ಲಯನ್ಸ್ ಅಂಬಾಸಿಡರ್ ಸಂಸ್ಥೆ, ಮಾಜಿ ಸಶಸ್ತ್ರ ಸೈನಿಕರ ಸಂಘದಿಂದ ಶ್ರಮಾದಾನ

ಮೈಸೂರು: ಮೈಸೂರಿನ ಲಯನ್ಸ್ ಅಂಬಾಸಿಡರ್ ಸಂಸ್ಥೆ ಮತ್ತು ಮಾಜಿ ಸಶಸ್ತ್ರ ಸೈನಿಕರ ಸಂಘದ ಸದಸ್ಯರು ಭಾನುವಾರ ಶ್ರಮಾದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಯುದ್ಧ ಸ್ಮಾರಕ ಸ್ತಂಭದ ಆವರಣದಲ್ಲಿ ಗಿಡಗಂಟೆಗಳನ್ನು ಸ್ವಚ್ಚಗೊಳಿಸಿ,ಕಾಗದ,ಕಸ,ಕಡ್ಡಿಗಳನ್ಯ ತೆಗೆಯುವ ಮೂಲಕ ಶ್ರಮದಾನ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಾಂತಿಯ ಅಧ್ಯಕ್ಷ ಲಯನ್ ಎಚ್ ಸಿ ಕಾಂತರಾಜು,ಸಶಸ್ತ್ರ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ ಬಿದ್ದಪ್ಪ ಹಾಗೂ ಲಯನ್ ಜಿಲ್ಲಾ ಅಧ್ಯಕ್ಶರಾದ ಮಕಾಳ ಶಿವಕುಮಾರ್, ಟಿ‌.ಎಚ್ ವೆಂಕಟೇಶ್, ಡಾ.ಅರ್.ಡಿ. ಕುಮಾರ್,ಸಿ.ಆರ್ .ದಿನೇಶ್,ವಿ.ಶ್ರೀಧರ್, ಎಚ್ ಕೆ ಪ್ರಸನ್ನ ,ಮಲ್ಲಿಕಾರ್ಜುನಪ್ಪ,
ರಾಮಚಂದ್ರ, ಪುಟ್ಟಸ್ವಾಮಿ,ನಾಗರಾಜು, ಯಶೋದಮ್ಮ ,ಕೆ ಟಿ ವಿಷ್ಣು ಡಾ.ಕಿಶೋರ್, ಮನು, ರವಿ, ಶಿವರುದ್ರಯ್ಯ, ರವಿಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

ಲಯನ್ಸ್ ಅಂಬಾಸಿಡರ್ ಸಂಸ್ಥೆ, ಮಾಜಿ ಸಶಸ್ತ್ರ ಸೈನಿಕರ ಸಂಘದಿಂದ ಶ್ರಮಾದಾನ Read More

ಕಿಡ್ನಿ ವೈಫಲ್ಯ:ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯಿಂದ ಧನಸಹಾಯ

ಮೈಸೂರು, ಮಾ.8: ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆ ವತಿಯಿಂದ ದಿವ್ಯ ರವರ ಪತಿಯ ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ‌ ಧನಸಹಾಯ ಮಾಡಲಾಯಿತು.

ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯ ಸೇವಾ ಕಾರ್ಯದ ಅಂಗವಾಗಿ 10000 ರೂ ಗಳನ್ನು ನೀಡಲಾಯಿತು.

ಈ ವೇಳೆ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಸುಬ್ರಮಣ್ಯ, ಸಂಸ್ಥೆಯ ಅಧ್ಯಕ್ಷರಾದ ವಿ.ಶ್ರೀಧರ್, ಸೆಕೆಂಡ್ ಸೆಂಚುರಿ ಅಂಬಾಸಿಡರ್ ಡಾ.ಅರ್.ಡೆ.ಕುಮಾರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಸಿ ಡಿ ಕೃಷ್ಣ, ಲಯನ್ ಪಿ ರಮೇಶ್ ,ಲಯನ್ ಪಿ. ಮಲ್ಲಿಕಾರ್ಜುನಪ್ಪ ಮತ್ತು ಲಯನ್ ಎಚ್.ಆರ್ ರವಿಚಂದ್ರ ಉಪಸ್ಥಿತರಿದ್ದರು.

ಕಿಡ್ನಿ ವೈಫಲ್ಯ:ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯಿಂದ ಧನಸಹಾಯ Read More

ದೈನಂದಿನ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಕನ್ನಡ‌ ಬಳಕೆಯಿಂದ ನಮ್ಮ ‌ಭಾಷೆ ಉಳಿವುಡಾ.ಲತಾ ರಾಜಶೇಕರ್

ಮೈಸೂರು: ಕನ್ನಡ ಭಾಷೆಯನ್ನು ಸ್ವಯಂ ಪ್ರೇರಣೆಯಿಂದ ಪ್ರತಿಯೊಬ್ಬರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಬಳಸಿದರೆ ನಮ್ಮ ‌ಭಾಷೆ ಉಳಿಯಲಿದೆ ಎಂದು ಕನ್ನಡದ ಲೇಖಕಿ ಡಾ.ಲತಾ ರಾಜಶೇಕರ್ ಹೇಳಿದರು.

ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮಗಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಸ್ಥೆಯ ಸದಸ್ಯರು ಹಾಗೂ ಕರವೇ ಸಂಘಟನೆಯಲ್ಲಿ ತೊಡಿಗಿಸಿಕೊಂಡು ಸೇವಾ ಚಟುವಟಿಕೆಗಳನ್ನು ಮಾಡುತ್ತಿರುವ ಲಯನ್ ಲೋಕೇಶ್ ಕುಮಾರ್ ಮತ್ತು ಲಯನ್ ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ದಂತ ವೈದ್ಯರಾದ ಡಾ. ಲಯನ್ ಡಾ. ಜಿ. ಕಿಶೋರ್ ಅವರು ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಲಯನ್ ವರದ್, ಲಯನ್ ಅಂಬಾಡಿ ಮಾಧವ್ ಮತ್ತು ಎ ವಿ ಆರ್ ಚಂದ್ರಕುಮಾರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಲಯನ್ ವಿ.ಶ್ರೀಧರ್ ,ಕಾರ್ಯದರ್ಶಿ ಲಯನ್ ಬಿ ಮಲ್ಲಿಕಾರ್ಜುನಪ್ಪ, ಖಜಾಂಚಿ ಲಯನ್ ಎಚ್ .ಆರ್ ರವಿಚಂದ್ರ ,ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಲಯನ್ ಟಿ ಎಚ್ ವೆಂಕಟೇಶ್ ,ಜಿಲ್ಲಾ ಅಧ್ಯಕ್ಷ ಲಯನ್ ಸಿ ಆರ್ ದಿನೇಶ್, ವಲಯ ಅಧ್ಯಕ್ಷ ಎಚ್. ಸಿ ಕಾಂತರಾಜು, ಎಚ್ ಕೆ ಪ್ರಸನ್ನ , ಕೆ.ಟಿ.ವಿಷ್ಣು, ಅರುಣ್ ಸಾಗರ್,ಲಯನ್ ವರದಾ,ಲಯನ್ ರವಿ, ಲಯನ್ ಮಹದೇವ್ ಪ್ರಸಾದ್, ಯಶೋದಮ್ಮ, ದೀಪಾ ,ಅಶ್ವಿನಿ,ರಮ್ಯ ಮತ್ತಿತರರು ಹಾಜರಿದ್ದರು.

ದೈನಂದಿನ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಕನ್ನಡ‌ ಬಳಕೆಯಿಂದ ನಮ್ಮ ‌ಭಾಷೆ ಉಳಿವುಡಾ.ಲತಾ ರಾಜಶೇಕರ್ Read More

ದಂತ ಆರೋಗ್ಯ ಪ್ರತಿಯೊಬ್ಬರಿಗೂ ಮಹತ್ವದ್ದು- ಡಾ.ಕಿಶೋರ್

ಮೈಸೂರು: ದಂತ ಆರೋಗ್ಯ ಪ್ರತಿಯೊಬ್ಬರಿಗೂ ಮಹತ್ವವಾದದು ಯಾವುದೇ ಕಾರಣಕ್ಕೂ ಇದರ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಡಾ. ಕಿಶೋರ್ ಅವರು ತಿಳಿಹೇಳಿದರು.

ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯ ಮಾಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಹಲ್ಲುಗಳ ಆರೋಗ್ಯದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಒಂದು ವೇಳೆ ದಂತ ಆರೋಗ್ಯವನ್ನು ನಿರ್ಲಕ್ಷ ಮಾಡಿದರೆ ಮನುಷ್ಯನ ದೇಹದ ಇತರ ಅಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆ ಕಾರಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಹಲ್ಲುಗಳ ಶುಚಿತ್ವದ ಬಗ್ಗೆ ಹಾಗೂ ಬಾಯಿ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಡಾಕ್ಟರ್ ಕಿಶೋರ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಲಯನ್ ವಿ.ಶ್ರೀಧರ್, ಕಾರ್ಯದರ್ಶಿ ಲಯನ್ ಬಿ ಮಲ್ಲಿಕಾರ್ಜುನಪ್ಪ, ಖಜಾಂಚಿ ಲಯನ್ಎಚ್ ಆರ್ ರವಿಚಂದ್ರ ,ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಲಯನ್ ಟಿ ಎಚ್ ವೆಂಕಟೇಶ್ ,ಜಿಲ್ಲಾ ಅಧ್ಯಕ್ಷ ಲಯನ್ ಸಿ ಆರ್ ದಿನೇಶ್ , ವಲಯ ಅಧ್ಯಕ್ಷ ಎಚ್. ಸಿ ಕಾಂತರಾಜು,ಸದಸ್ಯರಾದ ಎಚ್ ಕೆ ಪ್ರಸನ್ನ ,ಅರುಣ್ ಸಾಗರ್ ಮತ್ತಿತರರು ಹಾಜರಿದ್ದರು.

ದಂತ ಆರೋಗ್ಯ ಪ್ರತಿಯೊಬ್ಬರಿಗೂ ಮಹತ್ವದ್ದು- ಡಾ.ಕಿಶೋರ್ Read More