ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ:ಉಪನ್ಯಾಸಕ ಅರೆಸ್ಟ್

ಮೈಸೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸರು ಉಪನ್ಯಾಸಕರೊಬ್ಬರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.

ಮೈಸೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ದೂರು ನೀಡಿದ್ದು,ಭರತ್ ಭಾರ್ಗವ ಎಂಬ ಉಪನ್ಯಾಸಕನ ವಿರುದ್ದ ಎಫ್ ಐ ಆರ್ ದಾಖಲು ಮಾಡಿಕೊಂಡು ಬಂಧಿಸಲಾಗಿದೆ.

ಬಿ ಎನ್ ಎಸ್ ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರತಿನಿತ್ಯ ಈ ಉಪನ್ಯಾಸಕ ಕಿರುಕುಳ ನೀಡುತ್ತಿದ್ದರೆಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾರೆ.

ಮಾರ್ಕ್ಸ್ ಹೆಚ್ಚು ನೀಡುತ್ತೇನೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿ, ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಅಂತಾ ಕರೆಯುತ್ತಿದ್ದನೆಂದು ಮಹಿಳಾ ಉಪನ್ಯಾಸಕರಿಗೆ ವಿಧ್ಯಾರ್ಥಿನಿ ದೂರು ನೀಡಿದ್ದರು.

ದೂರು ನೀಡಿದ ಕಾರಣ ಭರತ್ ಭಾರ್ಗವ್ ಕರೆ ಮಾಡಿ ಬೆದರಿಕೆ ಕೂಡಾ ಹಾಕಿದ್ದ.ಜತೆಗೆ ವಿದ್ಯಾರ್ಥಿನಿ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ.ಅಲ್ಲದೆ ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನೆಂದು ಆಕೆ‌ ದೂರಿದ್ದಾರೆ.

ಈಗ ಉಪನ್ಯಾಸಕ ಕಂಬಿ ಎಣಿಸುವಂತಾಗಿದೆ.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ:ಉಪನ್ಯಾಸಕ ಅರೆಸ್ಟ್ Read More

ಪತಿ ಮನೆಯವರ ಕಿರುಕುಳ:ಉಪನ್ಯಾಸಕಿ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಪತಿ ಮನೆಯವರ ಕಿರುಕುಳದಿಂದ ಬೇಸತ್ತ ಉಪನ್ಯಾಸಕಿಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್​ನಲ್ಲಿ ಹಾರಿ ಉಒನ್ಯಾಸಕಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುಷ್ಪಾವತಿ (30) ಮೃತ ಉಪನ್ಯಾಸಕಿ, 11 ತಿಂಗಳ ಹಿಂದೆ ತಪಸ್ಸಿಹಳ್ಳಿಯ ವೇಣು ಎಂಬವರ ಜತೆ ಇವರು ವಿವಾಹವಾಗಿದ್ದರು, ಮದುವೆ ನಂತರ ಪತಿ ಮನೆಯಲ್ಲಿ ಪುಷ್ಪಾವತಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು,ಈ ಬಗ್ಗೆ ಆಕೆ ಆತ್ಮಹತ್ಯೆ ಗೂ ಮುಂಚೆ ವಿಡಿಯೋ ಮಾಡಿ ವಿವರ ನೀಡಿದ್ದಾರೆ.

ವರದಕ್ಷಿಣೆ, ನಿವೇಶನ ಕೊಡಿಸುವಂತೆ ಪೀಡಿಸುತ್ತಿದ್ದರು ಎಂದು ಪುಷ್ಪಾವತಿ ಆರೋಪಿಸಿದ್ದಾರೆ. ಪುಷ್ಪಾವತಿ ನಾಪತ್ತೆ ಆಗಿರುವ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಕುಟುಂಬಸ್ಥರು ಕೇಸ್​ ದಾಖಲಿಸಿದ್ದರು.

ನಾನು ಮದುವೆಯಾಗಿ ಗಂಡನ ಮನೆಗೆ ಹೋದ ದಿನದಿಂದ ನನ್ನ ಗಂಡ ನನ್ನ ಜೊತೆ ಸರಿಯಾಗಿ ಸಂಸಾರ ಮಾಡದೆ, ನನ್ನಿಂದ ದೂರ ಉಳಿಯುತ್ತಿದ್ದರು. ಸಂಸಾರ ಮಾಡಬೇಕೆಂದು ಎಷ್ಟು ಪ್ರಯತ್ನ ಪಟ್ಟರು ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಈ ವಿಚಾರವನ್ನು ನಮ್ಮ ಅತ್ತೆ ಮಾವನಿಗೆ ತಿಳಿಸಿದರೆ ಎಲ್ಲಾ ಸರಿ ಹೋಗುತ್ತೆ ಸುಮ್ಮನಿರು ಎಂದು ಆರಂಭದಲ್ಲಿ ಹೇಳುತ್ತಿದ್ದರು.

ಗಂಡನಿಗೆ ನಾವು ಮಗು ಮಾಡಿಕೊಳ್ಳೋಣ ಎಂದು ಕೇಳಿದರೆ, ಈಗ ಮಗು ಬೇಡ 1-2 ವರ್ಷ ಹೋಗಲಿ ನಂತರ ಮಗು ಮಾಡಿಕೊಳ್ಳೋಣ. ಈವಾಗ ಯಾಕೆ ಅರ್ಜೆಂಟ್ ಎಂದು ನನಗೆ ಬೈಯುತ್ತಿದ್ದರು. ನನಗೆ ಅನುಮಾನ ಬಂದು, ನಿನಗೇನಾದರೂ ತೊಂದರೆ ಇದ್ದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದು ಗಂಡನಿಗೆ ತಿಳಿಸಿದ್ದೆ. ಆಗ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಅವರನ್ನು ಮುಟ್ಟಿದರೆ ಕಾಲಿನಿಂದ ನನ್ನ ಎದೆಗೆ ಒದೆಯುತ್ತಿದ್ದರು. ಮಗು ಬೇಕು ಎಂದರೆ ನನ್ನ ಚಿಕ್ಕ ಮಗನ ಬಳಿ ಹೋಗು ಎಂದು ಅತ್ತೆ-ಮಾವ ಹೇಳುತ್ತಿದ್ದರು. ಮೈದುನನೂ ಅದೇ ರೀತಿ ಮಾತಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ನನ್ನ ಹೆತ್ತವರಿಗೆ ತಿಳಿಸಿದ್ದು, ಅವರು ಬಂದು ಹೇಳಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಪುಷ್ಪಾವತಿ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.

ಪತಿ ಮನೆಯವರ ಕಿರುಕುಳ:ಉಪನ್ಯಾಸಕಿ ಆತ್ಮಹತ್ಯೆ Read More

ಪ್ರಾಧ್ಯಾಪಕರ ಮನೆಯಲ್ಲಿ ನಗದು ಸೇರಿ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು

ಮೈಸೂರು: ಐನಾತಿ ಕಳ್ಳರು ಮನೆಯ ಕಬೋರ್ಡ್ ನಲ್ಲಿದ್ದ ನಗದು ಸೇರಿದಂತೆ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ವಿಜಯನಗರ 4 ನೇ ಹಂತದಲ್ಲಿ ಈ ಘಟನೆ ನಡೆದಿದ್ದು,ಮಂಡ್ಯ ಜಿಲ್ಲೆ ವಿ.ಸಿ.ಫಾರಂ ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಡಾ.ಸುಮಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆಯಲ್ಲಿ ಅತ್ತೆ ಹಾಗೂ ಮಾವ ಇದ್ದರೂ ಮೊದಲ ಮಹಡಿಯಲ್ಲಿದ್ದ ಕಬೋರ್ಡ್ ನಿಂದ ಕಳ್ಳರು ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ.

ಈ ಸಂಭಂಧ ವಿಜಯನಗರ ಪೊಲೀಸ್ ಠಾಣೆಗೆ ಡಾ.ಸುಮಾ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಾಧ್ಯಾಪಕರ ಮನೆಯಲ್ಲಿ ನಗದು ಸೇರಿ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು Read More

ಮುಂಬಡ್ತಿ ಪಡೆದ ಭೌತಶಾಸ್ತ್ರ ಉಪನ್ಯಾಸಕರಿಗೆ ಅಭಿನಂದನೆ

ನಂಜನಗೂಡು: ಮುಂಬಡ್ತಿ ಪಡೆದು ಬೇರೆ‌ ಕಾಲೇಜಿಗೆ ವರ್ಗಾವಣೆಗೊಂಡ
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ
ಉಪನ್ಯಾಸಕ ಅಶ್ವಥ್ ನಾರಾಯಣ ಗೌಡರನ್ನು ಕಾಲೇಜಿನ ಪ್ರಾಂಶುಪಾಲರು ಅಭನಂದಿಸಿದರು.

ಅಶ್ವಥ್ ನಾರಾಯಣ ಗೌಡ ಅವರು
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಈಗ ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಗೂರಿಗೆ ಪ್ರಾಂಶುಪಾಲರಾಗಿ ಮುಂಬಡ್ತಿ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಹಾಗಾಗಿ ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್, ಉಪನ್ಯಾಸಕರಾದ ಅಲ್ಮಸ್ ಬೇಗಂ,ಷಡಕ್ಷರಿ ಸ್ವಾಮಿ, ಮಂಜುನಾಥ, ಡಾ.ಟಿ.ಕೆ.ರವಿ,ಮಿಲ್ಟನ್ ಅವರುಗಳು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.

ಮುಂಬಡ್ತಿ ಪಡೆದ ಭೌತಶಾಸ್ತ್ರ ಉಪನ್ಯಾಸಕರಿಗೆ ಅಭಿನಂದನೆ Read More

ಕುಡಿದು ಚಿತ್ ಆಗಿ ರಸ್ತೆಯಲ್ಲೇ ಉರುಳಾಡಿದ ಪ್ರಾಧ್ಯಾಪಕ

ಭೂಪಾಲ್: ವಿದ್ಯಾರ್ಥಿಗಳನ್ನ ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕ ಕುಡಿದು ಚಿತ್ ಆಗಿ ರಸ್ತೆಯಲ್ಲಿ ಉರುಳಾಡಿ ಕಿರಿಕ್ ಮಾಡಿದ ಪ್ರಸಂಗ‌ ಮಧ್ಯಪ್ರದೇಶದಲ್ಲಿ ನಡೆದಿದೆ.

ಕಾಲೇಜು ಪ್ರಾಧ್ಯಾಪಾಕ ಕಂಠಪೂರ್ತಿ ಕುಡಿದು ಬಂದು ನಡೆಯಲಾರದೆ ರಸ್ತೆಯಲ್ಲಿ ತೂರಾಡುತ್ತಾ, ಬಿದ್ದು ಉರುಳಾಡಿ ರಂಪಾಟ ಮಾಡಿದ ಘಟನೆ ಮಧ್ಯಪ್ರದೇಶದ ರೇವಾ ನಗರದಲ್ಲಿ ನಡೆದಿದೆ.

ಕಾಲೇಜು ಪ್ರಾಧ್ಯಾಪಕನ ಅವಸ್ಥೆ ಕಂಡು ಆತ ಮಾನಸಿಕ ಅಸ್ವಸ್ಥ ಎಂದು ಭಾವಿಸಿ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ಆತ ರೇವಾ ಜಿಲ್ಲೆಯ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಧ್ಯಾಪಕ ಅಭಿಷೇಕ್ ಮಾಳವಿಯ ಎಂದು ತಿಳಿದುಬಂದಿದೆ.

ಶಿಕ್ಷಕನ ಈ ಸ್ಥಿತಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕುಡಿದು ಚಿತ್ ಆಗಿ ರಸ್ತೆಯಲ್ಲೇ ಉರುಳಾಡಿದ ಪ್ರಾಧ್ಯಾಪಕ Read More