಲಿ ಗಣಪತಿ ಹಬ್ಬದ ಸಂಭ್ರಮ ತೋರಿದರು.

ಹೊಳೆ ನರಸೀಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ತಂಡ ಕನ್ನಡ ನಟರನ್ನ ಪರಿಚಯಿಸಿ ಸಿನಿಮಾಧಾರಿತ ನೃತ್ಯ ಪ್ರದರ್ಶಿಸಿದರು.

ಸ್ವಚ್ಛತೆಯಲ್ಲಿ ಮೈಸೂರು ನಗರ ಪ್ರಶಸ್ತಿಗೆ ಭಾಜನರಾಗಲು ಕಾರಣೀಭೂತರಾದ ಸ್ವಚ್ಚತಾ ಕಾರ್ಮಿಕರನ್ನು ಸನ್ಮಾನಿಸಿ ಸ್ವಚ್ಛತಾ ಕಾರ್ಮಿಕರ ಶ್ರಮವನ್ನು ಯುವ ಸಮೂಹಕ್ಕೆ ತಿಳಿಸಿದ್ದು ವಿಶೇಷವಾಗಿತ್ತು.

ಯುವ ಸಂಭ್ರಮ: ಭಾವೈಕ್ಯತೆಯ ಸಂದೇಶ Read More

ಮಳೆಯ ನಡುವೆಯೇ ದಸರಾ ಯುವ ಸಂಭ್ರಮ ಕಣ್ ತುಂಬಿಕೊಂಡ ಜನತೆ

ಮೈಸೂರು: ದಸರಾ ಯುವ ಸಂಭ್ರಮದಲ್ಲಿ ರಾಜೇಂದ್ರ ನಗರ ಶ್ರೀ ಛಾಯದೇವಿ ಕಾಲೇಜ್ ಆಫ್ ಎಜುಕೇಷನ್ ವಿದ್ಯಾರ್ಥಿಗಳು ಗ್ಯಾರಂಟಿ ಯೋಜನೆ ಅನುಷ್ಠಾನ ಗೀತ ಗುಚ್ಚ ನೃತ್ಯ ನೀಡಿ ಎಲ್ಲರ ಮನ ರಂಜಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಅವರ ಭಾವಚಿತ್ರ ಹಿಡಿದು ಸರ್ಕಾರ ನೀಡಿರುವ ಎಲ್ಲಾ ಉಚಿತ ಭಾಗ್ಯಗಳನ್ನು ಭಿತ್ತರಿಸುವ ಮೂಲಕ ಅರಿವು ಮೂಡಿಸಿದ ನೃತ್ಯ ಯುವ ಸಮೂಹವನ್ನು ಸೆಳೆಯಿತು.

ಮೈಸೂರಿನ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ‌ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ ಬಿ‌.ಆರ್ ಅಂಬೇಡ್ಕರ್ ಅವರ ರಾಷ್ಟ್ರ ಸಂವಿಧಾನಕ್ಕೆ ನೀನೆ ಶಿಲ್ಪಿಯು ನೀನೇ ಕಲಿಸಿಕೊಟ್ಟೆ ಸಮಾನತೆಯನ್ನು ಹಾಡಿಗೆ ನೃತ್ಯ ಮಾಡಿ ರಂಜಿಸಿದರು.

ದಸರಾ ಯುವ ಸಂಭ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಧಾರಿತ
ಡಾ ವಿಷ್ಣುವರ್ಧನ್ ನಟಿಸಿರುವ ಸಿಂಹಾದ್ರಿಯ ಸಿಂಹ ಹಾಡನ್ನು ಕೇಳಿಸುವುದರ ಮುಖಾಂತರ ಬಿ. ಇ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ವಿ ರವಿಚಂದ್ರನ್ ನಟಿಸಿರುವ ಆಟ ಹುಡುಗಾಟವೋ ಪರಮಾತ್ಮನಾ ಆಟವೋ ಹಾಡಿಗೆ ನೃತ್ಯ ಮಾಡುತ್ತಾ ಜಿನುಗುವ ಮಳೆಯಲ್ಲು ಯುವಜನತೆ ಕುಣಿದು ಕುಪ್ಪಳಿಸುವಂತೆ ಮಾಡಿದರು.

ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನ ತಂಡವು ಕನ್ನಡ ಸಿನಿಮಾಧಾರಿತ ನೃತ್ಯವನ್ನು ಪ್ರಸ್ತುತಪಡಿಸಿ ಮನರಂಜಿಸಿದರು.

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆದಿವಾಸಿ ಸಮುದಾಯದ ಜೀವನ ಶೈಲಿ,ಅವರ ಸಂಸ್ಕತಿ ಯನ್ನು ಬಲೂನ್ ಗಳ ನೃತ್ಯದ ಮೂಲಕ ರಂಜಿಸಿದರು.

ಜೋರು ಮಳೆ ನೆಉವೆಯೇ ಯುವ ಸಮೂಹ ಕೊಡೆ ಹಿಡಿದುಕೊಂಡೇ ನೃತ್ಯವನ್ನು ವೀಕ್ಷಿಸಿದ್ದು‌ ವಿಶೇಷ.

ಮಳೆಯ ನಡುವೆಯೇ ದಸರಾ ಯುವ ಸಂಭ್ರಮ ಕಣ್ ತುಂಬಿಕೊಂಡ ಜನತೆ Read More

ಯುವಸಂಭ್ರಮದಲ್ಲಿ ಕಳೆಗಟ್ಟಿದ ನೃತ್ಯಗಳ ಸೊಬಗು

ಮೈಸೂರು,ಅಕ್ಟೋಬರ್‌.1: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮದ 7ನೇ‌ ದಿನದ ನೃತ್ಯ ಸೊಬಗು ಕಳೆಗಟ್ಟಿತ್ತು.

ಮೈಸೂರಿನ ಜೆ ಎಸ್ ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಲಾತಂಡದವರು ಮಾಡಿದ ಮಹಿಷ ಮರ್ದಿನಿ ನೃತ್ಯ ಪ್ರದರ್ಶನ ಜನರ ಗಮನ ಸೆಳೆಯಿತು, ಹೆಚ್ ಡಿ ಕೋಟೆ ತಾಲ್ಲೂಕಿನ ವಿದ್ಯಾ ಸಿಂಚನ ಪದವಿ ಪೂರ್ವ ಕಾಲೇಜು ತಂಡದವರು ಕರ್ನಾಟಕ ಜಾನಪದ ವೈವಿಧ್ಯತೆಯ ಕುರಿತು ನೃತ್ಯವನ್ನು ಪ್ರದರ್ಶಿಸಿದರು.

ಕೆ ಆರ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದವರ ನೃತ್ಯ ಪ್ರದರ್ಶನ ಅರ್ಜುನ ಆನೆಯನ್ನು ನೆನೆಯುವಂತೆ ಮಾಡಿತು.

ಮೈಸೂರಿನ ಡಿ ಪೌಲ್ ಕಾಲೇಜು ತಂಡದ ನವದುರ್ಗಿ ನವವೈಭವ ನೃತ್ಯ ಪ್ರದರ್ಶನ ಅದ್ಭುತ ವಾಗಿತ್ತು, ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್ ತಂಡದ ಶಿವ ತಾಂಡವ ನೃತ್ಯ ಜನರ ಚಪಾಳೆಯನ್ನು ಗಿಟಿಸಿಕೊಂಡಿತು.

ಬೆಂಗಳೂರಿನ ವಿವಿಎನ್ ಪದವಿ ಪೂರ್ವ ಕಾಲೇಜಿನ ತಂಡದವರು ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವನಕೆ ಒಬ್ಬವ ಕುರಿತಾದ ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ 57 ನೃತ್ಯ ‌ಪ್ರದರ್ಶನಗಳನು ಮಾಡಲಾಯಿತ್ತು. ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ, ಜಾನಪದ ಕಲೆ ಮತ್ತು ನೃತ್ಯ, ಭಾರತೀಯ ಯೋಧರ ಪಾತ್ರ, ದೇಶ ಭಕ್ತಿ ಹೋರಾಟಗಾರರ ಕೊಡುಗೆ,ಕರ್ನಾಟಕ ಪೊಲೀಸರು ಯೋಧ ಮತ್ತು ರೈತ, ಏಕತೆ ಮತ್ತು ಪರಂಪರೆ, ಮೊಬೈಲ್ ನಿಂದ ಪುಸ್ತಕದೆಡೆಗೆ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಮಾದಕ ವ್ಯಸನ ಮುಕ್ತ ಸಮಾಜ, ಸೇರಿದಂತೆ ವಿವಿಧ ಥೀಮ್ ಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.

ಯುವಸಂಭ್ರಮದಲ್ಲಿ ಕಳೆಗಟ್ಟಿದ ನೃತ್ಯಗಳ ಸೊಬಗು Read More

5 ನೆ ದಿನದ ಯುವ ಸಂಭ್ರಮದಲ್ಲಿ ಕುಣಿದ ಜನತೆ

ಮೈಸೂರು: ದಸರಾ ಯುವ ಸಂಭ್ರಮದ 5 ನೇ ದಿನದ‌ ವೈಭವದಲ್ಲಿ ವಯಸ್ಸಿನ ಮಿತಿಯಿಲ್ಲದೆ ಸಾವಿರಾರು ಮಂದಿ ಕಣ್ತುಂಬಿಕೊಂಡರು.

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನಿಶ್ಯಬ್ದದಿಂದ ಕೂಡಿದ್ದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರ, ವೇದಿಕೆಯ ಮೇಲೆ ವಿದ್ಯಾರ್ಥಿಗಳು ಪ್ರದರ್ಶನ ಆರಂಭಿಸುತ್ತಿದ್ದಂತೆಯೇ ಜನ ಕೂಡಾ ಕುಣಿದು‌ ಕುಪ್ಪಳಿಸಿದರು.

ಪ್ರತಿ ನೃತ್ಯ ಪ್ರದರ್ಶನಕ್ಕೂ ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ತುಂಬುತ್ತಿದ್ದರು.
ಜೊತೆಗೆ ತಮ್ಮ ನೆಚ್ಚಿನ ಹಾಡು ಬಂದಾಗ ವಿದ್ಯಾರ್ಥಿಗಳೊಂದಿಗೆ ಕುಣಿದರು.

ಬೆಂಗಳೂರಿನ ಅರುಣೋದಯ ಕಾಲೇಜಿನ ರೈತ ಪ್ರಧಾನ ಪ್ರದರ್ಶನಕ್ಕೆ ಜನರು ಶಿಳ್ಳೆ ಚಪ್ಪಾಳೆ ಹೊಡೆದರೆ, ಮೈಸೂರಿನ ಎಂ ಐ ಟಿ ಕಾಲೇಜಿನ ಮಹಾದೇವನ ಭಕ್ತಿ ಪ್ರಧಾನ ಪ್ರದರ್ಶನಕ್ಕೆ ಮಾರುಹೋದರು.

ಲಕ್ಷ್ಮೀ ವೈಷ್ಣವ ಕಾಲೇಜಿನ ವಿದ್ಯಾರ್ಥಿಗಳು ಪ್ರೇಕ್ಷಕರ ಮುಂದೆ ರಾಮಾಯಣವನ್ನು ಮರು ಸೃಷ್ಟಿ ಮಾಡಿದರೆ, ಹೊಳೆನರಸೀಪುರದ ಕಾಲೇಜು ವಿದ್ಯಾರ್ಥಿಗಳು ಕರಾಟೆ ಕಿಂಗ್ ಶಂಕರ್ ನಾಗ್ ಅವರ ನೆನಪನ್ನು ತರುವ ಮೂಲಕ ಯುವಜನರನ್ನು ರೋಮಾಂಚನಗೊಳಿಸಿದರು.

ಮಹಿಳಾ ಸ್ವತಂತ್ರ ವಿಷಯದ ಮೇಲೆ ಮಾಡಿದ ನೃತ್ಯವನ್ನು ಕಣ್ತುಂಬಿಕೊಂಡ ಜನತೆ, ಎಚ್. ಡಿ ದೇವಗೌಡ ಕಾಲೇಜು ವಿದ್ಯಾರ್ಥಿಗಳ ಭಕ್ತಿ ಪ್ರಧಾನ ಪ್ರದರ್ಶನಕ್ಕೆ ಬೆರಗಾದರು.

ಹುಲಿಕುಣಿತ ಹಾಗೂ ಭರತನಾಟ್ಯಕ್ಕೆ ಚಪ್ಪಾಳೆಯ ಸುರಿಮಳೆಯೇ ಬಂದಿತು. ನಿರ್ಮಲಾ ಕಾಲೇಜು ವಿದ್ಯಾರ್ಥಿಗಳ ಕನ್ನಡ ಪ್ರೇಮದ ಪ್ರದರ್ಶನ ಎಲ್ಲಾ ಕನ್ನಡಿಗರ ಮನಮುಟ್ಟಿತು. ಮೈಸೂರಿನ ಮಹಾರಾಜ ಕಾಲೇಜಿನ ಜೈ ಭೀಮ್ ಪ್ರದರ್ಶನವು ಜನಮೆಚ್ಚುಗೆ ಪಡೆಯಿತು.

5 ನೆ ದಿನದ ಯುವ ಸಂಭ್ರಮದಲ್ಲಿ ಕುಣಿದ ಜನತೆ Read More