ಮಧ್ಯಪ್ರದೇಶದ ಡಿಸಿಎಂ‌‌ ಜಗದೀಶ್ ದೇವಡಾಭೇಟಿ ಮಾಡಿದ ಜಾನಪದ ಎಸ್ ಬಾಲಾಜಿ

ಮಧ್ಯಪ್ರದೇಶ, ಮಾ.7: ಮಧ್ಯಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಜಗದೀಶ್ ದೇವಡಾ ಅವರನ್ನು ಶುಕ್ರವಾರ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ ಭೇಟಿ ಮಾಡಿ ಚರ್ಚಿಸಿದರು.

ಈ ವೇಳೆ ಮಧ್ಯಪ್ರದೇಶ ಸರ್ಕಾರವು ಕರ್ನಾಟಕದ ಜಾನಪದ ಕಲೆಗಳ ವಿನಿಮಯ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಬಾಲಾಜಿ ಅವರು ಮನವಿ ಮಾಡಿದಾಗ ಡಿಸಿಎಂ ಸಂತೋಷದಿಂದ ಒಪ್ಪಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಉತ್ಸವಕ್ಕೆ ಆಮಂತ್ರಣ ನೀಡಲಾಯಿತು.

ಅದಕ್ಕೂ ಜಗದೀಶ್ ದೇವಡಾ‌ ಅವರು
ಸಮ್ಮತಿ ಸುಚಿಸಿದ್ದು ತಮಗೆ ಬಹಳ ಸಂತಸ ವಾಯಿತೆಂದು ಡಾ. ಜಾನಪದ ಎಸ್ ಬಾಲಾಜಿ ತಿಳಿಸಿದ್ದಾರೆ.

ಮಧ್ಯಪ್ರದೇಶ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಕೇಶ್ ಶರ್ಮ, ಪತ್ರಕರ್ತ ಜಿತೇಂದ್ರ ಸೋಲಂಕಿ ಹಾಗೂ ಸಂಘದ ಪ್ರಮುಖರಾದ ಮದನ್ ಲಾಲ್ ರಾಥೋಡ್ ಈ ವೇಳೆ ಉಪಸ್ಥಿತರಿದ್ದರು.

ಮಧ್ಯಪ್ರದೇಶದ ಡಿಸಿಎಂ‌‌ ಜಗದೀಶ್ ದೇವಡಾಭೇಟಿ ಮಾಡಿದ ಜಾನಪದ ಎಸ್ ಬಾಲಾಜಿ Read More

ಸಾಂಸ್ಕೃತಿಕ ರಾಯಭಾರಿ ಡಾ ಎಸ್ ಬಾಲಾಜಿಅವರಿಗೆ ಸಿಹೋರ್ ಜಿಲ್ಲೆಯಲ್ಲಿ ವಿಶೇಷ ಸ್ವಾಗತ

ಮಧ್ಯ ಪ್ರದೇಶ: ಮಧ್ಯಪ್ರದೇಶ ರಾಜ್ಯದ ಸಿಹೋರ್ ಜಿಲ್ಲೆಯ ಅಷ್ಟ ಉಪ ವಿಭಾಗದ ಮಧ್ಯಪ್ರದೇಶ ಸರ್ಕಾರಿ ಪ್ರವೀಕ್ಷಣ ಮಂದಿರದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಜಾನಪದ ಡಾ ಎಸ್ ಬಾಲಾಜಿ ಅವರನ್ನು ಸ್ವಾಗತಿಸಲಾಯಿತು.

ಅಷ್ಟ ಮುನ್ಸಿಪಾಲ್ ನಗರಸಭೆ ಸದಸ್ಯ ರವಿ ಶರ್ಮಾ, ಬಿಜೆಪಿಯ ಜಿಲ್ಲಾಧ್ಯಕ್ಷ ಲಲಿತ್ ನಗೋರಿ,ಅಷ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಸೋನು ಗುನವಾಣ, ಮಧ್ಯಪ್ರದೇಶ ರಾಜ್ಯ ಯುವ ಒಕ್ಕೂಟದ ಅಧ್ಯಕ್ಷ ರಾಕೇಶ್ ಶರ್ಮ,ಮಧ್ಯ ಪ್ರದೇಶ್ ಆರೋಗ್ಯ ಇಲಾಖೆಯ ತರುಣ್ ರಾಥೋಡ್, ಸುರೇಶ ಪಾಂಚಾಯಲ್ ಅವರುಗಳು ಸ್ವಾಗತಿಸಿದರು.

ಈ‌ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಲಲಿತ್ ನಾಗರಿ ಮಾತನಾಡಿ,ಸಿಗೋರ್ ಜಿಲ್ಲೆ ಸಾಂಸ್ಕೃತಿಕ ಜಿಲ್ಲೆಯಾಗಿದ್ದು ಇಲ್ಲಿಗೆ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳಾದ ಡಾ.ಎಸ್. ಬಾಲಾಜಿ ಅವರು ಆಗಮಿಸಿ ಸಾಂಸ್ಕೃತಿಕ ಮಿಲನಕ್ಕೆ ಕಾರಣರಾಗಿದ್ದಾರೆ, ಮುಂದಿನ ದಿನಗಳಲ್ಲಿ ವಿಶೇಷವಾಗಿ ಅಷ್ಟಾದಲ್ಲಿ ಜಾನಪದ ಉತ್ಸವಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ನಗರಸಭಾ ಸದಸ್ಯ ರವಿ ಶರ್ಮ ಅವರು ಮಾತನಾಡಿ ಸರೋವರಗಳ ನಗರಕ್ಕೆ ಆಗಮಿಸಿದ ನಾಡಿನ ಸಾಂಸ್ಕೃತಿಕ ರಾಯಭಾರಿಗಳಾದ ಡಾ ಎಸ್ ಬಾಲಾಜಿ ಅವರ ಬಗ್ಗೆ ನಮಗೆ ಬಹಳ ಗೌರವವಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ರಾಯಭಾರಿ ಡಾ ಎಸ್ ಬಾಲಾಜಿಅವರಿಗೆ ಸಿಹೋರ್ ಜಿಲ್ಲೆಯಲ್ಲಿ ವಿಶೇಷ ಸ್ವಾಗತ Read More

ಭೋಪಾಲ್ ನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಅಭಿನಂದನೆ

ಭೋಪಾಲ್,ಮಾ.2:‌ ಮಧ್ಯ ಪ್ರದೇಶ ರಾಜ್ಯದ ಭೋಪಾಲ್ ನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರನ್ನು ವಿವಿಧೆಡೆ ಅಭಿನಂದಿಸಿ ಗೌರವಿಸಲಾಯಿತು.

ಭೋಪಾಲ್ ನಗರದ ಸಮಾಜ ಸೇವಾ ಭವನದಲ್ಲಿ ಮೊದಲಿಗೆ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಪತ್ರಕರ್ತ ಜಿತೇಂದ್ರ ಸೋಲಂಕಿ, ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಮಹಿ ಪಲ್ ಸಿಂಗ್, ಜನಪದ ಕಾಲಾವಿದ ಮಧುಸೂದನ್, ಶಿವು, ಜಿತೇಶ್ ಮತ್ತಿತರರು ಹಾಜರಿದ್ದರು.

ನಂತರ ಇದೇ ದಿನ ಮಧ್ಯಪ್ರದೇಶ ಭೋಪಾಲ್ ನಲ್ಲಿ ಆತ್ಮೀಯ ಮಿತ್ರರಾದ ಸಿಹೊರ್ ಜಿಲ್ಲೆಯ ರಾಕೇಶ್ ಶರ್ಮ ಅವರು ಕೂಡಾ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಅಭಿನಂದಿಸಿ ಗೌರವಿಸಿದರು ಈ‌ ವೇಳೆ ವಿನೋದ್ ಸೋನಿ, ವಿಶಾಲ್ ಪಟೇದರ್ ಮತ್ತಿತರರು ಹಾಜರಿದ್ದರು.

ಭೋಪಾಲ್ ನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಅಭಿನಂದನೆ Read More

ಮಧ್ಯಪ್ರದೇಶದಲ್ಲಿ ಪೈಶಾಚಿಕ ಕೃತ್ಯ:ಪತಿಯ ಎದುರೆ ಪತ್ನಿ ಮೇಲೆ ಗ್ಯಾಂಗ್ ರೇಪ್

ಭೋಪಾಲ್: ಪತಿಯ ಎದುರೆ ಪತ್ನಿಯ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಲ್ಲದೆ ಕಿರಾತಕರು ಮಹಿಳೆಯ ಮೇಲಿನ ಗ್ಯಾಂಗ್ ರೇಪ್ ಅನ್ನು ವಿಡಿಯೋ ಮಾಡಿಕೊಂಡಿದ್ದು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ನವದಂಪತಿ ಗುಢ್ ಪೊಲೀಸ್ ಠಾಣೆ ವ್ಯಾಪ್ತಿಯ ಭೈರವನಾಥ ದೇವಸ್ಥಾನಕ್ಕೆ ವಿಹಾರಕ್ಕೆಂದು ಹೋಗಿದ್ದರು. ದಿಢೀರನೆ ಐದು ಮಂದಿ ಬಂದು ಮೊದಲು ಪತಿಯನ್ನು ಥಳಿಸಿ, ಆತನ ಎದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಈ ಹೇಯ ಘಟನೆಯಲ್ಲಿ ಏಳೆಂಟು ಮಂದಿ ಭಾಗಿಯಾಗಿರುವ ಶಂಕೆ ಇದೆ ಎಂದು ರೇವಾ ಎಸ್ಪಿ ವಿವೇಕ್ ಸಿಂಗ್ ಹೇಳಿದ್ದಾರೆ.

ಆರೋಪಿಗಳು ಸ್ಥಳದಲ್ಲಿ ಪಾರ್ಟಿ ಮಾಡುತ್ತಿದ್ದರು. ಅಲ್ಲಿ ಲಿಟ್ಟಿ, ಮಾಂಸ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಆರೋಪಿಗಳು ರೇವಾ ಜಿಲ್ಲೆಯವರು.

ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಮಧ್ಯಪ್ರದೇಶದಲ್ಲಿ ಪೈಶಾಚಿಕ ಕೃತ್ಯ:ಪತಿಯ ಎದುರೆ ಪತ್ನಿ ಮೇಲೆ ಗ್ಯಾಂಗ್ ರೇಪ್ Read More