ಕುವೆಂಪು,ಸಿ.ಅಶ್ವಥ್ ಕನ್ನಡ ಸಾಹಿತ್ಯ ಸಂಗೀತ ಲೋಕದ ಆಧಾರ ಸ್ಥಂಭಗಳು:ನಾಗಚಂದ್ರ

ಮೈಸೂರು: ರಾಷ್ಟ್ರಕವಿ ಕುವೆಂಪು ಹಾಗೂ ಸ್ವರಮಾಂತ್ರಿಕ ಸಿ.ಅಶ್ವಥ್ ಅವರು ಕನ್ನಡ ಸಾಹಿತ್ಯ ಸಂಗೀತ ಲೋಕದ ಆಧಾರಸ್ಥಂಭಗಳು ಎಂದು ಗೃಹಶೋಭೆ ನಿರ್ದೇಶಕರಾದ ನಾಗಚಂದ್ರ ತಿಳಿಸಿದರು.

ಮೈಸೂರಿನ‌ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೃಹಶೋಭೆ ವಸ್ತುಪ್ರದರ್ಶನ‌ದಲ್ಲಿ ರಾಷ್ಟ್ರಕವಿ ಕುವೆಂಪು ಅವರ 120ನರೆ ಜಯಂತಿ ಹಾಗೂ ಸ್ವರಮಾಂತ್ರಿಕ ಸಿ. ಅಶ್ವಥ್ ಅವರ ನೆನಪಿನಲ್ಲಿ ಅರುಣರಾಗ ಕ್ರಿಯೇಷನ್ಸ್ ವತಿಯಿಂದ ನಡೆದ ಕನ್ನಡವೇ ಸತ್ಯ ಸುಗಮ ಸಂಗೀತ ಕಾರ್ಯಕ್ರಮದ ವೇಳೆ‌ ನಾಗಚಂದ್ರ ಮಾತನಾಡಿದರು.

ನಾಗಚಂದ್ರ ಅವರು ಕುವೆಂಪು ಮತ್ತು ಸಿ. ಅಶ್ವಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಸಂಗೀತದ ರಾಗ ತಾಳ ನಾದ ಸ್ವರಗಳು ಮನುಷ್ಯನ ಅಂತರಂಗದ ಭಾವನೆಗಳಿಗೆ ಜೀವತುಂಬುತ್ತದೆ, ಸಂಗೀತಕ್ಕೆ ರೋಗಗುಣಪಡಿಸುವ ಶಕ್ತಿಯಿದೆ ವೈಜ್ಞಾನಿಕವಾಗಿ ದೃಡವಾಗಿದೆ ಎಂದು ಹೇಳಿದರು.

1924ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ರಚನೆಯ ಜಯಭಾರತ ಜನನಿಯ ತನುಜಾತೆ ನಾಡಗೀತೆ ಶತಮಾನೋತ್ಸವ ಕಂಡಿದೆ, ಸಿ.ಅಶ್ವಥ್ ಅವರು ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ರಚನೆಯ ಭಾವಗೀತೆಗಳಿಗೆ ಸಂಗೀತ ನಿರ್ದೇಶಿಸಿ ಹಾಡುವ ಮೂಲಕ ಕೋಟ್ಯಾಂತರ ಕಲಾಭಿಮಾನಿಗಳ ಮನದಲ್ಲಿ ಶಾಶ್ವತವಾಗಿದ್ದಾರೆ ಎಂದು ಬಣ್ಣಿಸಿದರು.

ರಾಷ್ಟ್ರಕವಿ ಕುವೆಂಪು ಮತ್ತು ಸ್ವರಮಾಂತ್ರಿಕ ಸಿ. ಅಶ್ವಥ್ ಮಹನೀಯರು ಕನ್ನಡ ಸಾಹಿತ್ಯ ಸಂಗೀತ ಲೋಕದ ಆಧಾರಸ್ಥಂಭವಾಗಿದ್ದಾರೆ ಎಂದು ಸ್ಮರಿಸಿದರು.

ಈ ಸಂಧರ್ಭದಲ್ಲಿ ಗೃಹಶೋಭೆ ವ್ಯವಸ್ಥಾಪಕ ಕೃಷ್ಣ, ನವೀನ್, ವಿಶ್ವಾಸ್, ಮಧು, ಮಹೇಶ್, ನಿರೂಪಕ ಅಜಯ್ ಶಾಸ್ತ್ರಿ, ರಂಗಸ್ವಾಮಿ ಪಾಪು, ಒಂಟಿಕೊಪ್ಪಲು ಗುರುರಾಜ್ ಅರುಣರಾಗ ಕ್ರಿಯೇಷನ್ಸ್ ಗಾಯಕರಾದ ಡಾ. ರೇಖಾ ಅರುಣ್, ಗುರುರಾಜ್, ನಾದಮಯ ಪ್ರೇಮ್ , ರೂಪ್ ಕುಮಾರ್, ನಾರಯಣಸ್ವಾಮಿ, ಅಪೂರ್ವ, ರಂಗಸ್ವಾಮಿ, ಗೀತಾ, ಶಶಿಕಾಂತ್ ಮತ್ತಿತರರು ಹಾಜರಿದ್ದರು.

ಕುವೆಂಪು,ಸಿ.ಅಶ್ವಥ್ ಕನ್ನಡ ಸಾಹಿತ್ಯ ಸಂಗೀತ ಲೋಕದ ಆಧಾರ ಸ್ಥಂಭಗಳು:ನಾಗಚಂದ್ರ Read More

ನಾಡಹಬ್ಬ ದಸರಾದಲ್ಲಿ ಹೆಚ್ಚು ಜನ ಭಾಗವಹಿಸಿ: ಸಿದ್ದು ಕರೆ

ಮೈಸೂರು: ಮೈಸೂರು ದಸರಾ ಜನರ ಹಬ್ಬವಾಗಿದ್ದು ಹೆಚ್ಚು ಜನರು ಭಾಗವಹಿಸುವ ಮೂಲಕ ದಸರಾ ಯಾಶಸ್ವಿಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು

ಮಹಾರಾಜ ಕಾಲೇಜು ಮೈದಾನದಲ್ಲಿ‌ ದಸರಾ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಸಿಎಂ, ಇಂದಿನಿಂದ 9 ದಿನಗಳ ಕಾಲ ನವರಾತ್ರಿ ಹಾಗೂ 10 ನೆಯ ದಿನ ವಿಜಯದಶಮಿ ನಡೆಯುತ್ತದೆ. ನಾಡಹಬ್ಬ ದಸರಾ ಉದ್ದೇಶ ಶಿಷ್ಟರ ರಕ್ಷಣೆ ಹಾಗೂ ದುಷ್ಟರ ಶಿಕ್ಷೆ ನೀಡುವುದು ಎಂದು ತಿಳಿಸಿದರು.

ಮೈಸೂರು ದಸರಾ ಜನರ ಹಬ್ಬ, ದೇಶ ವಿದೇಶಗಳಿಂದ ಲಕ್ಷಾಂತರ ಜನ ದಸರಾ ವೀಕ್ಷಣೆಗೆ ಆಗಮಿಸುತ್ತಾರೆ. ಆಹಾರ ಮೇಳದಲ್ಲಿ ನೂರಾರು ಸ್ಟಾಲ್ ಗಳು ಇದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿ ರಾಜ್ಯದಲ್ಲಿ 7 ಕೋಟಿ ಜನರು ಇದ್ದು ಇವರಲ್ಲಿ 4.5 ಕೋಟಿ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಪಡಿತರ ನೀಡಲಾಗುತ್ತಿದೆ. ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ ಜಿ ಅಕ್ಕಿ ನೀಡಲು ಅನ್ನ ಭಾಗ್ಯ ಯೋಜನೆಯಡಿ ಇದ್ದು ಇದರಲ್ಲಿ 5 ಕೆ ಜಿ ಅಕ್ಕಿ ಹಾಗೂ ಉಳಿದ 5 ಕೆ ಜಿ ಅಕ್ಕಿಗೆ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆಹಾರ ಮೇಳದಲ್ಲಿ 108 ಮಳಿಗೆಗಳನ್ನು ತೆರೆಯಲಾಗಿದೆ. ಮಳಿಗೆ ಗಳು ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತವೆ. 130 ಬಗೆಯ ವಿವಿಧ ತಿಂಡಿಗಳನ್ನು ಇಲ್ಲಿ ಸವಿಯಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ,ವಿಧಾನ ಪರಿಷತ್ ಸದಸ್ಯ ಡಿ ತಿಮ್ಮಯ್ಯ,
ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ನಾಡಹಬ್ಬ ದಸರಾದಲ್ಲಿ ಹೆಚ್ಚು ಜನ ಭಾಗವಹಿಸಿ: ಸಿದ್ದು ಕರೆ Read More