317 ಜಿ ಜಿಲ್ಲಾ ಲಿಯೋ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ

ಮೈಸೂರು: 317 ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ 317 ಜಿ ಜಿಲ್ಲಾ ಲಿಯೋ ಸಂಸ್ಥೆಯ ಪದಗ್ರಹಣ ಮತ್ತು ಪುನಶ್ಚೇತನ ಕಾರ್ಯಕ್ರಮ ಗೋಕುಲಂನ ಲಯನ್ಸ್ ಸೇವಾನಿಕೇತನ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ 317ಜಿಯ ರಾಜ್ಯಪಾಲರಾದ ಲಯನ್ ಕೆ ಆರ್ ರಾಜಶೇಖರ ಅವರು ಉದ್ಘಾಟಿಸಿದರು.

ಜಿಲ್ಲೆಯಲ್ಲಿ 10 ಲಿಯೋ ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ 10 ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸೇವಾ ಕಾರ್ಯಕ್ರಮದ ಕಡೆಗೆ ಯುವ ಜನರನ್ನು ಸೆಳೆಯಲು ಪ್ರಯತ್ನಪಡಲಾಗುವುದು ಎಂದು ರಾಜಶೇಖರ ತಿಳಿಸಿದರು

ಸಂಪನ್ಮೂಲ ವ್ಯಕ್ತಿಯಾಗಿ 317‌ ಡಿ ಜಿಲ್ಲಾ ರಾಜ್ಯಪಾಲರಾದ ಡಾ. ಮೇಲ್ವಿನ್ ಡಿ ಸೋಜ ಅವರು ಲಿಯೋ ಸಂಸ್ಥೆಗಳು ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು‌.

ಕಾರ್ಯಕ್ರಮದಲ್ಲಿ ಮೊದಲನೇ ಜಿಲ್ಲಾ ರಾಜ್ಯಪಾಲ ಲಯನ್ ಮತಿದೇವಕುಮಾರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಎಂ ಸಿದ್ದೇಗೌಡ,ಡಿಸಿ ಲಿಯೋ ಲಯನ್.ನಿಂಗರಾಜು ,ವಲಯ ಅಧ್ಯಕ್ಷ ಶಶಿಕುಮಾರ್, 317ಡಿ ಜಿಲ್ಲಾದ್ಯಕ್ಷ ಲಿಯೋ ಶ್ರೀನಿಧಿ ಶೆಟ್ಟಿ,317 ಜಿ ಲಿಯೊ ಜಿಲ್ಲಾ ಅಧ್ಯಕ್ಷ ಅರ್ಜವ್ ಮಂಡಲ್, ಖಜಾಂಚಿ ಸೃಜನ್ ದಿನೇಶ್ ಭಾಗವಹಿಸಿದ್ದರು.

317 ಜಿ ಜಿಲ್ಲಾ ಲಿಯೋ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ Read More