ಲಾರಿ-ಗೂಡ್ಸ್ ಆಟೋ ಡಿಕ್ಕಿ:ಇಬ್ಬರ ದುರ್ಮ*ರಣ

ಚಾಮರಾಜನಗರ: ಕಬ್ಬು ಸಾಗಿಸುತ್ತಿದ್ದ ಲಾರಿ ಹಾಗೂ ಆಟೋ ನಡುವೆ‌ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲದ ಯಳಂದೂರು ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ.

ಸುಮಂತ್ (22) ನಿತಿನ್ ಕುಮಾರ್ (16) ಮೃತ ದುರ್ದೈವಿಗಳು.

ಕಬ್ಬು ಸಾಗಿಸುತ್ತಿದ್ದ ಲಾರಿ ಹಾಗೂ ಟೊಮೆಟೊ ತುಂಬಿಕೊಂಡು ಹೋಗುತ್ತಿದ್ದ ಆಟೋ ನಡುವೆ ಡಿಕ್ಕಿಯಾಗಿದೆ.

ಎಳೆಪಿಳ್ಳಾರಿ ಸಮೀಪದ ಜಮೀನಿನಿಂದ ಕಬ್ಬು ತುಂಬಿಸಿಕೊಂಡ ಲಾರಿ ಕಾರ್ಖಾನೆಗೆ ತೆರಳಲು ರಸ್ತೆಯ ಬಳಿ ನಿಂತಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಗೂಡ್ಸ್ ಅಟೋ ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ‌ ಟೊಮೆಟೊ‌ ಬಾಕ್ಸ್ಗಳು ನೆಲಕ್ಕೆ ಉರುಳಿ ಟೊಮೆಟೊ ರಸ್ತೆಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.

ಈ ಸಂಬಂಧ ಯಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಲಾರಿ-ಗೂಡ್ಸ್ ಆಟೋ ಡಿಕ್ಕಿ:ಇಬ್ಬರ ದುರ್ಮ*ರಣ Read More

ಲಾರಿ ಹರಿದು ಬೈಕ್ ಸವಾರ ಸಾವು:ಶವ ಇಟ್ಟು ಸಂಬಂಧಿಕರ ಪ್ರತಿಭಟನೆ

ಮೈಸೂರು: ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ
ಮೈಸೂರು ಗದ್ದಿಗೆ ಮುಖ್ಯ ರಸ್ತೆ, ಮಾರೇಗೌಡನಹಳ್ಳಿ ಗೇಟ್ ಬಳಿ ನಡೆದಿದೆ.

ಹೆಚ್ ಡಿ ಕೋಟೆ ತಾಲೂಕಿನ ಕೆ.ಬೆಳ್ತೂರು ಗ್ರಾಮದ ತಿಮ್ಮನಾಯಕ ಅವರ ಪುತ್ರ ಸತೀಶ್ (27) ಮೃತಪಟ್ಟ ಬೈಕ್ ಸವಾರ,ಹಿಂಬದಿ ಕುಳಿತಿದ್ದ
ಸತೀಶ್ ಅಕ್ಕನ ಮಗ ಶಿವು (13) ಗಂಭೀರ ಗಾಯಗೊಂಡಿದ್ದಾನೆ.

ಬೈಕ್ ನಲ್ಲಿ ಅಕ್ಕನ ಮಗನ ಜೊತೆ ಮೈಸೂರಿನಿಂದ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ರೋಡ್ ರೋಲರ್ ಹೊತ್ತು ಗದ್ದಿಗೆ ಕಡೆಯಿಂದ ಬರುತ್ತಿದ್ದ ಲಾರಿ ತಿರುವಿನಲ್ಲಿ ಬಂದು ಬೈಕ್ ಮೇಲೆ ಹರಿದಿದೆ.
ಚಾಲಕ ಜಾವೀದ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತದಿಂದ ರೊಚ್ಚಿಗೆದ್ದ ಸತೀಶ್ ಸಂಬಂಧಿಕರು ರಸ್ತೆಯಲ್ಲೇ ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿ,ಮೈಸೂರು- ಗದ್ದಿಗೆ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಜಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಸ್ಥಳಕ್ಕೆ ಡಿವೈಎಸ್ಪಿಗಳಾದ ರಘು, ಕರೀಂ ರಾವತರ್ ಭೇಟಿ ನೀಡಿ ಪರಿಶೀಲಿಸಿ ಸತೀಶ್ ಕುಟುಂಬಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು.

ಲಾರಿ ಹರಿದು ಬೈಕ್ ಸವಾರ ಸಾವು:ಶವ ಇಟ್ಟು ಸಂಬಂಧಿಕರ ಪ್ರತಿಭಟನೆ Read More

ಬೈಕ್, ಲಾರಿ ಡಿಕ್ಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ಕಾರ್ಕಳ: ಮಿನಿ ಲಾರಿ ಹಾಗೂ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ಕು ಮಂದಿ ದುರ್ಮರಣ ಅಪ್ಪಿದ ಘಟನೆ ಕಾರ್ಕಳ ಬಳಿ ನಡೆದಿದೆ.

ಕಾರ್ಕಳ ತಾಲೂಕಿನ ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರುನ ಪಾಜೆಗುಡ್ಡೆ ಬಳಿ ಈ ಅಪಘಾತ ಸಂಭವಿಸಿದೆ.

ಸುರೇಶ್ ಆಚಾರ್ಯ (36), ಸಮೀಕ್ಷಾ (7) ಸುಶ್ಮೀತಾ (5) ಮತ್ತು ಸುಶಾಂತ್ (2) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಆಚಾರ್ಯ (32) ಎಂಬವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ‌ ನತದೃಷ್ಟರು ಒಂದೇ ಬೈಕ್ ನಲ್ಲಿ ಹೋಗುತ್ತಿದ್ದರು.ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾಗಿದೆ.

ಸುದ್ದಿ ತಿಳಿದ ತಕ್ಷಣ ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು,ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು.

ಬೈಕ್, ಲಾರಿ ಡಿಕ್ಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ Read More