ಜುಲೈ 27 ರಂದು ಬಸವ ಸಂಸ್ಮರಣೆ
ಬೆಂಗಳೂರು: ಬೆಂಗಳೂರಿನ ಬಸವ ಯೋಗ ಆಶ್ರಮ ದಲ್ಲಿ ಬಸವ ಪಂಚಮಿ ನಿಮಿತ್ತ ಬಸವ ಸಂಸ್ಮರಣೆ ಕಾರ್ಯಕ್ರಮ ವನ್ನು ಜುಲೈ 27 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅವರು ವಹಿಸಲಿದ್ದಾರೆ.
ಬೆಂಗಳೂರಿನ ಮಾದನಾಯಕನಹಳ್ಳಿ ಸಮೀಪ ,ಲಕ್ಷ್ಮೀಪುರ, ಬಸವ ಯೋಗ ಆಶ್ರಮ ದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಸವ ಗುರು ಪೂಜೆ,ವಚನ ಸ್ತುತಿ,ವಚನ ಮಂಥನ,ಪ್ರವಚನ ಕಾರ್ಯ ಕ್ರಮಗಳು ನಡೆಯಲಿದ್ದು ಭಕ್ತರು ಪಾಲ್ಗೊಳ್ಳಬೇಕೆಂದು ಆಶ್ರಮದ ಆಡಳಿತ ಮಂಡಳಿ ಕೋರಿದೆ.
ಹೆಚ್ಚಿನ ವಿವರಗಳಿಗೆ ಮೊಬೈಲ್ 9980608782 ಸಂಪರ್ಕಿಸಬಹುದಾಗಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ಜುಲೈ 27 ರಂದು ಬಸವ ಸಂಸ್ಮರಣೆ Read More