ನಟಿ ಹೇಮಾಮಾಲಿನಿ ಹೇಳಿಕೆಗೆ ವಿರೋಧ

ನವದೆಹಲಿ: ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ದೊಡ್ಡ ಘಟನೆ ಏನಲ್ಲ ಎಂದು ಹೇಳಿರುವ ಸಂಸದೆ ಹಾಗೂ ಬಾಲಿವುಡ್ ಹಿರಿಯ ನಟಿ ಹೇಮಾಮಾಲಿನಿ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ.

ಕುಂಭ ಮೇಳ ಕಾಲ್ತುಳಿತ ದೊಡ್ಡದೇನಲ್ಲಾ,ಆದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಮಂಗಳವಾರ ಮಾಧ್ಯಮಗಳಿಗೆ ಅವರು ಹೇಳಿದ್ದರು.

ಜನವರಿ 29 ರ ಮೌನಿ ಅಮವಾಸ್ಯೆಯಂದು ಸಂಭವಿಸಿದ ಕಾಲ್ತುಳಿತದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪ್ರಯಾಗ್‌ರಾಜ್‌ನ ಸಂಗಮ್ ಪ್ರದೇಶದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನ ಪ್ರಾಣ ಕಳೆದುಕೊಂಡಿದ್ದು, 60 ಮಂದಿ ಗಾಯಗೊಂಡಿದ್ದಾರೆ.

ನಾವು ಕುಂಭ ಮೇಳಕ್ಕೆ ಹೋಗಿದ್ದೆವು, ಚೆನ್ನಾಗಿಯೇ ಸ್ನಾನ ಮಾಡಿದೆವು, ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗಿತ್ತು,ಆದರೂ ಕಾಲ್ತುಳಿತದ ಘಟನೆ ನಡೆದಿದೆ. ಅದು ದೊಡ್ಡ ಘಟನೆಯೇನಲ್ಲ, ಆದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ, ಕುಂಭ ಮೇಳವನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ ಎಂದು ಸಂಸದೆ ಹೇಳಿದ್ದರು.

ಇದಕ್ಕೆ ಬಹಳಷ್ಟು ಮಂದಿ ಟೀಕಿಸಿದ್ದಾರೆ. ನಿಮ್ಮ ಕುಟುಂಬದವರು ಏನಾದರೂ ಅಂತಹ ಸಂಕಷ್ಟದಲ್ಲಿ ಸಿಲುಕಿದ್ದರೆ ನಿಮಗೆ ದೊಡ್ಡ ಘಟನೆಯೊ,ಸಣ್ಣ ಘಟನೆಯೊ ತಿಳಿಯುತಿತ್ತು.ನಿಮ್ಮಂತವರಿಗೆ ಎಲ್ಲಾ ಸಣ್ಣ ಘಟನೆಯೇ ಎಂದು ಕಿಡಿಕಾರಿದ್ದಾರೆ.

ನಟಿ ಹೇಮಾಮಾಲಿನಿ ಹೇಳಿಕೆಗೆ ವಿರೋಧ Read More

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ:15 ಮಂದಿ ಸಾವು

ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡಲು ತೆರಳುವಾಗ ಕಾಲ್ತುಳಿತ ಸಂಭವಿಸಿ ಹದಿನೈದು ಮಂದಿ ಮೃತಪಟ್ಟಿದ್ದಾರೆ.

ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತವಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನ ಸೆಕ್ಟರ್ 2 ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದು ತೀವ್ರ ಗೊಂದಲ ಉಂಟಾಗಿದೆ.

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ:15 ಮಂದಿ ಸಾವು Read More