ಕದನ ವಿರಾಮ ಘೋಷಣೆ:ಮೋದಿ ವಿರುದ್ಧ ಎಂ ಲಕ್ಷ್ಮಣ್ ಅಸಮಾಧಾನ

ಮೈಸೂರು: ಕದನ ವಿರಾಮ ಘೋಷಣೆ ವಿಚಾರಕ್ಕೆ ಸಂಬಂದಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಪ್ರದೇಶ ವಶಪಡಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ಇತ್ತು. ಆದರೆ ಪ್ರಧಾನ ಮೋದಿ, ಅಮೇರಿಕಾ ಅಧ್ಯಕ್ಷ ಟ್ರಂಪ್ ಮಾತು ಕೇಳಿ ಕೈಚೆಲ್ಲಿ ಕೂತರು ಎಂದು ಟೀಕಿಸಿದರು.

ಇದು ಕೇವಲ ಇಬ್ಬರಿಗೋಸ್ಕರ ಕದನ ವಿರಾಮ ಘೋಷಣೆ ಮಾಡಿರೋದು. ಅವರು ಯಾರು ಅಂದ್ರೆ ಅದಾನಿ, ಅಂಬಾನಿ. ಇವರಿಬ್ಬರ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದರು ಎಂದು ದೂರಿದರು.

ಸಿಕ್ಕಿದ ಚಾನ್ಸ್ ಕೈ ಚೆಲ್ಲಿ ಭಾರತೀಯ ಸೈನಿಕರಿಗೆ ಅಪಮಾನ ಮಾಡುವ ಕೆಲಸವನ್ನ ಪ್ರಧಾನಿ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಆರ್ಮಿ ಕಮಾಂಡೆಂಟ್ ಸೋಫಿಯ ಖುರೇಷಿ ಕುರಿತು ಬಿಜೆಪಿಯ ವಿಜಯ್ ಶಾ ಅವಹೇಳನಕಾರಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಮಧ್ಯಪ್ರದೇಶದ ಸಚಿವ, ಬಿಜೆಪಿ ನಾಯಕ ವಿಜಯ್ ಶಾ ಧರ್ಮಧಾರಿತವಾಗಿ ಮಾತನಾಡಿದ್ದಾರೆ. ಸೇನೆಯಲ್ಲಿ ಜಾತಿ ಧರ್ಮ ಎಂಬುದಿಲ್ಲ. ಸೋಫಿಯ ಖುರೇಶಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಖುರೇಶಿ ಟೆರರಿಸ್ಟ್ ತಂಗಿ ಎಂದು ಕರೆದಿದ್ದಾರೆ. ಇದನ್ನು ಇಲ್ಲಿಯವರೆಗೆ ಬಿಜೆಪಿಯ ಯಾವ ನಾಯಕರು ಖಂಡನೆ ಮಾಡಲಿಲ್ಲ ಎಂದು ದೂರಿದರು.

ಇದು ಬಿಜೆಪಿ ಸರ್ಕಾರದ ಹೇಳಿಕೆಯಾಗಿದೆ. ಮುಸ್ಲಿಂ ಎಂಬ ಕಾರಣಕ್ಕೆ ಬಿಜೆಪಿ ಆರ್ ಎಸ್ ಎಸ್ ಅಳತೆ ಮಾಡುತ್ತಿದೆ. ಇದೇ ಹೇಳಿಕೆ ವಿರೋಧ ಪಕ್ಷಗಳು ಮಾತನಾಡಿದ್ದರೆ ಬೆಂಕಿ ಹೊತ್ತಿಸಿಬಿಡುತ್ತಿದ್ದರು.ಕೂಡಲೇ ಆತನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಜೈಲಿಗಟ್ಟಬೇಕು ಎಂದು ಲಕ್ಷ್ಮಣ್ ಆಗ್ರಹಿಸಿದರು.

ಕದನ ವಿರಾಮ ಘೋಷಣೆ:ಮೋದಿ ವಿರುದ್ಧ ಎಂ ಲಕ್ಷ್ಮಣ್ ಅಸಮಾಧಾನ Read More

ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ಕುರಿತು ಟಾರ್ಗೆಟ್ ಮಾಡಿಲ್ಲ:ಲಕ್ಷ್ಮಣ್

ಮೈಸೂರು: ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರದಲ್ಲಿ ಟಾರ್ಗೆಟ್ ಮಾಡಿಲ್ಲ. ಬೇರೆ ಬೇರೆ ಸರ್ಕಾರದ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ಈ ಬಗ್ಗೆ ಇನ್ನೂ ಸುಗ್ರೀವಾಜ್ಞೆ ಆದೇಶವಾಗಿಲ್ಲ. ಸುಗ್ರೀವಾಜ್ಞೆ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಅರಮನೆ ಆಸ್ತಿ ವಿಚಾರವಾಗಿ ಬೇರೆ ಬೇರೆ ಸರ್ಕಾರಗಳ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ ಎಂದು ತಿಳಿಸಿದರು.

1996 ರಲ್ಲಿ ಹೆಚ್ ಡಿ ದೇವೇಗೌಡರು ಸುಗ್ರೀವಾಜ್ಞೆ ತಂದಿದ್ದರು. ಬೆಂಗಳೂರು ಅರಮನೆ ಸುತ್ತಲಿನ ಜಾಗ ಬೃಂದಾವನ ಅಭಿವೃದ್ಧಿಗಾಗಿ ಸುಗ್ರೀವಾಜ್ಞೆ ಹೊರಡಿಸಿದ್ದರು. ಇದನ್ನು ಚಾಲೆಂಜ್ ಮಾಡಿ ಜಯಚಾಮರಾಜೇಂದ್ರರ ವಾರಸುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು, ಅಂದು ಹೈ ಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ರಾಜವಂಶಸ್ಥರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆಗ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಆದೇಶ ನೀಡಿತ್ತು ಎಂದು ತಿಳಿಸಿದರು.

2011ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇಂಟೆರೆಮ್ ಅಪ್ಲಿಕೇಶನ್ ಹಾಕುತ್ತಾರೆ. ರಸ್ತೆ ಟ್ರಾಫಿಕ್ ಜಾಸ್ತಿ ಆಗುತ್ತಿದೆ. ರಸ್ತೆ ಅಗಲೀಕರಣ ಆಗಬೇಕೆಂದು ಅಪ್ಲಿಕೇಶನ್ ಹಾಕುತ್ತಾರೆ,ಸಾರ್ವಜನಿಕರ ಬಳಕೆಗಾಗಿ ಜಾಗ ನೀಡಿದ್ರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮೂರು ಸಾವಿರ ಕೋಟಿ ಹಣ ಕೇಳಿದರೆ ಹೇಗೆ ಕೊಡಲು ಸಾಧ್ಯ. ಸರ್ಕಾರದಿಂದ ಅಷ್ಟು ಪ್ರಮಾಣದ ಹಣ ನೀಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರ ಟಾರ್ಗೆಟ್ ಮಾಡಿಲ್ಲ. ಈ ಬಗ್ಗೆ ಪ್ರಮೋದ ದೇವಿ ಒಡೆಯರ್ ಕಿರುಕುಳ ಆಗುತ್ತಿದೆ ಎಂದು ಹೇಳಿಲ್ಲ. ಅನವಶ್ಯಕವಾಗಿ ಸಿಎಂ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಲಕ್ಷ್ಮಣ್ ದೂರಿದರು.

ಎಲ್ಲ ಸರ್ಕಾರದ ಅವಧಿಯಲ್ಲೂ ಸುಗ್ರೀವಾಜ್ಞೆ ತರಲಾಗಿದೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗೆಲ್ಲಾ ಮೈಸೂರು ಅರಸರ ಮೇಲೆ ದ್ವೇಷ ಸಾಧಿಸುತ್ತಾರೆ ಎಂಬ ಬಿಜೆಪಿಯವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಎಂ.ಲಕ್ಷ್ಮಣ್ ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ನಡುವಿನ ವೈಮನಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಶ್ರೀರಾಮಲುಗೆ ಮುಖಭಂಗ ಮಾಡುವ ಕೆಲಸವನ್ನ ಬಿಜೆಪಿಯೇ ಮಾಡುತ್ತಿದೆ, ಅವರನ್ನ ಹೊರಗಡೆ ಕಳಿಸುವ ಕೆಲಸ ಮಾಡುತ್ತಿದೆ. ಶ್ರೀ ರಾಮುಲು ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬರುವುದಾದರೇ ಸ್ವಾಗತ ಎಂದು ಹೇಳಿದರು.

ಲೋಕಾಸಭಾ ಚುನಾವಣೆ ಸಂದರ್ಭದಲ್ಲಿ ಬಿಎಸ್ಪಿ ಅಭ್ಯರ್ಥಿ ರೇವತಿ ರಾಜ್ ನಾಮಪತ್ರ ಅಸಿಂಧುಗೊಳಿಸಿದ್ದ ಸಂಬಂಧ ಕೋರ್ಟ್ ಮೆಟ್ಟಿಲೇರಿ ಮರುಚುನಾವಣೆಗೆ ಆಗ್ರಹಿಸಿರುವ ವಿಚಾರ, ಸಂಸದ ಯದುವೀರ್ ಒಡೆಯರ್ ಗೆ ಹೈ ಕೋರ್ಟ್ ನೋಟೀಸ್ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ನಾಮಪತ್ರ ತಿರಸ್ಕೃತ ಬಿಎಸ್ಪಿ ಅಭ್ಯರ್ಥಿಗೆ ನ್ಯಾಯ ಸಿಗಬೇಕು. ಅಭ್ಯರ್ಥಿ ರೇವತಿ ರಾಜ್ ಗೆ ನನ್ನ ಬೆಂಬಲವಿದೆ. ಮತ್ತೆ ಚುನಾವಣೆ ನಡೆಸಿ ನ್ಯಾಯ ಒದಗಿಸಬೇಕು.
ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ಕುರಿತು ಟಾರ್ಗೆಟ್ ಮಾಡಿಲ್ಲ:ಲಕ್ಷ್ಮಣ್ Read More

ಬಿಜೆಪಿ ನಾಯಕರ ವಿರುದ್ದ ಎಂ.ಲಕ್ಷ್ಮಣ್ ಕಿಡಿ

ಮೈಸೂರು: ಒಬ್ಬ ಶ್ರೇಷ್ಠ ನಾಯಕನ ಪದಚ್ಯುತಿ ಮಾಡುವ ಹುನ್ನಾರ ಬಿಜೆಪಿಯದ್ದು, ಸಿಎಂ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಲು ಅವರ ಹಣೆಯಲ್ಲೇ ಬರೆದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಏನೂ ಇಲ್ಲದೆ ಇರುವ ಸಂಗತಿಯನ್ನ ಹೈಕೋರ್ಟ್ ವರೆಗೆ ತೆಗೆದುಕೊಡು ಹೋಗಿ ಹೈಕೋರ್ಟ್ ತೀರ್ಪು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ಕಾನೂನಿನ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯಪಾಲರು ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ. ನಮ್ಮ ರಾಜ್ಯದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ ಹಾರಾಜು ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಈ ರಾಜ್ಯಪಾಲರನ್ನ ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು. ಇಲ್ಲ ಅಂದ್ರೆ ಮುಂದೆ ಆಗುವಂತಹ ಘಟನೆಗೆ ಬಿಜೆಪಿಯವರೇ ಕಾರಣ ಆಗುತ್ತಾರೆ. ರಾಜ್ಯಪಾಲರು ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ದೂರಿದರು.

ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ದೃತಿಗೆಡಬೇಡಬಾರದು, ಸದ್ಯಕ್ಕೆ ಹಿನ್ನೆಡೆಯಾಗಿದೆ ಮುಂದಿನ ದಿನಗಳಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದು ‌ವಿಶ್ವಾಸ‌ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರೇ ಮುಂದೆಯೂ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಎಂ.ಲಕ್ಷ್ಮಣ್ ಹೇಳಿದರು.ತೀರ್ಪು ಹೊರ ಬೀಳುವುದಕ್ಕೂ ಮುಂಚಿತವಾಗಿ ವಿಜಯೇಂದ್ರ ಮಾಧ್ಯಮಗಳಲ್ಲಿ ಹೇಳಿಕೆ ಕೊಡುತ್ತಾರೆ ಅಂದರೆ, ತೀರ್ಪಿನ ಬಗ್ಗೆ ಮುಂಚಿತವಾಗಿ ತಿಳಿದಿತ್ತಾ ಎಂದು ಲಕ್ಷ್ಮಣ್ ಪ್ರಶ್ನಿಸಿದರು.

ಸಿಎಂ ಪರವಾಗಿ ನಾವು ಇದ್ದೇವೆ ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಎಂ.ಲಕ್ಷ್ಮಣ್ ಹೇಳಿದರು.

ಬಿಜೆಪಿ ನಾಯಕರ ವಿರುದ್ದ ಎಂ.ಲಕ್ಷ್ಮಣ್ ಕಿಡಿ Read More