ಕಲ್ಯಾಣ ಮಂಟಪದಲ್ಲಿ ಚಿರತೆ!

ಲಖನೌ: ಮದುವೆ ಮನೆ ಅಂದರೇನೆ ಸಂಭ್ರಮ,ಸಡಗರ ತುಂಬಿ ತುಳುಕತ್ತಾ ಇರುತ್ತೆ,ಹೀಗಿರುವಾಗ ಚಿರತೆ ಬಂದರೆ ಹೇಗಾಗಿರಬೇಡಾ ಹೇಳಿ!

ಅದೇನೊ ಲಖನೌ ನ ಕಲ್ಯಾಣ ಮಂಟಪಕ್ಕೆ ಚಿರತೆ ಎಂಟ್ರಿ ಕೊಟ್ಟು ತೀವ್ರ ಆತಂಕ ಎದುರಾದ ಪ್ರಸಂಗ ನಡೆದಿದ್ದು,ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ.ಚಿರತೆ‌ಗೆ ಮದುವೆ ನೋಡಬೇಕು ಅನ್ಸಿತ್ತೇನೊ,ಹೊಟ್ಟೆ ಹಸಿವಾಗಿತ್ತೇನೊ ಹೀಗೆ ಕಾಮೆಂಟ್ ಗಳು ಬಂದಿವೆ.

ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ರಾತ್ರಿ ಚಿರತೆ ನುಗ್ಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದ್ದು ಅದನ್ನು ಓಡಿಸಲು ಮುಂದಾದಾಗ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ

ಜೀವ ಉಳಿಸಿಕೊಳ್ಳಲು ವಧು-ವರರು ಓಡಿ ಕಾರಿನಲ್ಲಿ ಸಿಲುಕಿಹಾಕಿಕೊಳ್ಳಬೇಕಾಯಿತು.

ಬುದ್ಧೇಶ್ವರ ರಸ್ತೆ ಪ್ರದೇಶದಲ್ಲಿ ರಾತ್ರಿ ಈ ಘಟನೆ ಸಂಭವಿಸಿದ್ದು, ಚಿರತೆ ಬ್ಯಾಂಕ್ವೆಟ್ ಹಾಲ್‌ಗೆ ಪ್ರವೇಶಿಸಿದ ಕೂಡಲೇ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಧಿಕ್ಕಾಪಾಲಾಗಿ ಓಡಿದ್ದಾರೆ,ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಚಿರತೆ ನುಗ್ಗುತ್ತಿದ್ದಂತೆ ಮಂಟಪದಲ್ಲಿ ಕುಳಿತಿದ್ದ ವಧು-ವರರೂ ಕೂಡ ಓಡಿ ಹೋಗಿ ಕಾರಿನಲ್ಲಿ ಲಾಕ್ ಮಾಡಿಕೊಂಡಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ಗಂಟೆಗಳ ಪ್ರಯತ್ನದ ನಂತರ ತಡರಾತ್ರಿ 2 ಗಂಟೆ ಸುಮಾರಿಗೆ ಚಿರತೆಯನ್ನು ಸೆರೆಹಿಡಿಯಲಾಗಿದೆ.

ಪೊಲೀಸರ ಪ್ರಕಾರ, ಚಿರತೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಅಧಿಕಾರಿ ಮುಕದ್ದರ್ ಅಲಿ ಅವರ ಕೈಗೆ ಗಾಯಗಳಾಗಿವೆ. ಚಿರತೆ ಹಿಡಿಯುವವರೆಗೂ, ವಧು ಮತ್ತು ವರರ ಕುಟುಂಬದವರು ಸುರಕ್ಷತೆಗಾಗಿ ತಮ್ಮ ವಾಹನಗಳಲ್ಲಿ ಕುಳಿತಿದ್ದರು ಎಂದು ತಿಳಿಸಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಚಿರತೆ! Read More

ಹೆಚ್ ಡಿ ಕೋಟೆಯಲ್ಲಿ ಒಂದೇ ಜಮೀನಿನಲ್ಲಿಸೆರೆಸಿಕ್ಕ 5 ನೆ ಚಿರತೆ: ಗಾಬರಿಗೊಂಡ ಜನ

ಎಚ್‌.ಡಿ.ಕೋಟೆ: ಇತ್ತೀಚೆಗಷ್ಟೇ ಹೆಚ್ ಡಿ ಕೋಟೆಯ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದರ ಬೆನ್ನಲ್ಲೇ ಮುಂಜಾನೆ ಮತ್ತೊಂದು‌ ಚಿರತೆ ಸೆರೆಸಿಕ್ಕಿದ್ದು ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಒಂದೇ ತಿಂಗಳಲ್ಲಿ ಒಂದೇ ಜಮೀನಿನಲ್ಲಿ ಇದು ಸೇರಿ ಐದು ಚಿರತೆ ಸೆರೆಯಾದಂತಾಗಿದೆ.
ನಾಲ್ಕನೆ ಚಿರತೆ ಸೆರೆ ಸಿಕ್ಕಾಗಲೇ ರೈತರು ಇನ್ನೂ ಹೆಚ್ಚು ಚಿರತೆಗಳು ಇರನಹುದೆಂದು ಅನುಮಾನ ವ್ಯಕ್ತಪಡಿಸಿ ಅರಣ್ಯ ಇಲಾಖೆಗೆ ಮತ್ತೆ ಬೋನು ಇಡುವಂತೆ ಒತ್ತಾಯಿಸಿದ್ದರು.

ಅವರ ಅನುಮಾನ ನಿಜವಾಗಿದೆ,
ಕಳೆದ ವಾರದ ಹಿಂದೆ ಚಿರತೆ ಸಿಕ್ಕಿದ ಸಮೀಪದಲ್ಲೇ ಇನ್ನೊಂದು ಗಂಡು ಚಿರತೆ ಸಿಕ್ಕಿಬಿದ್ದಿದೆ.

‌ಸಾಕು ಪ್ರಾಣಿಗಳನ್ನು ಕೊಂದು ಭೀತಿ ಸೃಷ್ಟಿಸಿದ್ದ 7ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದೆ.

ಒಂದೇ ಜಮೀನಿನಲ್ಲಿ ಐದನೇ ಚಿರತೆ ಬೋನಿಗೆ ಸಿಕ್ಕಿರುವುದು ನೋಡಿ ಜನ ಅಚ್ವರಿಗೊಂಡಿದ್ದಾರೆ,ಜತೆಗೆ ಆತಂಕವೂ ಹೆಚ್ಚಾಗಿದೆ.

ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸಮೀಪದ ಮಾಜಿ‌ ಶಾಸಕ ದಿವಂಗತ ಎನ್.ನಾಗರಾಜು ಅವರ ಜಮೀನಿನಲ್ಲಿ ಹೀಗೆ ಒಂದರ‌ ಹಿಂದೆ ಒಂದು ಚಿರತೆ ಸಿಕ್ಕಿಬಿದ್ದಿವೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೆರೆಸಿಕ್ಕ ಚಿರತೆಯನ್ನು ಅರಣ್ಯಕ್ಕೆ ಬಿಡಲು ಸಿಬ್ಬಂದಿ ನಿರ್ಧಾರಿಸಿದ್ದಾರೆ.ಇತ್ತ ಪಟ್ಟಣದ ಜನ ಚಿರತೆ ನೋಡಲು ಸೇರುತ್ತಲೇ ಇದ್ದಾರೆ.

ಹೆಚ್ ಡಿ ಕೋಟೆಯಲ್ಲಿ ಒಂದೇ ಜಮೀನಿನಲ್ಲಿಸೆರೆಸಿಕ್ಕ 5 ನೆ ಚಿರತೆ: ಗಾಬರಿಗೊಂಡ ಜನ Read More

ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ:ದೂರವಾಗದ ಚಿಂತೆ

ಹೆಚ್.ಡಿ.ಕೋಟೆ: ನಾಲ್ಕೈದು ದಿನಗಳ ಹಿಂದಷ್ಟೆ ಹೆಚ್.ಡಿ.ಕೋಟೆಯಲ್ಲಿ ಚಿರತೆ ಸೆರೆಯಾಗಿ ಜನ ನಿಟ್ಟುಸಿರು‌ ಬಿಡುವಾಗಲೇ ಮತ್ತೊಂದು‌ ಚಿರತೆ ಸೆರೆಸಿಕ್ಕಿದ್ದು ತೀವ್ರ ಆತಂಕಕ್ಕೆ ಎಡೆ ಮಾಡಿದೆ.

ಅದೂ ಒಂದೇ ತಿಂಗಳಲ್ಲಿ ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆಯಾಗಿದೆ.
ನಾಲ್ಕೈದು ದಿನಗಳ ಹಿಂದಷ್ಟೆ ಮೂರನೇ ಚಿರತೆ ಸೆರೆಯಾಗಿತ್ತು.ಇದೀಗ ಅದೇ ಸ್ಥಳದಲ್ಲೇ ಮತ್ತೊಂದು ಚಿರತೆ ಸೆರೆಯಾಗಿದೆ.

ಹೆಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸಮೀಪದ ಗುರುಮಲ್ಲು ಅವರ ಜಮೀನಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

‌ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ,ಆದರೆ ಜನರಲ್ಲಿ ಆತಂಕ ದೂರವಾಗಿಲ್ಲ.

ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು.ಅದೇ ಜಮೀನಿನಲ್ಲಿ ಇನ್ನೂ ಹಲವು ಚಿರತೆಗಳಿರಬಹುದೆಂದು ರೈತರು ಆತಂಕಪಟ್ಟಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆಯನ್ನು ಸಿಬ್ಬಂದಿ ಅರಣ್ಯಕ್ಕೆ ರವಾನಿಸಿದ್ದಾರೆ.

ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ:ದೂರವಾಗದ ಚಿಂತೆ Read More

ಬೋನಿಗೆ ಚಿರತೆ ಬಿದ್ದರೂ ದೂರವಾಗದ ಆತಂಕ

ಎಚ್.ಡಿ.ಕೋಟೆ: ಪಟ್ಟಣದ ಡ್ರೈವರ್ ಕಾಲೋನಿ‌ ಸಮೀಪ 7 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು ಸ್ಥಳೀಯ ಸಧ್ಯಕ್ಕೆ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಒಂದು ವಾರದ ಅಂತರದಲ್ಲಿ ಇದೇ ಸ್ಥಳದಲ್ಲಿ ಎರಡು ಗಂಡು ಚಿರತೆಗಳು ಬೋನಿಗೆ ಬಿದ್ದಿದ್ದವು, ಈಗ ಮೂರನೇ ಚಿರತೆ ಸಿಕ್ಕಿರುವುದರಿಂದ ಇನ್ನೂ ಚಿರತೆಗಳು ಇರಬಹುದೆಂದು ರೈತರು ಹೇಳುತ್ತಿದ್ದಾರೆ.

ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಕೋಟೆ ವಲಯ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.

ಕಳೆದ ಒಂದು ವಾರದ ಹಿಂದೆ ಸಮೀಪದ ಜಮೀನಿನ ರೈತ ಗುಂಡು ಮಲ್ಲು ಅವರ ಜಮೀನಿನಲ್ಲಿ 5 ವರ್ಷದ ಗಂಡು ಚಿರತೆ ಸಿಕ್ಕಿತ್ತು,ಮತ್ತೆ ಮೂರು ದಿನಗಳ ನಂತರ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು,ಈಗ ಏಳು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು ಸಧ್ಯಕ್ಕೆ ಇಲ್ಲಿನ ಜನ ನಿಟ್ಟುಸಿರು ಬಿಟ್ಟರೂ ಚಿರತೆ ಸೇರಿದಂತೆ ಇನ್ನೂ ಕಾಡುಪ್ರಾಣಿ ಗಳಿರಬಹುದೆಂದು ಜನ ಆತಂಕ ಪಟ್ಟಿದ್ದಾರೆ.

ಬೋನಿಗೆ ಚಿರತೆ ಬಿದ್ದರೂ ದೂರವಾಗದ ಆತಂಕ Read More