ಹುಲಿ ದಾಳಿಗೆ ಮೈಸೂರಿನಲ್ಲಿ ಮೂರನೇ ಬಲಿ: ಅಧಿಕಾರಿಗಳ ವಿರುದ್ಧ ತೇಜಸ್ವಿ ಆಕ್ರೋಶ

ಮೈಸೂರು, ನವೆಂಬರ್. ೧: ಮೈಸೂರು ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ಮುಂದುವರೆದಿದ್ದುಒಂದೇ ತಿಂಗಳಲ್ಲಿ ಹುಲಿ ದಾಳಿಗೆ ಮೂರನೆ ಬಲಿಯಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೂಡಲೇ ರಾಜ್ಯ ಸರ್ಕಾರ ಮೃತ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸರಗೂರು ತಾಲೂಕಿನ ಕೂಡಗಿ ಗ್ರಾಮದ
ಹೆಡಿಯಾಲ ಅರಣ್ಯ ಇಲಾಖೆಯ ಮೊಳೆಯೂರು ವಿಭಾಗದಲ್ಲಿ ದೊಡ್ಡನಿಂಗಯ್ಯ(53) ಎಂಬವರು ಹುಲಿ ದಾಳಿಗೆ ಬಲಿಯಾಗಿದ್ದಾರೆ.

ದೊಡ್ಡನಿಂಗಯ್ಯ ಪ್ರತಿದಿನದಂತೆ ಜಮೀನಿನ ಬಳಿ ಆಡು-ಕುರಿ ಮೇಯಿಸುತ್ತಿದ್ದ ವೇಳೆ
ಏಕಾಏಕಿ ದಾಳಿ ಮಾಡಿದ ಹುಲಿ ಕಾಡಿನೊಳಗೆ ಎಳೆದೊಯ್ದಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದಾಗಿಯೇ ಒಂದೇ ತಿಂಗಳಲ್ಲಿ ಈ ರೀತಿಯ ಘಟನೆ ಮರುಕಳಿಸಲು ಕಾರಣ ವಾಗಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ಲಕ್ಷ್ಯ ವಯಿಸಿದ ಎಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸೇವೆ ಇಂದ ವಜಾ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ

ಕೂಡಲೇ ರಾಜ್ಯ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮೃತ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡುವಂತೆ. ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿ

ಹುಲಿ ದಾಳಿಗೆ ಮೈಸೂರಿನಲ್ಲಿ ಮೂರನೇ ಬಲಿ: ಅಧಿಕಾರಿಗಳ ವಿರುದ್ಧ ತೇಜಸ್ವಿ ಆಕ್ರೋಶ Read More

ಗಣಪತಿ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ನಿಂದ ವ್ಯಕ್ತಿ ಕುಸಿದು ಬಿದ್ದು ವ್ಯಕ್ತಿ ಸಾವು

ಮೈಸೂರು: ಗಣಪತಿ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬರು ಟ್ರ್ಯಾಕ್ಟರ್‌ನಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯಲ್ಲಿ ನಡೆದಿದೆ.

ಗಾವಡಗೆರೆ ಹೋಬಳಿ ಹರವೆ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಆಟೋ ರಾಜು(34) ಎಂಬವರು ಮೃತಪಟ್ಟಿದ್ದು,ಅವರಿಗೆ ಪತ್ನಿ, ಎರಡು ಹೆಣ್ಣು, ಗಂಡು ಮಗು ಸೇರಿದಂತೆ ಮೂವರು ಮಕ್ಕಳಿದ್ದಾರೆ.

ಎರಡು ಕಡೆ ಪ್ರತಿಷ್ಠಾಪಿಸಿದ್ದ ಗಣಪತಿಗಳನ್ನು ಗ್ರಾಮಸ್ಥರು ವಿಸರ್ಜನೆಗಾಗಿ ಟ್ರ್ಯಾಕ್ಟರ್ ಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದ ವೇಳೆ ಮನೆಗಳ ಬಳಿ ಬಂದ ಗಣಪನಿಗೆ ಪೂಜೆ ಸಲ್ಲಿಸುತ್ತಿದ್ದರು.

ಆಗ ಟ್ರ್ಯಾಕ್ಟರ್ ನಲ್ಲಿದ್ದ ಆಟೋರಾಜು ದಿಢೀರ್ ಕುಸಿದು ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಹುಣಸೂರು ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದರು.

ಇದರಿಂದಾಗಿ ಸಂಭ್ರಮ ಮನೆಮಾಡಿದ್ದ ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ.ಕೂಡಲೇ ಮೆರವಣಿಗೆ ರದ್ದು ಮಾಡಿ ನೇರವಾಗಿ ಚಿಕ್ಕ ಕೆರೆಯಲ್ಲಿ ಗಣಪತಿಗಳನ್ನು ವಿಸರ್ಜಿಸಿದ್ದಾರೆ.

ಗಣಪತಿ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ನಿಂದ ವ್ಯಕ್ತಿ ಕುಸಿದು ಬಿದ್ದು ವ್ಯಕ್ತಿ ಸಾವು Read More