ಧರ್ಮಸ್ಥಳದಲ್ಲಿ ಗಲಾಟೆ;ಲಾಠಿ ಚಾರ್ಜ್
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಎಸ್ ಐಟಿ ತನಿಖೆ ತೀವ್ರಗೊಂಡ ಬೆನ್ನಲ್ಲೇ ಕಿರಿಕ್ ಗಳು ಪ್ರಾರಂಭವಾಗಿದ್ದು,ಈಗ ಈ ಗ್ರಾಮ ಪ್ರಕ್ಷುಬ್ಧ ವಾಗಿಬಿಟ್ಟಿದೆ.
ಇದಕ್ಕೆ ಕಾರಣ ಧರ್ಮಸ್ಥಳ ಪ್ರಕರಣಗಳ ಬಗ್ಗೆ ನಿರಂತರ ವರದಿ ಮಾಡುತ್ತಿರುವುದು.
ಬುಧವಾರ ಸಂಜೆ ಸುದ್ದಿ ಮಾಡಲು ಬಂದಿದ್ದ ಯೂಟ್ಯೂಬರ್ ಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.ಅಲ್ಲದೆ ಖಾಸಗಿ ವಾಹಿನಿಯೊಂದರ ವರದಿಗಾರ ಮತ್ತು ಕ್ಯಾಮರಾಮನ್ ಮೇಲೂ ಹಲ್ಲೆ ಮಾಡಲಾಗಿದೆ.
ಗಲಾಟೆಯಲ್ಲಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಎಸ್ ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.
ನೇತ್ರಾವತಿಯ ಪಾಂಗಳ ಕ್ರಾಸ್ ಬಳಿ ಯೂಟ್ಯೂಬರ್ ಗಳು,ವರದಿ ಮಾಡಲು ಹೋಗಿದ್ದ ವರದಿಗಾರ ಮತ್ತು ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಲಾಗಿದೆ ಗಲಾಟೆ ಎಸ್ಟರಮಟ್ಟಿಗೆ ಇದೆ ಎಂದರೆ ಲಾಠಿ ಚಾರ್ಜ್ ಮಾಡುವ ಮಟ್ಟಕ್ಕೆ.
ಕಲ್ಲು ತೂರಾಟದಿಂದಾಗಿ ಎರಡು ವಾಹನಗಳು ಜಖಂಗೊಂಡಿದೆ ಎಂದು ಎಸ್ ಪಿ ಸ್ಪಷ್ಟಪಡಿಸಿದ್ದಾರೆ.
ಆಗಿದ್ದಿಷ್ಟೆ.ಯೂಟ್ಯೂಬರ್ ಗಳು,
ಧರ್ಮಸ್ಥಳದ ದೇವಳಕ್ಕೆ ಧಕ್ಕೆಯಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡಿ ಅವಮಾನ ಮಾಡುತ್ತಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸೌಜನ್ಯ ಕೇಸ್ ಗೆ ಸಂಬಂಧಪಟ್ಟಂತೆ ಕೆಲವರು ಸತ್ಯ ಹೊರ ಬರಬೇಕೆಂದು ಹೋರಾಟ ನಡೆಸುತ್ತಿರುವವರು ಇದೇ ವೇಳೆ ಆಗಮಿಸಿದ್ದರು ಆಗ ಒಬ್ಬರಿಗೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಇದು ವಿಕೋಪಕ್ಕೆ ಹೋಗಿ ಇಂದು ಪ್ರಕ್ಷುಬ್ಧ ವಾತಾವರಣ ಉಂಟಾಗಿ ಕಲ್ಲುತೂರಾಟ ಪ್ರಾರಂಭವಾಗಿದೆ. ಆಗ ಧರ್ಮಸ್ಥಳ ಪೊಲೀಸರು ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.ಆದರೂ ಅಲ್ಲಿನ ಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ದಕ್ಷಿಣ ವಲಯ ಐಜಿಪಿ ಅಮಿತ್ ಸಿಂಗ್ ಕೂಡಾ ಧರ್ಮಸ್ಥಳ ಠಾಣೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಧರ್ಮಸ್ಥಳದಲ್ಲಿ ಗಲಾಟೆ;ಲಾಠಿ ಚಾರ್ಜ್ Read More