ಕರ್ನಾಟಕ ಸಾಂಸ್ಕೃತಿಕ ಪರಂಪರೆಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಜಾನಪದ ಬಾಲಾಜಿ

ಭೋಪಾಲ್: ಭೂಪಲ್ ನಗರಕ್ಕೆ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿಯವರು ಆಗಮಿಸಿರುವುದು ಸಂತಸ ತಂದಿದೆ ಎಂದು ಮಧ್ಯ ಪ್ರದೇಶ್ ಜನ ಅಭಿಮಾನ್ಯ ಪರಿಷತ್ ಸಂಚಾಲಕ ರಾಕೇಶ್ ಶರ್ಮಾ ತಿಳಿಸಿದರು.

ಭೂಪಲ್ ನಗರದಲ್ಲಿ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು,ನೀವು ಬಂದಿರುವುದು ಎರಡು ರಾಜ್ಯಗಳ ಯುವ ಹಾಗು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ನಂಬಿಕೊಳ್ಳಲು ಮುಖ್ಯ ವೇದಿಕೆ ಆಗಿದೆ ಎಂದು ತಿಳಿಸಿದರು.

ಕರ್ನಾಟಕ ಸಾಂಸ್ಕೃತಿಕ ಪರಂಪರೆ ಬಹಳ ವಿಶೇಷವಾಗಿದೆ ಅದನ್ನು ಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಬಾಲಾಜಿ ಅವರ ಕಾರ್ಯ ಭೋಪಾಲ್ ರಾಜ್ಯದಲ್ಲೂ ಅನುಕರಣೀಯ ಎಂದು ಹೇಳಿದರು.

ಸಿಹೋರ್ ಜಿಲ್ಲಾ ಮಾತ್ತ್ರುಭೂಮಿ ಪ್ರತಿನಿಧಿ ವಿನೋದ್ ಸೋನಿ ಅವರು ಮಾತನಾಡಿ ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಮಧ್ಯ ಭಾರತದ ಸರೋವರಗಳ ನಗರ
ಭೋಪಾಲ್ ಗೆ ಆಗಮಿಸಿ ನಿನ್ನೆ ಸ್ಥಳೀಯ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಯುವ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ಸಂತಸ ವ್ಯಕ್ತಪಡಿಸಿದರು.

ವಿಶಾಲ್ ಪಟೇದರ್ ಮತ್ತಿತರರು ಅಭಿನಂದಿಸಿ ಗೌರವಿಸಿದರು.

ಕರ್ನಾಟಕ ಸಾಂಸ್ಕೃತಿಕ ಪರಂಪರೆಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಜಾನಪದ ಬಾಲಾಜಿ Read More

ಅಟಲ್ ಜಿ ಕನಸು ನನಸು:ನದಿ ಜೋಡಣೆಗೆಶಿಲಾನ್ಯಾಸ ಮಾಡಿದ ಪ್ರಧಾನಿ

ಭೋಪಾಲ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದಂದೇ ಅವರ ಬಹದೊಡ್ಡ ಕನಸನ್ನು ನನಸಾಗಿಸಲು ಮೋದಿ ಸರ್ಕಾರ ನಿರ್ಧರಿಸಿದೆ.

ಅಟಲ್ ಜಿ ಅವರ ಕನಸು ನದಿಗಳ ಜೋಡಣೆಯಾಗಿತ್ತು.ಇದೀಗ ದೇಶದಲ್ಲಿ ಮೊದಲ ಬಾರಿಗೆ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಆ ಮಹಾನ್ ನಾಯಕನ ಕನಸು ಈಡೇರುವ ದಿನಗಳು ಸನ್ನಿಹಿತವಾಗಿದೆ.

ಮಧ್ಯಪ್ರದೇಶದ ಖಜರಾಹೋದಲ್ಲಿ ಕೆನ್-ಬೆಟ್ವಾ ನದಿಗಳ ಜೋಡಣೆಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ್ದಾರೆ.

ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ, ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಚಿವ ಪ್ರಹ್ಲಾದ್ ಪಟೇಲ್, ಉಪಮುಖ್ಯಮಂತ್ರಿ ಜಗದೀಶ್ ದೇವ್ರಾ, ಸಚಿವರಾ್ ರಾಕೇಶ್ ಸಿಂಗ್, ತುಳಸಿ ಸಿಲಾವತ್, ಇಂದಲ್ ಸಿಂಗ್ ಕಂಸಾನಾ, ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ವೇಳೆ ಹಾಜರಿದ್ದರು.

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ವಾಜಪೇಯಿ ಅವರ ಕನಸು ನದಿಗಳ ಜೋಡಣೆ ಯೋಜನೆ ಜಾರಿಗೆ ತರಲು ಬಯಸಿದ್ದರು.ಆಗ ಅದು ಸಾಧ್ಯವಾಗಿರಲಿಲ್ಲ.

ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಟ್ಟಾಗಿ ಈ ಕಾರ್ಯದಲ್ಲಿ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರು. ಈಗ ಕೇಂದ್ರದಿಂದ ಅನುದಾನ ನೀಡಲು ಮಂಜೂರಾತಿ ಕೂಡಾ ಸಿಕ್ಕಿದೆ. ಈಗ ಪ್ರಧಾನಿ ನರೇಂದ್ರ ಮೋದಿ ನದಿ ಜೋಡಣೆಗೆ ಅಡಿಪಾಯ ಹಾಕಿದ್ದಾರೆ.

ಅಟಲ್ ಜಿ ಕನಸು ನನಸು:ನದಿ ಜೋಡಣೆಗೆಶಿಲಾನ್ಯಾಸ ಮಾಡಿದ ಪ್ರಧಾನಿ Read More